• Home
  • »
  • News
  • »
  • trend
  • »
  • Dog Wedding: ಇಲ್ಲಿ ಪ್ರತಿ ವರ್ಷ ನಡೆಯುತ್ತೆ ನಾಯಿಗಳಿಗೂ ಅದ್ಧೂರಿ ವಿವಾಹ! ಗೆಸ್ಟ್ ಆಗಿ ಬಂದ ಶ್ವಾನಗಳಿಗೂ ಹೋಳಿಗೆ-ತುಪ್ಪದ ಊಟ!

Dog Wedding: ಇಲ್ಲಿ ಪ್ರತಿ ವರ್ಷ ನಡೆಯುತ್ತೆ ನಾಯಿಗಳಿಗೂ ಅದ್ಧೂರಿ ವಿವಾಹ! ಗೆಸ್ಟ್ ಆಗಿ ಬಂದ ಶ್ವಾನಗಳಿಗೂ ಹೋಳಿಗೆ-ತುಪ್ಪದ ಊಟ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನಾಯಿಗಳನ್ನು ರಾಜ, ರಾಣಿಗಳ ಹಾಗೆ ಸಾಕುವುದನ್ನು ಕೇಳಿರುತ್ತೇವೆ. ಆದ್ರೆ ಇಲ್ಲಿ ನಾಯಿಗಳಿಗೆ ಮದುವೆ ಮಾಡಿಸಿದ್ದಾರೆ.

  • Share this:

ಈಗಿನ ಕಾಲದಲ್ಲಿ ಪ್ರಾಣಿ ಪ್ರಿಯರಿಗೇನು ಕೊರತೆ ಇಲ್ಲ ಬಿಡಿ. ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲಿಯೂ ನಾಯಿ(Dog), ಬೆಕ್ಕುಗಳು ಇರುತ್ತದೆ. ಅದ್ರಲ್ಲು ನಾಯಿಯನ್ನು ಸಾಕುವ ಜನರೇ ಹೆಚ್ಚು. ಮನೆಯನ್ನು ಕಾಯುವ ಬದಲು ಮನೆಯ ಒಳಗೇ ಬೆಚ್ಚಗೆ ಮಲಗಿರುತ್ತವೆ. ಅದೇ ಹಳ್ಳಿಗಳಲ್ಲಿ ನಾಯಿಗಳು ಮನೆಯನ್ನು ಕಾವಲು ಕಾಯುತ್ತವೆ. ಪ್ರಾಣಿಗಳು ಮನುಷ್ಯರ ಜೊತೆಗೆ ಇದ್ದು ಅವೂ ಕೂಡ ಮಾನವರಂತೆಯೇ ಬಿಹೇವಿಯರ್​ನ್ನು (Behaviour) ಫಾಲೋ ಮಾಡುತ್ತವೆ. ಅದೇ ರೀತಿಯಾಗಿ ನಾಯಿಗಳಿಗೂ ಕ್ರೇಜ್​ ಇರುತ್ತದೆ. ಇದೀಗ ಒಂದು ವಿಡಿಯೋ ವೈರಲ್ (Video Viral)​ ಆಗ್ತಾ ಇದೆ. ಸಂಕ್ರಾಂತಿಯ ಹಬ್ಬದ ದಿನದಂದು ನಾಯಿಗಳಿಗೆ ಮದುವೆಯನ್ನು ಮಾಡಿಸಿದ್ದಾರೆ.


ಅರೇ! ಇದೇನಿದು ನಾಯಿಗಳಿಗೆ ಮದುವೆ ಅಂತ ಆಶ್ಚರ್ಯ ಆಗ್ತಾ ಇದ್ದೀರಾ? ಹೌದು. ನಿಜಕ್ಕೂ ಹಬ್ಬದ ಸಡಗರದ ಜೊತೆಗೆ ನಾಯಿಗಳ ಬಾಳಿನಲ್ಲಿಯೂ ಫುಲ್​ ಖುಷಿಯನ್ನು ತರಲು ಸಜ್ಜಾಗಿದ್ದಾರೆ ಈ ಊರಿನ ಮಂದಿ.


ಸುದ್ದಿ ಸಂಸ್ಥೆ ANI ಪ್ರಕಾರ, ಟಾಮಿ ಮಾಜಿ ಸುಖ್ರಾವಲಿ ಗ್ರಾಮದ ಮುಖ್ಯಸ್ಥ ದಿನೇಶ್ ಚೌಧರಿ ಅವರ ಮುದ್ದಿನ ನಾಯಿಯಾಗಿದ್ದು, ಜೆಲ್ಲಿ ಅಟ್ರೌಲಿಯ ಟಿಕ್ರಿ ರಾಯ್ಪುರದ ನಿವಾಸಿ ಡಾ ರಾಮ್ಪ್ರಕಾಶ್ ಸಿಂಗ್ ಅವರಿಗೆ ಸೇರಲ್ಪಟ್ಟಿದೆ.ಮಕರ ಸಂಕ್ರಾಂತಿಯ ದಿನವಾದ ಜನವರಿ 14 ರಂದು ಟಾಮಿ ಮತ್ತು ಜೆಲ್ಲಿ ಎಂಬ ನಾಯಿಗಳಿಗೆ ವಿವಾಹವನ್ನು ನಿಗದಿಪಡಿಸಲಾಗಿದೆ ಎಂದು ವರದಿ ಮಾಡಲಾಗಿದೆ. ಡೊಳ್ಳು ಬಾರಿಸುವುದರೊಂದಿಗೆ ವಧು-ವರರಿಗೆ ಮಾಲೆ ಹಾಕುವ ಮೂಲಕ ವಿಶಿಷ್ಟ ವಿವಾಹಕ್ಕೆ ಅದ್ಧೂರಿ ಮೆರವಣಿಗೆ ನಡೆಸಲಾಯಿತು. ಜೆಲ್ಲಿಯ ಕುಟುಂಬದಿಂದ ಬಂದ ಜನರು ಟಾಮಿಗೆ ತಿಲಕ ವನ್ನೂ ಹಚ್ಚಿದರು. ಅದರ ನಂತರ, ಸಾಮಾನ್ಯ ಮನುಷ್ಯರ ಹಾಗೆಯೇಸಡಗರ ಸಂಭ್ರಮದ ಜೊತೆಗೆ ಮೆರವಣಿಗೆಯನ್ನು ಮಾಡಲಾಯಿತು.


ಬಾರಾತ್  ಮೆರವಣಿಗೆ ಅಂತ ಕರೆಯಲಾಗಿದೆ ಈ ನಾಯಿ ಮದುವೆಯ ಸಮಾರಂಭವನ್ನು ಮತ್ತು ವಿವಾಹ ಸಮಾರಂಭದ ವೀಡಿಯೊವನ್ನು ಸಹ ಎಎನ್‌ಐ ಹಂಚಿಕೊಂಡಿದೆ. ಈ ವಿಚಿತ್ರವಾದ ಸಾಂಪ್ರದಾಯವನ್ನು ನೋಡುತ್ತಾ ಇದ್ರೆ ಮುಂದೆ ಇದೊಂದು ಟ್ರೆಂಡಿಂಗ್​ ಆದ್ರೂ ಆಶ್ಚರ್ಯವೇನಿಲ್ಲ ಬಿಡಿ.


ಇದನ್ನು ನೋಡಿದ್ರೆ ವಿಚಿತ್ರ ಅಂತ ಅನಿಸುತ್ತೆ. ಯಾಕಂದ್ರೆ ಮನುಷ್ಯರ ಮದುವೆಯನ್ನು ಯಾವ ರೀತಿಯಾಗಿ ಆಚರಿಸಲಾಗುತ್ತದೆಯೋ ಅದೇ ರೀತಿಯಾಗಿ ಅತ್ಯಂತ ಸಡಗರ ಮತ್ತು ಸಂಭ್ರಮದಿಂದ, ಶಾಸ್ತ್ರೋಕ್ತವಾಗಿ  ಮಾಡಲಾಗಿದೆ.


ಇದನ್ನೂ ಓದಿ: ಈ ವಿಚಾರದಲ್ಲಿ ಭಾರತ ನಂಬರ್ 1 ಅಂತೆ, ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಗ್ಗಳಿಕೆಗೆ ಪಾತ್ರವಾದ ಇಂಡಿಯಾ!


"ಮಕರ ಸಂಕ್ರಾಂತಿ ಸಂದರ್ಭದಲ್ಲಿ, ನಾವು ಮದುವೆಯನ್ನು ಆಯೋಜಿಸಿದ್ದೇವೆ. ನೆರೆಹೊರೆಯ ನಾಯಿಗಳಿಗೆ ದೇಸಿ ತುಪ್ಪದ ಆಹಾರವನ್ನು ಸಹ ವಿತರಿಸಲಾಯಿತು. ಅದಕ್ಕಾಗಿ ನಾವು ಸುಮಾರು ₹ 40,000-45,000 ಖರ್ಚು ಮಾಡಿದ್ದೇವೆ" ಎಂದು ಟಾಮಿ ಮಾಲೀಕ ದಿನೇಶ್ ಚೌಧರಿ ANI ಗೆ ತಿಳಿಸಿದರು.


ಇದು ಕೇವಲ 'ನಾಯಿ ಮದುವೆ' ಅಲ್ಲ. ಕಳೆದ ವರ್ಷ ನವೆಂಬರ್‌ನಲ್ಲಿ, ಗುರುಗ್ರಾಮ್‌ನಲ್ಲಿ ದಂಪತಿಗಳು ತಮ್ಮ ಸಾಕು ನಾಯಿಯನ್ನು ನೆರೆಹೊರೆಯ ನಾಯಿಯೊಂದಿಗೆ ಮದುವೆಯಾದ ಘಟನೆಗೆ ಸಾಕ್ಷಿಯಾಯಿತು. ಸಾಕುಪ್ರಾಣಿಗಳ ಮಾಲೀಕರ ಪ್ರಕಾರ, ಮದುವೆಗೆ 100 ಆಮಂತ್ರಣ ಪತ್ರಿಕೆಗಳನ್ನು ಕಳುಹಿಸಲಾಗಿದೆ, ಇದನ್ನು ಬಹಳ ಉತ್ಸಾಹದಿಂದ ಮತ್ತು ಹಿಂದೂ ಸಂಪ್ರದಾಯಗಳಿಗೆ ಅನುಗುಣವಾಗಿ ಆಚರಿಸಲಾಯಿತು. ಮದುವೆ ಸಮಾರಂಭವು ಧೋಲ್ ಮತ್ತು ನೃತ್ಯದೊಂದಿಗೆ ನಡೆಯಿತು.
ನೋಡಿದ್ರಾ ಬೌ ಬೌ ನಾಯಿಗೂ ಎಂಥಾ ಮರ್ಯಾದೆ ಮತ್ತು ಎಂಥಾ ಉತ್ಸವ ಅಂತ. ಕೊರೊನಾದಿಂದ ಮನುಷ್ಯರೇ ಸರಳವಾಗಿ ಮದುವೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಅಂತದ್ರಲ್ಲಿ ಪ್ರಾಣಿಗಳು ಅದ್ದೂರಿಯಾಗಿ ಮದುವೆಯನ್ನು ಮಾಡಿಕೊಳ್ಳುತ್ತಾ ಇದ್ದಾರೆ.

First published: