ಅಲೌಕಿಕ ಕ್ರಿಯೆಗಳು ಅಥವಾ ದೆವ್ವ ಪಿಶಾಚಿಗೆ ಸಂಬಂಧಿಸಿವೆ ಎನ್ನಲಾಗುವ ಪ್ರಕ್ರಿಯೆಗಳು ಯಾವಾಗಲೂ ವಿವಾದಾತ್ಮಕ ವಿಷಯ(Controversial Matters)ಗಳಾಗಿರುತ್ತವೆ. ಕೆಲವರು ಇಂತಹ ವಿಷಯಗಳನ್ನು ಒಪ್ಪಿಕೊಳ್ಳದೇ, ಅದನ್ನು ಸುಳ್ಳು ಎಂದು ಸಾಬೀತುಪಡಿಸಲು(Prove) ವೈಜ್ಞಾನಿಕ(Scientific) ಮಾರ್ಗಗಳ ಮೊರೆ ಹೋದರೆ, ದೆವ್ವ ಪಿಶಾಚಿಗಳ(Ghost) ಅಸ್ಥಿತ್ವ ನಿಜವಾಗಿಯೂ ಇದೆ ಎಂದು ನಂಬುವ ಜನರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಸಾಮಾಜಿಕ ಮಾಧ್ಯಮದಲ್ಲೂ(Social Media) ಈ ಸಂಗತಿಗೆ ಸಂಬಂಧಿಸಿದ ಪರ – ವಿರೋಧ ವಾದಗಳು ನಡೆಯುತ್ತಲೇ ಇರುತ್ತವೆ. ಇದೀಗ ಆಸ್ಟ್ರೇಲಿಯಾ(Australia)ದ ವ್ಯಕ್ತಿಯೊಬ್ಬರಿಗೆ ನಾಯಿಯೊಂದರ ದೆವ್ವ ಕಾಣಿಸಿದೆ ಎಂಬ ಸಂಗತಿ, ಸಾಮಾಜಿಕ ಮಾಧ್ಯಮದಲ್ಲಿ ಕೆಲವರ ಕುತೂಹಲಕ್ಕೆ ಕಾರಣವಾಗಿದೆ. ಆ ವ್ಯಕ್ತಿ ಸಿಸಿಟಿವಿ ದೃಶ್ಯವೊಂದನ್ನು ಪೋಸ್ಟ್ ಮಾಡಿ ಅದರಲ್ಲಿ ನಾಯಿಯ ದೆವ್ವ(Dog Ghost) ಇದೆ ಎಂದು ವಾದಿಸಿದ್ದಾನೆ.
ನಾಯಿಯ ಫ್ರೆಂಡ್ ಭೂತ ಆಗಿದೆಯಂತೆ !
ಆ ಆಸ್ಟ್ರೇಲಿಯದ ವ್ಯಕ್ತಿಯ ಹೆಸರು ಜ್ಯಾಕ್ ಡಿಮ್ಯಾಕ್ರೊ. ಆತ ತನ್ನ ಸಾಕು ನಾಯಿ ರೈಡರ್ ಮತ್ತು ಅದರ ಭೂತ ಗೆಳೆಯನಿಗೆ ಸಂಬಂಧಿಸಿದ ವಿಡಿಯೋವನ್ನು ತೋರಿಸಿದ್ದಾರೆ. ಅವರು ಹೇಳುವ ಪ್ರಕಾರ, ಮೆಲ್ಬೋರ್ನ್ನಲ್ಲಿರುವ ತಮ್ಮ ಮನೆ, ಯಾವುದೇ ಬೀದಿ ನಾಯಿಗಳು ಒಳಗೆ ನುಸುಳದಷ್ಟು ಸುರಕ್ಷಿತವಾಗಿದೆ.
ಇದನ್ನೂ ಓದಿ: Viral Story: ಗಂಡನಿಗೆ ವಿಚ್ಛೇದನ ನೀಡಿ ನಾಯಿಯನ್ನು ಮದುವೆಯಾದ 47 ವರ್ಷದ ಮಹಿಳೆ!
ದೆವ್ವದೊಂದಿಗೆ ನಾಯಿಯ ಆಟ
ಹಾಗಾಗಿ, ಮೊದಲ ಬಾರಿಗೆ, ರೈಡರ್ ಪಾರದರ್ಶಕವಾಗಿ ಕಾಣುತ್ತಿದ್ದ ನಾಯಿಯೊಂದಿಗೆ ಕುಣಿದಾಡುತ್ತಿರುವುದನ್ನು ನೋಡಿದಾಗ, ಅವರ ಮನಸ್ಸಿನಲ್ಲಿ ಕೆಲವು ಸಂಶಯಗಳು ಮೂಡಿದವು. ಆ ಪಾರದರ್ಶಕ ನಾಯಿ ದಿಢೀರನೆ ಫ್ರೇಮ್ನಿಂದ ಹೊರಗೆ ಹೋಯಿತು. ಏನಾಗುತ್ತಿದೆ ಎಂದು ಪರಿಶೀಲಿಸಲು ಜ್ಯಾಕ್ ಹೊರಗಡೆ ಹೋದಾಗ, ಮನೆಯ ಕಾಂಪೌಂಡ್ ಒಳಗೆ ರೈಡರನ್ನು ಬಿಟ್ಟರೆ ಬೇರೆ ಯಾರೂ ಇರಲಿಲ್ಲ. ಕೇಟರ್ಸ್ ಕ್ಲಿಪ್, ಈ ಘಟನೆಯ ವಿಡಿಯೋ ದೃಶ್ಯವನ್ನು ಯ್ಯೂಟ್ಯೂಬ್ನಲ್ಲಿ ಹಂಚಿಕೊಂಡಿದ್ದಾರೆ.
ಸಿಸಿಟಿವಿಯಲ್ಲಿ ದೃಶ್ಯ ಸೆರೆ
ತಾನು ತನ್ನ ಗ್ಯಾರೆಜ್ನಲ್ಲಿ ಸಿಗರೇಟ್ ಸೇದುತ್ತಿದ್ದಾಗ , ಅವರಿಗೆ ಸಿಸಿಟಿವಿ ಕ್ಯಾಮರಾದಲ್ಲಿ ನೇರವಾಗಿ ಆ ದೃಶ್ಯ ಕಂಡು ಬಂತು. ರೈಡರ್ ಖುಷಿ ಖುಷಿಯಾಗಿ ಕಂಪೌಂಡ್ನಲ್ಲಿ ನೆಗೆಯುತ್ತಿರುವುದು ಅವರಿಗೆ ಕಂಡಿತು, ಸಾಮಾನ್ಯವಾಗಿ ರೈಡರ್ ಆ ರೀತಿ ವರ್ತಿಸುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ. ಆಗ ಅಲ್ಲಿ ಮತ್ತೊಂದು ಪಾರದರ್ಶಕ ನಾಯಿಯನ್ನು ಕಂಡು , ಜ್ಯಾಕ್ ಮನಸ್ಸಿನಲ್ಲಿ ಸಂಶಯಗಳು ಮೂಡಿದವು. ಆದರೆ ತಕ್ಷಣ ಆ ನಾಯಿ ಗಾಳಿಯಲ್ಲಿ ಮಾಯವಾಯಿತಂತೆ. ಈ ಘಟನೆ ನಡೆದ ದಿನದಿಂದ ಜ್ಯಾಕ್ ಮತ್ತು ಅವರ ಹೆಂಡತಿ ನಿತ್ಯವೂ ಅವರ ಸಿಸಿಟಿವಿ ಕ್ಯಾಮರಾದ ದೃಶ್ಯಗಳ ಮೇಲೆ ಗಮನ ಇಡಲು ಆರಂಭಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್
ಈ ವಿಡಿಯೋವನ್ನು ಆನ್ಲೈನ್ನಲ್ಲಿ ಪೋಸ್ಟ್ ಮಾಡಿದ ದಿನದಿಂದ ಇದುವರೆಗೆ, ಸುಮಾರು 2.5 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಕಂಡಿದೆ ಮತ್ತು ಹಲವಾರು ಪ್ರತ್ರಿಕ್ರಿಯೆಗಳನ್ನು ಪಡೆದಿದೆ. ಕೆಲವು ವೀಕ್ಷಕರು ಜ್ಯಾಕ್ ಅವರ ವಾದವನ್ನು ಒಪ್ಪಿಕೊಂಡರೆ, ಇನ್ನುಳಿದ ವೀಕ್ಷಕರು ಜ್ಯಾಕ್ ಭೂತ ಎಂದು ಹೇಳುತ್ತಿರುವ ಪಾರದರ್ಶಕ ನಾಯಿ, ಭೂತವಲ್ಲ ಬದಲಿಗೆ ಬಿಳಿ ಬಣ್ಣದ ಒಂದು ಸಾಮಾನ್ಯ ನಾಯಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:Viral News: ಚಿನ್ನದ ಮಾಸ್ಕ್ನಲ್ಲಿ ಮಿಂಚಿದ ರಾಪರ್ Cardi B
ದೆವ್ವವಾಗಿರುವ ನಾಯಿಯೊಂದಿಗೆ ಮತ್ತೊಂದು ನಾಯಿಯ ಆಟ
ನೈಟ್ ವಿಶನ್ ಕ್ಯಾಮರಾದಲ್ಲಿ ನಾಯಿಯ ಕಣ್ಣುಗಳು ಹೊಳೆಯುತ್ತಿರುವುದು, ಅದು ಒಂದು ನಿಜವಾದ ನಾಯಿ ಎಂಬುದನ್ನು ಸೂಚಿಸುತ್ತದೆ ಎಂದು ಒಬ್ಬ ವೀಕ್ಷಕ ಬೊಟ್ಟು ಮಾಡಿ ತೋರಿಸಿದ್ದಾರೆ. ಜ್ಯಾಕ್ ಗಮನ ಸೆಳೆಯುವುದಕ್ಕಾಗಿ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ ಎಂದು ಟೀಕಿಸಿರುವ ನೆಟ್ಟಿಗರು, “ಹಾಗಾದರೆ, ಈ ನಾಯಿ ಭೂತಕ್ಕೆ ನಿಜವಾದ ಕಣ್ಣುಗಳಿವೆ ಅಥವಾ ಇದು ನೈಟ್ ವಿಶನ್ ಕ್ಯಾಮರಾಗಳಲ್ಲಿ ದೆವ್ವದಂತೆ ಕಾಣುವ ನಿಜವಾದ ನಾಯಿ. ಜನ ಗಮನ ಸೆಳೆಯಲು ಏನನ್ನು ಬೇಕಾದರೂ ಮಾಡುತ್ತಾರೆ” ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ