HOME » NEWS » Trend » DOG STEALS REPORTERS MIC DURING LIVE BROADCAST VIDEO VIRAL STG HG

ರಷ್ಯನ್​ ಟಿವಿ ವರದಿಗಾರ್ತಿಯ ಮೈಕ್​ ಕಸಿದು ಓಡಿದ ನಾಯಿ, ಶ್ವಾನದ ಹಿಂದೆ ಓಡಿದ ವರದಿಗಾರ್ತಿ: ವಿಡಿಯೋ ವೈರಲ್

ರಷ್ಯಾದ ಟಿವಿ ವರದಿಗಾರ್ತಿಯೊಬ್ಬರು ರಸ್ತೆಯ ಬದಿಯಲ್ಲಿ ನಿಂತು ನೇರ ಪ್ರಸಾರದ ವರದಿ ಮಾಡುತ್ತಿದ್ದ ವೇಳೆ, ನಾಯಿಯೊಂದು ಓಡಿ ಬಂದು ವರದಿಗಾರ್ತಿಯ ಕೈಯಲ್ಲಿದ್ದ ಮೈಕನ್ನು ಕಿತ್ತುಕೊಂಡು ಓಡಿರುವ ಘಟನೆ ಶುಕ್ರವಾರ ನಡೆದಿದೆ.

news18-kannada
Updated:April 3, 2021, 3:24 PM IST
ರಷ್ಯನ್​ ಟಿವಿ ವರದಿಗಾರ್ತಿಯ ಮೈಕ್​ ಕಸಿದು ಓಡಿದ ನಾಯಿ, ಶ್ವಾನದ ಹಿಂದೆ ಓಡಿದ ವರದಿಗಾರ್ತಿ: ವಿಡಿಯೋ ವೈರಲ್
Image credit: Twitter
  • Share this:
ನಾಯಿ ಮನುಷ್ಯನನ್ನು ಕಚ್ಚಿದರೆ ಅದು ಸುದ್ದಿಯಲ್ಲ, ಮನುಷ್ಯ ನಾಯಿಯನ್ನು ಕಚ್ಚಿದರೆ ಅದು ಸುದ್ದಿ ಎನ್ನುವುದು ಪತ್ರಿಕೋದ್ಯಮದ ಮೊದಲ ಪಾಠ. ಆದರೆ ಅದೇ ನಾಯಿ ಪತ್ರಕರ್ತನ ಮೈಕನ್ನು ಕಚ್ಚಿಕೊಂಡು ಹೋದರೆ ಅದನ್ನು ಹೇಳೋದೇ ಬೇಡ ಅದು ವೈರಲ್​ ಸುದ್ದಿ.

ಹೌದು! ರಷ್ಯಾದ ಟಿವಿ ವರದಿಗಾರ್ತಿಯೊಬ್ಬರು ರಸ್ತೆಯ ಬದಿಯಲ್ಲಿ ನಿಂತು ನೇರ ಪ್ರಸಾರದ ವರದಿ ಮಾಡುತ್ತಿದ್ದ ವೇಳೆ, ನಾಯಿಯೊಂದು ಓಡಿ ಬಂದು ವರದಿಗಾರ್ತಿಯ ಕೈಯಲ್ಲಿದ್ದ ಮೈಕನ್ನು ಕಿತ್ತುಕೊಂಡು ಓಡಿರುವ ಘಟನೆ ಶುಕ್ರವಾರ ನಡೆದಿದೆ. ರಷ್ಯಾದ ಮಾಸ್ಕೋವಿನಲ್ಲಿರುವ ಮಿರ್​ ಟಿವಿಯ ವರದಿಗಾರ್ತಿ ನಡೇಜ್ಡಾ ಸೆರೆಜೀಝಿಕಿನಾ ರಸ್ತೆಯಲ್ಲಿ ಲೈವ್​(ನೇರ ವರದಿ) ಮಾಡುತ್ತಿದ್ದ ಸಂದರ್ಭದಲ್ಲಿ ಶ್ವಾನವೊಂದು ಓಡಿಬಂದು ಅವರ ಕೈಯಲ್ಲಿದ್ದ ಮೈಕ್ರೊಫ್ರೊನ್​ ಅಂದರೆ ಲೋಗೋ(ವಾಹಿನಿಯ ಹೆಸರುಳ್ಳ) ಮೈಕನ್ನು ಕಿತ್ತುಕೊಂಡು ಓಡಿದೆ.

ಈ ಘಟನೆಯಿಂದ ಒಂದು ಕ್ಷಣ ತಬ್ಬಿಬ್ಬಾದ ವರದಿಗಾರ್ತಿ ಕೂಡಲೇ ನಾಯಿಯ ಹಿಂದೆ ಓಡಿದ್ದಾರೆ. ಈ ಸಂದರ್ಭದಲ್ಲಿ ಕ್ಯಾಮರಾ ಮ್ಯಾನ್​ ಕೂಡ ಅಲರ್ಟ್​ ಆಗಿದ್ದು, ಈ ಘಟನೆಯನ್ನು ಹಾಗೆಯೇ ಚಿತ್ರೀಕರಿಸಿದ್ದಾರೆ.
'ಹೆಲೋ ಎಲಿನಾ' ಎಂದು ವರದಿಗಾರ್ತಿ ಮಾತನಾಡಲು ಆರಂಭಿಸಿದ್ದರು. ಅಷ್ಟರಲ್ಲೇ ಈ ಘಟನೆ ನಡೆದಿದೆ ಎಂದು ಪತ್ರಕರ್ತರೊಬ್ಬರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಎಮ್​ಎಸ್​ಎನ್​ ನ್ಯೂಸ್​ ಪ್ರಕಾರ ಮಿರ್​ ಟಿವಿಯ ಸ್ಟುಡಿಯೋ ಆ್ಯಂಕರ್ ಎಲಿನಾ ಡ್ಯಾಶ್​ಕ್ಯೂವಾ ಅವರು ಈ ಘಟನೆಯಿಂದ ವಿಚಲಿತರಾದರು. ವರದಿಗಾರ್ತಿ ನಡೇಜ್ಡಾ ಸೆರೆಜೀಝಿಕಿನಾ ಅವರ ಕೈಯಿಂದ ನಾಯಿ ಮೈಕ್​ ಕಿತ್ತುಕೊಂಡಿದ್ದನ್ನು ನೋಡಿ ಒಂದು ಕ್ಷಣ ಆಘಾತಕ್ಕೆ ಒಳಗಾಗಿ ಮಾತು ಬಾರದೇ ಸುಮ್ಮನೇ ಕುಳಿತಿದ್ದಾರೆ. ಈ ಘಟನೆಯಿಂದ ತಬ್ಬಿಬ್ಬಾದ ಎಲಿನಾ ವೀಕ್ಷಕರಿಗೆ ಏನು ಹೇಳಬೇಕು ಎನ್ನುವ ಗೊಂದಲಕ್ಕೆ ಒಳಗಾಗಿ ಹಠಾತ್ತನೇ ಸಂಪರ್ಕ ಕಟ್ ಆಗಿದೆ ಎಂದು ಹೇಳಿದ್ದಾರೆ.

ಟಿವಿಗಳಲ್ಲಿ ಪತ್ರಕರ್ತರು ಲೈವ್​ ಕೊಡುವಾಗ ಇಂತಹ ಘಟನೆಗಳು ಸಾಮಾನ್ಯವಾಗಿ ನಡೆಯುತ್ತಲೇ ಇರುತ್ತವೆ. ಕಳೆದ ತಿಂಗಳು ಅಮೆರಿಕದ ವರ್ಜಿನಿಯಾದ ಲೀಸ್​ಬರ್ಗ್​ನಲ್ಲಿ ಹವಾಮಾನ ವರದಿ ನೀಡುತ್ತಿದ್ದ ವೇಳೆ ನಾಯಿಮರಿಯೊಂದು ಬಂದು ಅಸ್ತವ್ಯಸ್ತಗೊಳಿಸಿತ್ತು.

ಫಾಕ್ಸ್​ 5 ಡಿ ಸಿ ಯ ವರದಿಗಾರ ಬಾಬ್​ ಬರ್ನಾರ್ಡ್ ಹಿಮದಿಂದ ಆವೃತ್ತವಾದ ಸ್ಥಳದಿಂದ ನೇರ ವರದಿ ನೀಡುತ್ತಿದ್ದ ಈ ವೇಳೆ ನಾಯಿಮರಿಯೊಂದು ಆತನ ಬಳಿಗೆ ಬಂದಿದೆ. ಆ ವರದಿಗಾರ ಆ ನಾಯಿಯನ್ನು ಎತ್ತಿಕೊಂಡು ' ನಾವು ಇಲ್ಲಿ ತನಕ ಮಾತನಾಡಿದ ಜನರನ್ನು ಮರೆತುಬಿಡೋಣ, ಈ ನಾಯಿಯ ಬಗ್ಗೆ ತಿಳಿದುಕೊಳ್ಳಬೇಕು' ಎಂದು ಸಮಯ ಪ್ರಜ್ಞೆ ಮೆರೆದಿದ್ದರು.

ಕೆಲವೊಮ್ಮೆ ಪ್ರಾಣಿಗಳಿಂದ ಈ ರೀತಿ ಸಮಸ್ಯೆಯನ್ನು ಎದುರಿಸುವುದು ಮಾತ್ರವಲ್ಲ. ಇನ್ನು ಕೆಲವೊಮ್ಮೆ ಕೆಟ್ಟ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಈ ವರ್ಷ ಮಾರ್ಚ್​ನಲ್ಲಿ ಸ್ಯಾನ್​ ಡಿಯಾಗೋವಿನ ವರದಿಗಾರ ಸುರಕ್ಷಿತ ಸ್ಥಳದಿಂದ ವರದಿ ಮಾಡುವುದು ಹೇಗೆ ಅಪಾಯವನ್ನು ತಂದೊಡ್ಡುತ್ತದೆ ಎನ್ನುವುದನ್ನು ತಿಳಿಸಿದ್ದರು. ಫಾಕ್ಸ್​ 5 ವಾಹಿನಿಯ ಜೆಫ್​ ಮ್ಯಾಕಡಮ್​ ವರದಿಗಾರ ವೆಸ್ಟ್​ ಹರ್ಬರ್​ ಕನ್ವೆಷನ್​ ಸೆಂಟರ್​ ಬಳಿ ವರದಿ ಮಾಡುತ್ತಿದ್ದ ವೇಳೆ ಒಂದು ಭೀಕರ ಘಟನೆಗೆ ಸಾಕ್ಷಿಯಾದರು. ನಡು ರಸ್ತೆಯಲ್ಲಿ ಮೊಬೈಲ್​ ನೋಡುತ್ತಾ ವರದಿ ಮಾಡುತ್ತಿದ್ದ ವೇಳೆ ಪೊಲೀಸ್​ ಮತ್ತು ಸಾಮಾನ್ಯ ವ್ಯಕ್ತಿಯ ನಡುವೆ ಗುಂಡಿನ ದಾಳಿ ನಡೆಯುತ್ತಿತ್ತು. ಲೈವ್​ ವರದಿಯ ನಡುವೆ ಆ ಗುಂಡಿನ ಶಬ್ಧಗಳು ದಾಖಲಾದವು. ಈ ವಿಡಿಯೋ ಕೂಡ ಸಿಕ್ಕಾಪಟ್ಟೆ ವೈರಲ್ ಆಗಿ ಪತ್ರಕರ್ತರ ಸಂಕಷ್ಟಗಳನ್ನು ತೆರೆದಿಟ್ಟಿದವು.
First published: April 3, 2021, 3:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories