ವೈರಲ್ ಆಗುತ್ತಿರೋ ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ರು “Love At First Sight”

ಪ್ರೀತಿ ಹೇಗೆ ಮತ್ತು ಯಾವಾಗ ಹುಟ್ಟಿಕೊಳ್ಳುತ್ತೆ ಅನ್ನೋದು ಆ ಬಂಧನದಲ್ಲಿ ಸಿಲುಕಿದವರಿಗೆ ಮಾತ್ರ ಗೊತ್ತು.  ಈ ಪ್ರೇಮಪಾಶದಲ್ಲಿ ಸಿಲುಕಿದವರಿಗೆ ಇಡೀ ಜಗತ್ತು ಖಾಲಿ ಖಾಲಿಯಾಗಿ ಕಾಣುತ್ತೆ. ತಮ್ಮದೇ ಪ್ರೇಮಲೋಕ ಕಟ್ಟಿಕೊಳ್ಳುವ ಜೋಡಿ, ಸ್ವಚ್ಛಂದವಾಗಿ ವಿಹರಿಸುತ್ತಾರೆ.

ವಿಡಿಯೋ

ವಿಡಿಯೋ

  • Share this:
ಸೋಶಿಯಲ್ ಮೀಡಿಯಾ(Social Media)ದಲ್ಲಿ ಆಗಾಗ ಮುದ್ದಾದ ಫೋಟೋ ಮತ್ತು ವಿಡಿಯೋಗಳು ವೈರಲ್ (Viral Photo) ಆಗುತ್ತಿರುತ್ತವೆ. ಫೋಟೋ, ವಿಡಿಯೋಗೆ ಫಿದಾ ಆಗುವ ನೆಟ್ಟಿಗರು ಚೆಂದದ ಕಮೆಂಟ್ (Comment) ಮಾಡಿ, ಶೇರ್ (Share) ಮಾಡಿಕೊಳ್ಳುತ್ತಾರೆ. ಇಂತಹ ಫೋಟೋಗಳನ್ನು ಕೆಲವರು ತಮ್ಮ ಗ್ಯಾಲರಿಯಲ್ಲಿ ಸೇವ್ (Save) ಮಾಡಿಕೊಳ್ಳುತ್ತಾರೆ. ಕೆಲವೊಮ್ಮೆ ಫೋಟೋಗಳಂತೆ ನಕಲು ಮಾಡಲು ಸಹ ಕೆಲವರು ಪ್ರಯತ್ನಿಸುತ್ತಾರೆ. ಇದೀಗ ಅಂತಹವುದೇ ಒಂದು ಮುದ್ದಾದ ಸುಂದರ ವಿಡಿಯೋ ವೈರಲ್ ಆಗಿದೆ. ಈ ಫೋಟೋಗೆ ಬಹುತೇಕರು ಪ್ರೇಮದ (Love) ಲೇಪನ ಹಚ್ಚಿದ್ದಾರೆ. ಇದುವೇ ಲವ್ ಆಟ್ ಫಸ್ಟ್ ಸೈಟ್ (Love At First Sight) ಅಂತಾನೂ ಬರೆದುಕೊಂಡಿದ್ದಾರೆ.

ಪ್ರೀತಿ ಹೇಗೆ ಮತ್ತು ಯಾವಾಗ ಹುಟ್ಟಿಕೊಳ್ಳುತ್ತೆ ಅನ್ನೋದು ಆ ಬಂಧನದಲ್ಲಿ ಸಿಲುಕಿದವರಿಗೆ ಮಾತ್ರ ಗೊತ್ತು.  ಈ ಪ್ರೇಮಪಾಶದಲ್ಲಿ ಸಿಲುಕಿದವರಿಗೆ ಇಡೀ ಜಗತ್ತು ಖಾಲಿ ಖಾಲಿಯಾಗಿ ಕಾಣುತ್ತೆ. ತಮ್ಮದೇ ಪ್ರೇಮಲೋಕ ಕಟ್ಟಿಕೊಳ್ಳುವ ಜೋಡಿ, ಸ್ವಚ್ಛಂದವಾಗಿ ವಿಹರಿಸುತ್ತಾರೆ. ಇಂತಹ ಪ್ರೇಮ ಕಥೆಗಳನ್ನಾಧರಿಸಿ ಹಲವು ಚಿತ್ರಗಳು ತೆರೆಯ ಮೇಲೆ ಬಂದಿವೆ. ಈಗಲೂ ಬರುತ್ತಿವೆ. ಹೊಸ ಹೊಸ ಪ್ರೇಮ ಕಥೆಗಳಿಗೆ ಪ್ರೇಕ್ಷಕರು ಜೈ ಅಂತ ಹೇಳುತ್ತಾನೆ.

ವೈರಲ್ ಆಗಿರುವ ವಿಡಿಯೋದಲ್ಲಿ ಏನಿದೆ?

ಕೆಲ ದಿನಗಳಿಂದ ವಿಡಿಯೋ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಎರಡು ನಾಯಿಗಳಿರೋದನ್ನು ನೋಡಬಹುದು. ಒಂದು ನಾಯಿ ಟೆರೇಸ್ ಮೇಲಿನಿಂದ ಇಣುಕಿ ನೋಡುತ್ತಿದ್ರೆ, ಮತ್ತೊಂದು ಕೆಳಗಿನಿಂದ ಮೇಲೆ ನೋಡುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ತಮ್ಮ ಕಲ್ಪನೆಯಲ್ಲಿ ಕತೆ ಹೇಳುತ್ತಿದ್ದಾರೆ.

ಒಂದಿಷ್ಟು ಜನ ಪ್ರೇಮಕತೆಗೆ ಲಿಂಕ್ ಮಾಡಿ, ಮೇಲಿರೋದು ಹುಡುಗಿ, ಕೆಳಗೆ ನಿಂತಿರೋದು ಹುಡುಗ ಅಂತ ಹೇಳಿದ್ದಾರೆ. ಪ್ರೇಯಸಿಯನ್ನು ಭೇಟಿಯಾಗಲು ಪ್ರಿಯಕರ ಬಂದಂತೆ ಕಾಣುತ್ತಿದೆ. ಒಂದಿಷ್ಟು ಜನರು ಆಟ ಆಡಲು ಗೆಳೆಯರು ಬಂದಾಗಿನ ದೃಶ್ಯ ಹೀಗೆ ಇರುತ್ತೆ ಅಂತಾನು ಹೇಳಿದ್ದಾರೆ.
ಈ ವಿಡಿಯೋಗೆ 8 ಲಕ್ಷಕ್ಕೂ ಅಧಿಕ ವ್ಯೂವ್ ಗಳು ಬಂದಿವೆ. ಜನರು ಲೈಕ್ಸ್ ಜೊತೆಗೆ ಕಮೆಂಟ್ ಮಾಡುತ್ತಿದ್ದಾರೆ. ಈ ವಿಡಿಯೋಗೆ ರೊಮ್ಯಾಂಟಿಕ್ ಹಾಡುಗಳನ್ನು ಸೇರಿಸಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:  Bengaluru: ಅತೀ ಹೆಚ್ಚು ಶ್ರೀಮಂತರಿರುವ ನಗರಗಳಲ್ಲಿ ಬೆಂಗಳೂರಿಗೆ 3ನೇ ಸ್ಥಾನ! ಮೊದಲ ಎರಡು ಸ್ಥಾನ ಯಾರಿಗೆ?

ಒಂದು ತಪ್ಪಿನಿಂದ ಮಾರಾಟವಾಗುತ್ತಿಲ್ಲ ಭವ್ಯ ಬಂಗಲೆ!

ಅಮೆರಿಕದ ಮಿನ್ನೇಸೋಟದ ಬಾಲ್ಡ್ ಈಗಲ್ ಲೇಕ್‌ನಲ್ಲಿ 2.3 ಎಕರೆಯಲ್ಲಿ ಹರಡಿರುವ ಈ ಅರಮನೆ ನೋಡಿದ್ರೆ ಜನರು ಅಚ್ಚರಿಗೆ ಒಳಗಾಗುತ್ತಾರೆ. ಮನೆ ಅಂದ್ರೆ ಹೀಗಿರಬೇಕು ಎಂದು ಉದ್ಘಾರ ತೆಗೆಯುತ್ತಾರೆ. ಸದ್ಯ ಮಾರುಕಟ್ಟೆಯಲ್ಲಿ ಈ ಅರಮನೆಯನ್ನು ಐವತ್ತು ಕೋಟಿಗೆ ಮಾರಾಟ ಮಾಡಲು ಆರಂಭಿಸಲಾಗಿದೆ.

ಅಡುಗೆ ಮನೆ ನೋಡಿ ಖರೀದಿಗೆ ಹಿಂದೇಟು

ಈ ಮನೆಯನ್ನು ಹೊರಗಿನಿಂದ ನೋಡಿ ಎಲ್ಲರೂ ಖರೀದಿಸಲು ತಯಾರಾಗುತ್ತಿದ್ದಾರೆ. ಅರಮನೆಯ ಕೋಣೆಗಳೂ ಎಲ್ಲರನ್ನೂ ಆಕರ್ಷಿಸುತ್ತಿವೆ. ಆದರೆ ಅದರ ಅಡುಗೆ ಕೋಣೆ ನೋಡಿದ ಕೂಡಲೇ ಜನ ಇದನ್ನು ಖರೀದಿಸುವ ಇರಾದೆ ಬಿಟ್ಟುಬಿಡುತ್ತಾರೆ. ಮನೆ ನಿರ್ಮಾಣದ ವೇಳೆ ಗುತ್ತಿಗೆದಾರರಿಂದ ಇಂತಹ ಪ್ರಮಾದ ಎಸಗಿದ್ದು, ಜನ ಈ ಅರಮನೆಯನ್ನು ಖರೀದಿಸಲು ನಿರಾಕರಿಸುತ್ತಿದ್ದಾರೆ.

ಅರಮನೆಯಲ್ಲಿ ಏನೆಲ್ಲಾ ಇದೆ?

ಈ ಐಷಾರಾಮಿ ಅರಮನೆಯು ಐದು ಮಲಗುವ ಕೋಣೆ(Five Bedrooms)ಗಳನ್ನು ಹೊಂದಿದೆ. ಇದಲ್ಲದೆ, 9 ಸ್ನಾನಗೃಹಗಳು (9 Bathrooms) ಮತ್ತು 6 ಗ್ಯಾರೇಜ್ (Garage)‌ಗಳಿವೆ. ಈ ಮನೆಯನ್ನು ಕನಸಿನ ಮನೆ ಎಂದೂ ಕರೆಯಬಹುದು. ಆದರೆ ನೀವು ಅದರ ಅಡುಗೆಮನೆಗೆ ಹೋಗುವವರೆಗೆ ಗುತ್ತಿಗೆದಾರ ಮಾಡಿದ ತಪ್ಪು ಗೊತ್ತಾಗಲ್ಲ.

ಇದನ್ನೂ ಓದಿ:  Bride Groom: ಮದುವೆಗೆ ಮುಂಚೆಯೇ ವರನ ಪರೀಕ್ಷೆ ನಡೆಸಿದ ವಧು: ಯುವತಿ ಹೀಗೆ ಮಾಡ್ತಾಳೆ ಅಂತ ಗೊತ್ತಿರಲಿಲ್ಲ!

ಅಡುಗೆಮನೆಯಲ್ಲಿ ಎರಡು ಕಂಬಗಳನ್ನು ಮಾಡಲಾಗಿದೆ. ಈ ಎರಡೂ ಪಿಲ್ಲರ್ ಗಳನ್ನು ಅಡುಗೆ ಮನೆಯಲ್ಲಿ ಬಿಳಿ ಟೇಬಲ್ ಬಳಿ ಮಾಡಲಾಗಿದ್ದು, ಇಡೀ ಮನೆಯ ಅಂದವನ್ನೇ ಕೆಡಿಸುತ್ತಿದೆ.
Published by:Mahmadrafik K
First published: