ಆಧುನಿಕ ಕಾಲವೆಂದರೆ ಅದು ಸೋಷಿಯಲ್ ಮೀಡಿಯಾ (Social Media) ಕಾಲವೆಂದೆ ಬದಲಾಗಿದೆ. ಅಷ್ಟು ಪರಿಣಾಮಕಾರಿಯಾಗಿ ಸೋಷಿಯಲ್ ಮೀಡಿಯಾಗಳು ಈಗ ಎಲ್ಲೆಡೆ ಎಲ್ಲರನ್ನು ಆವರಿಸಿಕೊಂಡಿವೆ. ಬಳಕೆದಾರರು ಕೂಡ ಅಷ್ಟೇ ವೇಗವಾಗಿ ಆ ವಿಡಿಯೋಗೆ ಕಮೆಂಟ್ಗಳ (Comment) ಮಹಾಪೂರವನ್ನೇ ಹರಿದು ಬಿಡುತ್ತಿದ್ದಾರೆ. ಆ ವಿಡಿಯೋಗ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಮಹಿಳೆಯೊಬ್ಬರು ನಾಯಿಯನ್ನು ಒದೆಯುವ ಮತ್ತು ತಾವು ನಗುವ ಸಲುವಾಗಿ ಅದನ್ನು ನಿಂದಿಸುವ ವಿಡಿಯೋ ವೈರಲ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಟ್ವಿಟ್ಟರ್ ಬಳಕೆದಾರರು ಇನ್ಪ್ಲೂಯೆನ್ಸರ್ ಎಂದು ಕರೆಯಲಾಗುವ ಈ ಮಹಿಳೆಯ ಸಂವೇದನಾಶೀಲತೆಯನ್ನು ಖಂಡಿಸುತ್ತಿದ್ದು, ಈ ಘಟನೆಯನ್ನು ವರದಿ ಮಾಡಲು ಮತ್ತು ಆಕೆಯ ಖಾತೆಯ ವಿರುದ್ಧ ಕ್ರಮ ಜರುಗಿಸಬೇಕೆಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ.
1.21 ಲಕ್ಷ ಅನುಯಾಯಿಗಳ ಸಂಖ್ಯೆಯನ್ನು ಹೊಂದಿರುವ ಕಿರಣ್ ಕಾಜಲ್ ಎಂದು ಗುರುತಿಸಲಾದ ಸೋಷಿಯಲ್ ಮೀಡಿಯಾ ಇನ್ಪ್ಲೂಯೆನ್ಸರ್ ಆಗಿರುವ ಈಕೆಯು ತನ್ನನ್ನು ತಾನು ಪ್ರಾಣಿ ಪ್ರೇಮಿ ಎಂದು ಹೇಳಿಕೊಂಡಿದ್ದಾಳೆ.
ಅವಳು ಈ ವಿಡಿಯೋ ವೈರಲ್ ಆದ ನಂತರ ʼನಾನು ಭಯದಿಂದ ನಾಯಿಯನ್ನು ಒದ್ದೆ. ಒರಿಜಿನಲ್ ವಿಡಿಯೋವನ್ನು ಅಳಿಸಲಾಗಿದೆʼ ಎಂದರು. ಇದಕ್ಕೂ ಮುಂಚೆ ಕಿರಣ್ ಕಾಜಲ್ ಅವರ ಕಂಟೆಂಟ್ ತಂಡ ಅವಳು ನಾಯಿಗಳಿಗೆ ಆಹಾರ ನೀಡುವ ಮತ್ತು ಅವುಗಳನ್ನು ನೋಡಿಕೊಳ್ಳುವ ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಾರೆ.
ಕಿರಣ್ ಕಾಜಲ್ ಅವರ ಕಟೆಂಟ್ ಕ್ರಿಯೆಟರ್ ಇದರ ಕುರಿತು ಏನ್ ಹೇಳ್ತಿದಾರೆ?
ಕಿರಣ್ ಕಾಜಲ್ ಅವರು ಬಳಸಿದ ಆಡುಭಾಷೆಗೆ ಕ್ಷಮಿಸಿ. ಆದರೆ ದೆಹಲಿ ಮತ್ತು ಮುಂಬೈನಲ್ಲಿ ವಾಸಿಸುವ ಜನರಿಗೆ ಇದು ತುಂಬಾ ಕಾಮನ್ ಆಗಿದೆ ಎಂದು ಹೇಳಿದರು.
"ಮೊದಲು ನಾನೇನೂ ಅಂದುಕೊಂಡಿರಲಿಲ್ಲ. ನಾಯಿ ನನ್ನ ಹತ್ತಿರ ಬಂದಿತ್ತು. ಮತ್ತು ನಾನು ಅದನ್ನು ಒದ್ದಿದ್ದೇನೆ. ನನ್ನ ಭಾಷೆ ಕೆಟ್ಟದಾಗಿದೆ ಮತ್ತು ಅದಕ್ಕಾಗಿ ಕ್ಷಮಿಸಿ. ಆದರೆ ದೆಹಲಿ ಮತ್ತು ಮುಂಬೈ ಜನರಿಗೆ ಇದು ಕಾಮನ್ ಆಗಿದೆ. ನಾಯಿ ಹತ್ತಿರ ಬಂದಾಗ ನನಗೆ ತುಂಬಾ ಭಯವಾಯಿತು. ಇದೇ ಕಾರಣಕ್ಕೆ ನನ್ನ ಮೇಲೆ ದ್ವೇಷ ಬೇಡ. ನನ್ನನ್ನು ಕ್ಷಮಿಸಿ ಎಂದು ಕಿರಣ್ ಕಾಜಲ್ ಕೇಳಿಕೊಂಡಿದ್ದಾರೆ” ಎಂದು ಹೊಸ ವೀಡಿಯೊದಲ್ಲಿ ಕಿರಣ್ ಕಾಜಲ್ ಅವರ ಕಟೆಂಟ್ ಕ್ರಿಯೆಟರ್ ಹೇಳಿದ್ದಾರೆ.
ಇದನ್ನೂ ಓದಿ: ಸೈನ್ಯ ಸೇರುವ ಹಂಬಲದಿಂದ ಐಐಟಿ ಪಾಸಾಗಿದ್ದೇ ಮುಚ್ಚಿಟ್ಟ! ಸೇನೆಯಲ್ಲಿ ಸಾಧನೆ ಮಾಡ್ತಿದ್ದಾನೆ ಈ ಯುವಕ
ಬಳಕೆದಾರರ ಕಮೆಂಟ್ಗಳ ಮಹಾಪೂರ
ಕಿರಣ್ ಕಾಜಲ್ ಅವರ ಕ್ಷಮೆಯಾಚನೆ ನಂತರ ಅವರು ಅನೇಕ ಟೀಕೆಗಳನ್ನು ಎದುರಿಸಿದ್ದಾರೆ. ಸೋಷಿಯಲ್ ಮೀಡಿಯಾ ಬಳಕೆದಾರರು ʼನಾಯಿ ಅವಳ ಕಡೆಗೆ ಹೋಗಿಲ್ಲ ಮತ್ತು ಅದು ದಾಳಿಯೂ ಮಾಡಿಲ್ಲ. ಇದು ಪ್ರೀಪ್ಲಾನ್ಡ್ ವಿಡಿಯೋ ಆಗಿದೆ. ಈ ವಿಡಿಯೋ ಪ್ರಿಪ್ಲಾನ್ಡ್ ವಿಡಿಯೋ ಆಗಿಲ್ಲವೆಂದರೆ ವಿಡಿಯೋ ಕೊನೆಯಲ್ಲಿ ವಿಡಿಯೋ ಮಾಡುವ ಏಕೆ ನಗಬೇಕು?ʼ ಎಂದು ಪ್ರಶ್ನಿಸಿ ಕಮೆಂಟ್ ಮಾಡಿದ್ದಾರೆ.
"ಆ ವಿಡಿಯೋ ತಮಾಷೆಯಾಗಿರಲಿಲ್ಲ, ಅಸಹ್ಯಕರವಾಗಿತ್ತು. ಇದು ನಿಮಗೆ ಮತ್ತು ನಿಮ್ಮ ಸುತ್ತಮುತ್ತಲಿನ ಜನರಿಗೆ ತಮಾಷೆಯ ವಿಷಯವಾಗಿತ್ತು ಎಂದು ನಾನು ಭಾವಿಸುತ್ತೇನೆ. ಆದರೆ ನಮಗೆ ಖಂಡಿತ ಅದು ತಮಾಷೆ ವಿಷಯವೇ ಅಲ್ಲ" ಎಂದು ಒಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
How can you be so insensitive toward these voiceless souls
If you cant love them dont hurt them #AnimalAbuse#DogsOnTwitter pic.twitter.com/8HaC2zD7Ea
— Vidit Sharma 🇮🇳 (@TheViditsharma) November 30, 2022
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ