Car Accident: ಆಕ್ಸಿಡೆಂಟ್‌ ಆದ ಕಾರಿನಿಂದ ತಪ್ಪಿಸಿಕೊಂಡ ಶ್ವಾನ: ನಂತರ ಮಾಡಿದ್ದೇನು ಗೊತ್ತಾ..?

ಅಮೆರಿಕದ ನ್ಯೂ ಹ್ಯಾಂಪ್‌ಶೈರ್ ಸ್ಟೇಟ್ ಪೊಲೀಸರು ಘಟನೆಯ ವಿವರಗಳನ್ನು ತಮ್ಮ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡಿದ್ದಾರೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ನಾಯಿಯನ್ನು(Dog) ನಿಯತ್ತಿನ ಪ್ರಾಣಿಗೆ (Animal) ಹೋಲಿಸುತ್ತಾರೆ. ಮನುಷ್ಯರಿಗಿಂತ ಶ್ವಾನಗಳಿಗೇ ಹೆಚ್ಚು ನಿಯತ್ತು ಅಂತ ನೀವೂ ಆಗಾಗ್ಗೆ ಹೇಳುತ್ತಿರುತ್ತೀರಲ್ವ.. ಅದೇ ರೀತಿ, ಶ್ವಾನಗಳ ಬುದ್ಧಿವಂತಿಕೆ ಏನೂ ಕಡಿಮೆ ಇಲ್ಲ ಬಿಡಿ.. ಶ್ವಾನಗಳ ಪೈಕಿ ಜರ್ಮನ್‌ ಶೆಫರ್ಡ್‌ ತಮ್ಮ ಶಕ್ತಿ, ಬುದ್ಧಿವಂತಿಕೆ(Intelligence) ಮತ್ತು ನಿಷ್ಠೆಗೆ ಹೆಸರುವಾಸಿಯಾಗಿದೆ. ಅವರು ತಮ್ಮ (Owners) ಮಾಲೀಕರನ್ನು ರಕ್ಷಿಸುತ್ತಾರೆ (Protect) ಮತ್ತು ಬಿಕ್ಕಟ್ಟಿನ ಪರಿಸ್ಥಿತಿಗೆ (Crisis Situation) ತ್ವರಿತವಾಗಿ ಪ್ರತಿಕ್ರಿಯಿಸಬಹುದು. ಇದಕ್ಕೆ ಉದಾಹರಣೆ ನಾವು ಹೇಳಲು ಹೊರಟಿರುವ ಈ ಸ್ಟೋರಿ.

ಮಾಲೀಕರನ್ನು ರಕ್ಷಿಸಿದ ಶ್ವಾನ
ಕಾರು ಅಪಘಾತಕ್ಕೆ ಒಳಗಾದ ತನ್ನ ಮಾಲೀಕರನ್ನು ರಕ್ಷಿಸಲು ಸಹಾಯ ಮಾಡಿದ ಕೀರ್ತಿಗೆ ಪಾತ್ರರಾದ ಟಿನ್ಸ್ಲೇ ಎಂಬ ಜರ್ಮನ್‌ ಶೆಫರ್ಡ್‌ ಶ್ವಾನ ಇದನ್ನು ನಿಜವೆಂದು ಸಾಬೀತುಪಡಿಸಿದೆ. ಪೊಲೀಸರು ಈ ನಾಯಿಯನ್ನು ಮೊದಲ ಬಾರಿಗೆ ನೋಡಿದಾಗ, ಆ ಹೆಣ್ಣು ನಾಯಿ ಕಳೆದುಹೋಗಿದೆ ಎಂದು ಅವರು ಭಾವಿಸಿದ್ದರು. ಆದರೆ ಶೀಘ್ರದಲ್ಲೇ, ಆಕೆ ಕಾರು ಅಪಘಾತದ ಸ್ಥಳಕ್ಕೆ ತಮ್ಮನ್ನು ಕರೆದೊಯ್ಯುತ್ತಿದ್ದಳು ಎಂಬುದನ್ನು ಅಮೆರಿಕ ಪೊಲೀಸರು ಅರಿತುಕೊಂಡರು.

ಇದನ್ನೂ ಓದಿ: Dog Love: ನಿರ್ಗತಿಕ ವ್ಯಕ್ತಿಯನ್ನು ಅಪ್ಪಿಕೊಂಡು ಸಂತೈಸಿದ ನಾಯಿ, ಸಖತ್ ವೈರಲ್ ಆಗ್ತಿದೆ ವಿಡಿಯೋ

‘’ಟಿನ್ಸ್ಲೇ ನಡವಳಿಕೆಯು 'ನನ್ನನ್ನು ಅನುಸರಿಸಿ. ನನ್ನನ್ನು ಅನುಸರಿಸಿ' ಎಂದು ಹೇಳುವಂತಿತ್ತು. ಈ ಹಿನ್ನೆಲೆ ಅಧಿಕಾರಿಗಳು ಅದರ ವರ್ತನೆಗೆ ಗಮನ ನೀಡಿದರು ಮತ್ತು ಅಂತರರಾಜ್ಯ ಜಂಕ್ಷನ್ ಬಳಿ ಹಾನಿಗೊಳಗಾದ ಗಾರ್ಡ್‌ರೈಲ್‌ ಅನ್ನು ಕಂಡುಕೊಳ್ಳಲು ಸಾಧ್ಯವಾಯಿತು’’ ಎಂದು ಅಮೆರಿಕದ ನ್ಯೂ ಹ್ಯಾಂಪ್‌ಶೈರ್ ಸ್ಟೇಟ್ ಪೋಲೀಸ್‌ನ ಲೆಫ್ಟಿನೆಂಟ್ ಹೇಳಿದರು. ಅಂತಿಮವಾಗಿ, ವರ್ಮೋಂಟ್‌ ಸ್ಟೇಟ್ ಪೋಲೀಸ್ ಮತ್ತು ಹತ್ತಿರದ ನಗರವಾದ ಲೆಬನಾನ್‌ನ ಪೊಲೀಸರು ಟ್ರಕ್‌ನ ಪಕ್ಕದಲ್ಲಿ ಹಿಮದಲ್ಲಿ ಬಿದ್ದಿರುವ ಚಾಲಕ ಮತ್ತು ಇನ್ನೊಬ್ಬ ಪ್ರಯಾಣಿಕರನ್ನು ಕಂಡುಕೊಂಡರು. ದುರದೃಷ್ಟವಶಾತ್, ಪ್ರಯಾಣಿಕರೊಬ್ಬರಿಗೆ ಸೇರಿದ ಬುಲ್ ಡಾಗ್ ಶ್ವಾನವೊಂದು ಅಪಘಾತದಲ್ಲಿ ಮೃತಪಟ್ಟಿದೆ.

WeRateDogs ಎಂಬ ಟ್ವಿಟ್ಟರ್‌ ಶೇರ್
ಮೈಕ್ರೋ ಬ್ಲಾಗ್‌ ಜಾಲತಾಣ ಟ್ವಿಟ್ಟರ್‌ನಲ್ಲಿ, WeRateDogs ಎಂಬ ಟ್ವಿಟ್ಟರ್‌ ಅಕೌಂಟ್‌ ಟಿನ್ಸ್ಲೇ ಶ್ವಾನ ಮತ್ತು ಕ್ರ್ಯಾಶ್ ಸೈಟ್‌ನ ಫೋಟೋಗಳನ್ನು ಹಂಚಿಕೊಂಡಿದೆ. ಅಲ್ಲದೆ, "ಇದು ಟಿನ್ಸ್ಲೇ . ಅವಳು ಕಳೆದ ರಾತ್ರಿ ತನ್ನ ಮಾಲೀಕರೊಂದಿಗೆ ಕಾರು ಅಪಘಾತಕ್ಕೀಡಾಗಿದ್ದಳು. ಅವಳು ಅವಶೇಷಗಳಿಂದ ತಪ್ಪಿಸಿಕೊಂಡು, ಪೋಲೀಸರ ಗಮನವನ್ನು ಸೆಳೆದಳು ಮತ್ತು ಅವರನ್ನು ಅಪಘಾತದ ಸ್ಥಳಕ್ಕೆ ಕರೆದೊಯ್ದಳು. ಅವಳ ಮಾಲೀಕರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮತ್ತು ಬದುಕುಳಿಯುವ ನಿರೀಕ್ಷೆಯಿದೆ. ಟಿನ್ಸ್ಲೇ ನಮ್ಮ ಅಪರೂಪದ ಪ್ರಶಸ್ತಿಯನ್ನು ಪಡೆದಿದೆ" ಎಂದು ಅವರು ಬರೆದುಕೊಂಡಿದ್ದಾರೆ.

ಪತ್ತೆಹಚ್ಚಲು ಪೊಲೀಸರಿಗೆ ಸಹಾಯ
ಈ ಸಂಬಂಧ, ಅಮೆರಿಕದ ನ್ಯೂ ಹ್ಯಾಂಪ್‌ಶೈರ್ ಸ್ಟೇಟ್ ಪೊಲೀಸರು ಘಟನೆಯ ವಿವರಗಳನ್ನು ತಮ್ಮ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡಿದ್ದಾರೆ. ಗಾಯಗೊಂಡ ಚಾಲಕ ಮತ್ತು ಪ್ರಯಾಣಿಕರನ್ನು ಪತ್ತೆಹಚ್ಚಲು ಪೊಲೀಸರಿಗೆ ಸಹಾಯ ಮಾಡಿದ ಹೀರೋ ಟಿನ್ಸ್ಲೇ ಎಂದು ಅವರು ತಮ್ಮ ಫೇಸ್‌ಬುಕ್‌ ಪುಟದಲ್ಲಿ ಬರೆದುಕೊಂಡಿದ್ದಾರೆ. ಟಿನ್ಸ್ಲೇ ಎಂಬ ಹೆಸರಿನ ಜರ್ಮನ್‌ ಶೆಫರ್ಡ್ ಟ್ರಕ್‌ನ ಗಾಯಗೊಂಡ ನಿವಾಸಿಗಳಲ್ಲಿ ಒಬ್ಬರಿಗೆ ಸೇರಿದೆ ಎಂದು ಘಟನಾ ಸ್ಥಳದಲ್ಲಿದ್ದ ಟ್ರೂಪರ್ ಸ್ಯಾಂಡ್‌ಬರ್ಗ್ ಮತ್ತು ಲೆಬನಾನ್ ಪೊಲೀಸ್ ಅಧಿಕಾರಿಗಳು ತಿಳಿದುಕೊಂಡರು. ಟ್ರೂಪರ್ ಸ್ಯಾಂಡ್‌ಬರ್ಗ್ ಮತ್ತು ಲೆಬನಾನ್ ಪೊಲೀಸರನ್ನು ಕ್ರ್ಯಾಶ್ ಸೈಟ್‌ಗೆ ಟಿನ್ಸ್ಲೇ ಕರೆದೊಯ್ದಿದೆ ಮತ್ತು ನಿವಾಸಿಗಳು ಗಾಯಗೊಂಡರು ಎಂಬುದು ಶೀಘ್ರವಾಗಿ ಸ್ಪಷ್ಟವಾಯಿತು” ಎಂದು ಈ ಫೇಸ್‌ಬುಕ್‌ ಪೋಸ್ಟ್ ಹೇಳುತ್ತದೆ.

ಇದನ್ನೂ ಓದಿ: Viral News: ಜೀವದ ಹಂಗು ತೊರೆದು ರೈಲಿನಡಿಗೆ ಸಿಲುಕಿದ ನಾಯಿಯ ರಕ್ಷಿಸಿದ ವ್ಯಕ್ತಿ

ಕಾರಿನಲ್ಲಿದ್ದವರು ತೀವ್ರವಾಗಿ ಗಾಯಗೊಂಡಿದ್ದರು. ಆದರೆ ಟಿನ್ಸ್ಲೇ ಪ್ರಯತ್ನದಿಂದ ಅವರೆಲ್ಲರೂ ತ್ವರಿತ ವೈದ್ಯಕೀಯ ಆರೈಕೆಯನ್ನು ಪಡೆಯಲು ಸಾಧ್ಯವಾಯಿತು ಎಂಬುದನ್ನೂ ಪೊಲೀಸರು ಹಾಗೂ ಸ್ಥಳೀಯ ಅಧಿಕಾರಿಗಳು ಆ ಜರ್ಮನ್‌ ಶೆಫರ್ಡ್ ಶ್ವಾನದ ಶಕ್ತಿ, ಬುದ್ಧಿವಂತಿಕೆ ಮತ್ತು ನಿಷ್ಠೆಯನ್ನು ಮೆಚ್ಚಿಕೊಂಡಿದ್ದಾರೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ ಕಾರಿನ ಮಾಲೀಕರು ಈಗ ಮತ್ತೆ ಟಿನ್ಸ್ಲೇಯನ್ನು ಸೇರಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
Published by:vanithasanjevani vanithasanjevani
First published: