Viral Video: ಈ ಕ್ಯೂಟ್ ನಾಯಿ ಸ್ಕೇಟ್ ಬೋರ್ಡ್ ಮೇಲೆ ಕೂತು ಸವಾರಿ ಮಾಡುತ್ತೆ ಅಂತೆ! ಈ ವೀಡಿಯೋ ನೋಡಿ

ಒಂದು ವೀಡಿಯೋವನ್ನು ಇನ್‌ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಲಾಗಿದ್ದು, ಈ ವೀಡಿಯೋದಲ್ಲಿ ಎರಡು ತಿಂಗಳ ಮಗುವಾಗಿದ್ದಾಗಿನಿಂದ ಎರಡು ವರ್ಷ ವಯಸ್ಸಿನವರೆಗೆ ಹೇಗೆ ಮನೆಯಲ್ಲಿ ಸಾಕಿಕೊಂಡಿರುವ ನಾಯಿ ಸ್ಕೇಟ್ ಬೋರ್ಡ್ ಮೇಲೆ ಕೂತು ಹಾಗೆ ಜಾರಿ ಹೋಗುವುದನ್ನು ನಾವು ನೋಡಬಹುದು. ಈ ವೀಡಿಯೋ ನೋಡಲು ನಿಜವಾಗಿಯೂ ಚೆನ್ನಾಗಿದೆ.

ಸ್ಕೇಟಿಂಗ್ ಮಾಡುವ ನಾಯಿ

ಸ್ಕೇಟಿಂಗ್ ಮಾಡುವ ನಾಯಿ

  • Share this:
ನೀವು ನಾಯಿಗಳು (Dog) ಮತ್ತು ಬೆಕ್ಕುಗಳ (Cat) ವೀಡಿಯೋಗಳನ್ನು (Video) ನೋಡಲು ಇಷ್ಟಪಡುವ ವ್ಯಕ್ತಿಯಾಗಿದ್ದರೆ, ನಾಯಿಗಳ ಮತ್ತು ಬೆಕ್ಕುಗಳ ಮುದ್ದಾದ ಆಟಗಳು ಮತ್ತು ಅವುಗಳ ಕ್ಯೂಟ್ ವರ್ತನೆಗಳನ್ನು ತೋರಿಸುವ ಅನೇಕ ವೀಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ (Social Media) ಪ್ರತಿದಿನ ಹರಿದಾಡುತ್ತಲೇ ಇರುತ್ತವೆ ಎಂದು ಹೇಳಬಹುದು. ಅದರಲ್ಲೂ ಕೆಲವು ವೀಡಿಯೋಗಳಲ್ಲಿ ಈ ಸಾಕುಪ್ರಾಣಿಗಳಾದ (Pet Animals) ನಾಯಿ ಮತ್ತು ಬೆಕ್ಕುಗಳು ಈ ಸ್ಕೇಟಿಂಗ್ ಬೋರ್ಡ್ (Skating Board)  ಮೇಲೆ ಆಟವಾಡಿದರಂತೂ ನೋಡಲು ತುಂಬಾನೇ ಮಜವಾಗಿರುತ್ತದೆ ಮತ್ತು ಮನಸ್ಸಿಗೆ ಮುದವನ್ನು ನೀಡುತ್ತವೆ. ಈ ಮನೆಯಲ್ಲಿ ಸಾಕಿಕೊಳ್ಳುವ ಪ್ರಾಣಿಗಳಲ್ಲಿ ನಾಯಿಗಳು ತುಂಬಾನೇ ಮುದ್ದಾಗಿರುತ್ತವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ನಾಯಿಗಳು ತಮ್ಮ ಮುದ್ದಾದ ವರ್ತನೆಗಳಿಂದ ಮನೆಯ ಸದಸ್ಯರನ್ನು ಸಂತೋಷ ಪಡಿಸುತ್ತವೆ. ಅದರಲ್ಲೂ ಈ ನಾಯಿಗಳನ್ನು ಚಿಕ್ಕ ಮರಿಯಾಗಿದ್ದಾಗ ಮನೆಗೆ ತಂದು, ನಂತರ ಅವುಗಳು ಬೆಳೆದು ದೊಡ್ಡದಾಗುವುದನ್ನು ನೋಡುವುದು ಇನ್ನೊಂದು ರೀತಿಯ ಆನಂದವನ್ನು ನೀಡುತ್ತದೆ.

ಸ್ಕೇಟ್ ಬೋರ್ಡ್ ಮೇಲೆ ಕೂತು ಜಾರಿ ಹೋಗುವ ನಾಯಿ
ಇಲ್ಲಿ ಸಹ ಒಂದು ವೀಡಿಯೋವನ್ನು ಇನ್‌ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಲಾಗಿದ್ದು, ಈ ವೀಡಿಯೋದಲ್ಲಿ ಎರಡು ತಿಂಗಳ ಮಗುವಾಗಿದ್ದಾಗಿನಿಂದ ಎರಡು ವರ್ಷ ವಯಸ್ಸಿನವರೆಗೆ ಹೇಗೆ ಮನೆಯಲ್ಲಿ ಸಾಕಿಕೊಂಡಿರುವ ನಾಯಿ ಸ್ಕೇಟ್ ಬೋರ್ಡ್ ಮೇಲೆ ಕೂತು ಹಾಗೆ ಜಾರಿ ಹೋಗುವುದನ್ನು ನಾವು ನೋಡಬಹುದು. ಈ ವೀಡಿಯೋ ನೋಡಲು ನಿಜವಾಗಿಯೂ ಚೆನ್ನಾಗಿದೆ.

ಇನ್‌ಸ್ಟಾಗ್ರಾಮ್ ನಲ್ಲಿ ವೈರಲ್ ಆದ ವಿಡಿಯೋ
ಈ ವೀಡಿಯೋವನ್ನು ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಪೋಸ್ಟ್ ಮಾಡಲಾಗಿದ್ದು, ಇದು ನಾಯಿಗೆ ಮೀಸಲಾದ ಖಾತೆಯಾಗಿದೆ. ಈ ವೀಡಿಯೋವನ್ನು ಮೂರು ದಿನಗಳ ಹಿಂದೆ ಪೋಸ್ಟ್ ಮಾಡಲಾಗಿದೆ ಮತ್ತು ಇದು ಈಗಾಗಲೇ 1.2 ಮಿಲಿಯನ್ ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ ಮತ್ತು 2,81,000ಕ್ಕೂ ಹೆಚ್ಚು ಲೈಕ್ ಗಳು ಇದಕ್ಕೆ ಬಂದಿವೆ.

ನಾಯಿ ಹೇಗೆ ಸ್ಕೇಟ್ ಬೋರ್ಡ್ ಬಳಸುತ್ತೆ?
ಸ್ಕೇಟ್ ಬೋರ್ಡ್ ನಲ್ಲಿ ಕೇವಲ ಎರಡು ತಿಂಗಳ ನಾಯಿಮರಿಯಾಗಿದ್ದಾಗ ಗೋಲ್ಡನ್ ರಿಟ್ರೈವರ್ ನಾಯಿಯೊಂದು ಕುಳಿತು ಸವಾರಿ ಮಾಡುವುದರೊಂದಿಗೆ ಈ ವೀಡಿಯೋ ಪ್ರಾರಂಭವಾಗುತ್ತದೆ. ನಾಯಿಮರಿ ಸ್ಕೇಟ್ ಬೋರ್ಡ್ ಮೇಲೆ ತನ್ನನ್ನು ಮುಂದಕ್ಕೆ ತಳ್ಳಲು ತನ್ನ ಕಾಲುಗಳನ್ನು ಬಳಸುತ್ತಿರುವುದನ್ನು ನಾವು ವೀಡಿಯೋದಲ್ಲಿ ನೋಡಬಹುದಾಗಿದೆ. ನಂತರ ಅದೇ ನಾಯಿ ಮರಿ ಎರಡು ವರ್ಷ ವಯಸ್ಸಾದಾಗ ತನ್ನ ಹಿಂಗಾಲುಗಳನ್ನು ಬಳಸಿಕೊಂಡು ಸ್ಕೇಟ್ ಬೋರ್ಡ್ ಅನ್ನು ಏಕಾಂಗಿಯಾಗಿ ಸವಾರಿ ಮಾಡುವುದನ್ನು ನಾವು ನೋಡಬಹುದಾಗಿದೆ.

ಇದನ್ನೂ ಓದಿ: Lion And Dog: ಕಾಡಿನಿಂದ ನಾಡಿಗೆ ಬಂದ ಸಿಂಹಕ್ಕೆ ನಾಯಿ ಬೆಸ್ಟ್​ಫ್ರೆಂಡ್, ಪ್ರಾಣಿಗಳ ಗೆಳೆತನ ನೋಡಿ ನೆಟ್ಟಿಗರು ಫಿದಾ

"ನಾನು ಚಿಕ್ಕವನಿದ್ದಾಗ ನನ್ನ ತಾಯಿ ನನಗೆ ಕಲಿಸಿದ್ದರೆ, ಚೆನ್ನಾಗಿರುತ್ತಿತ್ತು ಎಂದು ನಾನು ಬಯಸುತ್ತೇನೆ" ಎಂದು ವೀಡಿಯೋ ಶೀರ್ಷಿಕೆಯಲ್ಲಿ ಕಾಮೆಂಟ್ ಮಾಡಲಾಗಿದೆ. "ಎಂದೆಂದಿಗೂ ಈ ನಾಯಿ ಒಂದು ಚಿಕ್ಕ ಮಗುವಿದ್ದಂತೆ" ಎಂದು ಇನ್ನೊಬ್ಬ ಇನ್‌ಸ್ಟಾಗ್ರಾಮ್ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಮೂರನೆಯವರು "ಇದು ತುಂಬಾನೇ ಮುದ್ದಾಗಿದೆ" ಎಂದು ಕಾಮೆಂಟ್ ಮಾಡಿದ್ದಾರೆ. ಇನ್‌ಸ್ಟಾಗ್ರಾಮ್ ನಲ್ಲಿರುವ ನಾಯಿ ಖಾತೆಯು 59,000ಕ್ಕೂ ಹೆಚ್ಚು ಫಾಲೋವರ್ಸ್ ಗಳನ್ನು ಹೊಂದಿದೆ.

ಪ್ಯಾಡಲ್ ಬೋರ್ಡ್ ನಲ್ಲಿ ನಾಯಿ ಸರ್ಫಿಂಗ್ ಮಾಡುವ ವೀಡಿಯೋ ವೈರಲ್
ಇನ್ನೊಂದು ಇದೇ ರೀತಿಯಲ್ಲಿ ವೈರಲ್ ಆಗುತ್ತಿರುವ ವೀಡಿಯೋದಲ್ಲಿ ಪ್ಯಾಡಲ್ ಬೋರ್ಡ್ ನಲ್ಲಿ ನಾಯಿಯೊಂದು ಸರ್ಫಿಂಗ್ ಮಾಡುವ ವೀಡಿಯೋ ಇನ್‌ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಲಾಗಿದೆ ಮತ್ತು ಅದು ನಿಜವಾಗಿಯೂ ವೈರಲ್ ಆಗುತ್ತಿದೆ.










View this post on Instagram






A post shared by Oscar | Karma (@oscarnkarma)




ಇದನ್ನೂ ಓದಿ: Sheep: ಮಹಿಳೆ ಪ್ರಾಣ ತೆಗೆದ ಕುರಿಗೆ 3 ವರ್ಷ ಜೈಲು ಶಿಕ್ಷೆ! ಹೊರಗೆ ಬಂದ್ಮೇಲೂ ಮೃತಳ ಮನೆಯಲ್ಲೇ ಗೃಹಬಂಧನ!

ಈ ವೀಡಿಯೋವನ್ನು ಇನ್‌ಸ್ಟಾಗ್ರಾಮ್ ಖಾತೆಯಾದ ‘ರಿಪ್ಪಿನ್ರೋಸಿಡೋಗ್’ ಎಂಬಲ್ಲಿ ಮೇ 4 ರಂದು ಪೋಸ್ಟ್ ಮಾಡಿದೆ ಮತ್ತು ಇದು ಈಗಾಗಲೇ 19 ಮಿಲಿಯನ್ ವೀಕ್ಷಣೆಗಳನ್ನು ಪಡೆದಿದೆ. ರೋಸಿ ಡ್ರೊಟ್ಟಾರ್ ಎಂಬ ಹೆಸರಿನ ನಾಯಿಯು 25 ಸೆಕೆಂಡುಗಳ ಕಾಲ ಪ್ಯಾಡಲ್ ಬೋರ್ಡ್ ನಲ್ಲಿ ಸರ್ಫಿಂಗ್ ಮಾಡಿರುವುದನ್ನು ನಾವು ನೋಡಬಹುದು. ಸರ್ಫಿಂಗ್ ಅನ್ನು ಪ್ರಾರಂಭಿಸಲು ತರಬೇತುದಾರನು ನಾಯಿಗೆ ಸೂಚನೆ ನೀಡುವುದನ್ನು ವೀಡಿಯೋದಲ್ಲಿ ನೋಡಬಹುದು. ಲೈಫ್ ಜಾಕೆಟ್ ಧರಿಸಿದ್ದ ನಾಯಿ ಪ್ಯಾಡಲ್ ಬೋರ್ಡ್ ಮೇಲೆ ತನ್ನನ್ನು ಸಮತೋಲನಗೊಳಿಸಿಕೊಂಡಿತು ಮತ್ತು ಸರ್ಫರ್ ನಂತೆ ನಿಂತು ಡಕ್ ಮಾಡುವ ಮೂಲಕ ಅಲೆಗಳನ್ನು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.
Published by:Ashwini Prabhu
First published: