Dog Love: ನಿರ್ಗತಿಕ ವ್ಯಕ್ತಿಯನ್ನು ಅಪ್ಪಿಕೊಂಡು ಸಂತೈಸಿದ ನಾಯಿ, ಸಖತ್ ವೈರಲ್ ಆಗ್ತಿದೆ ವಿಡಿಯೋ

DOG: ಮನೆ ಇಲ್ಲದ ನಿರ್ಗತಿಕನೋರ್ವ ಬೀದಿಯ ರಸ್ತೆ ಬದಿಯಲ್ಲಿ ಕುಳಿತಿರುತ್ತಾನೆ. ಎತ್ತಲೋ ನೋಡುತ್ತಾ ಕುಳಿತಿದ್ದ ಆತನ ಬಳಿ ಬರುವ ನಾಯಿ ಆತನನ್ನು ಸ್ವಲ್ಪ ಹೊತ್ತು ದಿಟ್ಟಿಸಿ ನೋಡುತ್ತದೆ. ನಂತರ ಅದರದ್ದೇ ಭಾಷೆಯಲ್ಲಿ ಮಾತನಾಡಿಸಲು ಪ್ರಯತ್ನಿಸುತ್ತದೆ. ಅಲ್ಲದೇ ಎರಡು ಕೈಗಳನ್ನು ಆತನ ಮೇಲಿಟ್ಟು ಆತನನ್ನು ಮುದ್ದಾಡಲು ನೋಡುತ್ತದೆ.

ನಾಯಿ ಹಾಗೂ ಮನುಷ್ಯ

ನಾಯಿ ಹಾಗೂ ಮನುಷ್ಯ

 • Share this:
  ಮನುಷ್ಯರು(Human) ಮತ್ತು ನಾಯಿಯ(Dog) ನಡುವಿನ ಸಂಬಂಧವೂ(Relationship) ಅನಾದಿಕಾಲದಿಂದಲೂ ನಡೆದು ಬಂದಿದೆ. ಈ ಸಂಬಂಧದಲ್ಲಿ ಒಂದು ಪ್ರೀತಿ (Love)ಹಾಗೂ ಒಂದು ಅಪ್ಯಾಯತೆಯೂ(Affection) ಕಂಡುಬರುತ್ತದೆ. ನಾಯಿ ಹಾಗೂ ಮನುಷ್ಯರ ನಡುವಿನ ಸಂಬಂಧದ ಕುರಿತಾಗಿ ಹೇಳುವುದಾದರೆ ಈ ಸಂಬಂಧಕ್ಕೆ ನಾವು ಪದಗಳ ಮೂಲಕ ಹೇಳುವುದಕ್ಕಾಗಲೀ, ವರ್ಣಿಸುವುದಕ್ಕೇ ಆಗಲೀ ಸಾಧ್ಯವಾಗುವುದಿಲ್ಲ. ಇದೊಂದು ಭಾವನಾತ್ಮಕ ಬಂಧ ಕೂಡಾ ಹೌದು. ಮನುಷ್ಯರ ಜೊತೆ ಒಡನಾಟ ಇರುವ ಬೇರೆ ಪ್ರಾಣಿಗಳಿಗೆ ಹೋಲಿಕೆ ಮಾಡಿದರೆ ಮನುಷ್ಯರೊಟ್ಟಿಗೆ ಹೆಚ್ಚು ನಿಕಟವಾಗಿರುವ ಪ್ರಾಣಿಗಳು ಎಂದರೆ ಅವು ನಾಯಿಗಳು ಮಾತ್ರ. ಇನ್ನು ನಿಷ್ಠೆ ಹಾಗೂ ಪ್ರಾಮಾಣಿಕತೆ ಅಥವಾ ನಿಯತ್ತು ಎನ್ನುವ ವಿಷಯ ಬಂದಾಗಲೆಲ್ಲ ಅಲ್ಲಿ ಅತ್ಯುತ್ತಮ ಉದಾಹರಣೆಯಾಗಿ ಕಾಣುವುದು ಕೂಡ ನಾಯಿ ಮಾತ್ರವೇ.

  ನಿಯತ್ತಿಗೆ ಮತ್ತೊಂದು ಹೆಸರೇ ನಾಯಿ ಎಂದು ಕೂಡ ಹೇಳಲಾಗುತ್ತದೆ. ನಾಯಿಗಳು ತಮಗೆ ಅನ್ನವನ್ನು ಹಾಕಿ ಸಾಕಿದವರನ್ನು ಸದಾ ಕಾಯುತ್ತವೆ ಹಾಗೂ ಅವರಿಗಾಗಿ ತಮ್ಮ ಪ್ರಾಣವನ್ನು ನೀಡಲು ಕೂಡ ಹಿಂದೆ-ಮುಂದೆ ಆಲೋಚನೆ ಮಾಡುವುದಿಲ್ಲ. ನಾಯಿಗಳ ನಿಷ್ಠೆ ಹಾಗೂ ನಿಯತ್ತು ಪ್ರತಿ ಬಾರಿ ಕೂಡ ಮನುಷ್ಯನನ್ನು ಆಶ್ಚರ್ಯಚಕಿತರನ್ನಾಗಿ ಮಾಡಿ ಬಿಡುತ್ತವೆ.ಕೆಲವೊಮ್ಮೆ ಮನುಷ್ಯರಂತೆ ನಾಯಿಗಳು ಕೂಡ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿ ಯಾರು ಇಲ್ಲದವರಿಗೆ ನಾವು ಇದ್ದೇವೆ ಎಂದು ಧೈರ್ಯ ತುಂಬುವ ಪ್ರಯತ್ನ ಮಾಡುತ್ತದೆ.. ಇದಕ್ಕೆ ಸಾಕ್ಷಿಯೆಂದರೆ ಇತ್ತೀಚಿಗೆ ಇಂಟರ್ನೆಟ್ಟಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ..

  ಇದನ್ನೂ ಓದಿ:  ನವಜಾತ ಶಿಶುವನ್ನು ರಟ್ಟಿನ ಪೆಟ್ಟಿಗೆಯಲ್ಲಿ ಇರಿಸಿ ಬಿಟ್ಟು ಹೋದ ತಾಯಿ..! ಕರುಳು ಹಿಂಡುವ ಕಥೆ!

  ಅನಾಥ ವ್ಯಕ್ತಿ ತಬ್ಬಿಕೊಂಡು ಧೈರ್ಯ ತುಂಬಿದ ನಾಯಿ

  ನಾಯಿಗಳು ಎಷ್ಟೋಬಾರಿ ಯಾರಾದರೂ ಕಷ್ಟದಲ್ಲಿ ಇದ್ದಾಗ ಅವರನ್ನು ಕಂಡರೆ ಮರುಕ ವ್ಯಕ್ತಪಡಿಸುವ ಅನೇಕ ವಿಡಿಯೋಗಳನ್ನು ನಾವು ನೋಡಿದ್ದೇವೆ.. ಇದೇ ರೀತಿ ಈ ವಿಡಿಯೋ ಒಂದರಲ್ಲಿ ನಿರ್ಗತಿಕ ವ್ಯಕ್ತಿಯೊಬ್ಬ ನನಗೆ ಯಾರು ಇಲ್ಲ ಎಂದು ಕಣ್ಣೀರು ಹಾಕುವಾಗ ಎಲ್ಲಿಂದಲೋ ಬಂದ ನಾಯಿಯೊಂದು ಆತನನ್ನ ತಬ್ಬಿಕೊಂಡು ಸಾಂತ್ವಾನ ಹೇಳಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ .

  ವಿಡಿಯೋದಲ್ಲಿ ಏನಿದೆ..?

  ಮನೆ ಇಲ್ಲದ ನಿರ್ಗತಿಕನೋರ್ವ ಬೀದಿಯ ರಸ್ತೆ ಬದಿಯಲ್ಲಿ ಕುಳಿತಿರುತ್ತಾನೆ. ಎತ್ತಲೋ ನೋಡುತ್ತಾ ಕುಳಿತಿದ್ದ ಆತನ ಬಳಿ ಬರುವ ನಾಯಿ ಆತನನ್ನು ಸ್ವಲ್ಪ ಹೊತ್ತು ದಿಟ್ಟಿಸಿ ನೋಡುತ್ತದೆ. ನಂತರ ಅದರದ್ದೇ ಭಾಷೆಯಲ್ಲಿ ಮಾತನಾಡಿಸಲು ಪ್ರಯತ್ನಿಸುತ್ತದೆ. ಅಲ್ಲದೇ ಎರಡು ಕೈಗಳನ್ನು ಆತನ ಮೇಲಿಟ್ಟು ಆತನನ್ನು ಮುದ್ದಾಡಲು ನೋಡುತ್ತದೆ. ಅಲ್ಲದೇ ಅವನನ್ನು ಸಮಾಧಾನ ಪಡಿಸುತ್ತಿರುವಂತೆ ಕಾಣುತ್ತದೆ. ನಾಯಿಗೆ ಅದೇ ರೀತಿ ಸ್ಪಂದಿಸಿದ ಮನುಷ್ಯ ಅದಕ್ಕೆ ಪ್ರತಿಯಾಗಿ ತಾನು ಕೂಡ ನಾಯಿಯನ್ನು ಗಟ್ಟಿಯಾಗಿ ತಬ್ಬಿಕೊಳ್ಳುತ್ತಾನೆ.

  ವೀಡಿಯೋ ನೋಡಿ ಭಾವುಕರಾದ ನೆಟ್ಟಿಗರು

  ಇನ್ನು ಮುದ್ದಾದ ವಿಡಿಯೋ ನೆಟ್ಟಿಗರನ್ನು ಸೆಳೆಯುತ್ತಿದ್ದು, ಎಲ್ಲರೂ ಭಾವುಕರಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ವಾಸ್ತವವಾಗಿ ಈ ವಿಡಿಯೋವನ್ನು ಎರಡು ಕಾರಣಕ್ಕಾಗಿ ನೋಡಬೇಕು. ಮೊದಲನೇಯದಾಗಿ ನಿರ್ಗತಿಕರು ಕೂಡ ಮನುಷ್ಯರೇ ಅವರಿಗೂ ಪ್ರೀತಿ ಹಾಗೂ ಕರುಣೆ ಬೇಕು ಎಂಬುದು ಹಾಗೂ ಎರಡನೇಯದಾಗಿ ಪ್ರಾಣಿಗಳು ಕೂಡ ಒಂದು ಅದ್ಭುತ ಹಾಗೂ ಅವುಗಳು ಯಾವುದೇ ನಿರೀಕ್ಷೆಗಳಿಲ್ಲದೇ ಪ್ರೀತಿಸುತ್ತವೆ ಎಂದು ವೀಕ್ಷಕರೊಬ್ಬರು ಈ ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ. ನಾಯಿಗಳ ಪ್ರೀತಿಗೆ ನಾವು ಅರ್ಹರಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

  ಇದನ್ನೂ ಓದಿ: ಭತ್ತದ ಹೊಟ್ಟಿನಿಂದ ತಯಾರಾಯ್ತು ತಟ್ಟೆ, ಲೋಟ, ವಿಡಿಯೋ ಹಂಚಿಕೊಂಡ ಶಶಿ ತರೂರ್

  ಇನ್ನು ಮಾಲೀಕ ಎಷ್ಟೇ ಕಷ್ಟದಲ್ಲಿದ್ದರು ಶ್ವಾನಗಳು ಇವರನ್ನು ಬಿಟ್ಟು ಹೋಗುವುದಿಲ್ಲ ಎಂಬುದಕ್ಕೆ ಈ ವೀಡಿಯೋ ಸಾಕ್ಷಿಯಾಗಿದೆ. ಈ ವೀಡಿ ಯೋವನ್ನು ಬ್ಯುಟಿಂಗೆಬಿಡೇನ್ ಎಂಬವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೋ ಸುಮಾರು 7 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಯಾಗಿದೆ. ನಾಯಿಯ ಹಾವಭಾವ ಮತ್ತು ಮನುಷ್ಯನ ಮೇಲಿನ ಪ್ರೀತಿಯನ್ನು ಹಲವರು ಕಾಮೆಂಟ್‌ಗಳ ಮೂಲಕ ವ್ಯಕ್ತಪಡಿಸಿದ್ದಾರೆ
  Published by:ranjumbkgowda1 ranjumbkgowda1
  First published: