Viral Video: ಆಟಗಾರರು ಕಣ್ಣರಳಿಸುವಂತೆ ವಾಲಿಬಾಲ್ ಆಡುತ್ತಿರುವ ಸೂಪರ್ ಡಾಗ್ ವಿಡಿಯೋ ನೋಡಿ

ವಿಶೇಷವಾಗಿ ನಾಯಿಗಳು ತನ್ನ ಮಾಲೀಕನಿಗೆ ಸಹಾಯ ಮಾಡುವ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಇದೀಗ ಸೂಪರ್ ಡಾಗ್ ವಿಡಿಯೋ (Super Dog Video) ಮಿಂಚಿನಂತೆ ಹರಿದಾಡುತ್ತಿದೆ.

ವಾಲಿಬಾಲ್ ಆಡುತ್ತಿರುವ ನಾಯಿ

ವಾಲಿಬಾಲ್ ಆಡುತ್ತಿರುವ ನಾಯಿ

  • Share this:
ಕೆಲ ದಿನಗಳಿಂದ ಸಾಮಾಜಿಕ ಜಾಲತಾಣ(Social Media)ಗಳಲ್ಲಿ ಪ್ರಾಣಿಗಳ ವಿಡಿಯೋ(Animal Videos)ಗಳು ಹೆಚ್ಚು ವೈರಲ್ ಆಗುತ್ತಿದೆ. ಪ್ರಾಣಿಗಳ ಬೇಟೆ, ಸಿಂಹದ ಘರ್ಜನೆ, ಬೆಕ್ಕುಗಳ ಕ್ಯೂಟ್ ವಿಡಿಯೋಗಳು ಸಾಮಾಜಿಕ ಜಾಲತಾಣಗಳನ್ನು ಆವರಿಸಿಕೊಳ್ಳುತ್ತಿವೆ. ಇನ್ನು ಮನೆಯಲ್ಲಿ ಸಾಕುವ ಪ್ರಾಣಿಗಳು ಮಾನವರಂತೆ ಅನುಕರಿಸುತ್ತವೆ ಎಂಬುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇಂದಿಗೂ ಗ್ರಾಮೀಣ ಭಾಗಗಳಲ್ಲಿ ಸಾಕು ಗಿಣಿ(Parrot)ಗಳು ಮಾತನಾಡೋದನ್ನು ನೋಡಬಹುದು. ಇನ್ನುಳಿದಂತೆ ಹಸು, ನಾಯಿ, ಮೇಕೆಗಳು ಮಾಲೀಕನ (Owner) ಮಾತು ಕೇಳುತ್ತವೆ. ವಿಶೇಷವಾಗಿ ನಾಯಿಗಳು ತನ್ನ ಮಾಲೀಕನಿಗೆ ಸಹಾಯ ಮಾಡುವ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಇದೀಗ ಸೂಪರ್ ಡಾಗ್ ವಿಡಿಯೋ (Super Dog Video) ಮಿಂಚಿನಂತೆ ಹರಿದಾಡುತ್ತಿದೆ.

ಈ ಸೂಪರ್ ಡಾಗ್ ತನ್ನ ಮಾಲೀಕನೊಂದಿಗೆ ವಾಲಿಬಾಲ್ ಆಟವನ್ನು ಆಡುತ್ತದೆ. ಹೌದು, ಇನ್ ಸ್ಟಾಗ್ರಾಂನಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸಾವಿರ ಸಾವಿರ ವ್ಯೂವ್ ಗಳನ್ನು ಪಡೆದುಕೊಳ್ಳುತ್ತಿದೆ.

ವಾಲಿಬಾಲ್ ಆಡುವ ಸೂಪರ್ ಡಾಗ್

ವಿಡಿಯೋದಲ್ಲಿ ಮೂವರ ಜೊತೆ ಈ ನಾಯಿ ಸಹ ವಾಲಿಬಾಲ್ ಆಡೋದನ್ನು ನೋಡಬಹುದಾಗಿದೆ. ಒಂದು ಕಡೆ ಇಬ್ಬರು ನಿಂತಿದ್ರೆ, ಮತ್ತೊಂದು ಕಡೆ ಓರ್ವನ ಜೊತೆ ನಾಯಿ ನಿಂತಿದೆ.  ಎದುರಾಳಿಯಿಂದ ಬರುವ ವಾಲಿಬಾಲ್ ನ್ನು ಮಾಲೀಕ ನಾಯಿಗೆ ಪಾಸ್ ಮಾಡುತ್ತಾನೆ. ಈ ನಾಯಿ ಸಹ ಅಷ್ಟೇ ಸರಳವಾಗಿ ಬಾಲ್ ಪಾಸ್ ಮಾಡುತ್ತದೆ. ಹೀಗೆ ಈ ಆಟ ಮುಂದುವರಿಯುತ್ತದೆ.

ಇದನ್ನೂ ಓದಿ :  Dog Love: ನಿರ್ಗತಿಕ ವ್ಯಕ್ತಿಯನ್ನು ಅಪ್ಪಿಕೊಂಡು ಸಂತೈಸಿದ ನಾಯಿ, ಸಖತ್ ವೈರಲ್ ಆಗ್ತಿದೆ ವಿಡಿಯೋ

ಸೂಪರ್ ಸೆಟ್ಟರ್ ಅಂದ್ರು ನೆಟ್ಟಿಗರು

ನೆಟ್ಟಿಗರು ಕಮೆಂಟ್‌ ಗಳಲ್ಲಿ ತಮ್ಮ ಆಶ್ಚರ್ಯವನ್ನು ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರನು "OMG, ನನಗೆ ಈ ನಾಯಿ ಬೇಕು" ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಇದು ಅತ್ಯುತ್ತಮ ಸೆಟ್ಟರ್ ಎಂದು ಸೂಪರ್ ಡಾಗ್ ಗುಣಗಾನ ಮಾಡಿದ್ದಾರೆ.








View this post on Instagram






A post shared by Kiara (@kiarathevolleydog)






ಸೂಪರ್ ಡಾಗ್ ಹೆಸರಿನಲ್ಲಿ Insta ಖಾತೆ  

ಈ ಸೂಪರ್ ಡಾಗ್ ಹೆಸರು ಕಿಯಾರಾ. ಇದರ ಹೆಸರಿನಲ್ಲಿ ಇನ್ ಸ್ಟಾಗ್ರಾಂ ಖಾತೆಯನ್ನು ಸಹ ತೆರೆಯಲಾಗಿದೆ.  Kiarathevolleydog ಹೆಸರಿನಲ್ಲಿ ಸೂಪರ್ ಡಾಗ್ Instagram ಖಾತೆ ಇದೆ. ಇಲ್ಲಿ ಸೂಪರ್ ಡಾಗ್ ನ ಕೆಲವು ವಿಡಿಯೋಗಳನ್ನು ನೋಡಬಹುದು. ಇದರ Insta Bioದಲ್ಲಿ 50% Black Lab, 50% Flat Coat Retriever 100% addicted to volleyball ಎಂದು ಬರೆಯಲಾಗಿದೆ. ಈ ಸೂಪರ್ ಡಾಗ್ 53 ಸಾವಿರಕ್ಕೂ ಅಧಿಕ ಫಾಲೋವರ್ಸ್ ಗಳನ್ನು ಹೊಂದಿದೆ.

ಪುಟ್ಟ ಕರು ಮತ್ತು ನಾಯಿಯ ಆಟ!

ಸಾಮಾಜಿಕ ಮಾಧ್ಯಮವಾದ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಆ ಒಂದು ವಿಡಿಯೋದಲ್ಲಿ ನಾಯಿಮರಿಯೊಂದು ತನ್ನ ಮನೆಯ ಒಡೆಯನ ಮಗುವನ್ನು ಮೊದಲ ಬಾರಿಗೆ ಭೇಟಿಯಾಗುವುದನ್ನು ಮತ್ತು ನಂತರ ಮಗುವನ್ನು ಮುದ್ದಾಗಿ ನೋಡುತ್ತಿದ್ದುದ್ದನ್ನು ಸಹ ನೋಡಬಹುದಾಗಿತ್ತು.








View this post on Instagram






A post shared by Kiara (@kiarathevolleydog)






ಈ ಕ್ಯೂಟ್‌ ವಿಡಿಯೋವನ್ನು ತುಂಬಾ ಜನರು ಇಷ್ಟಪಟ್ಟಿದ್ದು, ವಿಡಿಯೋ ತುಣುಕಿನಲ್ಲಿ ನಾಯಿಮರಿ ಮಗುವನ್ನು ಭೇಟಿಯಾಗಲು ಎಷ್ಟು ಉತ್ಸುಕವಾಗಿದೆ ಎಂದರೆ ಅದು ತನ್ನ ಹಿಂಗಾಲುಗಳ ಮೇಲೆ ಎದ್ದು ನಿಂತಿರುವುದನ್ನು ಕಾಣಬಹುದಾಗಿತ್ತು. ಅಲ್ಲದೆ, ನಾಯಿಮರಿ ಮಗುವಿನೊಂದಿಗೆ ಒಟ್ಟಿಗೆ ಮಲಗಿರುವುದನ್ನು ಸಹ ಆ ವಿಡಿಯೋದಲ್ಲಿ ನೋಡಿದ್ದೆವು.

ಇದನ್ನೂ ಓದಿ :  Ghost Dog: ದೆವ್ವದ ಜೊತೆ ನಾಯಿಯ ಆಟ, CCTV ವಿಡಿಯೋ ನೋಡಿ ಮಾಲೀಕ ಶಾಕ್! ವಿಡಿಯೋ ನೋಡಿ

ಪ್ರಾಣಿಗಳ ಮುದ್ದಾದ ವಿಡಿಯೋ

ಇಲ್ಲಿಯೂ ಸಹ ಅಂತಹದೇ ಒಂದು ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ ನೋಡಿ. ಆದರೆ ಇಲ್ಲಿ ನಾಯಿ ಇನ್ನೊಂದು ಪ್ರಾಣಿಯೊಂದಿಗೆ ಆಟವಾಡುತ್ತಿದೆ ನೋಡಿ. ಹೌದು.. ಮುದ್ದಾದ ಪುಟ್ಟ ಕರು ಮತ್ತು ಮುದ್ದಾದ ನಾಯಿ ನಡುವೆ ಇರುವ ಸ್ನೇಹದ ಬಗ್ಗೆ ಇರುವ ಈ ವಿಡಿಯೋ ನೀವು ನೋಡಲೇಬೇಕು. ಈ ಪ್ರಾಣಿಯ ವಿಡಿಯೋದಲ್ಲಿ ಅತ್ಯಂತ ಆಸಕ್ತಿದಾಯಕ ಸಂಗತಿಯೆಂದರೆ, ಮರಿ ಹಸು ಮತ್ತು ನಾಯಿ ಎರಡೂ ಒಂದೇ ಗಾತ್ರದ್ದಾಗಿದ್ದು, ವಿಡಿಯೋ ನಿಮ್ಮ ಮುಖದಲ್ಲಿ ನಗುವನ್ನು ತರಬಹುದು.
Published by:Mahmadrafik K
First published: