ಇಂದಿನ ಜಗತ್ತಿನಲ್ಲಿ (World) ಜನರು ವಿಭಿನ್ನ ಮೈಂಡ್ ಸೆಟ್ಗಳನ್ನು ಹೊಂದಿರುತ್ತಾರೆ. ಮತ್ತು ಕೇಳುತ್ತಾರೆ. ಜನರು ತಮ್ಮ ಆಸೆಗಳನ್ನು ಈಡೇರಿಸಿಕೊಳ್ಳಲು ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಇತ್ತೀಚೆಗೆ ಯುವತಿಯೊಬ್ಬಳ ವಿಡಿಯೋ ವೈರಲ್ ಆಗುತ್ತಿದ್ದು, ತನ್ನ ಆಸೆಯನ್ನು ಈಡೇರಿಸಲು ಕುಟುಂಬವನ್ನು ತೊರೆದಿದ್ದಾಳೆ. ಇದನ್ನು ಕೇಳಿ ನೀವು ಆಶ್ಚರ್ಯ ಪಡಬಹುದು, ಆದರೆ ಈ ಕಥೆ ನಿಜವಾಗಿದ್ದು. ಆಕೆಯ ವಿಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಲ್ಲಿದೆ. ಯೂಟ್ಯೂಬ್ (Youtube) ಚಾನೆಲ್ ಆಕೆಯನ್ನು ಸಂದರ್ಶಿಸಿದ್ದು, ಸುದ್ದಿ ಮಾಡುತ್ತಿದೆ. 29 ವರ್ಷದ ಡಾಲಿ ಮಿಕ್ಸ್ ಎಂದು ಆಕೆಯ ಹೆಸರು, ಆಕೆ ಪ್ರಸ್ತುತ ವಿಲಕ್ಷಣ ಆಸಕ್ತಿಗಳಿಂದಾಗಿ ಪ್ರಚಾರದಲ್ಲಿದ್ದಾಳೆ. ಅವಳು ಮನುಷ್ಯರಿಗಿಂತ ಹೆಚ್ಚಾಗಿ ಪ್ಲಾಸ್ಟಿಕ್ (Plastic) ಆಗುತ್ತಿದ್ದಾಳೆ ಎಂದು ತಿಳಿಯುತ್ತಾ ಇದೆ. ಡಾಲಿಯ ಕುಟುಂಬವು ರಾಜಮನೆತನಕ್ಕೆ ಸೇರಿದ್ದು. ಆದರೆ ಅವಳು ಇತರರ ಆದೇಶದಂತೆ ಬದುಕಲು ಬಯಸುವುದಿಲ್ಲ ಎಂದು ಹೇಳುತ್ತಾಳೆ. ಲಂಡನ್‌ಗೆ ಬಂದಾಗ ಡಾಲಿ ಮಿಕ್ಸ್‌ಗೆ 20 ವರ್ಷ. ಡಾಲಿ ತನ್ನನ್ನು ತಾನು ಆಕರ್ಷಕವಾಗಿಸಲು ನಿರ್ಧರಿಸುತ್ತಾಳೆ ಮತ್ತು ಮನೆಯನ್ನು ತೊರೆಯುತ್ತಾಳೆ.
ಸೌಂದರ್ಯಕ್ಕಾಗಿ ಅನೇಕರು ಬ್ಯೂಟಿ ಪಾರ್ಲರ್ಗಳಿಗೆ ಹೋಗುತ್ತಾರೆ. ಅಲ್ಲಿಗೆ ಹೋದ್ರೂ ಕೂಡ ಬದಲಾವಣೆ ಆಗಿಲ್ಲ ಅಂದ್ರೆ ಪ್ಲಾಸ್ಟಿಕ್ ಸರ್ಜರಿಯನ್ನು ಮಾಡಿಸಿಕೊಳ್ಳುತ್ತಾರೆ. ಮೈಕಲ್ ಜಾಕ್ಸನ್ ಸರಿಸುಮಾರು ನೂರಕ್ಕಿಂತ ಹೆಚ್ಚಾಗಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿದ್ದಾರೆ ಅಂದ್ರೆ ನೀವು ನಂಬಲೇಬೇಕು.
ಡಾಲಿ ಮೊದಲಿನಿಂದಲೂ ಪ್ಲಾಸ್ಟಿಕ್ ಸರ್ಜರಿಯಲ್ಲಿ ತುಂಬಾ ಆಸಕ್ತಿ ಹೊಂದಿದ್ದಳು, ಅವಳು ತನ್ನನ್ನು ಆಕರ್ಷಕವಾಗಿಸಲು ಪ್ಲಾಸ್ಟಿಕ್ ಸರ್ಜರಿಯನ್ನು ಮಾಡಿಸಿಕೊಂಡಳು. ಆಕೆಯ ಮನೆಯವರು ಇದನ್ನು ಒಪ್ಪಿಕೊಳ್ಳದ ಕಾರಣ, ಅವಳು ಮನೆಯಿಂದ ಹೊರಬಂದಳು.
ಆಕೆಯ ಪ್ಲಾಸ್ಟಿಕ್ ಸರ್ಜರಿಯ ಮೇಲಿನ ಪ್ರೀತಿಯನ್ನು ನೋಡಿದ ನಂತರ ಆಕೆಯ ಕುಟುಂಬವು ಅವಳನ್ನು ತ್ಯಜಿಸಿತು. ಈ ವಿಡಿಯೋದಲ್ಲಿ, ಅವರು ಐದು ವರ್ಷಗಳ ನಂತರ ತನ್ನ ಸೋದರ ಸಂಬಂಧಿಯನ್ನು ಭೇಟಿಯಾಗಿದ್ದಾರೆ. ಈ ವಿಡಿಯೋದಲ್ಲಿ ಆಕೆ ಹೇಳಿದ್ದು, 'ನಾನು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳಲು ಬಯಸುತ್ತೇನೆ. ಇದರಿಂದ ನನ್ನ ಕುಟುಂಬದವರು ನನ್ನನ್ನು ಮಾತನಾಡಿಸುತ್ತಿಲ್ಲ. ಕುಟುಂಬವನ್ನು ವರ್ಷಗಳಿಂದ ನಾನು ನೋಡಿಲ್ಲ. ಪ್ಲಾಸ್ಟಿಕ್ ಸರ್ಜರಿಗೆ ಒಳಗಾಗುವ ನನ್ನ ನಿರ್ಧಾರವನ್ನು ಅವರು ಬೆಂಬಲಿಸಲಿಲ್ಲ. ಹೀಗಾಗಿ ಮನೆಯನ್ನು ಬಿಟ್ಟು ಬಂದಿದ್ದೇನೆ' ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾಳೆ.
ನಾನು ಲಿಪ್ ಫಿಲ್ಲರ್ ಮಾಡಿದ್ದೇನೆ ಎಂದು ಡಾಲಿ ಹೇಳುತ್ತಾರೆ. ನಾನು 15 ಸಾವಿರ ಪೌಂಡ್ ಖರ್ಚು ಮಾಡಿದ್ದೇನೆ. ಜನರು ನನ್ನನ್ನು ಅವಮಾನಿಸಿದಾಗ ನಾನು ಬಲಶಾಲಿಯಾಗುತ್ತೇನೆ. ತನ್ನ ಬಾಲ್ಯವನ್ನು ವಿವರಿಸುತ್ತಾ, 'ನಾನು ಬಾಲ್ಯದಲ್ಲಿ ತುಂಬಾ ನಾಚಿಕೆ ಮತ್ತು ಶಾಂತವಾಗಿದ್ದೆ. ನಾನು ತುಂಬಾ ಸೃಜನಶೀಲಳಾಗಿದ್ದೆ. ನಾನು ಫ್ಯಾಷನ್ ಮತ್ತು ಕಲೆಯನ್ನು ಇಷ್ಟಪಟ್ಟೆ. ನನ್ನ ಪೋಷಕರು, ವಿಶೇಷವಾಗಿ ನನ್ನ ತಂದೆ ನನ್ನನ್ನು ಬೆಂಬಲಿಸಲಿಲ್ಲ ಎಂದು ಬೇಸರದಿಂದ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ತೆಂಗಿನ ಮರದ ಮೇಲೆ ಪ್ರಜ್ಞೆ ತಪ್ಪಿದ ವ್ಯಕ್ತಿ! ಬೆಂಗಳೂರು ಪೊಲೀಸರ ರೋಚಕ ಕಾರ್ಯಾಚರಣೆ
ಈ ಎಲ್ಲಾ ತಲೆನೋವು ನನಗೆ ಸಹಿಸಿಕೊಳ್ಳಲು ಆಗಲಿಲ್ಲ. ಹಾಗೆಯೇ ನನ್ನ ತುಟಿ ಮೊದಲು ಒಣಗಿದ ಮೀನಿನ ಹಾಗೆ ಇತ್ತು ಹಾಗಾಗಿ ನಾನು ಪ್ಲಾಸ್ಟಿಕ್ ಸರ್ಜರಿಯನ್ನು ಮಾಡಿಸಿಕೊಂಡಿದ್ದೇನೆ ಎಂದು ಹೇಳಿದ್ದಾಳೆ.
ಡಾಲಿಯ ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ವಿಡಿಯೋಗೆ ಜನ ಸಾಕಷ್ಟು ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಅನೇಕರು ತಮ್ಮ ಕನಸುಗಳನ್ನು ನನಸಾಗಿಸಲು ಮನೆಯಿಂದ ದೂರ ಉಳಿಯುತ್ತಾರೆ, ಕೆಲವರು ತಮ್ಮ ಮನೆಯನ್ನು ಬಿಟ್ಟು ಹೋಗುತ್ತಾರೆ. ಇಂತಹ ಅನೇಕ ಘಟನೆಗಳು ನಡೆಯುತ್ತಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ