HOME » NEWS » Trend » DOGECOIN HOW TO BUY DOGECOIN CRYPTOCURRENCY IN INDIA HERE IS THE INFORMATION STG SCT

Dogecoin: ಭಾರತದಲ್ಲಿ ಡಾಗಿ ಕಾಯಿನ್ ಕ್ರಿಪ್ಟೋ ಕರೆನ್ಸಿ ಖರೀದಿಸುವುದು ಹೇಗೆ?; ಇಲ್ಲಿದೆ ಮಾಹಿತಿ

ಕ್ರಿಪ್ಟೋಕರೆನ್ಸಿ ಡೇಟಾ ಸೈಟ್ ಕಾಯಿನ್ ಗೆಕ್ಕೊ ಪ್ರಕಾರ ಡಾಗಿ ಕಾಯಿನ್ 0.39 ಡಾಲರ್ ವಹಿವಾಟು ನಡೆಸುತ್ತಿದೆ. ಇದಕ್ಕೂ ಮುನ್ನ 0.43 ಡಾಲರ್ ದಾಖಲೆಯನ್ನು ಮುಟ್ಟಿತ್ತು. ಈಗ ಇದರ ಮಾರುಕಟ್ಟೆ ಮೌಲ್ಯವು 47 ಬಿಲಿಯನ್ ಡಾಲರ್‌ಗಿಂತಲೂ ಹೆಚ್ಚಾಗಿದೆ.

news18-kannada
Updated:April 21, 2021, 7:44 AM IST
Dogecoin: ಭಾರತದಲ್ಲಿ ಡಾಗಿ ಕಾಯಿನ್ ಕ್ರಿಪ್ಟೋ ಕರೆನ್ಸಿ ಖರೀದಿಸುವುದು ಹೇಗೆ?; ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
  • Share this:
ಟೆಸ್ಲಾ ಸಂಸ್ಥಾಪಕ ಎಲಾನ್ ಮಸ್ಕ್ ಫೆಬ್ರವರಿ 4, 2021 ರಂದು ಈ ವರ್ಷದ ಆರಂಭದಲ್ಲಿ ತಮ್ಮ ಟ್ವಿಟ್ಟರ್ ನಲ್ಲಿ ಪ್ರಚಾರ ಆರಂಭಿಸಿದಾಗಿನಿಂದ ಡಾಗಿ ಕಾಯಿನ್ ಕ್ರಿಪ್ಟೋಕರೆನ್ಸಿ ಸಾಕಷ್ಟು ಜನರನ್ನು ತನ್ನತ್ತ ಸೆಳೆಯುತ್ತಿದೆ. ತೀರಾ ಇತ್ತೀಚೆಗೆ, ಎಲಾನ್ ಮಸ್ಕ್, ಮಾರ್ಕ್ ಕ್ಯೂಬನ್ ಮತ್ತು ಜರ್ಕಿ ಬ್ರಾಂಡ್ ಸ್ಲಿಮ್ ಜಿಮ್ ಕ್ರಿಪ್ಟೋಕರೆನ್ಸಿಯನ್ನು ಬೆಂಬಲಿಸಿದ ನಂತರ ಡಾಗಿ ಕಾಯಿನ್ ಆಧಾರಿತ ಕ್ರಿಪ್ಟೋ ಮೌಲ್ಯ ಕಳೆದ ಶುಕ್ರವಾರ ಏರಿಕೆಯಾಗಿದೆ.

ಇದಕ್ಕೂ ಮೊದಲು ಡಾಗಿ ಕಾಯಿನ್ ಜನರ ಕ್ರಿಪ್ಟೋ ಕರೆನ್ಸಿ ಎಂದು ಎಲಾನ್ ಅನುಮೋದಿಸಿದ್ದರು. ಕ್ರಿಪ್ಟೋಕರೆನ್ಸಿ ಡೇಟಾ ಸೈಟ್ ಕಾಯಿನ್ ಗೆಕ್ಕೊ ಪ್ರಕಾರ ಡಾಗಿ ಕಾಯಿನ್ 0.39 ಡಾಲರ್ ವಹಿವಾಟು ನಡೆಸುತ್ತಿದೆ. ಇದಕ್ಕೂ ಮುನ್ನ 0.43 ಡಾಲರ್ ದಾಖಲೆಯನ್ನು ಮುಟ್ಟಿತ್ತು. ಈಗ ಇದರ ಮಾರುಕಟ್ಟೆ ಮೌಲ್ಯವು 47 ಬಿಲಿಯನ್ ಡಾಲರ್‌ಗಿಂತಲೂ ಹೆಚ್ಚಾಗಿದೆ. ಡಾಗಿ ಕಾಯಿನ್ ಅನ್ನು ಇಬ್ಬರು ಸಾಫ್ಟ್‌ವೇರ್ ಎಂಜಿನಿಯರ್‌ಗಳಾದ ಬಿಲ್ಲಿ ಮಾರ್ಕಸ್ ಮತ್ತು ಜಾಕ್ಸನ್ ಪಾಮರ್ ಅವರು ತಮಾಷೆಗಾಗಿ ಕ್ರಿಪ್ಟೋಕರೆನ್ಸಿಯಾಗಿ ಡಿಸೆಂಬರ್ 2013 ರಲ್ಲಿ ಆರಂಭಿಸಿದರು. ಇತ್ತೀಚಿನ ಬೆಳವಣಿಗೆಯಲ್ಲಿ ಡಾಗಿ ಕಾಯಿನ್ ಮೌಲ್ಯ 0.122680 ಡಾಲರ್ ಅಥವಾ 12 ಸೆಂಟ್‌ಗಳಷ್ಟಿವೆ.

ಡಾಗಿ ಕಾಯಿನ್ ಎನ್ನುವುದು ಡಿಜಿಟಲ್ ಕರೆನ್ಸಿ . ಕ್ರಿಪ್ಟೋಕರೆನ್ಸಿ ಎನ್ನುವುದು ಡಿಜಿಟಲ್ ಅಥವಾ ವರ್ಚುವಲ್ ಕರೆನ್ಸಿಯಾಗಿದ್ದು ಅದು ಕ್ರಿಪ್ಟೋಗ್ರಫಿ(ಗುಟ್ಟಾಗಿ ಬರೆದಿಡುವುದು)ಯಿಂದ ಸುರಕ್ಷಿತವಾಗಿದೆ, ಇದು ನಕಲಿ ಅಥವಾ ಡಬಲ್ ಖರ್ಚು ಮಾಡಲು ಅಸಾಧ್ಯ.

ನೀವು ಕೂಡ ಈ ಆಧುನಿಕ ಕರೆನ್ಸಿಯಲ್ಲಿ ಹೂಡಿಕೆ ಮಾಡಲು ಬಯಸುವಿರಾ? ನೀವು ಭಾರತದ ನಿವಾಸಿಯಾಗಿದ್ದರೆ ಅದನ್ನು ಮಾಡುವುದು ಹೇಗೆ? ಅದರ ಖರೀದಿಯ ಬಗ್ಗೆ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಡಾಗಿ ಕಾಯಿನ್ ಖರೀದಿಸಲು ಇಷ್ಟಪಡುವವರು, ಡಾಗಿ ಕಾಯಿನ್ ಬೆಂಬಲಿಸುವ ಕ್ರಿಪ್ಟೋ ಎಕ್ಸ್‌ಚೇಂಜ್‌ನಲ್ಲಿ ಖಾತೆ ತೆರೆಯಬೇಕು. ನಿಮ್ಮ ಕ್ರಿಪ್ಟೋ ನಾಣ್ಯಗಳ ಮೂಲಕ ಖರೀದಿಸಲು, ಮಾರಾಟ ಮಾಡಲು ಅಥವಾ ವ್ಯಾಪಾರ ಮಾಡಲು ವಿನಿಮಯ ಮಾಡಿಕೊಳ್ಳಬಹುದು.

ಇದನ್ನೂ ಓದಿ: Elephants Attack: ದಕ್ಷಿಣ ಆಫ್ರಿಕಾದ ನ್ಯಾಷನಲ್ ಪಾರ್ಕ್​ನಲ್ಲಿ ಘೇಂಡಾಮೃಗ ಬೇಟೆಗಾರನನ್ನು ಕೊಂದ ಆನೆಗಳ ಹಿಂಡು!

ಮೊದ ಮೊದಲು ವಾಜಿರ್ ಎಕ್ಸ್, ಬಯ್ ಯೂ ಕಾಯಿನ್ ಮತ್ತು ಕಾಯಿನ್ ಸ್ವಿಚ್‌ನಂತಹ ಡಾಗಿ ಕಾಯಿನ್‌ಗಳನ್ನು ಖರೀದಿಸಲು ಉಪಯೋಗಿಸಬಹುದಾದ ಕೆಲವು ಅಪ್ಲಿಕೇಶನ್‌ಗಳನ್ನು ಹೊಂದಿರಬೇಕು. ಭಾರತದಲ್ಲಿ, ನೀವು ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಡಾಗಿ ಕಾಯಿನ್‌ಗಳನ್ನು ಖರೀದಿಸಬಹುದು. ಇಲ್ಲವೇ ಮೊಬಿಕ್ವಿಕ್ ವ್ಯಾಲೆಟ್, ಬ್ಯಾಂಕ್ ಟ್ರಾನ್ಸ್‌ಫರ್, ಭೀಮ್ ಮತ್ತು ಐಎಂಪಿಎಸ್ ಇ-ವ್ಯಾಲೆಟ್‌ಗಳನ್ನು ಬಳಸಿ ಖರೀದಿಸಬಹುದು. ಡಾಗಿ ಕಾಯಿನ್ ಹೊಂದಲು ನಿಮ್ಮ ಪಿಸಿಯಲ್ಲಿ ವಿಂಡೋಸ್, ಮ್ಯಾಕ್ ಅಥವಾ ಲಿನಕ್ಸ್ ಹೊಂದಿರಬೇಕು.ಸಾಮಾಜಿಕ ಮಾಧ್ಯಮಗಳಲ್ಲಿ ತನ್ನ ಜಾಗವನ್ನು ಭದ್ರಪಡಿಸಿಕೊಳ್ಳುವುದರ ಜೊತೆಗೆ, ಬಿಟ್‌ಕಾಯಿನ್ ಮತ್ತು ಎಥೆರಿಯಮ್‌ನಂತಹ ಇತರ ಕ್ರಿಪ್ಟೋಕರೆನ್ಸಿಗಳ ಮೌಲ್ಯವು ಹೆಚ್ಚಾಗುತ್ತಿರವುದು ಕೂಡ ಡಾಗಿ ಕಾಯಿನ್‌ಗಳ ಮೌಲ್ಯ ಹೆಚ್ಚಾಗಲು ಮತ್ತೊಂದು ಕಾರಣವಾಗಿದೆ.

ಸ್ಪೇಸ್ ಎಕ್ಸ್ ಸ್ಥಾಪಕ ಡಾಗಿ ಮಾಗಝೀನ್ ಕವರ್ ಟ್ವೀಟ್ ಮಾಡಿದ್ದರು. ಡಾಗಿ ಕಾಯಿನ್ ಬೆಲೆ ಏರಿಕೆಗೆ ಇದು ಸಾಕ್ಷಿಯಾಯಿತು. ಇನ್ನಿತರ ಸೆಲೆಬ್ರಿಟಿಗಳಾದ ಹಿಪ್ ಹಾಪ್ ಕಲಾವಿದ ಸ್ನೂಪ್ ಡೋಗ್ ಮತ್ತು ರಾಕ್ ಮ್ಯೂಸಿಶಿಯನ್ ಜೆನೆ ಸಿಮ್ಮಾನ್ಸ್ ಕೂಡ ಕ್ರಿಪ್ಟೋ ಕರೆನ್ಸಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಚಾರ ಮಾಡಿದ್ದರು.
First published: April 21, 2021, 7:44 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories