ಈ ಸಾಕು ನಾಯಿಗಳು (Dog) ಮನುಷ್ಯನ ಅತ್ತ್ಯುತ್ತಮ ಒಡನಾಡಿ ಅಥವಾ ಸ್ನೇಹಿತ ಅಂತ ಹೇಳಿದರೆ ತಪ್ಪಾಗುವುದಿಲ್ಲ ನೋಡಿ. ಮೊನ್ನೆ ತಾನೇ ಒಂದು ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸ್ವಲ್ಪ ಜೋರಾಗಿಯೇ ಹರಿದಾಡುತ್ತಿತ್ತು. ಅದರಲ್ಲಿ ಸಾಕು ನಾಯಿಯೊಂದು ತನ್ನ ಒಡೆಯನು ಆಸ್ಪತ್ರೆಯಲ್ಲಿ (Hospital) ಹೃದಯ ಸಂಬಂಧಿ ಕಾಯಿಲೆಯಿಂದ ಚಿಕಿತ್ಸೆಯನ್ನು ಪಡೆಯುತ್ತಿರುವಾಗ, ಅವರ ಪಕ್ಕದಲ್ಲಿಯೇ ಇಡೀ ದಿನ ಕುಳಿತು ಅವರನ್ನು ನೋಡಿಕೊಂಡಿದ್ದನ್ನು ನಾವು ನೋಡಿದ್ದೆವು. ಈ ನಾಯಿ ಸದಾ ಪಕ್ಕದಲ್ಲಿ ಇರುವುದರಿಂದಲೇ ಚಿಕಿತ್ಸೆ ಪಡೆದ ನಂತರ ಬೇಗನೆ ಗುಣಮುಖವಾಗಲು ತುಂಬಾನೇ ಸಹಾಯವಾಯಿತು ಅಂತ ಆ ಒಡೆಯ ಅದೇ ವೀಡಿಯೋ ಪೋಸ್ಟ್ ನಲ್ಲಿ (Post) ಹೇಳಿಕೊಂಡಿದ್ದರು.
ಅದಕ್ಕೆ ನೋಡಿ ಹೇಳೋದು. ಮನುಷ್ಯನಿಗೆ ತುಂಬಾನೇ ಹತ್ತಿರದ ಒಡನಾಡಿ ಎಂದರೆ ಅದು ಸಾಕು ನಾಯಿ ಅಂತ. ಮನೆಯಲ್ಲಿರುವ ಮಕ್ಕಳು ತಮ್ಮ ತಂದೆ ತಾಯಿಗೆ ಮನೆಯಲ್ಲಿರುವ ಕೆಲಸಗಳನ್ನು ಮಾಡಲು ಎಷ್ಟರ ಮಟ್ಟಿಗೆ ಸಹಾಯ ಮಾಡುತ್ತಾರೋ ಗೊತ್ತಿಲ್ಲ, ಆದರೆ ಈ ಸಾಕು ನಾಯಿಗಳು ಮಾತ್ರ ಹೇಳುವ ಮುಂಚೆಯೇ ತಮ್ಮ ಒಡೆಯನಿಗೆ ಅಥವಾ ಮನೆಯ ಒಡತಿಗೆ ತನ್ನ ಕೆಲಸದಲ್ಲಿ ಸಹಾಯ ಮಾಡಲು ಹಾತೊರೆಯುತ್ತಿರುತ್ತವೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.
ಮನುಷ್ಯ ಮತ್ತು ಸಾಕು ನಾಯಿಯ ಜೋಡಿ ಸೂಪರ್
ಮನೆಯವರು ಮಾಡುವ ಕೆಲಸವನ್ನು ಒಂದು ದಿನ ನೋಡಿಕೊಂಡರೆ ಸಾಕು, ಸಾಕು ನಾಯಿಗಳು ಮರುದಿನದಿಂದ ಆ ಕೆಲಸದಲ್ಲಿ ಮನೆಯ ಒಡೆಯನಿಗೆ ಅಥವಾ ಒಡತಿಗೆ ಸಹಾಯ ಮಾಡಲು ಮುಂದಾಗುತ್ತವೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.
ಮನೆಯವರು ಸಹ ಈ ಸಾಕು ನಾಯಿಗಳನ್ನು ಮನೆಯ ಒಬ್ಬ ಸದಸ್ಯನಂತೆಯೇ ನೋಡಿಕೊಳ್ಳುತ್ತಾರೆ. ಒಟ್ಟಿನಲ್ಲಿ ಹೇಳುವುದಾದರೆ ಮನುಷ್ಯ ಮತ್ತು ಸಾಕು ನಾಯಿಯ ಈ ಜೋಡಿ ಮಾತ್ರ ಸೂಪರ್ ಅಂತ ಹೇಳಬಹುದು.
ಇಲ್ಲೊಂದು ವೀಡಿಯೋ ಇದೆ ನೋಡಿ, ಅದರಲ್ಲಿ ಸಾಕು ನಾಯಿಯೊಂದು ಮನೆಯ ಒಡತಿಗೆ ಮನೆಯ ಲಾಂಡ್ರಿ ಕೆಲಸದಲ್ಲಿ ಹೇಗೆ ಸಹಾಯ ಮಾಡುತ್ತಿದೆ ಎಂಬುದನ್ನು ನಾವು ನೋಡಬಹುದು.
ಏನೆಲ್ಲಾ ಕೆಲಸಗಳನ್ನು ಮಾಡುತ್ತದೆ ಈ ಸಾಕು ನಾಯಿ ನೋಡಿ..
ಈ 16 ಸೆಕೆಂಡಿನ ವೀಡಿಯೋದಲ್ಲಿ ಮನೆಯ ಒಡತಿ ಬಟ್ಟೆ ಒಗೆಯುವುದು ಮತ್ತು ಒಗೆದ ಬಟ್ಟೆಗಳನ್ನು ವಾಷಿಂಗ್ ಮಶೀನ್ ನಿಂದ ತೆಗೆದು ಹೊರಗೆ ಹಾಕುವುದನ್ನು ಮತ್ತು ಸಾಕು ನಾಯಿ ಸಹ ಆಕೆಯ ಜೊತೆಗೆ ಆ ಕೆಲಸದಲ್ಲಿ ಸಹಾಯ ಮಾಡುವುದನ್ನು ನಾವು ನೋಡಬಹುದು.
awesome! pic.twitter.com/OY5Po3kSWL
— ViralPosts (@ViralPosts5) February 7, 2023
ಇದನ್ನೂ ಓದಿ: AI ರೋಬೋಟ್‌ಗಳು ನಿಜವಾಗಿಯೂ 29 ವಿಜ್ಞಾನಿಗಳನ್ನು ಕೊಂದಿದ್ಯಾ? ವೈರಲ್ ಆದ ಸುದ್ಧಿಯಲ್ಲಿ ಸತ್ಯಾಂಶ ಹೊರಬಿದ್ದಿದೆ
ಈ ವೀಡಿಯೋವನ್ನು ವೈರಲ್ ಪೋಸ್ಟ್ 5 ಎಂಬ ಹೆಸರಿನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಕ್ಲಿಪ್ ನಲ್ಲಿ ನಾವು ಸಾಕು ನಾಯಿ ಮತ್ತು ಅದರ ಒಡತಿ ಒಟ್ಟಿಗೆ ಕೆಲಸ ಮಾಡುತ್ತಿರುವುದನ್ನು ನಾವು ನೋಡಬಹುದು. ಮೊದಲ ಕ್ಲಿಪ್ ನಲ್ಲಿ, ನಾಯಿ ಡ್ರೈಯರ್ ನಿಂದ ತೊಳೆದ ಬಟ್ಟೆಗಳನ್ನು ತೆಗೆದು ಬುಟ್ಟಿಯಲ್ಲಿ ಇಡುವುದನ್ನು ನಾವು ನೋಡಬಹುದು.
ನಂತರ, ಅದು ಬುಟ್ಟಿಯನ್ನು ಎಳೆದುಕೊಂಡು ಲಿವಿಂಗ್ ರೂಮ್ ಗೆ ತರುತ್ತದೆ. ನಂತರ ಒಡತಿ ಆ ಬಟ್ಟೆಗಳನ್ನು ಹ್ಯಾಂಗರ್ ಗೆ ನೇತು ಹಾಕುತ್ತಾರೆ ಮತ್ತು ಆ ಹ್ಯಾಂಗರ್ ಗಳನ್ನೆಲ್ಲವನ್ನೂ ಕಬೋರ್ಡ್ ನಲ್ಲಿ ಇಡುತ್ತಾಳೆ. ನಂತರ, ನಾಯಿ ಅದನ್ನು ಮೆಲ್ಲಗೆ ಮುಚ್ಚುತ್ತದೆ.
ನಂತರ, ಅದು ಎಲ್ಲಾ ಕೆಲಸಗಳನ್ನು ಮಾಡಿದ ನಂತರ ತನ್ನ ಬೆನ್ನಿನ ಮೇಲೆ ಭೇಷ್ ಅಂತ ತಟ್ಟುವಂತೆ ತನ್ನ ಒಡತಿಯ ಬಳಿಗೆ ಹೋಗುತ್ತದೆ. ಆಕೆ ಕೂಡ ನಾಯಿಯ ಬೆನ್ನನ್ನು ಕೈಯಿಂದ ನಯವಾಗಿ ಸವರುತ್ತಾಳೆ ಮತ್ತು ಅದರ ಸಹಾಯಕ್ಕಾಗಿ ಧನ್ಯವಾದಗಳನ್ನು ಸಹ ಹೇಳುತ್ತಾಳೆ.
ಈ ವಿಡಿಯೋವನ್ನು ಆನ್ಲೈನ್ ನಲ್ಲಿ ಹಂಚಿಕೊಂಡ ನಂತರ, 21.5 ಸಾವಿರ ವೀಕ್ಷಣೆಗಳನ್ನು ಗಳಿಸಿದೆ. ಸೋಷಿಯಲ್ ಮೀಡಿಯಾ ಬಳಕೆದಾರರು ವಿಡಿಯೋವನ್ನು ತುಂಬಾನೇ ಮೆಚ್ಚಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ