Viral Video: ಟಿವಿಯಲ್ಲಿ ಮಾಂಸ ನೋಡಿ ಈ ನಾಯಿ ಹೆಂಗೆಲ್ಲಾ ಆಡ್ತಿದೆ ನೋಡಿ!

ಬಗೆ ಬಗೆಯ ತಿಂಡಿ ತಿನಿಸುಗಳು ಮತ್ತು ಅವುಗಳನ್ನು ಟಿವಿಯಲ್ಲಿ ತೋರಿಸುವ ಬಗೆ ಯಾರಿಗೆ ತಾನೇ ಇಷ್ಟವಾಗದೆ ಇರಲು ಸಾಧ್ಯ ಹೇಳಿ? ಈ ಅಭ್ಯಾಸ ಬರೀ ಮನುಷ್ಯರಿಗೆ ಮಾತ್ರ ಸೀಮಿತವಾಗಿಲ್ಲ, ಮನೆಯಲ್ಲಿ ಸಾಕಿಕೊಂಡಿರುವಂತಹ ಎಷ್ಟೋ ಪ್ರಾಣಿಗಳು ಸಹ ಹೀಗೇ ಮಾಡುತ್ತವಂತೆ!

ನಾಯಿ

ನಾಯಿ

  • Share this:
ಸಾಮಾನ್ಯವಾಗಿ ಈ ಚಿಕ್ಕ ಮಕ್ಕಳು ಟಿವಿಯಲ್ಲಿ ಬರುವ ಜಾಹೀರಾತಿನಲ್ಲಿ (Advertisement) ತೋರಿಸುವಂತಹ ತಿಂಡಿ ತಿನಿಸುಗಳನ್ನು ನೋಡಿ ತಾವು ಕುಳಿತಿರುವ ಸ್ಥಳದಿಂದ ಎದ್ದು ಟಿವಿಯ ಮುಂದೆ ಹೋಗಿ ನಿಂತುಕೊಂಡು ಸ್ವಲ್ಪವೂ ಕಣ್ಣು ಮಿಟುಕಿಸದೆ ಹಾಗೆಯೇ ಬಾಯಿಯಿಂದ ಬರುತ್ತಿರುವ ನೀರನ್ನು ಹಾಗೆಯೇ ಒಳಕ್ಕೆ ಎಳೆದುಕೊಳ್ಳುತ್ತಾ ನೋಡುವುದನ್ನು ನಾವೆಲ್ಲಾರೂ ನಮ್ಮ ನಮ್ಮ ಮನೆಗಳಲ್ಲಿಯೇ ನೋಡಿರುತ್ತೇವೆ. ಅದರಲ್ಲೂ ಈ ಆಹಾರ (Food) ತಯಾರಿಸುವ ಕಾರ್ಯಕ್ರಮಗಳು ಟಿವಿಯಲ್ಲಿ ಪ್ರಸಾರವಾಗುತ್ತಿದರಂತೂ ಟಿವಿಯನ್ನು ಬಿಟ್ಟು ನಾವು ಸ್ವಲ್ಪವೂ ಆಕಡೆ ಈಕಡೆ ಕದಲುವುದಿಲ್ಲ. ಎಷ್ಟೋ ಸಾರಿ ಈ ಅಡುಗೆ ಮಾಡುವ ಕಾರ್ಯಕ್ರಮಗಳನ್ನು ನೋಡಿ ಮಕ್ಕಳು (Children) ಮನೆಯಲ್ಲಿ ತಾಯಂದಿರಿಗೆ ‘ಅಮ್ಮಾ ಅಮ್ಮಾ ಇದನ್ನು ಮಾಡಿ ಕೊಡು.. ಪ್ಲೀಸ್’ ಅಂತ ಹಠ ಹಿಡಿದು ಆ ತಿಂಡಿಯನ್ನು ತನ್ನ ತಾಯಿಯ ಕೈಯಿಂದ ಮಾಡಿಸಿಕೊಂಡ ಮೇಲೆಯೇ ಅವರಿಗೆ ಸಮಾಧಾನ ಅಂತ ಹೇಳಬಹುದು.

ಬಗೆ ಬಗೆಯ ತಿಂಡಿ ತಿನಿಸುಗಳು ಮತ್ತು ಅವುಗಳನ್ನು ಟಿವಿಯಲ್ಲಿ ತೋರಿಸುವ ಬಗೆ ಯಾರಿಗೆ ತಾನೇ ಇಷ್ಟವಾಗದೆ ಇರಲು ಸಾಧ್ಯ ಹೇಳಿ? ಈ ಅಭ್ಯಾಸ ಬರೀ ಮನುಷ್ಯರಿಗೆ ಮಾತ್ರ ಸೀಮಿತವಾಗಿಲ್ಲ, ಏಕೆಂದರೆ ಮನೆಯಲ್ಲಿ ಸಾಕಿಕೊಂಡಿರುವಂತಹ ಎಷ್ಟೋ ಪ್ರಾಣಿಗಳು ಸಹ ಟಿವಿಯಲ್ಲಿ ತೋರಿಸುತ್ತಿರುವ ಆಹಾರ ಪದಾರ್ಥಗಳನ್ನು ತುಂಬಾನೇ ಕಣ್ಣು ಮಿಟುಕಿಸದಂತೆ ನೋಡುತ್ತವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಆಹಾರ ಎಂದರೆ ಯಾರಿಗೆ ತಾನೇ ಇಷ್ಟವಿರುವುದಿಲ್ಲ ಹೇಳಿ? ಅದರಲ್ಲೂ ಟಿವಿಯಲ್ಲಿ ನೋಡೋ ಆ ದೃಶ್ಯ ನಮ್ಮನ್ನು ತುಂಬಾನೇ ಆಕರ್ಷಿಸುತ್ತದೆ ಎಂದು ಹೇಳಿದರೆ ಸುಳ್ಳಲ್ಲ.

ನಾಯಿಯ ವಿಡಿಯೋ ವೈರಲ್
ಇಲ್ಲೊಂದು ಸಾಕುನಾಯಿ ನೋಡಿ, ಟಿವಿಯಲ್ಲಿ ಬರುತ್ತಿರುವ ಕೆಂಪು ಮಾಂಸದ ದೃಶ್ಯವನ್ನು ನೋಡಿ ಹೇಗೆಲ್ಲಾ ಆಡ್ತಿದೆ ಅಂತ. ಈ ನಾಯಿಗಳು ಎಷ್ಟೇ ಮುದ್ದಾಗಿದ್ದರೂ ಸಹ ಆಹಾರವನ್ನು ಕಣ್ಮುಂದೆ ನೋಡಿದ ತಕ್ಷಣ ಓಡಿ ಓಡಿ ಬರುತ್ತವೆ. ಇತ್ತೀಚಿನ ವೈರಲ್ ವಿಡಿಯೋ ಸಹ ಇದನ್ನೇ ತೋರಿಸಿದೆ ನೋಡಿ.

ಮಾಂಸ ನೋಡಿ ಪರದೆ ನೆಕ್ಕಿದ ನಾಯಿ
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ದಿನಾಂಕವಿಲ್ಲದ ವಿಡಿಯೋದಲ್ಲಿ, ನಾಯಿಯೊಂದು ಒಂದು ರೀತಿಯ ಮಾಂಸದ ತಯಾರಿಕೆಯನ್ನು ತೋರಿಸುವ ದೊಡ್ಡ ಟಿವಿ ಪರದೆಯನ್ನು ಉತ್ಸಾಹದಿಂದ ನೆಕ್ಕುವುದನ್ನು ನೋಡಬಹುದು.

ಇದನ್ನೂ ಓದಿ: Viral Video: ಕಾರಿನ ವಿಂಡೋ ಮೇಲೆ ಗಿಳಿಯ ಜಾಲಿ ರೈಡ್! ವಿಡಿಯೋ ವೈರಲ್

'ಶೇರ್ಯಿಂಗ್ ಟ್ರಾವೆಲ್' ಎಂಬ ಜನಪ್ರಿಯ ಖಾತೆಯಿಂದ ಈ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳಲಾಗಿದೆ, ಇದು ‘ಟ್ರಿಪ್ ಇನ್ ಚೀನಾ’ ಎಂಬ ಹ್ಯಾಂಡಲ್ ನಿಂದ ಹೊರಹೊಮ್ಮಿದ ವಿಡಿಯೋ ಆಗಿದ್ದು, ಈ ಖಾತೆಯು ಆಸಕ್ತಿದಾಯಕ ಮತ್ತು ಮನರಂಜನಾ ವಿಷಯವನ್ನು ಹಂಚಿಕೊಳ್ಳುತ್ತದೆ.

8.9 ಮಿಲಿಯನ್ ವೀಕ್ಷಣೆ ಪಡೆದ ವಿಡಿಯೋ
ವಿಡಿಯೋವನ್ನು ಹಂಚಿಕೊಳ್ಳುತ್ತಾ, "ನಾನು ಮೊದಲ ಬಾರಿಗೆ ಈ ಕಬಾಬ್ ಗಳನ್ನು ಹೇಗೆ ತಿಂದಿದ್ದೆ ಅಂತ ಇದು ನನಗೆ ನೆನಪಿಸುತ್ತದೆ" ಎಂದು ಶೀರ್ಷಿಕೆಯನ್ನು ಸಹ ಬರೆದಿದ್ದಾರೆ. ಈ ವಿಡಿಯೋವನ್ನು ಕೇವಲ ಒಂದೇ ದಿನದಲ್ಲಿ 7.5 ಮಿಲಿಯನ್ ಬಾರಿ ವೀಕ್ಷಿಸಲಾಗಿದೆ. ಇದುವರೆಗೆ ಈ 13 ಸೆಕೆಂಡಿನ ಅವಧಿಯ ವೀಡಿಯೋ ತುಣುಕು 8.9 ಮಿಲಿಯನ್ ವೀಕ್ಷಣೆಗಳನ್ನು ಪಡೆದಿದೆ.ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಮತ್ತೊಂದು ವಿಡಿಯೋ
ವೈರಲ್ ಆಗಿರುವ ನಾಯಿಗಳು ಮತ್ತು ಅವುಗಳ ಆಹಾರದ ಪ್ರತಿ ಇರುವ ಪ್ರೀತಿಗೆ ಸಂಬಂಧಿಸಿದ ಏಕೈಕ ವೀಡಿಯೋ ಅಂತೂ ಇದಲ್ಲ ಬಿಡಿ. ಕಳೆದ ವರ್ಷ, ಗೋಲ್ಡನ್ ರಿಟ್ರೀವರ್ ನಾಯಿಯೊಂದು ತನ್ನ ಹಿಂಗಾಲುಗಳ ಮೇಲೆ ನಿಂತು ಅಡುಗೆಮನೆಯ ಕೌಂಟರ್ ನಲ್ಲಿ ಇರಿಸಲಾದ ಆಹಾರದ ಕಂಟೇನರ್ ಗಳನ್ನು ಹಾಗೆಯೇ ನುಸುಳಿಕೊಂಡು ತಲುಪುವುದನ್ನು ತೋರಿಸುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ತುಂಬಾನೇ ವೈರಲ್ ಆಗಿತ್ತು.

ಇದನ್ನೂ ಓದಿ: Animal Pregnancy: ಪ್ರಾಣಿ-ಪಕ್ಷಿಗಳು ಗರ್ಭಾವಸ್ಥೆಯಲ್ಲಿ ಹೇಗಿರುತ್ತೆ ಗೊತ್ತೇ? ಇಲ್ನೋಡಿ ಫೊಟೋಸ್

ವಿಡಿಯೋದಲ್ಲಿ, ನಾಯಿ ಎರಡು ಕಂಟೇನರ್ ಗಳಲ್ಲಿ ಒಂದನ್ನು ಹಿಡಿದುಕೊಂಡಿತು ಆದರೆ ಅದರ ಮಾಲೀಕರ ಕೈಯಲ್ಲಿ ಸಿಕ್ಕಿಹಾಕಿಕೊಂಡಿತು. ಸಿಕ್ಕಿಬಿದ್ದ ನಂತರ, ನಾಯಿ ತನ್ನ ಮಾಲೀಕರಿಂದ ದೂರ ಸರಿದು ಕಂಟೈನರ್ ಅನ್ನು ಕೆಳಕ್ಕೆ ಬೀಳಿಸಿತು.

ಈ ವರ್ಷದ ಏಪ್ರಿಲ್ ನಲ್ಲಿ ನಾಯಿಯೊಂದು ವಿಮಾನದಲ್ಲಿ ತಿಂಡಿಗಳನ್ನು ಕೇಳುವ ವಿಡಿಯೋ ವೈರಲ್ ಆಗಿತ್ತು. ಅದರ ಉದ್ದೇಶವನ್ನು ಸ್ಪಷ್ಟಪಡಿಸಲು, ಮುದ್ದಾದ ನಾಯಿಯು ಆ ಆಸನಗಳನ್ನು ನೆಕ್ಕಿತು ಮತ್ತು ಅಲ್ಲೇ ಇರಿಸಲಾಗಿದ್ದ ತಿಂಡಿಗಳನ್ನು ನೋಡುತ್ತಿದ್ದಂತೆ ತನ್ನ ಬಾಯಿ ತೆರೆದು ಹಲ್ಲುಗಳನ್ನು ತೋರಿಸಿತ್ತು.
Published by:Ashwini Prabhu
First published: