Viral News: ಯಾರು ಬಂದು ಮುದ್ದಿಸಿದರೂ ಕಚ್ಚಲ್ವಂತೆ ಈ ನಾಯಿ..! ನೋಡೋಕೆ ಸಖತ್ ಕ್ಯೂಟ್

ನೀವು ಇನ್‍ಸ್ಟಾಗ್ರಾಂನಲ್ಲಿ ನೆಟ್ಟಿಗರ ಮನ ಸೆಳೆಯುತ್ತಿರುವ ವಿಡಿಯೋ ಒಂದನ್ನು ಖಂಡಿತಾ ನೋಡಬೇಕು. ಹೋಗುವ ಬರುವ ಜನರು ತನ್ನನ್ನು ಮುದ್ದಾಡಲಿ ಎಂಬ ಆಸೆಯಿಂದ ಪಾದಚಾರಿ ಮಾರ್ಗದಲ್ಲಿ ಕುಳಿತ ನಾಯಿಯೊಂದರ ವಿಡಿಯೋ ಅದು.

ಮುದ್ದಿಸಿಕೊಳ್ಳಲು ಕಾಯುತ್ತಿರೋ ಶ್ವಾನ

ಮುದ್ದಿಸಿಕೊಳ್ಳಲು ಕಾಯುತ್ತಿರೋ ಶ್ವಾನ

  • Share this:
ದೇವರ ಸೃಷ್ಟಿಯಲ್ಲಿ ಎಲ್ಲವೂ ಅಮೂಲ್ಯವೇ. ಪ್ರತಿಯೊಂದಕ್ಕೂ ಅದರದ್ದೇ ಆದ ಮೌಲ್ಯವಿದೆ. ಆದರೆ, ಮನುಷ್ಯನ ಮಟ್ಟಿಗೆ ಹೇಳುವುದಾದರೆ, ನಾಯಿಗಳು (Dogs) ಆತನ ಜೀವನದ ಮೌಲ್ಯವನ್ನು(Life Value) ಹೆಚ್ಚಿಸುವ ಅಮೂಲ್ಯ ಜೀವಿಗಳಲ್ಲಿ ಪ್ರಮುಖವಾದವು ಎನ್ನಬಹುದು. ನಾಯಿಗಳು ಮನುಷ್ಯನ ಜೀವನದ ಮೌಲ್ಯವನ್ನು ಹೆಚ್ಚಿಸುವುದೇ, ಇದೆಂತಾ ವ್ಯಾಖ್ಯಾನವಪ್ಪ..? ಎಂದು ಕೆಲವರಿಗೆ ಅನಿಸಬಹುದು. ಆದರೆ, ಇದು ಯಾರಿಗೆ ಅರ್ಥವಾಗುತ್ತೋ ಬಿಡುತ್ತೋ ಪ್ರಾಣಿ ಪ್ರಿಯರಿಗೆ (Animal Lovers) ಮಾತ್ರ ಚೆನ್ನಾಗಿ ಅರ್ಥವಾಗುತ್ತದೆ. ಅದರಲ್ಲೂ ಮುಖ್ಯವಾಗಿ ನಾಯಿಗಳನ್ನು ಪ್ರೀತಿಸುವ ಅಥವಾ ಇಷ್ಟಪಡುವ ಜನರಿಗೆ ಅವುಗಳನ್ನು ಮುದ್ದಾಡುವುದರಿಂದ ಸಿಗುವ ಸಂತೋಷಕ್ಕೆ ಸಮನಾದ ಸಂತೋಷ ಬಹುಷಃ ಬೇರೆಲ್ಲೂ ಸಿಗದು.

ನಾಯಿಗಳ ಒಡನಾಟ ಅವರ ದಿನವನ್ನು ಉಲ್ಲಾಸದಾಯಕವಾಗಿಸುತ್ತದೆ. ಹಾಗಂತ, ನಾಯಿಗಳನ್ನು ಮುದ್ದಾಡಲು ನಾಯಿ ಸಾಕಲೇಬೇಕು ಎಂದಿಲ್ಲ, ನಿಮಗೆ ಅಕ್ಕರೆ ತೋರುವ ಮನವಿದ್ದರೆ, ಯಾರ ನಾಯಿಯಾದರೇನು..? ಪರಿಚಯವಿಲ್ಲದ ನಾಯಿಗಳನ್ನು ಮುದ್ದಾಡುವುದೇ, ಅದು ನಮ್ಮನ್ನು ಕಚ್ಚದೇ ಬಿಟ್ಟೀತೆ..? ಸಾಧ್ಯವೇ ಇಲ್ಲ ಎನ್ನುತ್ತೀರಾ..?

ಇನ್‍ಸ್ಟಾಗ್ರಾಂನಲ್ಲಿ ನೆಟ್ಟಿಗರ ಮನ ಸೆಳೆಯುತ್ತಿರುವ ವಿಡಿಯೋ

ಹಾಗಾದರೆ, ನೀವು ಇನ್‍ಸ್ಟಾಗ್ರಾಂನಲ್ಲಿ ನೆಟ್ಟಿಗರ ಮನ ಸೆಳೆಯುತ್ತಿರುವ ವಿಡಿಯೋ ಒಂದನ್ನು ಖಂಡಿತಾ ನೋಡಬೇಕು. ಹೋಗುವ ಬರುವ ಜನರು ತನ್ನನ್ನು ಮುದ್ದಾಡಲಿ ಎಂಬ ಆಸೆಯಿಂದ ಪಾದಚಾರಿ ಮಾರ್ಗದಲ್ಲಿ ಕುಳಿತ ನಾಯಿಯೊಂದರ ವಿಡಿಯೋ ಅದು.

ಆ ವಿಡಿಯೋವನ್ನು ನೋಡಿದರೆ, ನಿಮ್ಮ ಮೊಗದಲ್ಲೊಂದು ಮುಗುಳ್ನಗೆ ಹಾದು ಹೋಗದೇ ಇರದು. ಅಷ್ಟೇ ಏಕೆ, ನೀವು ಕೂಡ ಆ ಮುದ್ದು ನಾಯಿಯನ್ನು ಮುದ್ದಿಸಲು ಸಾಧ್ಯವಾಗಿದ್ದರೆ ಎಷ್ಟು ಚೆನ್ನಾಗಿತ್ತು ಎಂಬ ಭಾವನೆಯು ಕೂಡ ಮೂಡುವುದು ಖಂಡಿತಾ.

6.30 ಲಕ್ಷಕ್ಕಿಂತಲೂ ಹೆಚ್ಚು ವೀಕ್ಷಣೆ

ಸುಮಾರು 18 ಗಂಟೆಗಳ ಹಿಂದೆ , ಇನ್‍ಸ್ಟಾಗ್ರಾಂನ ಡಾಗ್ ಎಂಬ ಪುಟದಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೋ, ಈಗಾಗಲೇ 6.30 ಲಕ್ಷಕ್ಕಿಂತಲೂ ಹೆಚ್ಚು ವೀಕ್ಷಣೆಗಳನ್ನು ಕಂಡಿದೆ. ಈ ವಿಡಿಯೋದಲ್ಲಿ, ನೆಲ್ಸನ್ ಎಂಬ ಹೆಸರಿನ ಒಂದು ನಾಯಿ ಪಾದಚಾರಿ ಮಾರ್ಗದಲ್ಲಿ ಹಾಸಲಾದ ಮ್ಯಾಟ್‌ ಮೇಲೆ ಕುಳಿತುಕೊಂಡು ದಾರಿ ಹೋಕರನ್ನು ವೀಕ್ಷಿಸುತ್ತಿರುವ ದೃಶ್ಯವನ್ನು ಕಾಣಬಹುದು.


View this post on Instagram


A post shared by @DOG (@dog)


ವಿಡಿಯೋದ ಮೇಲೆ ಮೂಡಿ ಬರುವ ವಾಕ್ಯಗಳು ವಿವರಿಸುವ ಸಂಗತಿ ಹೀಗಿದೆ:

ದಾರಿಯಲ್ಲಿ ನಡೆದಾಡುವವರು ತನ್ನನ್ನು ಮುದ್ದಿಸಲಿ ಎಂಬ ಕಾರಣಕ್ಕಾಗಿ ಆ ನಾಯಿ ಪಾದಚಾರಿ ಮಾರ್ಗದಲ್ಲಿ ಕುಳಿತುಕೊಳ್ಳಲು ಇಷ್ಟ ಪಡುತ್ತದೆ. ದಾರಿಯಲ್ಲಿ ಸಾಗುವ ಹಲವಾರು ಅಪರಿಚಿತರು, ಆ ನಾಯಿಯ ಬಳಿ ಬರುತ್ತಾರೆ, ಅದರ ತಲೆಯನ್ನು ನೇವರಿಸಿ, ಪ್ರೀತಿ ವ್ಯಕ್ತಪಡಿಸುತ್ತಾರೆ.

ಅಪರಿಚಿತರ ಪ್ರೀತಿ ಆನಂದಿಸೋ ನಾಯಿ

ನಾಯಿ ನೆಲ್ಸನ್ ಕೂಡ ಅಪರಿಚಿತರ ಪ್ರೀತಿಯನ್ನು ಸ್ವೀಕರಿಸಿ, ಆನಂದಿಸುತ್ತದೆ. ವಿಡಿಯೋದಲ್ಲಿ ನೆಲ್ಸನ್ ಮತ್ತು ಅಪರಿಚಿತ ದಾರಿಹೋಕರ ನಡುವಿನ ಪ್ರೀತಿ ವಿನಿಮಯದ ದೃಶ್ಯವನ್ನು ನೋಡಲು ಖುಷಿ ಎನಿಸುತ್ತದೆ. “ ನೆಲ್ಸನನ ಜೀವನದ ಉದ್ದೇಶ ಜನರಿಗೆ ಸಂತೋಷ ನೀಡುವುದು” ಎನ್ನುತ್ತದೆ ವಿಡಿಯೋದಲ್ಲಿನ ಬರಹ. ಆ ಬರಹದ ಜೊತೆಗೆ ಒಂದು ಹೃದಯದ ಇಮೋಜಿಯನ್ನು ಕೂಡ ಹಾಕಲಾಗಿದೆ.

ಮುದ್ದಿಸುವವರಿಗಾಗಿ ಕಾಯುವ ನಾಯಿ

“ನಾಯಿ ನನ್ನೊಂದಿಗೆ ಕೆಲಸಕ್ಕೆ ಹೋದಾಗ, ಅವನಿಗೆ ಅಲ್ಲಿ ಕುಳಿತು, ಹೋಗುವ ಬರುವ ಜನರನ್ನು ನೋಡಲು ಸಂತೋಷವಾಗುತ್ತದೆ. ಯಾರಾದರೂ ಬಂದು ಮುದ್ದಿಸುವವರೆಗೆ ಕಾಯುತ್ತಾನೆ. ಅದರಿಂದ ಅವನಿಗೆ ಸಂತೋಷವಾಗುತ್ತದೆ” ಎನ್ನುತ್ತದೆ ವಿಡಿಯೋದಲ್ಲಿನ ಬರಹ.

ಇದನ್ನೂ ಓದಿ: Russia Ukraine War: ಸೂಪರ್ ಮಾರುಕಟ್ಟೆಯಲ್ಲಿ ಸಕ್ಕರೆಗಾಗಿ ಹೊಡೆದಾಡಿಕೊಂಡ ರಷ್ಯಾ ಜನರು; ವಿಡಿಯೋ ನೋಡಿ

“ನಾನು ಅಲ್ಲಿ ಇಡೀ ದಿನ ಅಲ್ಲಿಯೇ ಕುಳಿತುಕೊಳ್ಳುತ್ತೇನೆ” ಎಂಬ ಅಡಿಬರಹವನ್ನು ಕೂಡ ವಿಡಿಯೋಗೆ ನೀಡಲಾಗಿದೆ. “ಇದು ನೆಲ್ಸನನ ಪ್ರಪಂಚ” ಎಂದು ಇನ್‍ಸ್ಟಾಗ್ರಾಂ ಬಳಕೆದಾರರೊಬ್ಬರು ವಿಡಿಯೋಗೆ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೊಬ್ಬ ಬಳಕೆದಾರ, “ಆತ ಒಬ್ಬ ಮೇಯರ್ ಇದ್ದಂತೆ” ಎಂದು ಬರೆದಿದ್ದರೆ, “ನಾನು ಅವನನ್ನು ನಿರಂತರವಾಗಿ ಮುದ್ದಿಸುವೆ” ಎಂದು ಮತ್ತೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.

7.67 ಲಕ್ಷ ವೀಕ್ಷಣೆ

ಈ ವಿಡಿಯೋವನ್ನು ಮೊದಲು, ಮಾರ್ಚ್ 12 ಕ್ಕೆ ಡಾಗ್ ಖಾತೆಯಾದ ಕಿಂಗ್‍ಮೆಜೆಸ್ಟಿ ಅಂಡ್ ಪ್ರಿನ್ಸೆಸ್‍ರೋಸ್‍ನಲ್ಲಿ ಪೋಸ್ಟ್ ಮಾಡಲಾಗಿತ್ತು.ಆಗ ಅದು 7.67 ಲಕ್ಷ ವೀಕ್ಷಣೆಗಳನ್ನು ಕಂಡಿತ್ತು.

ಇದನ್ನೂ ಓದಿ: 'ಹುಡುಗಿ' ಅಂದುಕೊಂಡು ಅಪ್ಪನನ್ನೇ ಪ್ರೀತಿಸಿದ ಮಗ! ಇದು Facebook ಅಲ್ಲ ಸ್ವಾಮಿ, 'Fake'book!

“ ನೆಲ್ಸನ್ . . . .ಎಲ್ಲರ ಆತ್ಮೀಯ ಗೆಳೆಯ” ಎಂಬ ಅಡಿಬರಹವನ್ನು ಆ ವಿಡಿಯೋಗೆ ನೀಡಲಾಗಿತ್ತು. ಡಾಗ್ ಖಾತೆ, 1.23 ಲಕ್ಷಕ್ಕೂ ಹೆಚ್ಚು ಹಿಂಬಾಲಕರನ್ನು ಹೊಂದಿದೆ.
Published by:Divya D
First published: