Viral Video: ಪ್ರತಿದಿನ ಈ ನಾಯಿ ಇಲ್ಲೇ ಬಂದು ಕೂರುತ್ತಂತೆ! ಯಾಕೆ ಅಂತ ತಿಳಿದರೆ ನಿಮ್ಮ ಮುಖದಲ್ಲೂ ನಗು ಮೂಡುತ್ತೆ

ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ಕೇವಲ ಮನುಷ್ಯರು ಇಷ್ಟ ಪಡುತ್ತಾರೆ ಎಂದು ನೀವು ಅಂದು ಕೊಂಡಿದ್ದರೆ, ಅದು ತಪ್ಪು ಎಂದು ಈ ವೀಡಿಯೋ ಸಾಬೀತು ಪಡಿಸುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ವೈರಲ್​ ಆದ ನಾಯಿಯ ಚಿತ್ರ

ವೈರಲ್​ ಆದ ನಾಯಿಯ ಚಿತ್ರ

  • Share this:
ಸಾಮಾನ್ಯವಾಗಿ ನಾವೆಲ್ಲಾರೂ ಪ್ರತಿದಿನ ಬೆಳಿಗ್ಗೆ (Morning) ಆಗುವಂತಹ ಸೂರ್ಯೋದಯ (Sunrise) ಮತ್ತು ಸಂಜೆ ಆಗುವಂತಹ ಸೂರ್ಯಾಸ್ತ (Sunset) ವನ್ನು ನೋಡುವುದು ಎಂದರೆ ತುಂಬಾನೇ ಇಷ್ಟ ಪಡುತ್ತೇವೆ. ಅದರಲ್ಲೂ ಕೆಲವು ಜನರಂತೂ ಈ ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ವೀಕ್ಷಿಸಲು ಬೆಟ್ಟ ಗುಡ್ಡಗಳ ಸಾಲಿನಲ್ಲಿ ಮತ್ತು ಸಮುದ್ರ ತೀರದಲ್ಲಿ ತುಂಬಾನೇ ಚೆನ್ನಾಗಿ ಕಾಣುತ್ತದೆ ಎಂದು ಅಲ್ಲಿಗೆ ಹೋಗಿ ವೀಕ್ಷಿಸಲು ಇಷ್ಟ ಪಡುತ್ತಾರೆ. ಇದನ್ನು ನೋಡುವುದೇ ಒಂದು ಮನಸ್ಸಿಗೆ ಮುದ ನೀಡುವಂತಹದ್ದು ಎಂದು ಪ್ರತಿದಿನ ಒಂದು ನಿಖರವಾದ ಸ್ಥಳದಲ್ಲಿ ಹೋಗಿ ನಿಂತುಕೊಂಡು ಅಥವಾ ಕುಳಿತುಕೊಂಡು ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ನೋಡುವವರು ಕೆಲವರು ಇರುತ್ತಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಮನುಷ್ಯನಿಗಿಂತ ಬುದ್ಧವಂತ ಪ್ರಾಣಿ ಅಂದ್ರೆ ನಾಯಿ!

ಆದರೆ ಈ ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ಕೇವಲ ಮನುಷ್ಯರು ಇಷ್ಟ ಪಡುತ್ತಾರೆ ಎಂದು ನೀವು ಅಂದು ಕೊಂಡಿದ್ದರೆ, ಅದು ತಪ್ಪು ಎಂದು ಈ ವೀಡಿಯೋ ಸಾಬೀತು ಪಡಿಸುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹೌದು.. ಮನುಷ್ಯನಾದ ಮೇಲೆ ಅತೀ ಬುದ್ದಿವಂತ ಪ್ರಾಣಿ ಎಂದರೆ ಅದು ನಾಯಿಯೆಂದು ಹೇಳುತ್ತಾರೆ.

ಇಲ್ಲೊಂದು ನಾಯಿ ಸಖತ್​ ಡಿಫ್ರೆಂಟ್​!

ಈ ನಾಯಿಗಳು ತುಂಬಾನೇ ನಿಷ್ಠಾವಂತ ಜೀವಿಗಳು, ಅವು ತನ್ನನ್ನು ಸಾಕಿಕೊಂಡಿರುವ ಮನೆಯ ಒಡೆಯನಿಗೆ ಮತ್ತು ಮನೆಯ ಇತರೆ ಸದಸ್ಯರಿಗೆ ಬೇಷರತ್ತಾದ ಪ್ರೀತಿಯನ್ನು ನೀಡುತ್ತವೆ ಎಂದು ಹೇಳಬಹುದು. ಈ ನಾಯಿಗಳು ಚಿಕ್ಕ ಪುಟ್ಟ ವಿಷಯಗಳಲ್ಲಿ ಸಂತೋಷವನ್ನು ಕಂಡು ಕೊಳ್ಳುತ್ತವೆ. ಕೆಲವು ನಾಯಿಗಳು ಚೆನ್ನಾಗಿ ತಿನ್ನುವುದನ್ನು ಇಷ್ಟ ಪಟ್ಟರೆ, ಕೆಲವು ಹಾಗೆ ಮನೆಯೆಲ್ಲಾ ಸುತ್ತಾಡುವುದನ್ನು ಇಷ್ಟ ಪಟ್ಟರೆ, ಇನ್ನೂ ಕೆಲವು ನಾಯಿಗಳು ಮನೆಯಲ್ಲಿರುವ ಆಟಿಕೆ ಸಾಮಾನುಗಳನ್ನು ಹೆಚ್ಚಾಗಿ ಪ್ರೀತಿಸುತ್ತವೆ. ಹೀಗೆ ಪ್ರತಿಯೊಂದು ನಾಯಿಗೂ ತನ್ನದೇ ಆದ ಬೇರೆ ಬೇರೆ ಅಭಿರುಚಿಗಳು ಇರುತ್ತವೆ ಎಂದು ಹೇಳಬಹುದು.








View this post on Instagram






A post shared by @vegetablelatte





ಇದನ್ನೂ ಓದಿ: ಇದು ಅಚ್ಚರಿ ಮೂಡಿಸುವ ಬಾಹ್ಯಾಕಾಶ ಕುರಿತಾದ ಸಂಗತಿಗಳು! ಇದನ್ನು ತಿಳಿದರೆ ನೀವು ಬೆರಗಾಗೋದು ಗ್ಯಾರಂಟಿ

ಈ ನಾಯಿಗೆ ಸನ್​ರೈಸ್​ ನೋಡೋದು ಅಂದ್ರೆ ಇಷ್ಟ!

ಸೂರ್ಯೋದಯ ಮತ್ತು ಸೂರ್ಯಾಸ್ತದ ಬಗ್ಗೆ ಈ ನಾಯಿಗಳಿಗೆ ಆಸಕ್ತಿ ಇರುತ್ತದೆಯೇ ಎಂದು ನೀವು ಎಂದಾದರೂ ಪ್ರಶ್ನೆ ಹಾಕಿಕೊಂಡಿರುವಿರಾ? ಇಲ್ಲಿದೆ ನೋಡಿ ಇದಕ್ಕೆ ಉತ್ತರ, ಸೂರ್ಯಾಸ್ತದ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಒಂದು ನಾಯಿ ಇಲ್ಲಿದೆ ನೋಡಿ. ಗೋಲ್ಡನ್ ರಿಟ್ರೀವರ್ ನಾಯಿಯೊಂದು ಸುಂದರ ಸೂರ್ಯಾಸ್ತವನ್ನು ವೀಕ್ಷಿಸುತ್ತಿರುವ ಈ ಹೃದಯಸ್ಪರ್ಶಿ ವೀಡಿಯೋವನ್ನು ನೋಡಿ. ಈ ನಾಯಿಯು ಪ್ರತಿದಿನ ತಪ್ಪದೆ ಸೂರ್ಯ ಮುಳುಗುವುದನ್ನು ವೀಕ್ಷಿಸಲು ಡ್ರೈವ್ ವೇ ನಲ್ಲಿರುವ ಒಂದು ನಿಖರವಾದ ಮತ್ತು ಇದರ ನೆಚ್ಚಿನ ಸ್ಥಳದಲ್ಲಿ ಬಂದು ಕುಳಿತು ಕೊಳ್ಳುತ್ತದೆ.

ಸೋಷಿಯಲ್​ ಮೀಡಿಯಾದಲ್ಲಿ ವಿಡಿಯೋ ವೈರಲ್​!

ಈ ವೀಡಿಯೋವನ್ನು ಮೂಲತಃ ಕಾಟೆಕಿನ್‌ಫ್ಲೇಚರ್ ಎಂಬ ಹೆಸರಿನ ಟಿಕ್‌ಟಾಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಅಂದಿನಿಂದ, ಇದನ್ನು ಇನ್‌ಸ್ಟಾಗ್ರಾಮ್ ಖಾತೆಗಳ ಪುಟಗಳಲ್ಲಿ ಮರು ಹಂಚಿಕೆ ಮಾಡಲಾಗಿದೆ. ಮನೆಯ ಒಡೆಯ ಮುಸ್ಸಂಜೆಯ ಸೌಂದರ್ಯದಲ್ಲಿ ಕೂತು ಸೂರ್ಯಾಸ್ತ ನೋಡುತ್ತಿರುವ ತಮ್ಮ ನಾಯಿಯ ದೃಶ್ಯವನ್ನು ವೀಡಿಯೋ ಮಾಡಿದ್ದಾರೆ.

ಇದನ್ನೂ ಓದಿ: ಇಡೀ ಪ್ರಪಂಚದಲ್ಲಿ ಈಗ ಒಂದೇ 'ಗ್ರೇ ಹೆಡೆಡ್ ಸ್ವಾಂಪ್‍ಹೆನ್' ಇರೋದಂತೆ, ಅದು ಒರಿಸ್ಸಾದಲ್ಲಿ!

ವೆಜಿಟೆಬಲ್‌ಲಟ್ಟೆ ಎಂಬ ಹೆಸರಿನ ಇನ್‌ಸ್ಟಾಗ್ರಾಮ್ ಪುಟದಲ್ಲಿ, ಈ ಕ್ಲಿಪ್ 42,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಿದೆ ಮತ್ತು 3,000ಕ್ಕೂ ಹೆಚ್ಚು ಲೈಕ್ ಗಳನ್ನು ಸಹ ಇದು ಗಳಿಸಿದೆ ಎಂದು ಹೇಳಬಹುದು. ಈ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ ಎಂದು ಹೇಳಬಹುದು. ವೀಡಿಯೋದಲ್ಲಿ ಬರೆಯಲಾದ ಪಠ್ಯವು "ನನ್ನ ನಾಯಿ ಈ ನಿಖರವಾದ ಸ್ಥಳದಲ್ಲಿ ಕುಳಿತು ಪ್ರತಿದಿನ ಸಂಜೆ ಸೂರ್ಯಾಸ್ತವನ್ನು ನೋಡುತ್ತದೆ" ಎಂದು ಬರೆಯಲಾಗಿದೆ. ವೀಡಿಯೋದ ಶೀರ್ಷಿಕೆಯು ಹೃದಯದ ಎಮೋಜಿಯನ್ನು ವಿನಂತಿಸುವ ಮುಖದ ಎಮೋಟಿಕಾನ್ ಹೊಂದಿದೆ.
Published by:Vasudeva M
First published: