Instagram Video: ಮಕ್ಕಳಿಗೆ ಮಾತ್ರ ಅಲ್ಲ, ಈ ನಾಯಿಗೂ ಔಷಧಿ ಅಂದ್ರೆ ಇಷ್ಟವಿಲ್ಲವಂತೆ!

ಔಷಧಿ ಕಂಡರೆ ಮಕ್ಕಳು ಹೇಗೆ ದೂರ ಓಡುತ್ತಾರೋ, ಹಾಗೆಯೇ ನಾಯಿಗಳು ಕೂಡ ದೂರ ಓಡುತ್ತವೆ. ಇದೀಗ ಅಂತದ್ದೇ, ಔಷಧಿಯನ್ನು ಕಂಡರೆ ಮೂಗು ಮುರಿಯುವ ಗೋಲ್ಡನ್ ರಿಟ್ರೀವರ್ ನಾಯಿಯ ವಿಡಿಯೋ ಒಂದು ನೆಟ್ಟಿಗರ ಮನಸ್ಸನ್ನು ಗೆಲ್ಲುತ್ತಿದೆ.

ಮಾತ್ರೆ ಕಂಡು ಹೆದರಿ ಅಡಗಿಕೊಳ್ಳುವ ನಾಯಿ

ಮಾತ್ರೆ ಕಂಡು ಹೆದರಿ ಅಡಗಿಕೊಳ್ಳುವ ನಾಯಿ

  • Share this:
ಯಾವುದೇ ತಳಿಯ ನಾಯಿಗಳಿರಲಿ, ಅವುಗಳ ಒಡನಾಟ (Companionship) ಸದಾ ಖುಷಿಯನ್ನೇ ನೀಡುತ್ತವೆ. ಪ್ರಾಣಿ ಪ್ರೇಮಿಗಳಿಗಂತೂ (Animal Lover) ದಿನವಿಡೀ ನಾಯಿಗಳನ್ನು ಮುದ್ದು ಮಾಡಿದರೂ ತೃಪ್ತಿ ಸಿಗಲಾರದೇನೋ. ನಾಯಿಗಳು ತೋರುವ ಆತ್ಮೀಯತೆ, ನಿಷ್ಕಲ್ಮಶ ಪ್ರೀತಿ (pure love) ಮತ್ತು ಅವುಗಳ ಮುದ್ದು ಮುಖ ಎಂತವರನ್ನು ಕೂಡ ಮೋಡಿ ಮಾಡ ಬಲ್ಲದು. ಸಾಕು ನಾಯಿಗಳಂತೂ (Dog) ಯಾವಾಗಲೂ ಪುಟ್ಟ ಮಕ್ಕಳಂತೆ ತಮ್ಮ ಒಡೆಯನ ಮನಸ್ಸಿಗೆ ಖುಷಿ ಮತ್ತು ಮನರಂಜನೆ ನೀಡುತ್ತಲೇ ಇರುತ್ತವೆ. ಸಾಮಾಜಿಕ ಮಾಧ್ಯಮದಲ್ಲಿ (Social Media), ಪುಟ್ಟ ಮಕ್ಕಳಂತೆ ತುಂಟಾಟ ಮಾಡುವ, ಹುಸಿ ಕೋಪ ತೋರುವ, ರಚ್ಚೆ ಹಿಡಿಯುವ ನಾಯಿಗಳ ವಿಡಿಯೋಗಳು (Video) ಸಾಕಷ್ಟು ಸಂಖ್ಯೆಯಲ್ಲಿವೆ. ಅದರಲ್ಲೂ, ಔಷಧಿಯನ್ನು ಕಂಡರಂತೂ, ಮಕ್ಕಳಂತೆ ನಾಯಿಗಳಿಗೂ ಎಲ್ಲಿಲ್ಲದ ಅಸಮಾಧಾನ.

ಔಷಧಿ ಕಂಡರೆ ಮಕ್ಕಳು ಹೇಗೆ ದೂರ ಓಡುತ್ತಾರೋ, ಹಾಗೆಯೇ ನಾಯಿಗಳು ಕೂಡ ದೂರ ಓಡುತ್ತವೆ. ಇದೀಗ ಅಂತದ್ದೇ, ಔಷಧಿಯನ್ನು ಕಂಡರೆ ಮೂಗು ಮುರಿಯುವ ಗೋಲ್ಡನ್ ರಿಟ್ರೀವರ್ ನಾಯಿಯ ವಿಡಿಯೋ ಒಂದು ನೆಟ್ಟಿಗರ ಮನಸ್ಸನ್ನು ಗೆಲ್ಲುತ್ತಿದೆ.

ಮಾತ್ರೆ ಕಂಡು ಹೆದರಿ ಅಡಗಿಕೊಳ್ಳುವ ನಾಯಿ
ಆ ಗೋಲ್ಟನ್ ರಿಟ್ರೀವರ್, ಒಡೆಯನ ಕೈಯಲ್ಲಿ ಮಾತ್ರೆಗಳನ್ನು ಕಂಡಾಗ, ಹೆದರಿಕೊಂಡು ಅಡಗಿಕೊಳ್ಳುವ ದೃಶ್ಯವುಳ್ಳ ವಿಡಿಯೋ ಅದು. ಮೂರು ದಿನಗಳ ಹಿಂದೆ, ಗೋಲ್ಡನ್‍ಡೇಸ್‍ಆಫ್‍ಜೋಯ್ ಎಂಬ ಹೆಸರಿನ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಇದುವರೆಗೆ ಈ ವಿಡಿಯೋ, 2.90 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಕಂಡಿದೆ.

ವಿಡಿಯೋದಲ್ಲಿ ಏನಿದೆ
ಈ ವಿಡಿಯೋದಲ್ಲಿ ಕಂಡು ಬರುವ ಗೋಲ್ಡನ್ ರಿಟ್ರೀವರ್ ನಾಯಿಯ ಹೆಸರು ಜೋಯ್. ಅದು ತನ್ನ ಒಡೆಯನ ಕೈಯಲ್ಲಿ, ಒಂದಲ್ಲ ಎರಡಲ್ಲ ಮೂರು ಔಷಧಿ ಮಾತ್ರೆಗಳನ್ನು ನೋಡಿದ್ದೇ ತಡ, ಅಲ್ಲೇ ಇದ್ದ ಟೇಬಲ್ ಅಡಿಯಲ್ಲಿ ಬಚ್ಚಿಟ್ಟುಕೊಂಡು, “ನಾ ಔಷಧಿಯನ್ನು ಒಲ್ಲೆ” ಎಂಬಂತೆ ಮುಖ ಮಾಡುತ್ತದೆ. ಔಷಧಿಯನ್ನು ತೆಗೆದುಕೊಳ್ಳಲೂ ಸ್ವಲ್ಪವೂ ಮನಸ್ಸಿಲ್ಲದ ಅದು, ಎಷ್ಟು ಕರೆದರೂ ಬಚ್ಚಿಟ್ಟುಕೊಂಡ ಜಾಗದಿಂದ ಹೊರಗೆ ಬರಲು ಧೈರ್ಯ ಮಾಡುವುದೇ ಇಲ್ಲ.

ಇದನ್ನೂ ಓದಿ:   Puppy Love Story: ಪ್ರೀತಿ ಇದ್ದ ಕಡೆ ಕೋಪ ಇರೋದು ನಿಜಾ ಅನ್ಸುತ್ತೆ! ಈ ಹುಡುಗಿ ಮತ್ತು ಪುಟ್ಟ ನಾಯಿಮರಿ ವಿಡಿಯೋ ನೋಡಿದ್ರೆ ನಿಮಗೇ ತಿಳಿಯುತ್ತೆ

“ನಾನು ಔಷಧಿಯಿಂದ ಬಚ್ಚಿಟ್ಟುಕೊಳ್ಳುತ್ತೇನೆ” ಎಂಬ ಅಡಿ ಬರಹವನ್ನು ಈ ವಿಡಿಯೋಗೆ ನೀಡಲಾಗಿದೆ. ಈ ವಿಡಿಯೋವನ್ನು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದಾಗಿನಿಂದ 19,000 ಕ್ಕೂ ಹೆಚ್ಚು ಮೆಚ್ಚುಗೆಗಳನ್ನು ಗಳಿಸಿದೆ. ಅಷ್ಟೇ ಅಲ್ಲ, ಈ ವಿಡಿಯೋಗೆ ಸಾಕಷ್ಟು ಪ್ರತಿಕ್ರಿಯೆಗಳು ಕೂಡ ಬಂದಿವೆ. ಕೆಲವು ಬಳಕೆದಾರರು ನಾಯಿಯ ಮುದ್ದಾದ ವರ್ತನೆಯನ್ನು ಕಂಡು, ಮೆಚ್ಚುಗೆಯ ಪ್ರತಿಕ್ರಿಯೆಗಳನ್ನು ನೀಡಿದ್ದರೆ, ಇನ್ನು ಕೆಲವರು ನಾಯಿಗೆ ಯಾವ ರೀತಿ ಔಷಧಿ ತಿನ್ನಿಸಬಹುದು ಎಂಬ ಸಲಹೆಗಳನ್ನು ನೀಡಿದ್ದಾರೆ.

ನಾಯಿಗೆ ಔಷಧಿ ತಿನ್ನಿಸುವ ಸಲಹೆಗಳು
“ಯಾವುದೇ ನಾಯಿ ಈ ರೀತಿ ಮಾತ್ರೆಗಳನ್ನು ತಿನ್ನುವುದಿಲ್ಲ. ನನ್ನ ನಾಯಿಗಳು ಅದನ್ನು ಅವುಗಳ ಊಟದಲ್ಲಿ ಕೂಡ ಕಂಡು ಹಿಡಿಯುತ್ತವೆ (ಅವುಗಳಿಗೆ ಸಾಮರ್ಥ್ಯ ಇದೆ). ಅದನ್ನು ಹುಡುಕಿ ತೆಗೆಯುತ್ತವೆ ಮತ್ತು ತಿನ್ನಲು ನಿರಾಕರಿಸುತ್ತವೆ. ಅದನ್ನು ಚೀಸ್‍ನಲ್ಲಿ ಅಡಗಿಸಿ ಇಟ್ಟರೆ, ಅವು ಕೇವಲ ಚೀಸನ್ನು ಮಾತ್ರ ತಿನ್ನುತ್ತವೆ. ಅವು ಅತೀ ಚಾಣಕ್ಯರಾಗಿರುತ್ತವೆ” ಎಂದು ಇನ್‍ಸ್ಟಾಗ್ರಾಂ ಬಳಕೆದಾರರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.




ಇನ್ನೊಬ್ಬ ಬಳಕೆದಾರರು, “ನಾವು ಪಾವ್‍ಲೀಸ್ ಅನ್ನು ಕರೆಯಬೇಕು” ಎಂದು ಬರೆದಿದ್ದು, ಜೊತೆಗೆ ಸಾಕಷ್ಟು ನಗೆಯ ಇಮೋಜಿಗಳನ್ನು ಹಾಕಿದ್ದಾರೆ. ಮತ್ತೊಬ್ಬರು, “ಪೀನಟ್ ಬಟರ್ ಜೊತೆ ಪ್ರಯತ್ನಿಸಿ” ಎಂಬ ಸಲಹೆ ನೀಡಿದ್ದಾರೆ. “ನಾನು ಅದನ್ನು ಚೀಸ್‍ನಲ್ಲಿ ಅಡಗಿಸಿಡುತ್ತಿದ್ದೆ” ಎಂದು ಇನ್ನೊಬ್ಬರು ನೆಟ್ಟಿಗ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:  Viral Video: ಈ ನಾಯಿಗಿರೋ ನಿಯತ್ತು ಮನುಷ್ಯರಿಗೂ ಇಲ್ಲ ನೋಡಿ! ಎಷ್ಟು ಚೆಂದ ಅಲ್ವಾ ಶ್ವಾನಗಳ ಪ್ರೀತಿ?

“ಸಹೋದರ, ಅದನ್ನು ಪುಡಿ ಮಾಡು ಮತ್ತು ಆಹಾರದಲ್ಲಿ ಮಿಕ್ಸ್ ಮಾಡು” ಎಂದು ಮತ್ತೊಬ್ಬ ಬಳಕೆದಾರರು ಸಲಹೆ ನೀಡಿದ್ದಾರೆ. ಇನ್ನೊಬ್ಬರು, “ಮುದ್ದಾಗಿದೆ” ಎಂದು ಹೊಗಳಿದ್ದಾರೆ. ಈ ಗೋಲ್ಡನ್ ರಿಟ್ರೀವರ್‍ನ ಇನ್‍ಸ್ಟಾಗ್ರಾಂ ಖಾತೆಯು 22,000 ಕ್ಕೂ ಹೆಚ್ಚು ಹಿಂಬಾಲಕರನ್ನು ಹೊಂದಿದೆ. ಅದರ ಕೆಲವು ವಿಡಿಯೋಗಳಂತೂ ಸಿಕ್ಕಾಪಟ್ಟೆ ವೈರಲ್ ಆಗಿವೆ.
Published by:Ashwini Prabhu
First published: