Viral Video: ಸಿಂಹದಂತೆ ವೇಷ ಧರಿಸಿ ಬಂದ ನಾಯಿ: ಜನರನ್ನು ಬೆಚ್ಚಿಬೀಳಿಸಿದ 12 ಸೆಕೆಂಡ್ ವಿಡಿಯೋ ನೋಡಿ

12 ಸೆಕೆಂಡುಗಳ ಈ ವಿಡಿಯೋದಲ್ಲಿ ದೊಡ್ಡ ನಾಯಿಯೊಂದು ಸಿಂಹವನ್ನು ಹೋಲುವಂತೆ ಕಾಣುತ್ತಿದೆ. ಇದು ಹಾಗೆಯೇ ಜನರಿಂದ ತುಂಬಿರುವ ಉದ್ಯಾನವನದಲ್ಲಿ ನಡೆದುಕೊಂಡು ಬರುತ್ತದೆ ಮತ್ತು ಅಲ್ಲಿದ್ದ ಜನರು ಅದನ್ನು ನೋಡಿ ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾರೆ. ನಂತರ ಅದು ಸದ್ದಿಲ್ಲದೆ ಒಬ್ಬ ವ್ಯಕ್ತಿಯ ಕಡೆಗೆ ಹೋಗಿ ನಿಲ್ಲುತ್ತದೆ.

ವೈರಲ್ ವಿಡಿಯೋ

ವೈರಲ್ ವಿಡಿಯೋ

  • Share this:

ಕೆಲವರಿಗೆ ದೈತ್ಯವಾಗಿರುವ ನಾಯಿಗಳನ್ನು (Dogs) ಕಂಡರೆ ಭಯವಾಗುತ್ತದೆ. ತಾವು ನಿಂತಲ್ಲಿಯೇ ಬಂದು ಎಲ್ಲಿ ತಮ್ಮ ಮೇಲೆ ಹಾರಿ ಕಚ್ಚಿ ಬಿಡುತ್ತದೆ ಎಂಬ ಭಯದಿಂದ ಬೆವರು ಹಾಗೆ ಅವರಿಗೆ ಗೊತ್ತಿರದಂತೆಯೇ ಅವರ ಮುಖದಿಂದ ಸುರಿಯಲು ಶುರುವಾಗುತ್ತದೆ. ಅದೇ ಬೇರೆ ದೈತ್ಯ ಪ್ರಾಣಿಗಳು ಕಣ್ಮುಂದೆ ಬಂದರೆ ಅದರ ಕಥೆನೇ ಬೇರೆ ಆಗಿರುತ್ತದೆ.ಹಾಗೆಯೇ ಕೆಲವೊಮ್ಮೆ ಈ ಚಿಕ್ಕ ಮಕ್ಕಳು (Children) ತಮಾಷೆಗಾಗಿ ಯಾವುದೋ ಪ್ರಾಣಿಯ ವೇಷ (Animal) ಧರಿಸಿಕೊಂಡು ಬಂದು ಜನರನ್ನು ಭಯ ಬೀಳಿಸುತ್ತಾರೆ. ಅರೇ.. ಈ ಮೇಲೆ ಹೇಳಿದಂತಹ ಎರಡು ಹೇಳಿಕೆಗಳು ವಿಭಿನ್ನವಾಗಿವೆ ಎಂದು ನಿಮಗೆ ಅನ್ನಿಸುವುದು ಸಹಜವಾಗಿದೆ. ಈ ವೈರಲ್ ವಿಡಿಯೋ (Viral Video) ನೋಡಿ ನಿಮಗೆ ಅರ್ಥವಾಗುತ್ತದೆ, ಇಲ್ಲಿ ಒಂದು ಬುದ್ದಿವಂತ ನಾಯಿಯೊಂದು ಸಿಂಹದ ವೇಷ ಹಾಕಿಕೊಂಡು (Dog dressed as a lion) ಜನರಿದ್ದ ಉದ್ಯಾನವನಕ್ಕೆ (Park) ಬಂದು ಎಲ್ಲರನ್ನು ಒಂದು ಕ್ಷಣ ಬೆಚ್ಚಿ ಬೀಳಿಸಿದ್ದಂತೂ ನಿಜ.


ಇತ್ತೀಚೆಗೆ ಈ ನಾಯಿಗಳು ಮಾಡುವ ಕೀಟಲೆಗಳಿಂದ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ತುಂಬಾನೇ ವೈರಲ್ ಆಗಿವೆ. ಆನ್‌ಲೈನ್‌ನಲ್ಲಿ ಈಗ ಹೊಸದಾಗಿ ಹರಿದಾಡುತ್ತಿರುವಂತಹ ಇತ್ತೀಚಿನ ವೈರಲ್ ವಿಡಿಯೋದಲ್ಲಿ ಸಿಂಹದಂತೆ ವೇಷ ಧರಿಸಿರುವ ನಾಯಿಯೊಂದು ಸರಳವಾಗಿ ನಡೆದುಕೊಂಡು ಬರುವುದನ್ನು ಕಾಣುತ್ತೇವೆ.


ಸಿಂಹದಂತೆ ಕಾಣುತ್ತಿತ್ತು ನಾಯಿ 

ಈ ವಿಡಿಯೋ ನೋಡಿದಾಗ, ವಸ್ತ್ರ ವಿನ್ಯಾಸಕಾರರು ( costume designer ) ಈ ನಾಯಿಯೊಂದಿಗೆ ಅದ್ಭುತ ಕೆಲಸ ಮಾಡಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಏಕೆಂದರೆ ಇದು ನೋಡಲು ತನ್ನ ಮುಖ ಹೊರತುಪಡಿಸಿ ಸಿಂಹದಂತೆಯೇ ಕಾಣಿಸುತ್ತಿದೆ.


ಇದನ್ನೂ ಓದಿ:  Viral News: ಸೀರೆಯುಟ್ಟು ಮ್ಯಾನ್​ಹೋಲ್​ಗೆ ಇಳಿದ ಮುನ್ಸಿಪಲ್ ಆಫೀಸರ್; ವೈರಲ್​ ಆಯ್ತು ವಿಡಿಯೋ..!

ನಾಯಿಯ ವೇಷ ಕಂಡು ಬೆಚ್ಚಿ ಬಿದ್ದ ಜನರು

12 ಸೆಕೆಂಡುಗಳ ಈ ವಿಡಿಯೋದಲ್ಲಿ ದೊಡ್ಡ ನಾಯಿಯೊಂದು ಸಿಂಹವನ್ನು ಹೋಲುವಂತೆ ಕಾಣುತ್ತಿದೆ. ಇದು ಹಾಗೆಯೇ ಜನರಿಂದ ತುಂಬಿರುವ ಉದ್ಯಾನವನದಲ್ಲಿ ನಡೆದುಕೊಂಡು ಬರುತ್ತದೆ ಮತ್ತು ಅಲ್ಲಿದ್ದ ಜನರು ಅದನ್ನು ನೋಡಿ ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾರೆ. ನಂತರ ಅದು ಸದ್ದಿಲ್ಲದೆ ಒಬ್ಬ ವ್ಯಕ್ತಿಯ ಕಡೆಗೆ ಹೋಗಿ ನಿಲ್ಲುತ್ತದೆ.


ಈ ವಿಡಿಯೋವನ್ನು ಡೈಲಿ ಗೇಮ್ ಅಫೀಷಿಯಲ್ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಅಪ್‌ಲೋಡ್ ಮಾಡಿ, ಇದಕ್ಕೆ "ಓ ದೇವರೇ ಏನಿದು" ಎಂದು ಶೀರ್ಷಿಕೆ ನೀಡಲಾಗಿದೆ.


ವೈರಲ್ ವಿಡಿಯೋಗೆ ನೆಟ್ಟಿಗರ ಕಮೆಂಟ್ 

ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ನೋಡಿದ ನೆಟ್ಟಿಗರಿಗೂ ಸಹ ಒಂದು ಕ್ಷಣ ಇದು ಸಿಂಹವೇ ಎಂದು ಅನ್ನಿಸಿರುತ್ತದೆ. ಇದನ್ನು ನೋಡಿದ ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು “ಇದನ್ನು ನಾಯಿ-ಸಿಂಹ ಎಂದು ಕರೆಯಬೇಕೆಂದು ಎಂದು ಆಶ್ಚರ್ಯಪಡುವುದರೊಂದಿಗೆ ಹಲವರು ಉಲ್ಲಾಸದ ಕಾಮೆಂಟ್‌ಗಳನ್ನು ಹಾಕಿದ್ದಾರೆ.


ಇದನ್ನೂ ಓದಿ:  Viral News: ಮದ್ವೆಗೆ ಆಗಮಿಸಿದ ಅತಿಥಿಗಳಿಗೆ ಊಟದ ಬಿಲ್ ಕೇಳಿದ ವಧು: ಪ್ರತಿ ಪ್ಲೇಟ್ ಹಣ ಕೇಳಿ ಗೆಸ್ಟ್ ಶಾಕ್

ಇನ್ನೊಬ್ಬ ಬಳಕೆದಾರರು ಇದರ ಹೆಸರನ್ನು ಡೋಗ್ಲಿ' ಮತ್ತು 'ಲಿಡಾಗ್' ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ಇದನ್ನು 'ಕಡಿಮೆ ಬಜೆಟ್‌ನ ಸಿಂಹ' ಎಂದು ಕರೆದರೆ, ಇನ್ನೊಬ್ಬರು ಅದನ್ನು ಆ್ಯಂಡ್ರಾಯ್ಡ್ ಫೋನ್‌ನಲ್ಲಿರುವ ಐಫೋನಿನ ರಿಂಗ್ ಟೋನ್‌ನೊಂದಿಗೆ ಹೋಲಿಸಿದ್ದಾರೆ.


40 ಲಕ್ಷಕ್ಕೂಅಧಿಕ ವ್ಯೂವ್
View this post on Instagram


A post shared by Panda (@dailygameofficial)

ಮತ್ತೊಂದೆಡೆ, ಕೆಲವು ಬಳಕೆದಾರರು ಈ ದೃಶ್ಯವು ಹಲವಾರು ಜನರನ್ನು ಹೆದರಿಸುತ್ತದೆ ಮತ್ತು ನಾಯಿ ಸುಲಭವಾಗಿ 'ತೆಳ್ಳಗಿನ ಸಿಂಹ'ವಾಗಿ ಕಾಣುತ್ತಿದೆ ಎಂದು ಒಪ್ಪಿಕೊಂಡಿದ್ದಾರೆ. ಈ ವೈರಲ್ ವಿಡಿಯೋವನ್ನು ಕಳೆದ ವಾರ ಹಂಚಿಕೊಳ್ಳಲಾಗಿತ್ತು. ಈಗಾಗಲೇ ಇನ್‌ಸ್ಟಾಗ್ರಾಮ್‌ನಲ್ಲಿ 4 ಮಿಲಿಯನ್‌ಗೂ (40 ಲಕ್ಷ ) ಹೆಚ್ಚು ಜನರು ಇಷ್ಟಪಟ್ಟಿದ್ದಾರೆ.


ಹೋಟೆಲ್ ಗೆ ಸಿಂಹ ಎಂಟ್ರಿ

ಏಕಾಏಕಿ ಸಿಂಹವೊಂದು ಐಶಾರಾಮಿ ಹೋಟೆಲ್​ಗೆ ಎಂಟ್ರಿ ಕೊಟ್ಟಿರುವ ಘಟನೆ ಗುಜರಾತ್​ನ ಜುನಾಗಢದಲ್ಲಿ ನಡೆದಿತ್ತು. ಹೋಟೆಲ್ ಲಾಬಿ ಒಳಗೆ ಸಿಂಹ ಬಂದು ಮತ್ತೆ ಅಲ್ಲಿಂದ ತೆರಳಿರುವ ದೃಶ್ಯಗಳು ಹೋಟೆಲ್​ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
Published by:Mahmadrafik K
First published: