• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Viral Video: ತುತ್ತು ಕೊಟ್ಟ ಒಡೆಯನಿಗೆ ಆಸ್ಪತ್ರೆಯಲ್ಲಿ ಅಕ್ಕರೆಯ ಅಪ್ಪುಗೆ, ನೆಟ್ಟಿಗರ ಹೃದಯ ಗೆದ್ದ ವೈರಲ್‌ ವಿಡಿಯೋ!

Viral Video: ತುತ್ತು ಕೊಟ್ಟ ಒಡೆಯನಿಗೆ ಆಸ್ಪತ್ರೆಯಲ್ಲಿ ಅಕ್ಕರೆಯ ಅಪ್ಪುಗೆ, ನೆಟ್ಟಿಗರ ಹೃದಯ ಗೆದ್ದ ವೈರಲ್‌ ವಿಡಿಯೋ!

ವೈರಲ್​ ವಿಡಿಯೋ

ವೈರಲ್​ ವಿಡಿಯೋ

ಹೃದ್ರೋಗದಿಂದ ಬಳಲುತ್ತಿರುವ ವ್ಯಕ್ತಿಯ ಬಳಿಯೇ ನಾಯಿ ಕುಳಿತುಕೊಂಡಿರುವುದನ್ನು ತೋರಿಸುವ ಕ್ಲಿಪ್ ಈಗ ಅಂತರ್ಜಾಲದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

  • Trending Desk
  • 2-MIN READ
  • Last Updated :
  • Share this:

ನಿಯತ್ತಿನಲ್ಲಿ ಮನುಷ್ಯನನ್ನೇ ಮೀರಿಸುವ ಶಕ್ತಿ ಇರೋದು ಸಾಕುನಾಯಿಗೆ ಅಂತ ಹೇಳಿದರೆ ತಪ್ಪಾಗುವುದಿಲ್ಲ ನೋಡಿ. ಹೌದು, ನಾಯಿ (Dog) ಮನುಷ್ಯನ ಅತ್ಯುತ್ತಮ ಸ್ನೇಹಿತ ಅಂತ ಹೇಳುವುದನ್ನು ಇಲ್ಲೊಂದು ಹೊಸ ವೀಡಿಯೋ ಮತ್ತೊಮ್ಮೆ ಸಾಬೀತು ಪಡಿಸಿದೆ ನೋಡಿ. ಹೃದ್ರೋಗದಿಂದ ಬಳಲುತ್ತಿರುವ ವ್ಯಕ್ತಿಯ ಬಳಿಯೇ ನಾಯಿ ಕುಳಿತುಕೊಂಡಿರುವುದನ್ನು ತೋರಿಸುವ ಕ್ಲಿಪ್ ಈಗ ಅಂತರ್ಜಾಲದಲ್ಲಿ ಸಿಕ್ಕಾಪಟ್ಟೆ ವೈರಲ್ (Viral) ಆಗುತ್ತಿದೆ. ಬ್ರಿಯಾನ್ ಬೆನ್ಸನ್ ಅವರಿಗೆ ಕಾರ್ಡಿಯೋಮಯೋಪತಿ ಇರುವುದು ಪತ್ತೆಯಾಯಿತು, ಈ ಕಾಯಿಲೆಯಲ್ಲಿ ಹೃದಯಕ್ಕೆ ದೇಹದ ಉಳಿದ ಭಾಗಗಳಿಗೆ ರಕ್ತವನ್ನು (Blood) ಪಂಪ್ ಮಾಡಲು ಕಷ್ಟಕರವಾಗುತ್ತದೆ. ಈ ಚಿಕಿತ್ಸೆಯ ಸಮಯದಲ್ಲಿ, ಅವರ ಸಾಕಿದ ನಾಯಿ ಅವರ ಪಕ್ಕದಲ್ಲಿಯೇ ಇತ್ತು.


ಚಿಕಿತ್ಸೆಯ ಸಂದರ್ಭದಲ್ಲಿ ಜೊತೆಗೆ ಇತ್ತಂತೆ ನಾಯಿ


ಬೆನ್ಸನ್ ಮತ್ತು ಮ್ಯಾಗ್ನಸ್ ಎಂಬ ನಾಯಿಯ ನಡುವಿನ ಸುಂದರವಾದ ಬಂಧವನ್ನು ತೋರಿಸುವ ಈ ವೀಡಿಯೋ ಈಗ ಅಂತರ್ಜಾಲದಲ್ಲಿ ಅನೇಕ ನೆಟ್ಟಿಗರ ಹೃದಯಗಳನ್ನು ಗೆಲ್ಲುತ್ತಿದೆ. ಆಸ್ಪತ್ರೆಯ ಹಾಸಿಗೆಯ ಬಳಿ 6 ವರ್ಷದ ಲ್ಯಾಬ್ರಡಾರ್ ರಿಟ್ರೈವರ್ ನಿಂತಿರುವುದನ್ನು ಇದು ತೋರಿಸುತ್ತದೆ. ನಾಯಿ ಎಲ್ಲೆಡೆ ಮನುಷ್ಯನನ್ನು ಹಿಂಬಾಲಿಸುವುದನ್ನು ಕಾಣಬಹುದು. ಅವನನ್ನು ಸಂತೈಸಲು ನಾಯಿ ಕೂಡ ಅವನ ಪಕ್ಕದಲ್ಲಿ ಮಲಗುತ್ತಿರುವುದನ್ನು ಸಹ ವಿಡಿಯೋದಲ್ಲಿ ಕಾಣಬಹುದು.


ಇನ್‌ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಬೆನ್ಸನ್ ತಮ್ಮ ಸಾಕು ನಾಯಿಗೆ ತನ್ನೊಂದಿಗೆ ಇರಲು ಅವಕಾಶ ನೀಡಲಾಗಿದೆ ಎಂದು ಹೇಳಿದ್ದಾರೆ. "ಅವನನ್ನು ಇಲ್ಲಿ ನನ್ನ ಜೊತೆ ಆಸ್ಪತ್ರೆಯಲ್ಲಿ ಇರುವುದು ನನಗೆ ಮಾತ್ರವಲ್ಲ, ನನ್ನ ಹೆಣ್ಣು ಮಕ್ಕಳಿಗೂ ಧೈರ್ಯ ನೀಡಿತು. ಮ್ಯಾಗ್ನಸ್ ನನ್ನೊಂದಿಗೆ ಹಗಲು ರಾತ್ರಿ ಇರುವುದು ಅವನಿಗೆ ಅರ್ಥವಾಗುವುದಕ್ಕಿಂತ ಹೆಚ್ಚಿನ ಪ್ರೀತಿಯನ್ನು ನನಗೆ ನೀಡಿತು. ನನ್ನ ಮಗನಿಗೆ ನಾನು ಕೃತಜ್ಞನಾಗಿದ್ದೇನೆ" ಎಂದು ಬರೆದುಕೊಂಡಿದ್ದಾರೆ.


ಹೃದ್ರೋಗ ಕಾಯಿಲೆಯಿಂದ ಬಳಲುತ್ತಿದ್ದ ಬೆನ್ಸನ್


ಬೆನ್ಸನ್ ಅವರು ಎದೆ ನೋವು ಮತ್ತು ಉಸಿರಾಟದ ತೊಂದರೆಯನ್ನು ಅನುಭವಿಸುತ್ತಿರುವುದಾಗಿ ವಿವರಿಸಿದರು, ನಂತರ ಅವರಿಗೆ ಕಾರ್ಡಿಯೋಮಯೋಪತಿ ಇದೆ ಅಂತ ಹೇಳಿದರು. 35 ವರ್ಷಗಳಿಂದ ಕೆಲಸ ಮಾಡುತ್ತಿರುವ ಬೆನ್ಸನ್ ಅವರು ಈ ಸ್ಥಿತಿಯು ಚಿಕ್ಕ ವಯಸ್ಸಿನಲ್ಲಿ ಹೃದ್ರೋಗ ಮತ್ತು ಹೃದಯಾಘಾತದ ಕುಟುಂಬದ ಇತಿಹಾಸದಿಂದಾಗಿ ಸಂಭವಿಸಿದೆ ಎಂದು ಹೇಳುತ್ತಾರೆ.




"ನಾನು 35 ವರ್ಷಗಳಿಂದ ವ್ಯಾಯಾಮ ಮಾಡುತ್ತಿದ್ದರೂ, ಆರೋಗ್ಯಕರವಾಗಿ ತಿನ್ನುತ್ತಿದ್ದರೂ, ಎನ್‌ವೈಸಿ ಮ್ಯಾರಥಾನ್ ಅನ್ನು ಓಡಿದ್ದೇನೆ, ಅನೇಕ ಸ್ಪಾರ್ಟನ್ ರೇಸ್ ಗಳನ್ನು ಪೂರ್ಣಗೊಳಿಸಿದ್ದೇನೆ ಮತ್ತು ಕ್ರಾವ್ ಮಾಗಾ ಮತ್ತು ಬಾಕ್ಸಿಂಗ್ ನಲ್ಲಿ ಸಹ ತರಬೇತಿ ಪಡೆದಿದ್ದರೂ, ಕಾರ್ಡಿಯೋಮಯೋಪತಿ ಕಾಯಿಲೆಗೆ ಗುರಿಯಾದ ಅಪರೂಪದ ಪ್ರಕರಣಗಳಲ್ಲಿ ನನ್ನದೂ ಒಂದು ಅಂತ ಹೇಳಿದ್ದಾರೆ. ನೋವಿನ ಸಂಗತಿಯೆಂದರೆ ನೀವು ಎಷ್ಟೇ ವ್ಯಾಯಾಮ ಮಾಡಿದರೂ ಸಹ ನಿಮ್ಮ ಜೆನೆಟಿಕ್ಸ್ ಅನ್ನು ಸೋಲಿಸಲು ಸಾಧ್ಯವಾಗುವುದಿಲ್ಲ. ಇದು ಒಂದು ರೀತಿ ಅಲೆಯ ವಿರುದ್ಧವಾಗಿ ಈಜಿದಂತೆ" ಎಂದು ಅವರು ಹೇಳಿದರು.


ಪೋಸ್ಟ್ ನಲ್ಲಿ ತಮ್ಮ ನಾಯಿಯ ಬಗ್ಗೆ ಏನೆಲ್ಲಾ ಬರ್ದಿದ್ದಾರೆ ಬೆನ್ಸನ್?


ಸುದೀರ್ಘ ಪೋಸ್ಟ್ ನಲ್ಲಿ ಅವರು ತಮ್ಮ ಸ್ನೇಹಿತರು, ಕುಟುಂಬ ಮತ್ತು ಅವರ ನಾಯಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ. "ಅದೃಷ್ಟವಶಾತ್ ಮ್ಯಾಗ್ನಸ್ ನನ್ನೊಂದಿಗೆ ರಾತ್ರಿ ಹಗಲು ನನ್ನೊಂದಿಗೆ ಉಳಿಯಲು ಅವಕಾಶ ನೀಡಲಾಯಿತು, ಏಕೆಂದರೆ ಅವನು ನನ್ನ ಸಾಕು ನಾಯಿಯೂ ಹೌದು. ನನ್ನನ್ನು ಆರಾಮವಾಗಿರಿಸಿತು ಮತ್ತು ಪ್ರಸ್ತುತ ಪರಿಸ್ಥಿತಿಯಿಂದ ನನ್ನ ಮನಸ್ಸನ್ನು ಸ್ವಲ್ಪ ಹಗುರಗೊಳಿಸಿತು. ಯಾವಾಗ ಮುದ್ದಾಡಬೇಕು ಮತ್ತು ಯಾವಾಗ ಸ್ವಲ್ಪ ತಂಟೆ ಮಾಡಬೇಕು ಅಂತ ಅದಕ್ಕೆ ಚೆನ್ನಾಗಿ ತಿಳಿದಿದೆ. ಅದು ವೈದ್ಯಕೀಯ ಸಿಬ್ಬಂದಿಯನ್ನು ನಗುವಂತೆ ಮಾಡಿದೆ ಮತ್ತು ನನ್ನ ಇಬ್ಬರು ಹೆಣ್ಣು ಮಕ್ಕಳಿಗೆ ಧೈರ್ಯ ನೀಡಿದೆ. ನಾನು ಈ ನಾಯಿಯನ್ನು ತುಂಬಾನೇ ಪ್ರೀತಿಸುತ್ತೇನೆ” ಎಂದು ಬರೆದಿದ್ದಾರೆ.




ಈ ವೀಡಿಯೋಗೆ ಇದುವರೆಗೂ 6.5 ಮಿಲಿಯನ್ ವೀಕ್ಷಣೆಗಳು ಮತ್ತು 9 ಲಕ್ಷಕ್ಕೂ ಹೆಚ್ಚು ಲೈಕ್ ಗಳು ಬಂದಿವೆ. ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು "ತುಂಬಾ ಸುಂದರವಾಗಿದೆ" ಎಂದು ಬರೆದರೆ, ಇನ್ನೊಬ್ಬ ಬಳಕೆದಾರರು "ಕಾಳಜಿ ವಹಿಸಿ, ಮ್ಯಾಗ್ನಸ್ ಖಂಡಿತವಾಗಿಯೂ ನಿಮ್ಮ ದೇವದೂತ. ರಾಕಿಂಗ್ ಜೋಡಿಗೆ ನಮ್ಮ ಪ್ರೀತಿ ಇರುತ್ತೆ” ಅಂತ ಬರೆದಿದ್ದಾರೆ.

First published: