ಸಾಮಾಜಿಕ ಜಾಲತಾಣಗಳಲ್ಲಿ (Social Media) ಪ್ರಾಣಿಗಳ ಹಲವು ವಿಡಿಯೋಗಳು ವೈರಲ್ ಆಗ್ತಾನೇ ಇರುತ್ತವೆ. ಕೆಲವು ವಿಡಿಯೋಗಳಲ್ಲಿ, ಪ್ರಾಣಿಗಳು ತಮ್ಮ ಕೌಶಲ್ಯವನ್ನು ತೋರಿಸುವುದನ್ನು ಸಹ ಕಾಣಬಹುದು. ಪ್ರಾಣಿ ನೇಕಾರರು ಯಾವಾಗಲೂ ತಮ್ಮ ಕೌಶಲ್ಯಗಳನ್ನು ಶ್ಲಾಘಿಸುವುದನ್ನು ಕಾಣಬಹುದು. ಪ್ರಾಣಿಗಳವಿಡಿಯೋಗಳಿಂದ ಜನರು ಅನೇಕ ಬಾರಿ ಆಶ್ಚರ್ಯಚಕಿತರಾಗುತ್ತಾರೆ. ಇತ್ತೀಚಿನ ದಿನಗಳಲ್ಲಿ ಪ್ರಾಣಿಗಳು ಕೂಡ ಮನುಷ್ಯರಂತೆ ವ್ಯಾಯಾಮ ಮಾಡುವುದನ್ನು ಕಾಣಬಹುದು. ಸದ್ಯ ಇಂತಹದ್ದೇ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral) ಆಗಿದೆ. ಈ ನಾಯಿ ವಿಡಿಯೋ ನೋಡಿ ನೀವೂ ಬೆರಗಾಗುತ್ತೀರಿ. ನಿಮ್ಮ ಮನೆಗಳಲ್ಲಿ (Home) ನಾಯಿಗಳು ಇದ್ಯಾ? ಅವುಗಳನ್ನು ವಾಕಿಂಗ್ (Walking) ಕರೆದುಕೊಂಡು ಹೋಗ್ತೀರಾ? ನೀವು ಸಿಟ್ ಎಂದಾಗ ಅವುಗಳು ಕೂರುವುದು, ಅಪ್ ಅಂದಾಗ ಎದ್ದು ನಿಲ್ಲ ಅಭ್ಯಾಸ ಮಾಡಿಸಿದ್ದೀರಾ? ಇವುಗಳು ಕಾಮನ್ ಅಲ್ವಾ? ನಾಯಿಗೇ ಸೀಮಿತವಾದ ಹೆಸ್ರನ್ನು ಕೂಡ ಇಟ್ಟಿರ್ತೀರಾ ಅಲ್ವಾ? ಅದೇ ರೀತಿಯಾಗಿ ನೀವು ಅವುಗಳನ್ನು ಕರೆದರೆ ಅವೂ ಕೂಡ ಪ್ರತಿಕ್ರಿಯಿಸುತ್ತವೆ.
ಇದರ ಜೊತೆಗೆ ನಾಯಿಗಳಿಗಾಗಿಯೇ ಅನೇಕ ಕಾಂಪಿಟೇಷನ್ಗಳನ್ನು ಏರ್ಪಡಿಸಲಾಗುತ್ತದೆ. ಅವುಗಳಿಗೂ ಅವಾರ್ಡ್ಗಳನ್ನು ಕೊಡಲಾಗುತ್ತದೆ. ನೀವು ಕನ್ನಡದ ಚಾರ್ಲಿ ಸಿನಿಮಾವನ್ನು ನೋಡಿದ್ದರೆ ತಿಳಿದಿರುತ್ತದೆ. ಇದೀಗ ಇಲ್ಲೊಂದು ಕ್ಯೂಟ್ ನಾಯಿ ಸಖತ್ ವೈರಲ್ ಆಗ್ತಾ ಇದೆ. ಹಾಗಂತ ಯಾವುದೋ ಕಾಂಪಿಟೇಷನ್ಗಳಲ್ಲಿ ಭಾಗವಹಿಸಿ ಅಲ್ಲ.
ಇದನ್ನೂ ಓದಿ: ದಿಕ್ಕು ತೋಚದೆ ರಸ್ತೆ ಪಾಲಾಗಿದ್ದ ಹಾವು ರಕ್ಷಿಸಿದ ಮಹಿಳೆ, ವಿಡಿಯೋ ಸಿಕ್ಕಾಪಟ್ಟೆ ವೈರಲ್!
ನಾಯಿಯ ಪ್ರತಿಭೆಯಿಂದ ವಿಶ್ವದಾಖಲೆ ನಿರ್ಮಿಸಿ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಗೆ ಕಾಲಿಟ್ಟ ಅನೇಕರನ್ನು ನೀವು ನೋಡಿರಬಹುದು, ಆದರೆ ಅಪರೂಪಕ್ಕೆ ಪ್ರಾಣಿಯು ವಿಶ್ವ ದಾಖಲೆ ಮಾಡಿರುವುದನ್ನು ನೀವು ನೋಡಿರಬಹುದು. ವಿಶ್ವ ದಾಖಲೆಗಳನ್ನು ಹೊಂದಿರುವ ಪ್ರಾಣಿಗಳ ಹೆಸರುಗಳು ಅಥವಾ ವೀಡಿಯೊಗಳು ಅಪರೂಪ. ಸದ್ಯ, ಗಿನ್ನಿಸ್ ಪುಸ್ತಕದಲ್ಲಿ ದಾಖಲಾಗಿರುವ ನಾಯಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದರಲ್ಲಿ ನಾಯಿಯೊಂದು ತನ್ನ ಮಾಲೀಕರೊಂದಿಗೆ ಸ್ಕಿಪ್ಪಿಂಗ್ ಮಾಡ್ತಾ ಇದೆ. ಅದು ಎಷ್ಟು ಹೊತ್ತು ಅಂತ ನೀವೇ ವಿಡಿಯೋ ನೋಡಿ. ಇದರಲ್ಲಿ ಇವರಿಬ್ಬರನ್ನೂ ಶ್ಲಾಘನೀಯಿಸಲೇ ಬೇಕು. ತಾತನಿಗೆ ವಯಸ್ಸಾದ್ರೂ ಕೂಡ ಎಷ್ಟು ಚೆನ್ನಾಗಿ ನಾಯಿಯನ್ನು ಟ್ರೈನಿಂಗ್ ಮಾಡುವುದರ ಜೊತೆಗೆ ಎಷ್ಟು ಹೊತ್ತು ಒಂದೇ ತೆರನಾಗಿ ಇಬ್ಬರೂ ಸ್ಕಿಪ್ಪಿಂಗ್ ಮಾಡುತ್ತಾ ಇದ್ದಾರೆ ಅಂತ ನೀವೇ ನೋಡಿ.
View this post on Instagram
ಏತನ್ಮಧ್ಯೆ, ಪ್ರಪಂಚದಾದ್ಯಂತ ಕಂಡುಬರುವ ವಿವಿಧ ನಾಯಿ ತಳಿಗಳಿವೆ. ಕೆಲವು ಅತ್ಯಂತ ಶಕ್ತಿಯುತವಾಗಿದ್ದರೆ, ಇತರ ನಾಯಿ ತಳಿಗಳಿಗಿಂತ ವಾಸನೆ ಮತ್ತು ಗ್ರಹಿಕೆಯ ಹೆಚ್ಚಿನ ಶಕ್ತಿಯನ್ನು ಹೊಂದಿವೆ. ಸದ್ಯ ವೈರಲ್ ಆಗುತ್ತಿರುವ ನಾಯಿಯ ರೋಪ್ ಜಂಪಿಂಗ್ ಕೌಶಲಕ್ಕೆ ನೆಟ್ಟಿಗರು ಕೂಡ ಬೆರಗಾಗಿದ್ದಾರೆ. ಸದ್ಯ ಈ ವಿಡಿಯೋ ಜನಪ್ರಿಯತೆ ಗಳಿಸುತ್ತಿದ್ದು, ವಿಡಿಯೋಗೆ ಹಲವು ಪ್ರತಿಕ್ರಿಯೆಗಳು ಬರುತ್ತಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ