• Home
  • »
  • News
  • »
  • trend
  • »
  • Viral Video: ಬಾಗಿಲು ತೆಗೆದರೆ ಮೈಮೇಲೇ ಹಾರುತ್ತೆ ದೈತ್ಯ ಜೇಡ, ಗಾಬರಿಬಿದ್ದು ಓಡಿ ಹೋಗ್ತಿದ್ದಾರೆ ಜನ!

Viral Video: ಬಾಗಿಲು ತೆಗೆದರೆ ಮೈಮೇಲೇ ಹಾರುತ್ತೆ ದೈತ್ಯ ಜೇಡ, ಗಾಬರಿಬಿದ್ದು ಓಡಿ ಹೋಗ್ತಿದ್ದಾರೆ ಜನ!

ಜೇಡ ಕಾಣಿಸಿಕೊಂಡ ನಾಯಿ

ಜೇಡ ಕಾಣಿಸಿಕೊಂಡ ನಾಯಿ

Viral Video: ವ್ಯಕ್ತಿಯೊಬ್ಬ ತನ್ನ ನಾಯಿಗೆ ಜೇಡ ಕಾಸ್ಟೂಮ್​ ಹಾಕಿದ್ದಾನೆ. ಅದು ಸೇಮ್​ ದೊಡ್ಡ ಜೇಡದ ರೀತಿಯೇ ಕಾಣುತ್ತೆ. ಬಳಿಕ ಆ ನಾಯಿಯನ್ನು ಜನರು ಓಡಾಡುವ ಪ್ರದೇಶದಲ್ಲಿ ತಂದು ಬಿಟ್ಟಿದ್ದಾನೆ.

  • Share this:

ಪ್ರತಿದಿನ ಸಾಮಾಜಿಕ ಜಾಲತಾಣದ(Social Media)ಲ್ಲಿ ಒಂದಲ್ಲ..ಒಂದು ವಿಡಿಯೋಗಳು ವೈರಲ್(Viral)​ ಆಗುತ್ತಲೇ ಇರುತ್ತವೆ. ಅದರಲ್ಲೂ ತಮಾಷೆ ವಿಡಿಯೋಗಳು ಬಹಳಷ್ಡು ವೈರಲ್​ ಆಗಿ ನಮ್ಮನ್ನು ನಗೆಗಡಲಲ್ಲಿ ತೆಲುವಂತೆ ಮಾಡುತ್ತೆ. ಕೆಲವೊಂದು ವಿಡಿಯೋಗಳು ಭಯ ಹುಟ್ಟಿಸುತ್ತೆ. ಪ್ರಾಂಕ್(Prank)​ ಮಾಡಲು ಹೋಗಿ ಪೇಚಿಗೆ ಸಿಲುಕಿದ್ದವರ ವಿಡಿಯೋಗಳನ್ನು ನಾವು ನೋಡಿದ್ದೇವೆ. ಆದರೆ ಕೆಲವೊಂದು ವಿಡಿಯೋಗಳನ್ನ ನೋಡಿದಾಗ ಎಷ್ಟು ಭಯವಾಗುತ್ತೋ ಅಷ್ಟೇ ನಗು(Laugh) ಕೂಡ ತರಿಸುತ್ತೆ. ಅದರಲ್ಲೂ ಪ್ರಾಣಿಗಳನ್ನು ಇಟ್ಟುಕೊಂಡುಪ್ರಾಂಕ್​ ಮಾಡುವ ವಿಡಿಯೋಗಳು ಸಖತ್​ ಕಿಕ್(Kick)​ ನೀಡುತ್ತೆ. ಜೇಡಗಳನ್ನು ಕಂಡರೇ ಯಾರಿಗೆ ಭಯವಿಲ್ಲ ಹೇಳಿ. ಭಾರತದಲ್ಲಿ ಅಷ್ಟಾಗಿ ಜೇಡ(Spider)ಗಳು ಕಾಣಸಿಗುವುದಿಲ್ಲ. ವಿದೇಶಗಳಲ್ಲಿ ಜೇಡಗಳನ್ನು ಕಂಡರೆ ಬೆಚ್ಚಿ ಬೀಳುತ್ತಾರೆ. ದೊಡ್ಡ ಗಾತ್ರದ ಜೇಡಗಳು ವಿದೇಶದಲ್ಲಿ ಕಾಣಸಿಗುತ್ತವೆ. ಕೆಲವೊಂದು ವಿಡಿಯೋಗಳಲ್ಲಿ ಪ್ಲಾಸ್ಟಿಕ್​ ಜೇಡಗಳನ್ನು ಜನರ ಮೇಲೆ ಎಸೆದು ಪ್ರಾಂಕ್​(Prank) ಮಾಡುವ ವಿಡಿಯೋಗಳನ್ನು ನೀವು ನೋಡಿದ್ದೀರಾ. ಆದರೆ ಈ ವಿಡಿಯೋ ಅದಕ್ಕಿಂತ ಸಖತ್​ ಮಜಾ ನೀಡುತ್ತೆ. ಈ ಐಡಿಯಾ ಮಾಡಿದವನು ಮಾತ್ರ ನಿಜಕ್ಕೂ ಬುದ್ದಿವಂತ. ಅಷ್ಟಕ್ಕೂ ಈ ವಿಡಿಯೋದಲ್ಲಿ ಏನಿದೆ? ಏನಿದು ಜೇಡ ವಿಷಯ ಅಂತ ಕೇಳಬೇಡಿ. ಮುಂದೆ ಓದಿ..


ನಾಯಿಗೆ ಜೇಡರ ಕಾಸ್ಟೂಮ್​ ಹಾಕಿ ಪ್ರಾಂಕ್​


ಹೌದು, ಇದನ್ನು ಓದುವಾಗಲೇ ನಿಮ್ಮ ಮುಖದಲ್ಲಿ ನಗು ಮೂಡಿದೆ. ಇನ್ನೂ ಈ ವಿಡಿಯೋವನ್ನು ನೋಡಿದರೆ  ನಗು ತಡೆಯಲು ಸಾಧ್ಯವಿಲ್ಲ. ವ್ಯಕ್ತಿಯೊಬ್ಬ ತನ್ನ ನಾಯಿಗೆ ಜೇಡ ಕಾಸ್ಟೂಮ್​ ಹಾಕಿದ್ದಾನೆ. ಅದು ಸೇಮ್​ ದೊಡ್ಡ ಜೇಡದ ರೀತಿಯೇ ಕಾಣುತ್ತೆ. ಬಳಿಕ ಆ ನಾಯಿಯನ್ನು ಜನರು ಕಡಿಮೆ ಇರುವ ಪ್ರದೇಶದಲ್ಲಿ ತಂದು ಬಿಟ್ಟಿದ್ದಾನೆ. ಇದಕ್ಕೂ ಮುಂಚೆ ನಾಲ್ಕು ಕಡೆ ಯಾರಿಗೂ ತಿಳಿಯದಂತೆ ಫಿಕ್ಸ್​ ಮಾಡಿದ್ದಾನೆ. ಲಿಫ್ಟ್​ಗಳಲ್ಲಿ ಆ ನಾಯಿಯನ್ನು ಬಿಟ್ಟಿದ್ದಾನೆ. ಇದನ್ನು ಕಂಡ ಜನರು ಗಾಬರಿಗೊಂಡಿದ್ದಾರೆ. ನಾಯಿ ಜೇಡರದಂತೆ ಫಾಸ್ಟ್​ ಆಗಿ ಓಡಿಹೋಗುತ್ತೆ. ಇದನ್ನು ನೋಡುತ್ತಿದ್ದಂತೆ ಜನ ಅಲ್ಲಿಂದ ಕೂಗಿಕೊಂಡು ಪರಾರಿಯಾಗಿದ್ದಾರೆ. ಇದು ನೋಡುಗರಿಗೆ ಸಖತ್​ ಕಿಕ್​ ಕೊಟ್ಟಿದೆ.



ಇದನ್ನು ಓದಿ : ಮನುಷ್ಯರಂತೆ ಇರುವೆಗಳಲ್ಲಿ ರಕ್ತ ಕೆಂಪಗೇಕೆ ಇರುವುದಿಲ್ಲ ಗೊತ್ತಾ..?


ಜೇಡರ ಬಲೆಯನ್ನೂ ಹೆಣೆದಿರುವ ವ್ಯಕ್ತಿ


ಮೆಟ್ರೋ ಸ್ಟೇಷನ್​ ಅಂಡರ್​ಗ್ರೌಂಡ್​ಗಳಲ್ಲಿ ಮೊದಲೇ ದೊಡ್ಡ ಜೇಡರ ಬಲೆಯ ಸೆಟ್​ ಹಾಕಿದ್ದಾರೆ. ಆ ನಾಯಿ ಜನರನ್ನು ಅಟ್ಟಿಸಿಕೊಂಡು ಬಂದು ಜೇಡರ ಬಲೆಯತ್ತ ಅವರನ್ನು ಕರೆತರುತ್ತೆ. ಮೊದಲೇ ದೊಡ್ಡ ಜೇಡರವನ್ನು ಕಂಡು ಓಡಿಹೋಗುತ್ತಿದ್ದ ಜನರು, ಮತ್ತೆ ದೊಡ್ಡ ಜೇಡರ ಬಲೆಯನ್ನು ಕಂಡು ಕಕ್ಕಾಬಿಕ್ಕಿಯಾಗುತ್ತಾರೆ. ನಿಜಕ್ಕೂ ಈ ರೀತಿಯ ಐಡಿಯಾವನ್ನು ಮಾಡಿದವನನ್ನು ಮರೆಯುವಂತಿಲ್ಲ.


ಇದನ್ನು ಓದಿ : ಕೋಳಿ ಮೊದಲಾ, ಮೊಟ್ಟೆ ಮೊದಲಾ..? ಪ್ರಶ್ನೆಗೆ ಅಂತೂ ಇಂತೂ ಸಿಕ್ತು ಉತ್ತರ..!


ದೊಡ್ಡ ಗಾತ್ರದ ಜೇಡ ಕಂಡು ಬೆಚ್ಚಿಬಿದ್ದ ಯುವತಿಯರು


ಈ ವಿಡಿಯೋದಲ್ಲಿ ಯುವತಿಯರಿಬ್ಬರು ಹೇಗೆ ಈ ಜೇಡ ಕಂಡು ಭಯಬೀಳುತ್ತಾರೆ ಎಂಬುದನ್ನು ನೋಡಬಹುದು. ತಮ್ಮ ಪಾಡಿಗೆ ಲಿಫ್ಟ್​​ ಬಳಿ ಯುವತಿಯರು ಬಂದು ನಿಲ್ಲುತ್ತಾರೆ. ಸಡನ್​ ಆಗಿ ಲಿಫ್ಟ್​ ಒಳಗಡೆಯಿಂದ ಜೇಡ ಕಾಸ್ಟೂಮ್​ ತೊಟ್ಟ ನಾಯಿ ಓಡಿಬರುತ್ತೆ. ಲಿಫ್ಟ್​ ಒಳಗೆ ಮಾಲೀಕ ಸತ್ತಂತೆ ನಟಿಸುತ್ತಾನೆ. ಇದನ್ನು ಕಂಡ ಇಬ್ಬರು ಯುವತಿಯರು ಜೋರಾಗಿ ಕಿರುಚುತ್ತಾ ಓಡಿ ಹೋಗುತ್ತಾರೆ. ಮತ್ತೊಬ್ಬ ಯುವಕ ಇದನ್ನು ನೀಡಿ ಮೆಟ್ಟಲು ಮೇಲೆ ಓಡಿಹೋಗುತ್ತಾನೆ. ಅತ್ತ ನೋಡಿದರೆ ದೊಡ್ಡ ಜೇಡರ ಬಲೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾನೆ. ಅದರಿಂದ ಬಿಡಿಸಿಕೊಳ್ಳಲಾಗದೇ ಜೋರಾಗಿ ಕಿರಿಚುಕೊಳ್ಳುತ್ತಾನೆ. ಇದು ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣಸಂಕಟ ಎಂಬಂತೆ ನೋಡುಗರಿಗೆ ಮಜಾ ಕೊಟ್ಟರೆ, ಇದನ್ನು ಅನುಭವಿಸಿದವರಿಗೆ ಭಯ ಅಂದರೆ ಏನು ಅಂತ ತಿಳಿದಿರುತ್ತೆ.

Published by:Vasudeva M
First published: