30 ಮಂದಿಯ ಜೀವ ಉಳಿಸಿ ಪ್ರಾಣ ತ್ಯಾಗ ಮಾಡಿದ ನಾಯಿ!

ನಾಲ್ಕು ಅಂತಸ್ತಿನ ಈ ಕಟ್ಟಡದ ಬೇಸ್​ಮೆಂಟ್​ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಇದೇ ಕಟ್ಟಡದ 3ನೇ ಹಾಗೂ 4ನೇ ಮಹಡಿಗಳಲ್ಲಿ ಅನೇಕ ಕುಟುಂಬಗಳು ವಾಸಿಸವಿದ್ದವು. ಬೆಂಕಿಯನ್ನು ನೋಡಿದ ಸಾಕು ನಾಯಿಯು ಜೋರಾಗಿ ಬೊಗಳಲು ಆರಂಭಿಸಿದೆ.

zahir | news18
Updated:April 13, 2019, 9:38 PM IST
30 ಮಂದಿಯ ಜೀವ ಉಳಿಸಿ ಪ್ರಾಣ ತ್ಯಾಗ ಮಾಡಿದ ನಾಯಿ!
ಸಾಂದರ್ಭಿಕ ಚಿತ್ರ
  • News18
  • Last Updated: April 13, 2019, 9:38 PM IST
  • Share this:
ನಾಯಿಯೊಂದು 30 ಜನರ ಜೀವ ರಕ್ಷಿಸಿ ತನ್ನ ಪ್ರಾಣ ತ್ಯಾಗ ಮಾಡಿರುವ ಹೃದಯ ವಿದ್ರಾವಕ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಬಾಂದಾನಗರದಲ್ಲಿರುವ ಕಟ್ಟಡವೊಂದರಲ್ಲಿ ಶುಕ್ರವಾರ ಬೆಂಕಿ ಕಾಣಿಸಿಕೊಂಡಿದ್ದು, ಈ ವೇಳೆ ಅಲ್ಲಿದ್ದ ನಾಯಿ ಫ್ಲಾಟ್​ನಲ್ಲಿದ್ದವರನ್ನು ಎಚ್ಚರಿಸಿ ಜೀವ ಉಳಿಸಿದೆ.

ಮಧ್ಯರಾತ್ರಿ ನಾಲ್ಕು ಅಂತಸ್ತಿನ ಈ ಕಟ್ಟಡದ ಬೇಸ್​ಮೆಂಟ್​ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಇದೇ ಕಟ್ಟಡದ 3ನೇ ಹಾಗೂ 4ನೇ ಮಹಡಿಗಳಲ್ಲಿ ಅನೇಕ ಕುಟುಂಬಗಳು ವಾಸಿಸವಿದ್ದವು. ಬೆಂಕಿಯನ್ನು ನೋಡಿದ ಸಾಕು ನಾಯಿಯು ಜೋರಾಗಿ ಬೊಗಳಲು ಆರಂಭಿಸಿದೆ. ಅಲ್ಲದೆ ಬೊಗಳುತ್ತಾ ಮಹಡಿಯಲ್ಲಿರುವವರನ್ನು ನಿದ್ದೆಯಿಂದ ಎದ್ದೇಳುವಂತೆ ಮಾಡಿದೆ. ಇದರಿಂದ ಎಚ್ಚೆತ್ತ ಮನೆಯವರು ಹೊರಗೆ ಬಂದು ನೋಡಿದಾಗ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿರುವುದು ಗೊತ್ತಾಗಿದೆ. ಈ ವೇಳೆ ತಕ್ಷಣ ಎಲ್ಲರೂ ಕಟ್ಟಡದಿಂದ ಹೊರ ಬಂದು ತಮ್ಮ ಪ್ರಾಣವನ್ನು ರಕ್ಷಿಸಿಕೊಂಡರು.

ಆದರೆ ಕಟ್ಟಡದಲ್ಲಿದ್ದ ಸಿಲಿಂಡರ್ ಕೊನೆಯಲ್ಲಿ ಸ್ಫೋಟಗೊಳ್ಳುವ ಮೂಲಕ ಶ್ವಾನವು ಪ್ರಾಣ ಬಿಟ್ಟಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ಸ್ಫೋಟದಿಂದ ಅಕ್ಕಪಕ್ಕದ ಕಟ್ಟಡಗಳಿಗೂ ಹಾನಿಯಾಗಿದೆ ಎಂದು ಅಗ್ನಿ ಶಾಮಕ ದಳದ ಸಿಬ್ಬಂದಿ ತಿಳಿಸಿದೆ. ಆದರೆ ತನ್ನ ಪ್ರಾಣವನ್ನೇ ಒತ್ತೆಯಿಟ್ಟು 30 ಜನರನ್ನು ಉಳಿಸುವ ಮೂಲಕ ನಾಯಿ ಮತ್ತೊಮ್ಮೆ ತನ್ನ ನಿಯತ್ತೇನು ಎಂಬುದನ್ನು ಜಗತ್ತಿಗೆ ಸಾರಿದೆ.

ಇದನ್ನೂ ಓದಿ: RR vs MI: ಜೋಸ್ ಬಟ್ಲರ್ ಆರ್ಭಟ: ಮುಂಬೈ ವಿರುದ್ಧ ರಾಜಸ್ಥಾನ್ ರಾಯಲ್ಸ್​ಗೆ ರೋಚಕ ಜಯ
First published:April 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ