Girls turn into Boys: ಈ ಗ್ರಾಮದ ಹುಡುಗಿಯರು ದೊಡ್ಡವರಾದ ಮೇಲೆ ಹುಡುಗರಾಗಿ ಬದಲಾಗುತ್ತಾರೆ!

Girls turn into Boys: ಗುವೆಡೋಸ್​​ ಸಂಖ್ಯೆ ಹೆಚ್ಚಾಗುತ್ತಿದೆ. ಮತ್ತೊಂದೆಡೆ ಹೆಣ್ಣು ಮಕ್ಕಳ ಸಂಖ್ಯೆ ಆ ಗ್ರಾಮದಲ್ಲಿ ಕ್ಷಿಣಿಸುತ್ತಿದೆ. ಅಂದಹಾಗೆಯೇ ಕಡಲ ತೀರದ ಹಳ್ಳಿಯಾದ್ದರಿಂದ ಅಲ್ಲಿನ ಜನಸಂಖ್ಯೆ 6 ಸಾವಿರಷ್ಟಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಮಕ್ಕಳು ಪ್ರೌಢವ್ಯವಸ್ಥೆಗೆ ಬರುವ ಹಂತದಲ್ಲಿ ಅವರಲ್ಲಿ ಸಾಕಷ್ಟು ಬದಲಾವಣೆಯಾಗುತ್ತದೆ. ಹುಡುಗರಾದರೆ ಗಡ್ಡ, ಮೀಸೆ, ಕೂದಲು, ಧ್ವನಿಯಲ್ಲಿ ಮತ್ತು ದೇಹದ ಆಕಾರದಲ್ಲಿ ವ್ಯತ್ಯಾಸ ಕಾಣಿಸುತ್ತದೆ. ಹುಡುಗಿಯರಾದರೆ ಧ್ವನಿ, ದೇಹ ರಚನೆಯಲ್ಲಿ ಬದವಾವಣೆಯಾಗುತ್ತದೆ. ಇದೊಂದು ಪ್ರಕೃತಿಯ ನಿಯಮದಂತೆ ವರ್ಷಗಳು ಉರುಳಿದ ಹಾಗೆಯೇ ಮಕ್ಕಳಲ್ಲಿ ಸಾಕಷ್ಟು ಬದಲಾವಣೆಯನ್ನು ಕಾಣಬಹುದಾಗಿದೆ. ಹಾಗಾಗಿ ಪ್ರೌಢವ್ಯವಸ್ಥೆಗೆ (Puberty) ತಲುಪಿದ ಮೇಲೆ ನಡವಳಿಕೆಯಲ್ಲೂ ವ್ಯತ್ಯಾಸ ಉಂಟಾಗುವುನ್ನು ಗಮನಿಸಬಹುದಾಗಿದೆ. ಆದರೆ ಇಲ್ಲೊಂದು ಹಳ್ಳಿಯಿದೆ. ಬಲು ವಿಚಿತ್ರದಿಂದ ಕೂಡಿದೆ. ಕಾರಣ ಆ ಹಳ್ಳಿಯಲ್ಲಿ ಹುಟ್ಟಿದ ಹುಡುಗಿಯರು ನಿರ್ದಿಷ್ಟ ವಯಸ್ಸಿಗೆ (Age) ತಲುಪಿದ ನಂತರ ಹುಡುಗರಾಗಿ ಬದಲಾಗುತ್ತಾರೆ.

  ಇಂತಹದೊಂದು ಅಚ್ಚರಿಯ ಸಂಗತಿಯಾಗಿದೆ. ಡೊಮಿನಿಕನ್​ ರಿಪಬ್ಲಿಕ್​ನ (Dominican Republic) ಲಾ ಸಲಿನಾಸ್​ ವಿಲೇಜ್​ ಎಂಬ ಗ್ರಾಮನಿದೆ. ಇಲ್ಲಿನ ಹುಡುಗಿಯರು ನಿರ್ದಿಷ್ಟ ವಯಸ್ಸಿಗೆ ಬಂದನಂತರ ಅವರಲ್ಲಿ ತೀವ್ರವಾದ ಬದಲಾವಣೆಯಾಗುತ್ತದೆ. ಹುಡುಗಿಯರು ಇದ್ದಕ್ಕಿಂದಂತೆಯೇ ಹುಡುಗರಾಗುತ್ತಾರೆ. ಹುಡುಗರಂತೆಯೇ ವರ್ತಿಸುತ್ತಾರೆ. ಹಾಗಿಗಿ ಈ ಗ್ರಾಮ ಶಾಪಗ್ರಸ್ತ ಗ್ರಾಮವೆಂದು ಕರೆಯಲಾಗುತ್ತಿದೆ.

  ಅಂಬೆಗಾಲಿನಲ್ಲಿ ನಡೆಯುವ ಮಕ್ಕಳು ವರ್ಷಗಳು ಉರುಳಿದ ನಂತರ ಸ್ವತಂತ್ರವಾಗಿ ನಡೆಯಲು ಶುರು ಮಾಡುತ್ತಾರೆ. ಆದರೆ ಲಾ ಸಲಿನಾಸ್​ ಹಳ್ಳಿಯಲ್ಲಿನ ಹುಡುಗಿಯರು ದೊಡ್ಡವರಾಗುತ್ತಾ ಹೋಗುತ್ತಿದ್ದಂತೆ ಹುಡುಗರಾಗಿ ಬದಲಾಗುತ್ತಾರೆ. 12ನೇ ವರ್ಷ ತಲುಪುತ್ತಿದ್ದಂತೆಯೇ ಹುಡುಗಿಯರಲ್ಲಿ ಈ ಬದಲಾವಣೆ ಕಾಣಿಸುತ್ತದೆ.

  ಇದನ್ನು ಓದಿ:  Baby for sale: ಆನ್​ಲೈನ್​ನಲ್ಲಿ ಸೋಫಾ ಮಾರಲು ಹೋಗಿ ಮಗುವನ್ನೇ ಮಾರಾಟಿಕ್ಕಿದೆ ಎಂದು ಹಾಕಿಬಿಟ್ಟ ತಾಯಿ! ಆಮೇಲೇನಾಯ್ತು? ಮುಂದೆ ಓದಿ…

  ಲಾ ಸಲಿನಾಸ್​ ಹಳ್ಳಿಯ ಜನರು ಇದೊಂದು ದುಷ್ಟ ಶಕ್ತಿಯ ಕೈವಾಡ ಎಂದು ನಂಬಿದ್ದಾರೆ. ಅತ್ತ ವಿಜ್ನಾನಿಗಳಿಗೂ ಇಂತಹದೊಂದು ಸಂಗತಿಯ ಬಗ್ಗೆ ತಿಳಿದುಕೊಳ್ಳಲು ಸಮಯ ತೆಗೆದುಕೊಂಡಿದ್ದಾರೆ. ಆದರೆ ಹುಡಿಯರು ಹುಡುಗರಾಗಿ ಬದಲಾಗುತ್ತಿರುವುದರಿಂದ ಅಲ್ಲಿನ ಪೋಷಕರು ಕಂಗಲಾಗಿದ್ದಾರೆ.

  ಜಗತ್ತಿನಲ್ಲಿ ಹುಡುಗರು ಹುಡುಗಿಯರಾಗಿ ಬದಲಾಗುವುದನ್ನು ಕೇಳಿರಬಹುದು, ಹುಡುಗಿಯರು ಕೂಡ ಹುಡುಗರಾಗಿ ಬದಲಾಗಿರುವುದನ್ನು ಕೇಳಿರಬಹುದು. ಆದರೆ ಲಾ ಸಲಿನಾಸ್​ ಗ್ರಾಮದಲ್ಲಿ 12ನೇ ವರ್ಷಕ್ಕೆ ಹುಡುಗಿಯರು ಹುಡುಗರಾಗುತ್ತಾರೆ ಎಂದರೆ ನಂಬಲು ಅಸಾಧ್ಯವಾದ ಸಂಗತಿಯಾಗಿದೆ. ಮಾತ್ರವಲ್ಲದೆ ಅವರನ್ನು ‘‘ಗುವೆಡೋಸ್​’’ ಎಂದು ಕರೆಯಲಾಗುತ್ತದೆ.

  ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆ!

  ಗುವೆಡೋಸ್​​ ಸಂಖ್ಯೆ ಹೆಚ್ಚಾಗುತ್ತಿದೆ. ಮತ್ತೊಂದೆಡೆ ಹೆಣ್ಣು ಮಕ್ಕಳ ಸಂಖ್ಯೆ ಆ ಗ್ರಾಮದಲ್ಲಿ ಕ್ಷಿಣಿಸುತ್ತಿದೆ. ಅಂದಹಾಗೆಯೇ ಕಡಲ ತೀರದ ಹಳ್ಳಿಯಾದ್ದರಿಂದ ಅಲ್ಲಿನ ಜನಸಂಖ್ಯೆ 6 ಸಾವಿರಷ್ಟಿದೆ.

  ಲಾ ಸಲಿನಾಸ್ ಗ್ರಾಮದ​ ಬಗ್ಗೆ ಅನೇಕರು ಸಂಶೋದನೆ ನಡೆಸುತ್ತಿದ್ದಾರೆ. ಇಂತಹ ಸಮಸ್ಯೆ ಕಾರಣವೇನು ಎಂದು ಹುಡುಕುತ್ತಿದ್ದಾರೆ. ಆದರೆ ವೈದ್ಯರು ಇದೊಂದು ವಂಶವಾಹಿ ಅಸ್ವಸ್ಥತೆ ಎಂದು ಹೇಳುತ್ತಾರೆ.

  ಹುಡುಗಿಯರು ಹುಡುಗರಾಗಿ ಬದಲಾಗುತ್ತಿರುವ ಮಕ್ಕಳಿಗೆ ಸೂಡೋಹೆರ್ಮಾಫ್ರೋಡೈಟ್ಸ್​​ ಎಂದು ಕರೆಯಲಾಗುತ್ತದೆ. ಇಂತಹದೊಂದದು ಕಾಯಿಲೆ ಹುಡುಗಿಯರ ಅಂಗದಲ್ಲಿದೆ. ಹಾಗಾಗಿ ವಯಸ್ಸಿಗೆ ಬರುವ ವೇಳೆ ಅವರು ಹುಡುಗರಾಗಿ ಬದಲಾಗುತ್ತಿದ್ದಾರೆ. ಅಂದಹಾಗೆಯೇ ಲಾ ಸಲಿನಾಸ್​ನಲ್ಲಿ 90ರಲ್ಲಿ 1 ಮಗು ಈ ರೀತಿಯ ಕಾಯಿಲೆಯಿಂದ ಹೋರಾಡುತ್ತಿದೆ ಎಂದು ಹೇಳಲಾಗುತ್ತಿದೆ.

  ಇದನ್ನು ಓದಿ:  WhatsApp: ಅಕ್ಟೋಬರ್​ನಲ್ಲಿ 20 ಲಕ್ಷ ವಾಟ್ಸ್​ಆ್ಯಪ್​ ಖಾತೆಗಳು ಬ್ಯಾನ್​! ಯಾಕಾಗಿ?

  ಮೊದಲೇ ಲಾ ಸಲಿನಾಸ್​ ಗ್ರಾಮದಲ್ಲಿ ಜನಸಂಖ್ಯೆ ಕಡಿಮೆಯಿದೆ. ಅದರಲ್ಲೂ 6 ಸಾವಿರ ಜನರಿರುವ ಹಳ್ಳಿಯಲ್ಲಿ ಇಂತಹ ಸಮಸ್ಯೆ ಕಾಣಿಸಿಕೊಂಡಾಗ ಮಹಿಳೆಯ ಸಂಖ್ಯೆ ತೀವ್ರವಾಗಿ ಕಡಿಮೆಯಾಗಲು ಪ್ರಾರಂಭವಾಗುತ್ತದೆ. ಹಾಗಾಗಿ ಅನೇಕರು ವಿಜ್ನಾನಿಗಳು ಬಗ್ಗೆ ಸಂಶೋಧನೆ ಕೈಗೊಂಡು ಈ ಸಮಸ್ಯೆ ಮುಕ್ತಿ ನೀಡಲು ಪ್ರಯತ್ನಿಸುತ್ತಿದ್ದಾರೆ.
  Published by:Harshith AS
  First published: