Viral Post: ನಾಯಿಗಳಿಗೂ ಮದುವೆಯಂತೆ: ಹಾಗಿದ್ರೆ ಈ ವಧು-ವರರು ಹೇಗಿದ್ದಾರೆ ನೋಡಿ

ಒಂದರ ನಂತರ ಇನ್ನೊಂದು ಎಂಬಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕುನಾಯಿಗಳ ಹೊಸ ಹೊಸ ವಿಡಿಯೋಗಳು ತಳುಕು ಹಾಕುತ್ತಿವೆ. ಇಲ್ಲೊಂದು ಮತ್ತೊಂದು ಹೊಸ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಜೋರಾಗಿಯೇ ಹರಿದಾಡುತ್ತಿದ್ದು, ವೈರಲ್ ಆಗಿದೆ ನೋಡಿ.

ನಾಯಿಗಳ ಮದುವೆ ಸಮಾರಂಭ

ನಾಯಿಗಳ ಮದುವೆ ಸಮಾರಂಭ

  • Share this:
ಇತ್ತೀಚೆಗೆ ಈ ಸಾಕುಪ್ರಾಣಿಗಳ (Pet Animals) ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ (Social Media) ತುಂಬಾನೇ ವೈರಲ್ ಆಗುತ್ತಿವೆ ಎಂದು ಹೇಳಿದರೆ ಅತಿಶಯೋಕ್ತಿಯಲ್ಲ. ಅದರಲ್ಲೂ ಈ ಸಾಕುನಾಯಿಗಳು ಮತ್ತು ಬೆಕ್ಕುಗಳ ವಿಡಿಯೋಗಳಂತೂ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಕೆಲವೊಮ್ಮೆ ನಾಯಿ ಮರಿಯೊಂದು ಹುಲಿಗಳ (Tiger) ಮಧ್ಯೆದಲ್ಲಿ ರಾಜಾರೋಷವಾಗಿ ಸ್ವಲ್ಪವೂ ಭಯವಿಲ್ಲದೆ ಅಡ್ಡಾಡುತ್ತಿರುವ ವಿಡಿಯೋ ಆಗಿರಬಹುದು ಮತ್ತು ಇನ್ನೊಂದು ವಿಡಿಯೋದಲ್ಲಿ (Video) ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಯಾವುದೋ ಒಂದು ಅಡುಗೆ ಕಾರ್ಯಕ್ರಮದಲ್ಲಿ ಕೆಂಪು ಮಾಂಸ ನೋಡಿ ತಾಳಲಾರದೇ ಆ ಟಿವಿಯ ಪರದೆಯನ್ನೇ ಮಾಂಸ ಅಂತ ಅಂದುಕೊಂಡು ಬಿಟ್ಟು ಬಿಡದೆ ನೆಕ್ಕಿರುವ ಹಾಸ್ಯಾಸ್ಪದವಾದ ವಿಡಿಯೋ ಆಗಿರಬಹುದು.

ಹೀಗೆ ಸಾಕುನಾಯಿಗಳು ಮಾಡುವ ತುಂಟಾಟ, ತರ್ಲೆಗಳು ಒಂದೇ ಎರಡೇ. ಇಂತಹ ವಿಡಿಯೋ ನೋಡಿದ ಯಾರಿಗಾದರೂ ಮತ್ತೆ ಮತ್ತೆ ಇಂತಹ ವಿಡಿಯೋಗಳನ್ನು ನೋಡಿ ಖುಷಿ ಪಡಬೇಕು ಅಂತ ಅನ್ನಿಸುವುದಂತೂ ನಿಜ. ಕೆಲವೊಮ್ಮೆ ಸಾಕುನಾಯಿಗಳು ಅವುಗಳ ಮುಗ್ದತೆಯಿಂದ ನಮ್ಮನ್ನು ರಂಜಿಸಿದರೆ, ಇನ್ನೊಮ್ಮೆ ಅವುಗಳ ಮೊಂಡು ಧೈರ್ಯದಿಂದ ಬೆರಗು ಗೊಳಿಸುತ್ತವೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ಈ ನಾಯಿಗಳ ವಿಡಿಯೋ
ಇಂತಹ ವಿಡಿಯೋಗಳು ನೆಟ್ಟಿಗರಿಗೆ ಈ ಸಾಕುನಾಯಿಗಳ ತುಂಟಾಟವನ್ನು ಮರೆಯಲು ಬಿಡುತ್ತಿಲ್ಲ ಎಂದು ಹೇಳಬಹುದು, ಏಕೆಂದರೆ ಒಂದರ ನಂತರ ಇನ್ನೊಂದು ಎಂಬಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕುನಾಯಿಗಳ ಹೊಸ ಹೊಸ ವಿಡಿಯೋಗಳು ತಳುಕು ಹಾಕುತ್ತಿವೆ. ಇಲ್ಲೊಂದು ಮತ್ತೊಂದು ಹೊಸ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಜೋರಾಗಿಯೇ ಹರಿದಾಡುತ್ತಿದ್ದು, ವೈರಲ್ ಆಗಿದೆ ನೋಡಿ.

ಎರಡು ನಾಯಿಗಳ ಮದುವೆ ಸಮಾರಂಭ
ಈಗಾಗಲೇ ಸಾಕುನಾಯಿಗಳ ಅನೇಕ ವಿಡಿಯೋಗಳನ್ನು ನೀವು ನೋಡಿರುತ್ತಿರಿ, ಆದರೆ ಇದು ಸ್ವಲ್ಪ ವಿಭಿನ್ನವಾದದ್ದು ಅಂತ ಹೇಳಬಹುದು. ಹೌದು.. ಇಲ್ಲಿ ಎರಡು ನಾಯಿಗಳಿಗೆ ಮದುವೆ ಮಾಡಿಸಿದ್ದಾರೆ ಮತ್ತು ಅವುಗಳು ಕ್ಯೂಟ್ ದಂಪತಿಗಳಂತೆ ಕಾಣುತ್ತಿವೆ. ಇದನ್ನು ಕೇಳಿ ನೀವು ಒಂದು ಕ್ಷಣ ಏನು? ನಾಯಿಗಳಿಗೆ ಮದುವೆ ಮಾಡಿಸಿದ್ದಾರಾ? ಅಂತ ಕೇಳುವುದು ಗ್ಯಾರೆಂಟಿ. ಈ ವೈರಲ್ ಆಗಿರುವ ವಿಡಿಯೋ ನೋಡಿ ನಿಮಗೆ ಅರ್ಥವಾಗುತ್ತದೆ. ಈ ವೈರಲ್ ಕ್ಲಿಪ್ ಇಂದು ಅಂತರ್ಜಾಲದಲ್ಲಿ ಅತ್ಯಂತ ಸುಂದರವಾದ ವಿಷಯವಾಗಿದೆ ಅಂತ ಖುದ್ದು ನೆಟ್ಟಿಗರೇ ಹೇಳುತ್ತಿದ್ದಾರೆ.

ಇದನ್ನೂ ಓದಿ:  Giant Sturgeon: ಸೆರೆ ಸಿಕ್ಕಿತು ಅಪರೂಪದ ಜೈಂಟ್ ಸರ್ಜನ್! ಇದಕ್ಕೆ 100 ವರ್ಷ

‘ಹೇ ಮೈ ನೇಮ್ ಈಸ್ ಲೂನಾ’ ಎಂಬ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಈಗ ವೈರಲ್ ಆಗುತ್ತಿದೆ ಅಂತ ಹೇಳಬಹುದು. ಈ ವಿಡಿಯೋದಲ್ಲಿ, ಡಾಗ್ಗೊ ದಂಪತಿಗಳು ಮದುವೆಯಾಗುವುದನ್ನು ಕಾಣಬಹುದು. ಅವರ ಮದುವೆ ಸಮಾರಂಭವನ್ನು ಒಬ್ಬ ಮಹಿಳೆಯು ನಿರ್ವಹಿಸುತ್ತಿರುವುದನ್ನು ಈ ವಿಡಿಯೋದಲ್ಲಿ ನಾವು ನೋಡಬಹುದು. ವರನು ಕಪ್ಪು ಕೋಟ್ ಅನ್ನು ಧರಿಸಿದ್ದರೆ, ವಧು ಲೂನಾ ಸುಂದರವಾದ ಬಿಳಿ ಗೌನ್ ಧರಿಸಿ ತಲೆಯ ಮೇಲೆ ಹೂವುಗಳಿಂದ ಅಲಂಕಾರ ಮಾಡಿಕೊಂಡಿದ್ದಾಳೆ. ಇಷ್ಟೇ ಅಲ್ಲದೆ ಲೂನಾ ತನ್ನ ತಲೆಯ ಮೇಲೆ ಮುಸುಕನ್ನು ಸಹ ಧರಿಸಿದ್ದಾಳೆ.

ಮದುವೆಯ ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದೇನು
"ಈಕೆ ಅತ್ಯಂತ ಸುಂದರವಾದ ವಧು" ಎಂದು ಈ ಪೋಸ್ಟ್ ಗೆ ಶೀರ್ಷಿಕೆಯೊಂದನ್ನು ಬರೆದಿದ್ದಾರೆ. ಆನ್‌ಲೈನ್ ನಲ್ಲಿ ಹಂಚಿಕೊಂಡ ನಂತರ, ಈ ವಿಡಿಯೋ ಸುಮಾರು 4 ಲಕ್ಷ ವೀಕ್ಷಣೆಗಳನ್ನು ಮತ್ತು 47,000ಕ್ಕೂ ಹೆಚ್ಚು ಲೈಕ್ ಗಳನ್ನು ಇದು ಗಳಿಸಿದೆ. ನೆಟ್ಟಿಗರು ಮಾತ್ರ ಈ ವಿಡಿಯೋ ನೋಡಿ ಇಂತಹ ಮುದ್ದಾದ ವಿಡಿಯೋಗಳನ್ನು ಮತ್ತೆ ಮತ್ತೆ ಪಡೆಯಲು ಸಾಧ್ಯವೇ ಇಲ್ಲ ಮತ್ತು ಲೂನಾ ಮಾತ್ರ ತುಂಬಾನೇ ಸುಂದರವಾದ ವಧು ಅಂತ ಹಾಡಿ ಹೊಗಳಿದ್ದಾರೆ.
ಇದನ್ನೂ ಓದಿ:  Elephant Saves Calf: ಕೊಚ್ಚಿ ಹೋಗ್ತಿದ್ದ ಮರಿಯಾನೆಯನ್ನು ರಕ್ಷಿಸಿದ ಅಮ್ಮ! ವಿಡಿಯೋ ವೈರಲ್

ಈ ವಿಡಿಯೋ ನೋಡಿ ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು "ಮೊದಲನೆಯದಾಗಿ, ಲೂನಾ ತನ್ನ ಉಡುಪಿನಲ್ಲಿ ಮುದ್ದಾಗಿ ಕಾಣುವುದಕ್ಕೆ ಯಾವುದೇ ರೀತಿಯ ಅವಕಾಶವನ್ನು ಬಿಟ್ಟಿಲ್ಲ" ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು "ಅವಳು ಎಂತಹ ಸುಂದರವಾದ ವಧು ಎಂದರೇ ನನಗೆ ನಂಬಲು ಸಹ ಸಾಧ್ಯವಾಗುತ್ತಿಲ್ಲ" ಎಂದು ಪ್ರತಿಕ್ರಿಯಿಸಿದ್ದಾರೆ.
Published by:Ashwini Prabhu
First published: