Video: ಡೆಲಿವರಿ ಬಾಯ್​ ಜೊತೆಗೆ ಸ್ಕೂಟರ್​ನಲ್ಲಿ ಮನೆ ಮನೆಗೆ ತೆರಳಿ ಪಿಜ್ಜಾ ಡೆಲಿವರಿ ಮಾಡುವ ಚಾರ್ಲಿ!

ಇನ್​​ಸ್ಟಾಗ್ರಾಂನಲ್ಲಿ ಈ ವಿಡಿಯೋ ವೈರಲ್​ ಆಗಿದೆ. ಶಿವಾಂಗ್ ಎಂಬ ಬಳಕೆದಾರ ಈ ವಿಡಿಯೋವನ್ನು ಜುಲೈ 31 ರಂದು ಹಂಚಿಕೊಂಡಿದ್ದಾರೆ. ಶಿವಾಂಗ್ ಈ ವಿಡಿಯೋದೊಂದಿಗೆ ಶೀರ್ಷಿಕೆಯನ್ನು ನೀಡಿದ್ದಾರೆ.

ಜ್ಯಾಕ್ ಮತ್ತು ಡೆಲಿವರಿ ಬಾಯ್​​

ಜ್ಯಾಕ್ ಮತ್ತು ಡೆಲಿವರಿ ಬಾಯ್​​

  • Share this:
    ಶ್ವಾನ (Dog) ನಿಯತ್ತಿನ ಪ್ರಾಣಿ. ಒಂದು ಬಾರಿ ಆಹಾರ ಹಾಕಿದರೆ ಅಥವಾ ಮುದ್ದಿಸಿದರೆ ಸಾಕು, ಸದಾ ಗುರುತಿಸುವ, ಬಾಲ ಅಲ್ಲಾಡಿಸುವ ಮೂಲಕ ಹತ್ತಿರ ಬರುತ್ತದೆ. ಹಾಗಾಗಿ ಬಹುತೇಕರು ಮನೆಯಲ್ಲಿ ಈ ನಿಯತ್ತಿನ ಪ್ರಾಣಿಯನ್ನು ಸಾಕುತ್ತಾರೆ. ಅದರಲ್ಲೂ ಹುಡುಗಿಯರಿಗೆ (Girls) ಶ್ವಾನ ಎಂದರೆ ಬಲು ಪ್ರೀತಿ (Love). ಆದರೆ ಇಲ್ಲೊಂದು ವಿಡಿಯೋ (Video) ನೋಡಿದ್ದೀರಾ?. ಈ ಶ್ವಾನ ಪಿಜ್ಜಾ ಡೆಲಿವರಿ ಬಾಯ್​ಗೆ ಕಂಪನಿ ನೀಡುತ್ತಿದೆ. ಆತನೊಂದಿಗೆ ಸ್ಕೂಟರ್​ ಮುಂಭಾಗ ಕುಳಿತುಕೊಂಡು ಮನೆ ಮನೆಗೆ ಡೆಲಿವರಿ ಮಾಡುತ್ತಿದ್ದೆ. ಸದ್ಯ ಈ ಶ್ವಾನದ ಪ್ರೀತಿಯನ್ನು ಕಂಡು ಜನರು ಸಾಮಾಜಿಕ ಜಾಲತಾಣದಲ್ಲಿ (Social Media) ಬಗೆ ಬಗೆಯ ಕಾಮೆಂಟ್​ ಬರೆಯುತ್ತಿದ್ದಾರೆ.

    ಇನ್​​ಸ್ಟಾಗ್ರಾಂನಲ್ಲಿ ಈ ವಿಡಿಯೋ ವೈರಲ್​ ಆಗಿದೆ. ಶಿವಾಂಗ್ ಎಂಬ ಬಳಕೆದಾರ ಈ ವಿಡಿಯೋವನ್ನು ಜುಲೈ 31 ರಂದು ಹಂಚಿಕೊಂಡಿದ್ದಾರೆ. ಶಿವಾಂಗ್ ಈ ವಿಡಿಯೋದೊಂದಿಗೆ ಶೀರ್ಷಿಕೆಯನ್ನು ನೀಡಿದ್ದಾರೆ. "ಇದು ನಿಜವಾದ ಸ್ನೇಹ ಹೇಗಿರುತ್ತದೆ. ಯಾವುದೇ ಸಮಯದಲ್ಲಿ ಈ ನಾಯಿ ತನ್ನ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಯಾವಾಗಲೂ ಅವನೊಂದಿಗೆ ಬರುತ್ತದೆ‘‘ ಎಂದು ಬರೆದಿದ್ದಾರೆ.

    ’’ಈ ಮುದ್ದಾದ ಶ್ವಾನದ ಹೆಸರು ಜ್ಯಾಕ್, ಅವನು ಯಾವಾಗಲೂ ಡೆಲಿವರಿಗಾಗಿ ಈ ವ್ಯಕ್ತಿಯೊಂದಿಗೆ ಹೋಗುತ್ತಾನೆ. ಅವನು ತನ್ನ ಸೇವೆ ಮತ್ತು ವೇಗದ ವಿತರಣೆಗಾಗಿ 10/10 ಮೀಸಲಾದ ಉದ್ಯೋಗಿ" ಎಂದು ಅವರು ಬರೆದಿದ್ದಾರೆ.

    ಪಿಜ್ಜಾ ಡೆಲಿವರಿ ಬಾಯ್​ ಮನೆಯೊಂದರ ಬಳಿ ಬಂದು ಆ ಮನೆಯ ಮಾಲೀಕನಿಗೆ ಪಿಜ್ಜಾ ಡೆಲಿವರಿ ಮಾಡುತ್ತಾನೆ. ಈ ವೇಳೆ ಆತನನೊಂದಿಗೆ ಶ್ವಾನವು ಇರುತ್ತದೆ. ಡೆಲಿವರಿ ಮಾಡಿದ ಬಳಿಕ ಸ್ಕೂಟರ್​ ಹತ್ತಿರ ಹೋದಾಗ ಶ್ವಾನ ಸ್ಕೂಟರ್​ನ ಮೇಲೇರಿ ಕುಳಿತುಕೊಳ್ಳುತ್ತದೆ. ನಂತರ ಡೆಲಿವರಿ ಬಾಯ್​ ಮತ್ತು ಶ್ವಾನ ಸ್ಕೂಟರ್​ನಲ್ಲಿ ಬೇರೆಡೆಗೆ ಪಿಜ್ಜಾ ಡೆಲಿವರಿ ಮಾಡಲು ಹೋಗುತ್ತಾರೆ.

    ಸದ್ಯ ಈ ವಿಡಿಯೋ ವೈರಲ್​ ಆಗುತ್ತಿದೆ. ವಿಡಿಯೋವನ್ನು ಹಂಚಿಕೊಂಡಾಗಿನಿಂದ 1.3 ಮಿಲಿಯನ್ ವೀಕ್ಷಣೆಗಳು ಮತ್ತು 1.5 ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಸಂಗ್ರಹಿಸಲಾಗಿದೆ. ಶ್ವಾನ ಮತ್ತು ಡೆಲಿವರಿ ಬಾಯ್​ನ ನಡುವಿನ ಈ ಅವಿನಾಭಾವ ಸಂಬಂಧಕ್ಕಾಗಿ ಬಳಕೆದಾರರು ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತಿದ್ದಾರೆ.










    View this post on Instagram






    A post shared by Shivang (@beanbag_jr)






    ಇದನ್ನೂ ಓದಿ: Mobile Checking Lovers: ಈ 3 ರಾಶಿಯವರು ತುಂಬಾ ಅನುಮಾನಾಸ್ಪದರು! ಗುಟ್ಟಾಗಿ ಸಂಗಾತಿಯ ಫೋನ್ ಚೆಕ್ ಮಾಡುತ್ತಾರೆ

    "ಈ ವೀಡಿಯೊ ಆರೋಗ್ಯಕರವಾಗಿದೆ. ದೇವರು ಈ ಶುದ್ಧ ಆತ್ಮಗಳನ್ನು ರಕ್ಷಿಸುತ್ತಾನೆ" ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ.

    ಇನ್ನೊಬ್ಬರು, "ಡೊಮಿನೋಸ್ ನಿಮಗೆ ಗೌರವಾನ್ವಿತ ಉದ್ಯೋಗಿ ಸಿಕ್ಕಿದ್ದಾರೆ" ಎಂದು ಬರೆದಿದ್ದಾರೆ.

    "ಓಹ್​ ಮೈ ಗಾಡ್​! ಇದು ಮುದ್ದಾಗಿದೆ!! ಬೆಲೆಯಿಲ್ಲ. ಈ ಜೋಡಿಯು ನನ್ನ ಸ್ಥಳದಲ್ಲಿ ಪಿಜ್ಜಾಗಳನ್ನು ವಿತರಿಸಬೇಕೆಂದು ನಾನು ಬಯಸುತ್ತೇನೆ" ಎಂದು ಮತ್ತೋರ್ವ ಬಳಕೆದಾರ ಕಾಮೆಂಟ್​ ಬರೆದಿದ್ದಾರೆ.

    ಇದನ್ನೂ ಓದಿ: Best Parenting Apps: ಪೋಷಕರೇ, ಮಕ್ಕಳ ಪಾಲನೆಯ ಬಗ್ಗೆ ಚಿಂತೆ ಮಾಡ್ಬೇಡಿ? ಈ 5 ಅಪ್ಲಿಕೇಶನ್‌ಗಳು ನಿಮಗೆ ಸಹಾಯ ಮಾಡುತ್ತೆ ನೋಡಿ

    Real Story: ಅತಿಯಾದ ಜಿಮ್​ ಅಪಾಯಕ್ಕೆ ಆಹ್ವಾನ! ಈತನ ಕೈ ಕತ್ತರಿಸಲು ಆ ಒಂದು ವರ್ಕೌಟ್​ ಕಾರಣ!

    ಈಗ ಜನರು ಫಿಟ್ನೆಸ್ (Fitness) ಬಗ್ಗೆ ಜಾಗೃತರಾಗಿದ್ದಾರೆ. ಪ್ರತಿಯೊಬ್ಬರೂ ಫಿಟ್ ಆಗಿರಲು ಪ್ರಯತ್ನಿಸುತ್ತಾರೆ. ಜನರಲ್ಲಿ ಜಾಗೃತಿ ಮೂಡಿಸಲು ಹಲವು ಕಾರಣಗಳಿವೆ. ಫಿಟ್‌ನೆಸ್‌ನಿಂದಾಗಿ, ವ್ಯಕ್ತಿಯು ಅನೇಕ ಕಾಯಿಲೆಗಳಿಂದ ದೂರವಿರಬಹುದು. ವ್ಯಾಯಾಮವು ದೇಹವನ್ನು ಆಕಾರದಲ್ಲಿರಿಸುತ್ತದೆ (Body Shape) ಮತ್ತು ಆತ್ಮವಿಶ್ವಾಸವನ್ನು ನೀಡುತ್ತದೆ. ಆದರೆ ಯಾವುದೇ ರೀತಿಯ ಮಾರ್ಗದರ್ಶನವಿಲ್ಲದೆ ಜಿಮ್‌ನಲ್ಲಿ (Gim) ವ್ಯಾಯಾಮವನ್ನು ಮಾಡಿದರೆ, ಅದು ಅಪಾಯಕ್ಕೆ ಅಹ್ವಾನವಾಗುವ ಸಾಧ್ಯತೆಯೂ ಇದೆ. ಇತ್ತೀಚೆಗಷ್ಟೇ ವ್ಯಕ್ತಿಯೊಬ್ಬರಿಗೆ ಇಂತಹದ್ದೇ ಘಟನೆ ಎದುರಾಗಿದೆ. ಈ ವಿಚಾರವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ (Social Media) ಹಂಚಿಕೊಂಡಿದ್ದಾರೆ.

    ಈ ವ್ಯಕ್ತಿಯ ಹೆಸರು ಗೇಬ್ ಲೀಶ್ಕೆ. ಎಲ್ಲರಂತೆಯೇ ನಾನು ಕೂಡ ಫಿಟ್​ ಆಗಿರಬೇಕು, ಬಾಡಿ ಶೇಪ್​ ಬದಲಾಯಿಸಿಕೊಳ್ಳಬೇಕು ಎಂದು ಬಯಸಿದ್ದರು. ಅದರಂತೆಯೇ ಜಿಮ್​ನಲ್ಲಿ ವರ್ಕೌಟ್​ ಮಾಡಲು ಪ್ರಾರಂಭಿಸಿದರು. ಆದರೆ ಒಂದು ದಿನ ಗೇಬ್ ಲೀಶ್ಕೆ ಜಿಮ್‌ನಲ್ಲಿ ಬೈಸೆಪ್ಸ್ ವ್ಯಾಯಾಮ ಮಾಡುವಾಗ ಗಾಯಗೊಂಡರು. ಅತಿಯಾದ ತೂಕವನ್ನು ಎತ್ತಿದ ಅವರಿಗೆ ಅಪಾಯ ಬಂದೊದಗಿತು. ಅವರ ಕಂಠನಾಳವು ಛಿದ್ರವಾಯಿತು. ಬಳಿಕ ವೈದ್ಯರ ಬಳಿ ತೆರಳಿದರು. ಆದರೆ ವೈದ್ಯರು ಹೇಳಿದ ಮಾತನ್ನು ಲೆಕ್ಕಿಸದೆ ಮತ್ತೆ ಜಿಮ್​ನತ್ತ ತೆರಳಿದರು.

    ಆದರೆ ವೈದ್ಯರು ನೀಡಿದ ಎಚ್ಚರಿಕೆಯ ಹೊರತಾಗಿಯೂ ಅವರು ವಿಶ್ರಾಂತಿ ಪಡೆಯದೆ ಜಿಮ್‌ಗೆ ತೆರಳಿದ್ದೇ ಇದಕ್ಕೆ ಮೂಲ ಕಾರಣವಾಗಿದೆ. ಅದರ ಫಲಿತಾಂಶವೇ ಅವರು ಊಹಿಸಲೂ ಸಾಧ್ಯವಾಗದಷ್ಟು ಅಪಾಯಕಾರಿಯಾಗಿತ್ತು. ವೈದ್ಯರು ಹೇಳಿದ ಮಾತನ್ನು ಕೇಳುತ್ತಿದ್ದರೆ ಹೀಗಾಗುತ್ತಿರಲಿಲ್ಲ. ಕೊನೆಗೆ ಇದರ ಪರಿಣಾಮವಾಗಿ ಗೇಬ್ ಲೀಶ್ಕೆ ತನ್ನ ಬಲ ಕೈಯನ್ನು ಕತ್ತರಿಸಬೇಕಾಯಿತು. ಇದರಿಂದಾಗಿ ಗೇಬ್ ಲೀಶ್ಕೆ ತುಂಬಾ ನೊಂದಿದ್ದಾರೆ. ಜಿಮ್​ಗೆ ಹೋಗುವವರು ಹೆಚ್ಚಿನ ಗಮನಹರಿಸಿ ಎಂದು ಹೇಳುತ್ತಿದ್ದಾರೆ. ತನಗಾದ ಕಷ್ಟ ಬೇರೆಯವರಿಗೆ ಆಗದೇ ಇರಲಿ ಎಂದು ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಗೇಬ್ ಲೀಶ್ಕೆ ಹೇಳಿಕೊಂಡಿದ್ದಾರೆ.
    Published by:Harshith AS
    First published: