ಫುಟ್ಬಾಲ್ ಪಂದ್ಯಗಳಲ್ಲಿ ನಿಯಮ ಉಲ್ಲಂಘಿಸಿದ ಆಟಗಾರರಿಗೆ ರೆಡ್ ಕಾರ್ಡ್ ಕೊಟ್ಟು ಗ್ರೌಂಡ್‌ನಿಂದ ಹೊರಹಾಕೋದು ನೋಡಿರ್ತೀರಾ ಅಥವಾ ಕೇಳಿರ್ತೀರಾ.. ಆದರೆ, ಸರ್ಬಿಯಾದ ಫುಟ್ಬಾಲ್ ಪಂದ್ಯದಲ್ಲಿ ನಾಯಿಯದ್ದೇ ಕಾಟವಂತೆ..! ಮ್ಯಾಚ್ ನಡೆಯಬೇಕಾದರೆ ಒಂದಲ್ಲ.. ಎರಡಲ್ಲ.. ನಾಲ್ಕು ಬಾರಿ ಶ್ವಾನ ಸ್ಟೇಡಿಯಂ ಒಳಗೆ ಎಂಟ್ರಿ ಕೊಟ್ಟಿದೆ. ರೆಫರಿ 4 ಬಾರಿ ನಾಯಿಯನ್ನು ಹೊರ ಹಾಕಿದ್ದಾರೆ. ಪಾಪ, ಆ ರೆಫರಿಗೆ ಆಟಗಾರರಿಗೆ ರೆಡ್ ಕಾರ್ಡ್ ನೀಡಿದ್ದಕ್ಕಿಂತ ಹೆಚ್ಚಾಗಿ ಶ್ವಾನವನ್ನು ಹೊರಹಾಕೋದೇ ಕಷ್ಟವಾಗಿದೆ.
ಸರ್ಬಿಯಾದ ರಾಡ್ನಿಕಿ 1923 ಕ್ರಾಗುಜೆವಾಕ್ ಮತ್ತು ಕೊಲುಬಾರಾ ಲಾಜರೆವಾಕ್ ನಡುವಿನ ಸೌಹಾರ್ದ ಸಾಕರ್ ಪಂದ್ಯದಲ್ಲಿ ಗ್ರೌಂಡ್ ಒಳಗೆ ಪದೇ ಪದೇ ನಾಯಿ ಆಕ್ರಮಣ ಮಾಡಿದೆ. ಈ ವಿಚಿತ್ರ ಕಾರಣದಿಂದ ಪಂದ್ಯ ಹಲವು ಬಾರಿ ನಿಂತಿದ್ದ ಘಟನೆ ಶುಕ್ರವಾರ ನಡೆದಿದೆ.
ಈ ಬಗ್ಗೆ ಬೆಲ್ಗ್ರೇಡ್‌ನ ದೈನಿಕ ಕ್ರೀಡಾ ಜರ್ನಲ್ ತನ್ನ ವೆಬ್‌ಸೈಟ್‌ನಲ್ಲಿ ಆ ಪಂದ್ಯದ ರೆಫರಿ ಮಾರ್ಕೊ ಇವ್ಕೊವಿಕ್ ಕೆಂಪು ಕಾರ್ಡ್ ತೋರಿಸಿರುವ ಫೋಟೋ ಅನ್ನು ಹಾಕಿದ್ದಾರೆ. ಇನ್ನು, ಸ್ಟೇಡಿಯಂ ಒಳಗೆ ಪದೇ ಪದೇ ಹೋಗುತ್ತಿದ್ದ ಶ್ವಾನ ಫುಟ್ಬಾಲ್ ಅನ್ನು ಬೆನ್ನಟ್ಟಿತ್ತು. ಸದ್ಯ, ಚಳಿಗಾಲದ ಕಾರಣದಿಂದ ಈ ಲೀಗ್ ಪಂದ್ಯಾವಳಿಗೆ ಬ್ರೇಕ್ ಬಿದ್ದಿದ್ದು, ಫೆಬ್ರವರಿ 20 ರಿಂದ ಪುನರಾರಂಭಗೊಳ್ಳಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ