ಈ ನಾಯಿಗೆ ಪಂಜರ ಲೆಕ್ಕಕ್ಕಿಲ್ಲ: ಸರಸರನೆ ಏರಿ ಹೊರಬಂದ ಸ್ಮಾರ್ಟ್ ಶ್ವಾನ!

ಆದರೆ ಈ ವಿಡಿಯೋ ಎಲ್ಲಿಯದ್ದು ಎಂಬುದು ತಿಳಿದು ಬಂದಿಲ್ಲ. ಅನೇಕರು ವಿಡಿಯೋವನ್ನು ಟ್ವಿಟ್ಟರ್​ನಲ್ಲಿ ಶೇರ್​ ಮಾಡುತ್ತಿದ್ದಾರೆ. ಕೆಲವರು ನಾಯಿಮರಿಯ ಧೈರ್ಯವನ್ನು ಮೆಚ್ಚಲೇಬೇಕು ಎಂದರೆ. ಇನ್ನು ಕೆಲವರು ಎಷ್ಟು ಚೆನ್ನಾಗಿ ಗೂಡನ್ನು ಏರಿ ಹೊರಬರಲು ಪ್ರಯತ್ನಿಸುತ್ತಿದೆ ಎಂದು ಕಾಮೆಂಟ್​ ಬರೆದಿದ್ದಾರೆ.

news18-kannada
Updated:September 8, 2020, 3:12 PM IST
ಈ ನಾಯಿಗೆ ಪಂಜರ ಲೆಕ್ಕಕ್ಕಿಲ್ಲ: ಸರಸರನೆ ಏರಿ ಹೊರಬಂದ ಸ್ಮಾರ್ಟ್ ಶ್ವಾನ!
Photo: Twitter
  • Share this:
ನಗರಗಳಲ್ಲಿ ಹೆಚ್ಚಿನ ಜನರು ನಾಯಿಮರಿಯನ್ನು ಮನೆಯೊಳಗೆ ಸಾಕುತ್ತಾರೆ. ಅದನ್ನು ಚೆನ್ನಾಗಿ ಮುದ್ದು ಮಾಡುತ್ತಾರೆ. ಹುಡುಗಿಯರಂತೂ ತಮ್ಮ ಕೋಣೆಯೊಳಕ್ಕೆ ಇರಿಸಿಕೊಳ್ಳುತ್ತಾರೆ. ಆದರೆ ಹಳ್ಳಿಗಳಲ್ಲಿ ನಾಯಿಗಳನ್ನು ಗೂಡಿನೊಳಕ್ಕೆ ಹಾಕಿ ಸಾಕುತ್ತಾರೆ. ಕಬ್ಬಿಣದ ಸಲಾಕೆಯ ಗೂಡನ್ನು ನಿರ್ಮಿಸಿ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಅದರಂತೆ ಈ ವಿಡಿಯೋದಲ್ಲಿ ಯಾರೋ ನಾಯಿಗಳನ್ನು ಗೂಡಿನಲ್ಲಿ ಸಾಕಿಕೊಂಡಿದ್ದಾರೆ. ಆದರೆ ಆ ನಾಯಿಗಳ ಗುಂಪಲ್ಲಿ ಇದ್ದ ಪುಟ್ಟಮರಿಯೊಂದು ಕಬ್ಬಿಣದ ಸಲಾಕೆಯನ್ನು ಏರುತ್ತಾ ಗೂಡಿನಿಂದ ಹೊರಲು ಪ್ರಯತ್ನಿಸುತ್ತಿರುವ ದೃಶ್ಯ ಇದೀಗ ವೈರಲ್​ ಆಗಿದೆ.

ಸಾಮಾಜಿಕ ಜಾಲತಾಣದಲ್ಲಿ ಏನೇ ಹಾಕಿದರು ಅದು ತಕ್ಷಣ ವೈರಲ್​ ಆgಉತ್ತದೆ. ಅದರಂತೆ ಈ ಪುಟ್ಟ ನಾಯಿಮರಿ ಎತ್ತರದ ಸಲಾಕೆಯ ಕಬ್ಬಿಣದ ಗೂಡನ್ನು ಏರಿ ಹೊರಬರಲು ಪ್ರಯತ್ನಿಸುತ್ತಿರುವ ದೃಶ್ಯ ವೈರಲ್​ ಆಗಿದೆ.

ಆದರೆ ಈ ವಿಡಿಯೋ ಎಲ್ಲಿಯದ್ದು ಎಂಬುದು ತಿಳಿದು ಬಂದಿಲ್ಲ. ಅನೇಕರು ವಿಡಿಯೋವನ್ನು ಟ್ವಿಟ್ಟರ್​ನಲ್ಲಿ ಶೇರ್​ ಮಾಡುತ್ತಿದ್ದಾರೆ. ಕೆಲವರು ನಾಯಿಮರಿಯ ಧೈರ್ಯವನ್ನು ಮೆಚ್ಚಲೇಬೇಕು ಎಂದರೆ. ಇನ್ನು ಕೆಲವರು ಎಷ್ಟು ಚೆನ್ನಾಗಿ ಗೂಡನ್ನು ಏರಿ ಹೊರಬರಲು ಪ್ರಯತ್ನಿಸುತ್ತಿದೆ ಎಂದು ಕಾಮೆಂಟ್​ ಬರೆದಿದ್ದಾರೆ.

ಅಷ್ಟು ಮಾತ್ರವಲ್ಲ, ಪುಟ್ಟ ನಾಯಿಮರಿ ಸಲಾಕೆ ಏರುವುದನ್ನು ಕಂಡು ಅದರ ಜೊತೆಗಿದ್ದ ಮುದೋಳ ಜಾತಿಗೆ ಸೇರಿದ ನಾಯಿ ಗೂಡು ಏರುತ್ತದೆ. ಗೂಡಿನ ಮೇಲಕ್ಕೆ ಬಂದು ಹೊರಕ್ಕೆ ಹಾರುತ್ತದೆ.

ಇನ್ನು ಟ್ವಿಟ್ಟರ್​ನಲ್ಲಿ ವೈರಲ್​ ಆಗಿರುವ ಈ ನಾಯಿ ಮರಿಯ ದೃಶ್ಯವು 690 ಬಾರಿ ರಿಟ್ವೀಟ್​ ಆಗಿದೆ. 4 ಸಾವಿರ ಲೈಕ್ಸ್​ಗಳಿಸಿದೆ. ಹೀಗೆ ದಿನಕ್ಕೊಂದರಂತೆ ಸಾಮಾಜಿಕ ಜಾಲತಾಣದಲ್ಲಿ ಏನಾದರೊಂದು ವೈರಲ್​ ಆಗುತ್ತಿರುತ್ತದೆ. ಅದರಂತೆ ಇಂದು ನೆಟ್ಟಿಗರ ಕಣ್ಣಿಗೆ ಪುಟ್ಟ ನಾಯಿಮರಿ ಗೂಡನ್ನು ಏರುವ ದೃಶ್ಯ ಕಣ್ಣಿಗೆ ಬಿದ್ದಿದೆ.
Published by: Harshith AS
First published: September 8, 2020, 3:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading