Viral Video: ಕುದುರೆ ಮೇಲೆ ನಾಯಿ ಸವಾರಿ! ಹೇಗಿದೆ ನೋಡಿ ಪ್ರಾಣಿಗಳ ಫ್ರೆಂಡ್‌ಶಿಪ್

ಕುದುರೆಯ ಮೇಲೆ ನಾಯಿಮರಿ ಸವಾರಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದು ಪ್ರಾಣಿ ಪ್ರಿಯರನ್ನು ಆಕರ್ಷಿಸುತ್ತಿದೆ. ಅಲ್ಲದೆ ಪಾವ್ ಪೆಟ್ರೋಲ್ ಎಂಬ ಜನಪ್ರಿಯ ಕಾರ್ಟೂನ್ ಚಿತ್ರಣವನ್ನು ಇದು ನೆನಪಿಸಿದೆ.

ಕುದುರೆ ಮೇಲೆ ನಾಯಿ ಸವಾರಿ

ಕುದುರೆ ಮೇಲೆ ನಾಯಿ ಸವಾರಿ

  • Share this:
ನಾಯಿಮರಿಗಳು ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲರೂ ನಾಯಿ ಮರಿಗಳನ್ನು ತುಂಬಾನೇ ಇಷ್ತ ಪಡ್ತಾರೆ. ಹೀಗೆ ನಾಯಿಮರಿಗಳ (Puppies) ತುಂಟಾಟಕ್ಕೆ ಮನಸೋಲದವರು ಯಾರು ಇಲ್ಲ. ನಾಯಿಗಳು ಮನುಷ್ಯನೊಂದಿಗೆ (Human) ಅವಿನಾಭಾವ ಸಂಬಂದವನ್ನು ಹೊಂದಿದೆ. ಕೆಲವೊಮ್ಮೆ ಮನುಷ್ಯನ ತರಹವೇ ವರ್ತಿಸುವ ಮೂಲಕ ಜನರನ್ನು ಆಕರ್ಷಿಸುತ್ತವೆ. ಇಂತಹ ಘಟನೆಗಳು ಸೋಶಿಯಲ್ ಮೀಡಿಯಾದಲ್ಲಿ (Social Media) ಹಾಕಿದಾಗ ಅದು ವೇಗವಾಗಿ ಹರಿದಾಡುವುದರಲ್ಲಿ ಯಾವುದೇ ರೀತಿಯಾದ ಅನುಮಾನವೇ ಇಲ್ಲ. ಇದೀಗ ಅಂತಹದೇ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ನಾಯಿಮರಿಯೊಂದು ಕುದುರೆ (Horse) ಮೇಲೆ ಸವಾರಿ (Ride) ಮಾಡಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral) ಆಗುತ್ತಿದೆ, ಇದು ಪ್ರಾಣಿ ಪ್ರಿಯರನ್ನು (Animal Lovers) ಆಕರ್ಷಿಸುತ್ತಿದೆ. 

ಕುದುರೆ ಮೇಲೆ ನಾಯಿ ಮರಿ
ಕುದುರೆ ಮೇಲೆ ಜನರು ಕೂತು ಸವಾರಿ ಮಾಡುವುದು ಸಾಮಾನ್ಯ ವಿಷಯವಾಗಿದೆ. ಇದರ ಬಗ್ಗೆ ಯಾರೂ ಹೆಚ್ಚಾಗಿ ಅಷ್ಟೇನೂ ಗಮನ ಕೊಡುವುದಿಲ್ಲ. ಅದರೆ ಇದೀಗ ಜನಬೀಡ ಪ್ರದೇಶದಲ್ಲಿ ಕುದುರೆಯ ಮೇಲೆ ನಾಯಿಮರಿಯೊಂದು ಯಾವುದೇ ರೀತಿಯಾದ ಭಯವಿಲ್ಲದೆ ಕೂತು ನಗರದ ಸುತ್ತಾಡಿದ್ದು ಇದು ಜನರನ್ನು ಅಚ್ಚರಿಗೊಳಿಸಿದೆ.

ಇದನ್ನೂ ಓದಿ: AC Effect: ಈ ನಾಯಿಗೆ ಎಸಿ ಇಲ್ಲದೆ ನಿದ್ದೆ ಬರಲ್ಲ! AC ಆಫ್ ಮಾಡಿದ್ರೆ ಏನ್ಮಾಡುತ್ತೆ ನೋಡಿ

ಟ್ವಿಟರ್‌ನಲ್ಲಿ ವಿಡಿಯೋ ವೈರಲ್
ಈ ವಿಡಿಯೋವನ್ನು ಟ್ವಿಟರ್‌ನಲ್ಲಿ 'ಯೋಡ4ಎವರ್' (Yoda4ever) ಪೇಜ್ ಅಪ್‌ಲೋಡ್ ಮಾಡಿದೆ. ಇದು 316k ವೀಕ್ಷಣೆಗಳು ಮತ್ತು 18k ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಕುದುರೆಯು ನಗರದ ಮೂಲಕ ಸವಾರಿ ಮಾಡುತ್ತಿದ್ದಾಗ ಟ್ರಾಫಿಕ್ ಲೈಟ್ ನಲ್ಲಿ ರೆಡ್ ಲೈಟ್ ಬಂದಾಗ ಕುದುರೆಯು ನಿಂತುಕೊಳ್ಳುತ್ತದೆ. ಆ ಸಂದರ್ಭದಲ್ಲಿ ನಾಯಿಯೂ ಸಹ ಎದ್ದು ನಿಲ್ಲವುದನ್ನು ಗಮನಿಸಬಹುದು. ಇದು ಮನುಷ್ಯನೊಂದಿಗೆ ನಾಯಿ ಸಂಬಂಧವನ್ನು ಹೊಂದಿರುವುದರಿಂದ ಈ ಗುಣ ಬಂದಿರುವ ಸಾಧ್ಯತೆಯಿದೆ.





ಸಾಮಾನ್ಯವಾಗಿ ಕುದುರೆಗಳ ಮೇಲೆ ಜನರು ಸವಾರಿ ಮಾಡುತ್ತಾರೆ. ಇಲ್ಲವೆ ವಸ್ತಗಳನ್ನು ಸಾಗಟ ಮಾಡುತ್ತಾರೆ. ಅದರೆ ಕುದುರೆಯ ಮೇಲೆ ನಾಯಿ ಸವಾರಿ ಮಾಡಿರುವುದು ನಗರದ ಜನತೆಯನ್ನು ಮಂತ್ರಮುಗ್ಧಗೊಳಿಸಿದೆ.

PAW ಪೆಟ್ರೋಲ್ ನಿಜವಾಯಿತು ಎಂಬ ಕಮೆಂಟ್

ಸೋಶಿಯಲ್ ಮೀಡಿಯಾದಲ್ಲಿ ವೀಡೀಯೋ ನೋಡಿದ ಜನತೆ ಇದು ಪಾವ್ (PAW) ಪೆಟ್ರೋಲ್ ಅನ್ನು ನೆನಪಿಸಿತು ಎಂದಿದ್ದಾರೆ. ಪಾವ್ ಪೆಟ್ರೋಲ್ ಎಂಬುದು ಜನಪ್ರಿಯ ಕಾರ್ಟೂನ್ ಆಗಿದೆ. ಏಕೆಂದರೆ ಇಲ್ಲಿ ನಾಯಿಯು ರೆಡ್ ಲೈಟ್ ಬಂದಾಗ ಪೋಲಿಸ್ನಂತೆ ಎದ್ದು ನಿಲ್ಲುತ್ತದೆ.

ಪಾವ್ ಪೆಟ್ರೋಲ್ ಕೆನಡಾದ ಒಂದು ಟಿವಿ ಸರಣಿಯಾಗಿದೆ. ಇದರಲ್ಲಿ ಅಡ್ವೆಂಚರ್ ಬೇ ಎಂಬ ನಗರದಲ್ಲಿ ರೈಡರ್ ಎನ್ನುವ ಹುಡುಗ ಮಾತನಾಡುವ ನಾಯಿಗಳ ಗುಂಪುಗಳನ್ನು ಕಟ್ಟಿಕೊಂಡಿರುತ್ತಾನೆ. ಮತ್ತು ಅವನು ಆ ನಾಯಿಗಳನ್ನು ನಗರದಲ್ಲಿನ ತುರ್ತು ಸಂದರ್ಭದಲ್ಲಿ ಸೇವೆಗಾಗಿ ಕಳಿಸುತ್ತಿದ್ದ. ಇದರಲ್ಲಿ ಕುದುರೆಯ ರಕ್ಷಣೆ ಮಾಡಿದ ಘಟನೆಯನ್ನು ಗಮನಿಸಬಹುದು.

ಇದನ್ನೂ ಓದಿ: Shocking News: ಛೇ..4 ತಿಂಗಳ ಮಗುವನ್ನು ಟೆರೇಸ್​ನಿಂದ ಕೆಳಕ್ಕೆಸೆದ ಕೋತಿ!

ಈ ರೀತಿಯಾದ ವೀಡೀಯೋಗಳು ಸಾಮಾಜಿಕ ಜಾಲತಾಣದ ಬಳಕೆದಾರರನ್ನು ಅಚ್ಚರಿಗೊಳಿಸುವುದಲ್ಲದೆ. ಪ್ರಾಣಿಗಳಲ್ಲಿರುವ ಮುಗ್ಧತೆಯನ್ನು ಪ್ರತಿಬಿಂಬಿಸಯತ್ತದೆ. ಮತ್ತು ಪ್ರಾಣಿಗಳಲ್ಲಿರುವ ವಿಶೇಷ ಗುಣಗಳನ್ನು ಜನತೆಗೆ ಪರಿಚಯಿಸುತ್ತದೆ. ಕುದುರೆ ಮೇಲೆ ನಾಯಿ ಸವಾರಿ ಮಾಡಿದ ವೀಡೀಯೋ ಜನರ ಮನಸೋಲಿಸಿದ್ದಲ್ಲದೆ. ರೆಡ್ ಲೈಟ್ ಬಂದಾಗ ಕುದುರೆ ಮತ್ತು ನಾಯಿ ನಿಲ್ಲತ್ತದೆ. ಇದು ಅವುಗಳಿಗೆ ಇರುವ ಸಾಮಾಜಿಕ ಪ್ರಜ್ಞೆಯನ್ನು ಪ್ರತಿಬಿಂಬಿಸುತ್ತದೆ.
Published by:Nalini Suvarna
First published: