ಸಾವನ್ನಪ್ಪಿದ ಮಾಲೀಕ ಮತ್ತೆ ಬರುತ್ತಾನೆಂದು ಕಾದು ಕುಳಿತ ಶ್ವಾನ, 3 ವಾರ ಕಳೆದರು ಆಹಾರ, ನೀರು ಸೇವಿಸಿಲ್ಲ!

ಮೆಕ್ಸಿಕೋದಲ್ಲಿ ಈ ಘಟನೆ ನಡೆದಿದ್ದು, ಕುಚಾಪ್ಲೆಟೊ ಹೆಸರಿನ ನಾಯಿಯೊಂದು ತನ್ನ ಮಾಲೀಕನಿಗೆ ಕಾಯುತ್ತಲೇ ಕುಂತಿದೆ. ಆದರೆ ಶ್ವಾನದ ಮಾಲೀಕ ಸಾವನ್ನಪ್ಪಿದ್ದು, ಈ ಘಟನೆ ತಿಳಿಯದೆ ಇರುವ ಶ್ವಾನ ತನ್ನ ಮಾಲೀಕ ಇನ್ನೂ ಬಂದಿಲ್ಲವೆಂದು ಅನ್ನ ನೀರನ್ನು ಮುಟ್ಟಿಲ್ಲವಂತೆ. ಹೀಗಾಗಿ ಮೂರು ವಾರಗಳು ಕಳೆದರು ಕುಚಾಪ್ಲೆಟೊ ಶ್ವಾನ ಆಹಾರ ಸೇವಿಸದೆ ಸಪ್ಪೆಯಾಗಿ ಕುಳಿತಿದೆ.

Dog

Dog

 • Share this:
  ಶ್ವಾನ ನಿಯತ್ತಿನ ಪ್ರಾಣಿ. ಮನೆಯ ಯಜಮಾನ ಎಷ್ಟು ಪ್ರೀತಿ ತೋರಿಸುತ್ತಾನೋ ಅದರ ಎರಡರಷ್ಟು ಪ್ರೀತಿ ತೋರಿಸುತ್ತವೆ ಶ್ವಾನಗಳು. ಅಷ್ಟೇ ಏಕೆ ಊಟ ಹಾಕಿದ ಯಜಮಾನನಿಗೆ ಸದಾ ಬೆಂಗಾವಲಾಗಿ ಇರುತ್ತವೆ. ಶ್ವಾನ ಹಾಗೂ ಯಜಮಾನನ ಸಂಬಂಧ ಕುರಿತಾದ ಅನೇಕ ಘಟನೆಗಳು ವರದಿಯಾಗುತ್ತಿರುತ್ತವೆ. ಅದರಂತೆ ಮೆಕ್ಸಿಕೋದಲ್ಲಿ ನಡೆದ ಘಟನೆಯೊಂದು ಶ್ವಾನ ಪ್ರಿಯರಲ್ಲಿ ಕಣ್ಣೀರು ತರಿಸುವಂತಿದೆ. ಕಾರಣ ಸಾವನ್ನಪ್ಪಿದ ಯಜಮಾನ ಮತ್ತೆ ಹಿಂತಿರುಗಿ ಬರುತ್ತೇನೆಂದು ಆಹಾರ, ನೀರು ಬಿಟ್ಟು ಕಾಯುತ್ತಿರುವ ಈ ಘಟನೆ ಎಲ್ಲರಿಗೂ ಬೇಸರ ತರಿಸಿದೆ.

  ಮೆಕ್ಸಿಕೋದಲ್ಲಿ ಈ ಘಟನೆ ನಡೆದಿದ್ದು, ಕುಚಾಪ್ಲೆಟೊ ಹೆಸರಿನ ನಾಯಿಯೊಂದು ತನ್ನ ಮಾಲೀಕನಿಗೆ ಕಾಯುತ್ತಲೇ ಕುಂತಿದೆ. ಆದರೆ ಶ್ವಾನದ ಮಾಲೀಕ ಸಾವನ್ನಪ್ಪಿದ್ದು, ಈ ಘಟನೆ ತಿಳಿಯದೆ ಇರುವ ಶ್ವಾನ ತನ್ನ ಮಾಲೀಕ ಇನ್ನೂ ಬಂದಿಲ್ಲವೆಂದು ಅನ್ನ ನೀರನ್ನು ಮುಟ್ಟಿಲ್ಲವಂತೆ. ಹೀಗಾಗಿ ಮೂರು ವಾರಗಳು ಕಳೆದರು ಕುಚಾಪ್ಲೆಟೊ ಶ್ವಾನ ಆಹಾರ ಸೇವಿಸದೆ ಸಪ್ಪೆಯಾಗಿ ಕುಳಿತಿದೆ.

  ಶ್ವಾನದ ಮಾಲೀಕ ಗೊನ್ಜಾಲ್​​ ಕ್ರೂಜ್​ ಎಂಬವರು ಗಣಿ ಸ್ಫೋಟದಲ್ಲಿ ಮೃತಪಟ್ಟಿದ್ದಾರೆ. ಆದರೆ ಕುಚಾಪ್ಲೆಟೊ ಮಾತ್ರ ಮಾಲೀಕ ಮತ್ತೆ ಬರುತ್ತಾನೆಂದು ಕಾಯುತ್ತಾ ಕುಳಿತಿದೆ. ಮೂರು ವಾರಗಳಿಂದ ಕಲ್ಲಿದ್ದಲು ಗಣಿ ಹೊರಗೆ ಕಾಯುತ್ತಿದ್ದೆ. 53 ವರ್ಷದ ಗೊನ್ಜಾಲ್​​ ಕ್ರೂಜ್  ಶ್ವಾನದ ಜತೆಗೆ ಗಣಿ ಕೆಲಸಕ್ಕೆ ಹೋಗುತ್ತಿದ್ದರು.

  ಗೊನ್ಜಾಲ್​​ ಕ್ರೂಜ್ ಪತ್ನಿ ಈ ಬಗ್ಗೆ ಮಾತನಾಡಿದ್ದು, ಇಬ್ಬರು ಬೆಳಿಗ್ಗೆ 5 ಗಂಟೆಗೆ ಮನೆ ಬಿಟ್ಟು ಹೋಗುತ್ತಿದ್ದರು. ಕುಚಾಪ್ಲೆಟೊ ಗಣಿ ಹೊರಗೆ ಮಾಲೀಕರಿಗಾಗಿ ಕಾಯುತ್ತಿತ್ತು.  ಇಬ್ಬರು ಕೆಲಸ ಮುಗಿದ ನಂತರ ರಾತ್ರಿ ಮನೆಗೆ ಬರುತ್ತಿದ್ದರು. ಆದರೆ ಜೂನ್​ 6ರಂದು ಗಣಿ ಸ್ಫೋಟದಲ್ಲಿ ಗೊನ್ಜಾಲ್​​ ಕ್ರೂಜ್ ಸಾವನ್ನಪ್ಪುತ್ತಾರೆ. ಆದರರೆ ಶ್ವಾನ ಮಾತ್ರ ಗಣಿ ಹತ್ತಿರ ಬಂದು ಕಾಯುತ್ತಿದೆ ಎಂದು ಹೇಳಿದ್ದಾರೆ.
  Published by:Harshith AS
  First published: