Dog Plays With Butterflies: ಚಿಟ್ಟೆಗಳ ಜೊತೆ ಆಟವಾಡುತ್ತಿರುವ ಮುದ್ದಾದ ಶ್ವಾನದ ಮರಿ - ನೆಟ್ಟಿಗರ ಮನ ಸೆಳೆದ ವೈರಲ್ ವಿಡಿಯೋ

Viral Vide: ಸುಂದರವಾದ ಹಸಿರಿನ ಪ್ರಕೃತ್ತಿಯೊಳಗೆ  ನಾಯಿ ಚಿಟ್ಟೆಗಳೊಂದಿಗೆ ಆಟವಾಡುತ್ತಿರುವ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಬಹಳ ಇಷ್ಟಪಟ್ಟಿದ್ದಾರೆ

ವೈರಲ್ ವಿಡಿಯೋ ದೃಶ್ಯ

ವೈರಲ್ ವಿಡಿಯೋ ದೃಶ್ಯ

  • Share this:
ಈ ಸೋಶಿಯಲ್ ಮೀಡಿಯಾದಲ್ಲಿ(Social Media) ಏನೆಲ್ಲಾ ವೈರಲ್ ಆಗತ್ತೆ ಗೊತ್ತಾ. ಕೆಲವೊಂದು ವಿಡಿಯೋಗಳು ನಿಜಕ್ಕೂ ಮನಸನ್ನು ಉಲ್ಲಾಸಗೊಳಿಸತ್ತೆ. ಸಾಮಾನ್ಯವಾಗಿ ನಾವು ಶ್ವಾನಗಳು ಪುಟ್ಟ ಮಕ್ಕಳ ಜೊತೆ ಆಟವಾಡುವುದನ್ನ ನೋಡಿದ್ದೇವೆ. ಮಕ್ಕಳು ಮತ್ತು ಶ್ವಾನಗಳ ಮಧ್ಯೆ ಒಳ್ಳೆಯ ಭಾಂಧವ್ಯ ಇರುತ್ತದೆ. ಇನ್ನು ಅದೇ ಶ್ವಾನಗಳು ಬೆಕ್ಕಿನ ಜೊತೆ ಹಾಗೂ ಬೇರೆ ಪ್ರಾಣಿಗಳ ಜೊತೆ ಆಟವಾಡುವುದನ್ನ ನೋಡಿದ್ದೇವೆ.  ಈಗ ವೈರಲ್ ಆಗಿರುವ ವಿಡಿಯೋದಲ್ಲಿ(Viral Video) ಚಿಟ್ಟೆಗಳೊಂದಿಗೆ ಶ್ವಾನ  ಆಟವಾಡುತ್ತಿರುವ ವಿಡಿಯೋ ಜನರ ಮನಸನ್ನು ಗೆದ್ದಿದೆ. ಸಣ್ಣ ಚಿಟ್ಟೆಯ ಜೊತೆ ನಾಯಿ ಮರಿಯೊಂದು ಆಡಿ ಸಂತೋಷದಿಂದ ಕುಣಿದ ಈ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿದೆ.

ಸುಂದರವಾದ ಹಸಿರಿನ ಪ್ರಕೃತ್ತಿಯೊಳಗೆ  ನಾಯಿ ಚಿಟ್ಟೆಗಳೊಂದಿಗೆ ಆಟವಾಡುತ್ತಿರುವ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಬಹಳ ಇಷ್ಟಪಟ್ಟಿದ್ದಾರೆ.  ಈಗಾಗಲೇ 1.5 ಮಿಲಿಯನ್ ಜನರು  ವೀಡಿಯೋ ಕ್ಲಿಪ್  ನೋಡಿದ್ದಾರೆ.

ಇನ್ನು  ಬ್ಯುಟೆಂಜೆಬೀಡೆನ್ ಎಂಬ ಟ್ವಿಟರ್‌ ಬಳಕೆದಾರರು ಹಂಚಿಕೊಂಡಿದ್ದು, ಇದಕ್ಕೋಸ್ಕರವೇ  ಈ ಟ್ವಿಟ್ಟರ್ ಇರುವುದು ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ವಧುವಿನ ಹೊಸ ಡ್ಯಾನ್ಸ್ ಸ್ಟೆಪ್ ವಿಡಿಯೋ ವೈರಲ್- ಆವಾರ್ಡ್ ಕೊಡಿ ಎಂದು ಕಿಚಾಯಿಸಿದ ನೆಟ್ಟಿಗರು

14 ಸೆಕೆಂಡುಗಳ ವೈರಲ್ ವೀಡಿಯೋ ಕ್ಲಿಪ್ ಒಂದು ಮುದ್ದಾದ ಕಪ್ಪು ನಾಯಿಯು ಆಟವಾಡಲು ಚೆಂಡುನ್ನು ಹಾರಿಸುತ್ತಿರುವ ಮೂಲಕ ಆರಂಭವಾಗುತ್ತದೆ. ಆದರೆ ನಂತರ, ತನ್ನ ಸುತ್ತಲೂ ಎರಡು ಚಿಟ್ಟೆಗಳು ಹಾರುತ್ತಿರುವುದನ್ನು ಗಮನಿಸಿದ ನಾಯಿ ಗಲಿಬಿಲಿಗೊಳ್ಳುತ್ತದೆ.

ಇನ್ನು ವಿಡಿಯೋದಲ್ಲಿ  ಚಿಟ್ಟೆಯೊಂದು ನಾಯಿಯ ಮೂಗಿನ ಮೇಲೆ ಕುಳಿತಿರುವುದನ್ನು ನಾವು ನೋಡಬಹುದು, ಮತ್ತು ನಾಯಿ ಅದನ್ನು ಓಡಿಸಲು ಸಹ ಪ್ರಯತ್ನಿಸುವುದಿಲ್ಲ ಮತ್ತು ಅದನ್ನು  ಹಾಗೆಯೇ ಕುಳಿತುಕೊಳ್ಳಲು ಬಿಡುತ್ತದೆ. ಅದರ ಜೊತೆ ಆಟವಾಡಲು ಪ್ರಯತ್ನ ಮಾಡುತ್ತದೆ.

ವಿಡಿಯೋ ನೀವೆ ನೋಡಿ



ನಾಯಿ ಮತ್ತು ನಡುವಿನ ಬಿಟ್ಟೆಯ ನಡುವಿನ ಈ ಸುಂದರ ದೃಶ್ಯವು ಸಂಪೂರ್ಣವಾಗಿ ನೆಟ್ಟಿಗರ ಹೃದಯವನ್ನು ಗೆದ್ದಿದೆ. ಕೆಲ ಸಮಯದ ನಂತರ ಚಿಟ್ಟೆ ಹಾರಿ ಹೋಗಿದ್ದು, ಚಿಟ್ಟೆಗಳು ಹಾರುವುದನ್ನ ನೋಡಿ ಎಂಜಾಯ್ ಮಾಡಿದೆ.

ಇದನ್ನೂ ಓದಿ: ಬಾರ್ಬಿ ಗೊಂಬೆಯಂತೆ ಕಾಣಲು ಬರೋಬ್ಬರಿ 24 ಲಕ್ಷ ಖರ್ಚು ಮಾಡಿದ ಆಸ್ಟ್ರೇಲಿಯಾದ ಯುವತಿ

ಈ  ಅದ್ಭುತವಾದ ವೀಡಿಯೊಗೆ ಪ್ರತಿಕ್ರಿಯಿಸಿರುವ, ಜನರು "ಅಯ್ಯೋ. ಕೊನೆಯಲ್ಲಿ ನಾಯಿಮರಿ ಹೇಳುವುದನ್ನು ನೀವು ಬಹುತೇಕ ಕೇಳಬಹುದು, ದಯವಿಟ್ಟು ಹಾರಿಹೋಗಬೇಡಿ ಎಂದು ಹೇಳಿದೆ ಎನ್ನುವ ಕಾಮೆಂಟ್ ಮಾಡಿದ್ದಾರೆ. ಹಲವಾರು ಜನರು ಈ ಕ್ಯೂಟ್ ವಿಡಿಯೋ ಬಗ್ಗೆ ಕಾಮೆಂಟ್ ಮಾಡಿದ್ದಾರೆ.

ಬರೀ ಟ್ವಿಟ್ಟರ್ ಮಾತ್ರವಲ್ಲದೆ ರೆಡ್ಡಿಟ್ ಸೇರಿದಂತೆ ವಿವಿಧ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಈ ವಿಡಿಯೋ  ವೈರಲ್ ಆಗಿದ್ದು, ಹಲವಾರು ಜನರು ಶೇರ್ ಮಾಡಿಕೊಂಡಿದ್ದಾರೆ.
Published by:Sandhya M
First published: