ಇತ್ತೀಚೆಗೆ ನಾವು ಒಂದು ಆನೆಯನ್ನು (Elephant) ಹೊರಾಂಗಣದಲ್ಲಿ ಒಬ್ಬ ವ್ಯಕ್ತಿ ಸ್ನಾನ ಮಾಡಿಸುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ (Social media) ನೋಡಿದ್ದೆವು. ಆ ವಿಡಿಯೋದಲ್ಲಿ ಆನೆಗೆ ಸ್ನಾನ ಮಾಡಿಸುವಾಗ ಆನೆ ತನ್ನ ತಲೆಯನ್ನು ನೆಲಕ್ಕೆ ತಾಗಿಸಿ ಅದರ ಮೇಲೆ ತನ್ನ ಇಡೀ ದೇಹವನ್ನು ಮೇಲಕ್ಕೆ ಎತ್ತಿಕೊಂಡು ನಿಂತಿತ್ತು. ಹೀಗೆ ಈ ಪ್ರಾಣಿಗಳಿಗೆ (Animals) ಹೊರಾಂಗಣದಲ್ಲಿ ಸ್ನಾನ ಮಾಡುವುದು ಎಂದರೆ ತುಂಬಾನೇ ಖುಷಿ ಕೊಡುವ ವಿಚಾರ ಎಂದು ಹೇಳಬಹುದು. ನಮ್ಮ ಮನೆಯಲ್ಲಿ ಸಾಕಿಕೊಳ್ಳುವಂತಹ ಪ್ರಾಣಿಗಳಿಗೆ ತಮ್ಮದೇ ಆದ ಮನಸ್ಸು ಎನ್ನುವುದು ಇರುತ್ತದೆ. ಅವು ಬಾಯಿ ಬಿಟ್ಟು ತಮ್ಮ ಇಷ್ಟಗಳನ್ನು ಹೇಳಲು ಸಾಧ್ಯವಾಗದೆ ಇರಬಹುದು. ಆದರೆ ಅವುಗಳು ತಮ್ಮ ವರ್ತನೆಯಿಂದ ಅವುಗಳ ಭಾವನೆಯನ್ನು ವ್ಯಕ್ತಪಡಿಸಬಹುದು.
ಸ್ನಾನ ಮಾಡುವ ವಿಷಯಕ್ಕೆ ಬಂದರೆ ಈ ಸಾಕುನಾಯಿಗಳು ಹೆಚ್ಚು ಮನೆಯ ಒಳಗಡೆ ಒಂದು ಟಬ್ ನಲ್ಲಿ ಸ್ನಾನ ಮಾಡುವುದಕ್ಕಿಂತಲೂ, ಹೊರಗಡೆ ಸ್ನಾನ ಮಾಡುವುದನ್ನು ತುಂಬಾನೇ ಎಂಜಾಯ್ ಮಾಡುತ್ತವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಹೊರಗಡೆ ಸ್ನಾನ ಮಾಡುವುದಂದ್ರೆ ಈ ನಾಯಿಗೆ ಇಷ್ಟ ಅಂತೆ
ಇಲ್ಲಿಯೂ ಸಹ ಅಂತಹದೇ ಒಂದು ವಿಡಿಯೋ ಸಾಮಾಜಿಕ ಮಾಧ್ಯಮವಾದ ಇನ್ಸ್ಟಾಗ್ರಾಮ್ ನಲ್ಲಿ ಜೋರಾಗಿಯೇ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ಸಾಕುನಾಯಿಯೊಂದು ಮನೆಯ ಒಳಗಡೆ ಇರುವ ಬಾತ್ರೂಮ್ ನಲ್ಲಿ ಶಾವರ್ ಕೆಳಗಡೆ ನಿಂತು ಸ್ನಾನ ಮಾಡಲು ನಿಜವಾಗಿಯೂ ಇಷ್ಟಪಡುವುದಿಲ್ಲ.
ಅದು ಹಾಗೆ ಮನೆಯ ಒಳಗಡೆ ಸ್ನಾನ ಮಾಡುವಾಗ ಅದರ ಮುಖದಲ್ಲಿನ ಆ ನೋವಿನ ಭಾವನೆ ನೋಡಬಹುದು. ಆದರೆ ಅದೇ ನಾಯಿ ಹೊರಗಡೆ ಯಾವುದೋ ಜಲಪಾತದಡಿಯಲ್ಲಿ ನಿಂತ ನೀರಿನಲ್ಲಿ ಅಥವಾ ಸಮುದ್ರದ ನೀರಿನಲ್ಲಿ ಈಜಾಡುತ್ತಾ ಸ್ನಾನ ಮಾಡುವುದು ಎಂದರೆ ಎಷ್ಟೊಂದು ಖುಷಿ ಆಗುತ್ತಿದೆ ನೀವೇ ನೋಡಿ.
ವಿಡಿಯೋದಲ್ಲಿ ಹೀಗಿದೆ
ಈ ಮುದ್ದಾದ ನಾಯಿಯ ವಿಡಿಯೋವನ್ನು ಸಾಮಾಜಿಕ ಮಾಧ್ಯಮವಾದ ಇನ್ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಹಂಚಿಕೊಳ್ಳಲಾಗಿದೆ ಮತ್ತು ಅದಕ್ಕೆ ಶೀರ್ಷಿಕೆಯಾಗಿ "ಅರ್ಥ ಮಾಡಿಕೊಳ್ಳಿ" ಎಂದು ಬರೆಯಲಾಗಿದೆ. ಈ ವಿಡಿಯೋವು ಹಾಗೆಯೇ ಮುಂದುವರಿದಂತೆ ಮುಂದಿನ ಫ್ರೇಮ್ ನಲ್ಲಿ ಈ ನಾಯಿಗೆ ಏಕೆ ಬೇಸರವಾಗಿದೆ ಅಂತ ನಿಖರವಾಗಿ ನೀವು ಅರ್ಥ ಮಾಡಿಕೊಳ್ಳಬಹುದು. ನಾಯಿಯು ಹೊರಾಂಗಣದಲ್ಲಿ ನೀರಿನಲ್ಲಿ ಉಲ್ಲಾಸದಿಂದ ಕುಣಿಯುವುದನ್ನು ಇಷ್ಟಪಡುತ್ತದೆ, ವಿಡಿಯೋದಲ್ಲಿ ಅದರ ಹಿಂದೆ ಜಲಪಾತವನ್ನು ಮತ್ತು ಸಮುದ್ರವನ್ನು ಸಹ ನೋಡಬಹುದು. ನಾಯಿಯು ಇವುಗಳಲ್ಲಿ ಚೆನ್ನಾಗಿ ಖುಷಿ ಖುಷಿಯಾಗಿ ಸ್ನಾನ ಮಾಡುತ್ತಿರುವುದನ್ನು ನಾವು ವಿಡಿಯೋದಲ್ಲಿ ನೋಡಬಹುದು.
ಇದನ್ನೂ ಓದಿ: Viral Photos: ಈ ಮನೆ ಕಾಯೋದು ನಾಯಿಯಲ್ಲ, ಹುಂಜ! ಫೊಟೋಸ್ ನೋಡಿ
ವಿಡಿಯೋ ನೋಡಿ ಮುದ್ದಾದ ಕಾಮೆಂಟ್ ಮಾಡಿದ ನೆಟ್ಟಿಗರು
ಜೂನ್ 13 ರಂದು ನಾಯಿಯ ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳಲಾಗಿದೆ ಮತ್ತು ಇಲ್ಲಿಯವರೆಗೆ 1.12 ಲಕ್ಷಕ್ಕೂ ಹೆಚ್ಚು ಲೈಕ್ ಗಳನ್ನು ಇದು ಪಡೆದಿದೆ. ಇಷ್ಟೇ ಅಲ್ಲದೆ ಈ ವಿಡಿಯೋಗೆ ಹಲವಾರು ಮುದ್ದಾದ ಕಾಮೆಂಟ್ ಗಳೂ ಸಹ ಬಂದಿವೆ ಎಂದು ಹೇಳಬಹುದು.
"ಈ ನಾಯಿಯು ಹೊರಗಡೆ ಇದ್ದಾಗ ಮಾತ್ರ ನೀರನ್ನು ಇಷ್ಟಪಡುತ್ತದೆ ಅಂತ ಕಾಣಿಸುತ್ತದೆ" ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. "ಈ ನಾಯಿಗೆ ಏನು ಬೇಕೋ ಅದನ್ನೇ ಮಾಡುತ್ತದೆ ನೋಡಿ" ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Lizards: ಹಲ್ಲಿ ನೋಡಿದ್ರೆ ಕೇವಲ ಮನುಷ್ಯರಿಗೆ ಮಾತ್ರ ಅಲ್ಲ ನಾಯಿಗಳಿಗೂ ಭಯವಂತೆ! ಈ ವಿಡಿಯೋ ನೋಡಿದ್ರೆ ನಿಮಗೇ ಗೊತ್ತಾಗುತ್ತೆ
ಇಂತದ್ದೇ ಮತ್ತೊಂದು ವಿಡಿಯೋ ವೈರಲ್
ಇನ್ನೊಂದು ಇದೇ ರೀತಿಯಾದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ, ಅದರಲ್ಲಿ ತನ್ನ ಸಾಕುನಾಯಿಯು ಹೊರಗಡೆ ಒಂದು ಚಿಕ್ಕ ಪೂಲ್ ನಲ್ಲಿ ಸ್ನಾನ ಮಾಡುತ್ತೆ, ಆಟ ಆಡುತ್ತೆ ಅಂತ ತಿಳಿದು ಚಿಕ್ಕದಾದ ಪೂಲ್ ಅನ್ನು ತರಿಸಿಟ್ಟರೆ, ಅದು ಅದರಲ್ಲಿ ಇಳಿದು ಆಟವಾಡದೆ, ಅದರಲ್ಲಿರುವ ನೀರನ್ನು ಕುಡಿದಿದೆ ನೋಡಿ.
ಅರೋರಾ ಎಂಬ ನಾಯಿಗೆ ಮೀಸಲಾದ ಪುಟದಲ್ಲಿ ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಜೂನ್ 18 ರಂದು ಹಂಚಿಕೊಳ್ಳಲಾಗಿದೆ ಮತ್ತು ಅದು ಸುಮಾರು 2.9 ಮಿಲಿಯನ್ ವೀಕ್ಷಣೆಗಳನ್ನು ಪಡೆದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ