Viral Video: ಕರಾಟೆಯಲ್ಲಿ ಈ ನಾಯಿಯೇ ಚಾಂಪಿಯನ್! ಡಾಗ್ನ ಒಂದೇ ಹೊಡೆತಕ್ಕೆ ಬೆಕ್ಕು ಎಸ್ಕೇಪ್!
ನಾಯಿಯೊಂದು ಕರಾಟೆ ಶೈಲಿಯಲ್ಲಿ ಬೆಕ್ಕಿಗೆ ಹೊಡೆದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ತಾಗಿ ವೈರಲ್ ಆಗುತ್ತಿದೆ. ಇದನ್ನು ನೋಡಿದ ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನೆಗಾಡಿದ್ದಾರೆ. ಈ ವೈರಲ್ ವೀಡಿಯೋ ಇಲ್ಲಿದೆ ನೋಡಿ
ಈ ಭೂಮಿ ಅನೇಕ ರೀತಿಯಾದ ಜೀವರಾಶಿಗಳಿಗೆ ನೆಲೆಯಾಗಿದೆ. ಮಾನವನಿಂದ ಹಿಡಿದು ಪ್ರಾಣಿ (Animals),ಪಕ್ಷಿ (Birds), ಮರ ಗಿಡಗಳು, ಸೂಕ್ಷ್ಮ ಜೀವಿಗಳು ಹೀಗೆ ಬೇರೆ ಬೇರೆ ರೀತಿಯಾದ ಜೀವಿಗಳಿಗೆ ಈ ಭೂಮಿ (Earth) ಆಸರೆಯ ನೆಲೆಯಾಗಿದೆ. ಕೆಲವೊಂದು ಜೀವಿಗಳು ಪರಸ್ಪರ ಅನ್ಯೋನ್ಯತೆಯನ್ನು ಹೊಂದಿರುತ್ತದೆ. ಸಾಮಾನ್ಯವಾಗಿ ಪರಸ್ಪರ ಒಡನಾಟವನ್ನು ಹೊಂದಿರುವ ಪ್ರಾಣಿಗಳು ಎನ್ನುವಾಗ ಮೊದಲು ನೆನಪಿಗೆ ಬರುವುದೇ ನಾಯಿ (Dog) ಮತ್ತು ಬೆಕ್ಕು (Cat). ಈ ಎರಡು ಪ್ರಾಣಿಗಳು ಮನುಷ್ಯರ ನಡುವೆಯೇ ಬೆಳೆಯುವುದರಿಂದ ಕೆಲವೊಮ್ಮೆ ಮನುಷ್ಯನಂತೆಯೇ ವರ್ತಿಸುತ್ತದೆ. ಇದಕ್ಕೆ ಉದಾಹರಣೆ ಎಂಬಂತೆ ನಾಯಿಯೊಂದು ಕರಾಟೆಯ (Karate) ಮಾದರಿಯಲ್ಲಿ ಬೆಕ್ಕನ್ನು ಹೊಡೆದ ವೀಡಿಯೋ ಸೋಶಿಯಲ್ ಮೀಡಯಾದಲ್ಲಿ ಸಖತ್ ವೈರಲ್ (Viral Video) ಆಗುತ್ತಿದೆ.
ಮನುಷ್ಯರೊಂದಿಗೆ ಸಹಬಾಳ್ವೆ ನಡೆಸುವ ಪ್ರಾಣಿಗಳಲ್ಲಿ ಪ್ರಮುಖವಾದ ಎರಡು ಪ್ರಾಣಿಗಳು ಅದು ನಾಯಿ ಮತ್ತು ಬೆಕ್ಕು. ಅಲ್ಲದೆ ಸಾಕು ಪ್ರಾಣಿಗಳು ಎನ್ನುವಾಗ ಮೊದಲು ಕಣ್ಣ ಮುಂದೆ ಬರುವುದೇ ನಾಯಿ ಮತ್ತು ಬೆಕ್ಕು. ಇವು ಮನುಷ್ಯರ ನಡುವೆಯೇ ಇರುವುದರಿಂದ ಅವರನ್ನು ಹೆಚ್ಚಿನ ವಿಷಯಗಳಲ್ಲಿ ಅನುಸರಿಸುತ್ತದೆ.
ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರು ವೀಡಿಯೋ ಒಂದರಲ್ಲಿ ನಾಯಿಯು ಕರಾಟೆ ಶೈಲಿಯಲ್ಲಿ ಬೆಕ್ಕನ್ನು ಹೊಡೆದಿದೆ. ಇದನ್ನು ಕಂಡ ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನೆಗಡಿದ್ದಾರೆ.
ಮುದ್ದಾಗಿ ಹೊಡೆದಾಡುತ್ತಿರುವ ನಾಯಿ ಮತ್ತು ಬೆಕ್ಕು
ನಾಯಿ ಮತ್ತು ಬೆಕ್ಕು ಪರಸ್ಪರ ತಮಾಷೆಯಾಗಿ ಹೊಡೆದಾಡಿಕೊಂಡು ಜಗಳವಾಡುತ್ತಿದೆ. ವೀಡಿಯೋದಲ್ಲಿ ಗಮನಿಸಿದಂತೆ ನಾಯಿಯನ್ನು ಸರಪಳಿಯಲ್ಲಿ ಕಟ್ಟಿ ಹಾಕಿದಂತೆ ಕಾಣುತ್ತದೆ. ಅಲ್ಲಿಗೆ ಬಂದ ಬೆಕ್ಕು ನಾಯಿಗೆ ಕೈಯಲ್ಲಿ ಹೊಡೆಯಲು ಆರಂಭಿಸುತ್ತದೆ. ಈ ಜಗಳ ಪರಸ್ಪರ ಆ ಎರಡು ಪ್ರಾಣಿಗಳು ಕಾಳೆಲೆದುಕೊಳ್ಳಲು ಮಾಡಿಕೊಂಡಂತಿದೆ.
ನಾಯಿಯನ್ನು ಕೆರಳಿಸಿದ ಬೆಕ್ಕು
ಆರಂಭದಲ್ಲಿ ಸ್ವಲ್ಪ ಮೆಲ್ಲನೆ ನಾಯಿಗೆ ಹೊಡೆಯುತ್ತಿದ್ದ ಬೆಕ್ಕು ನಂತರದಲ್ಲಿ ನಾಯಿಯನ್ನು ಕೆರಳಿಸಲು ಆರಂಭಿಸುತ್ತದೆ. ಆದರೆ ನಾಯಿಯು ಬೆಕ್ಕಿನ ಎದುರು ಸೋಲದೆ ತನ್ನ ಕರಾಟೆ ಶೈಲಿಯನ್ನು ಪ್ರದರ್ಶಿಸಿದೆ.
ಕರಾಟೆ ಮಾದರಿಯಲ್ಲಿ ಕಿಕ್ ಕೊಟ್ಟ ನಾಯಿ
ನಾಯಿಯನ್ನು ಬೆಕ್ಕು ಪದೇ ಪದೇ ಕೆರಳಿಸುವುತ್ತಿದ್ದಂತೆ ನಾಯಿಯು ಉತ್ಸುಕವಾಯಿತು. ಅಲ್ಲದೆ ಇದು ಕರಾಟೆಯ ಮಾದರಿಯಲ್ಲಿ 360 ಡಿಗ್ರಿ ಶಾಟ್ ನಲ್ಲಿ ಬೆಕ್ಕಿಗೆ ಕಿಕ್ ಮಾಡಿದೆ. ನಾಯಿಯ ಈ ಒಂದೇ ಶಾಟ್ ಗೆ ಬೆಕ್ಕು ಹಿಂಗಾಲುಗಳಿಂದ ಹಾರಿ ಕಣ್ಮೆರೆಯಾಯಿತು.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವೀಡಿಯೋ
ಈ ಮುದ್ದಾದ ವಿಡಿಯೋವನ್ನು ಟ್ವಿಟರ್ ನ್ನಲ್ಲಿ ದಿ ಫಿಜೆನ್ (The Figen) ಎಂಬ ಬಳಕೆದಾರರು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೋ ಸಖತ್ ಆಗಿ ವೈರಲ್ ಆಗುತ್ತಿದೆ. ಇದು 6.4 ಮಿಲಿಯನ್ಗಳಷ್ಟು ವೀಕ್ಷಣೆ ಪಡೆದಿದೆ. 14 ಸಾವಿರಕ್ಕಿಂತಲೂ ಅಧಿಕ ಮಂದಿ ಈ ವೀಡಿಯೋವನ್ನು ರೀಟ್ವೀಟ್ ಮಾಡಿದ್ದಾರೆ. 92.2K ಮಂದಿ ಈ ವೀಡಿಯೋಗೆ ಲೈಕ್ ಮಾಡಿದ್ದಾರೆ.
ಈ ವೀಡಿಯೋಗೆ ನಾಯಿಗೂ ಕರಾಟೆ ಗೊತ್ತಿದೆ (Dog Knows Karate) ಎಂದು ಶೀರ್ಷಿಕೆಯನ್ನು ನೀಡಿದ್ದಾರೆ. ಈ ವೀಡಿಯೋವನ್ನು ನೋಡಿದ ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನೆಗಡಿಕೊಂಡಿದ್ದಾರೆ. ಅಲ್ಲದೆ ಈ ದೃಶ್ಯದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ಹಂಚಿಕೊಂಡಿದ್ದಾರೆ. ಕೆಲವರು ಇದು ಕರಾಟೆಯಲ್ಲ ಎಂದು ಬರೆದರೆ ಇನ್ನೂ ಕೆಲವರು ನಾಯಿ ಮತ್ತು ಬೆಕ್ಕಿನ ಬಗ್ಗೆ ತಮಗಿರುವ ಅಭಿಪ್ರಾಯಗಳನ್ನು ಬರೆದುಕೊಂಡಿದ್ದಾರೆ.
Published by:Nalini Suvarna
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ