Viral Video: ಹುಡುಗಿಯ ಜೊತೆ ಕಣ್ಣಾಮುಚ್ಚಾಲೆ ಆಡಿದ ನಾಯಿಯ ವಿಡಿಯೋ ವೈರಲ್

Viral Video: ಕ್ವಾರಂಟೈನ್​ನಲ್ಲಿರುವ ಹುಡುಗಿ ತನ್ನ ಮುದ್ದಿನ ನಾಯಿಯೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತಿರುವ ವಿಡಿಯೋ ವೈರಲ್ ಆಗಿದೆ.

Sushma Chakre | news18-kannada
Updated:May 9, 2020, 3:17 PM IST
Viral Video: ಹುಡುಗಿಯ ಜೊತೆ ಕಣ್ಣಾಮುಚ್ಚಾಲೆ ಆಡಿದ ನಾಯಿಯ ವಿಡಿಯೋ ವೈರಲ್
Viral Video: ಕ್ವಾರಂಟೈನ್​ನಲ್ಲಿರುವ ಹುಡುಗಿ ತನ್ನ ಮುದ್ದಿನ ನಾಯಿಯೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತಿರುವ ವಿಡಿಯೋ ವೈರಲ್ ಆಗಿದೆ.
  • Share this:
ಲಾಕ್​ಡೌನ್​ನಿಂದಾಗಿ ಜನರಿಗೆ ಟೈಂಪಾಸ್​ ಮಾಡುವುದೇ ಕಷ್ಟವಾಗಿದೆ. ಅದಕ್ಕಾಗಿ ಚೆಸ್, ಕೇರಂ, ಪಗಡೆ, ಚಿನ್ನಿದಾಂಡು, ಅಳಗುಳಿಮಣೆ, ಹಾವು ಏಣಿ ಆಟ ಮುಂತಾದ ಆಟಗಳನ್ನು ಆಡುತ್ತಿದ್ದಾರೆ. ಈ ನೆಪದಲ್ಲಿ ಹಳೆಯ ಆಟಗಳಿಗೆ ಮತ್ತೆ ಜೀವ ಬರುತ್ತಿದೆ. ಆದರೆ, ಇಲ್ಲೊಂದು ನಾಯಿ ಚಿಕ್ಕ ಹುಡುಗಿಯ ಜೊತೆ ಸೇರಿ ಕಣ್ಣಾಮುಚ್ಚಾಲೆ ಆಡುತ್ತಿದೆ.

ಕ್ವಾರಂಟೈನ್​ನಲ್ಲಿರುವ ಹುಡುಗಿ ತನ್ನ ಮುದ್ದಿನ ನಾಯಿಯೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತಿರುವ ವಿಡಿಯೋ ವೈರಲ್ ಆಗಿದೆ. ತನ್ನ ನಾಯಿಗೆ ಕಣ್ಣು ಮುಚ್ಚಿಕೊಳ್ಳಲು ಹೇಳುವ ಹುಡುಗಿ ಓಡಿಹೋಗಿ ಅಡಗಿಕೊಳ್ಳುವ ವಿಡಿಯೋ ವೈರಲ್ ಆಗಿದೆ. ಇನ್​ಸ್ಟಾಗ್ರಾಂನಲ್ಲಿ ಈ ವಿಡಿಯೋ ಹರಿದಾಡುತ್ತಿದ್ದು, ನಾಯಿಯ ತುಂಟಾಟಕ್ಕೆ ಮೆಚ್ಚುಗೆಗಳು ವ್ಯಕ್ತವಾಗುತ್ತಿವೆ.





ಗೋಡೆಯ ಬಳಿ ಕಾಲುಗಳಿಂದ ಮುಖ ಮುಚ್ಚಿಕೊಂಡ ನಾಯಿಯ ಬಳಿ ಆ ಹುಡುಗಿ 'ಕದ್ದು ನೋಡುವ ಹಾಗಿಲ್ಲ' ಎಂದು ಎಚ್ಚರಿಕೆಯನ್ನೂ ನೀಡಿರುವುದು ವಿಡಿಯೋದಲ್ಲಿ ರೆಕಾರ್ಡ್​ ಆಗಿದೆ.
First published: May 9, 2020, 3:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading