Viral Video: ಮದುಮಕ್ಕಳಂತೆ ಸಿಂಗಾರಗೊಂಡ ನಾಯಿಗಳ ಜೋಡಿ, ಹೇಗಿದೆ ಶ್ವಾನ ವಿವಾಹ.. ವಿಡಿಯೋ ನೋಡಿ!

ಇಲ್ಲಿ ಮದುಮಕ್ಕಳಿಬ್ಬರೂ ಕೆಂಪು ಬಣ್ಣದ ದಿರಿಸಿನಲ್ಲಿ ಮಿಂಚುತ್ತಿದ್ದಾರೆ. ಮದುಮಗ ಪೇಟ ತೊಟ್ಟು ಬೊಂಬಾಟ್ ಆಗಿ ರೆಡಿಯಾಗಿದ್ರೆ ಮದುಮಗಳು ಕಿವಿಗೆ ಜುಮುಕಿ ತೊಟ್ಟು, ಒಡವೆಗಳನ್ನೆಲ್ಲಾ ಧರಿಸಿ ನಾಚಿ ನೀರಾಗುತ್ತಿದ್ದಾಳೆ.

ಶ್ವಾನಗಳ ಮದುವೆ

ಶ್ವಾನಗಳ ಮದುವೆ

  • Share this:
    Viral Wedding Video: ಈಗಂತೂ ಮದುವೆ ಸೀಸನ್.. ಎಷ್ಟು ಮದುವೆಗಳು ನಡೆಯುತ್ತಿವೆಯೋ ಅಷ್ಟೇ ಎಡವಟ್ಟುಗಳೂ ನಡೆಯುತ್ತಲೇ ಇವೆ. ಒಂದು ಕಡೆ ವೇದಿಕೆ ಮೇಲೇ ಮದುಮಗ ನಿದ್ದೆ ಹೋದ್ರೆ ಮತ್ತೊಂದೆಡೆ ಮದುಮಗಳು ಧಾರೆ ಮಂಟಪದಿಂದ ಪರಾರಿ ಆಗ್ಬಿಟ್ಟಿದ್ದಾಳೆ. ಇನ್ನು ಕೆಲವು ಕಡೆಗಳಲ್ಲಂತೂ ಮಾರಾಮಾರಿಯೇ ಆಗಿ ಹೋಗಿದೆ.  ಇದೆಲ್ಲದರ ನಡುವೆ ಇಲ್ಲೊಂದು ವಿಶಿಷ್ಟ ಮದುವೆ ಎಲ್ಲರ ಗಮನ ಸೆಳೆಯುತ್ತಿದೆ. ಇಲ್ಲಿ ಮದುಮಕ್ಕಳಿಬ್ಬರೂ ಕೆಂಪು ಬಣ್ಣದ ದಿರಿಸಿನಲ್ಲಿ ಮಿಂಚುತ್ತಿದ್ದಾರೆ. ಮದುಮಗ ಪೇಟ ತೊಟ್ಟು ಬೊಂಬಾಟ್ ಆಗಿ ರೆಡಿಯಾಗಿದ್ರೆ ಮದುಮಗಳು ಕಿವಿಗೆ ಜುಮುಕಿ ತೊಟ್ಟು, ಒಡವೆಗಳನ್ನೆಲ್ಲಾ ಧರಿಸಿ ನಾಚಿ ನೀರಾಗುತ್ತಿದ್ದಾಳೆ. ಇವರಿಬ್ಬರ ಜೋಡಿಯ ಮದುವೆ ವಿಡಿಯೋ ಮಾತ್ರ ಭರ್ಜರಿ ಮನರಂಜನೆ ನೀಡುತ್ತಿದೆ.

    ಅಂದ್ಹಾಗೆ ಇದು ಶ್ವಾನಗಳ ಮದುವೆ. ಈ ನಾಯಿಗಳ ಮದುವೆ ನಿಜವಾಗ್ಲೂ ನಡೀತಾ ಇಲ್ವಾ ಗೊತ್ತಿಲ್ಲ. ಆದ್ರೆ ಮದುಮಕ್ಕಳ ವೇಷ ಧರಿಸಿ ಇವು ನಿಂತಿರುವ ಸ್ಟೈಲ್ ಮಾತ್ರ ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಜನರಂತೂ ಒಂದು ಕ್ಯಾಪ್ಶನ್ ಕೂಡಾ ಇಲ್ಲದ ಈ ವಿಡಿಯೋವನ್ನ ಮುಗಿಬಿದ್ದು ನೋಡ್ತಿದ್ದಾರೆ. ಇನ್ಸ್ಟಾಗ್ರಾಮ್​ನಲ್ಲಿ ವೈರಲ್ ಆಗಿರುವ ಈ ವಿಡಿಯೋವನ್ನು ನೀವೂ ಒಮ್ಮೆ ನೋಡಿಬಿಡಿ...








    ಸದ್ಯ ಈ ನಾಯಿಗಳ ಜೋಡಿ ಮದುವೆ ಮುಗಿಸಿದ್ಯಾ, ಎಲ್ಲಿಗೆ ಏನು ಮಾಡ್ತಿದೆ.. ಈ ಯಾವ ವಿವರಗಳೂ ಲಭ್ಯವಿಲ್ಲ. ಆದ್ರೆ ಭಾರತೀಯ ಸಂಪ್ರದಾಯದಂತೆ ದಿರಿಸು ತೊಟ್ಟ ಈ ನಾಯಿಗಳ ಸ್ಟೈಲ್ ಮಾತ್ರ ಸಿಕ್ಕಾಪಟ್ಟೆ ಸುದ್ದಿ ಮಾಡ್ತಿದೆ ಎನ್ನುವುದಂತೂ ಸತ್ಯ.

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
    Published by:Soumya KN
    First published: