• Home
  • »
  • News
  • »
  • trend
  • »
  • Viral News: ದೇಗುಲದಲ್ಲಿ ಗಣೇಶನಿಗೆ ನಮಸ್ಕರಿಸಿದ ನಾಯಿ, ವಿಡಿಯೋ ವೈರಲ್

Viral News: ದೇಗುಲದಲ್ಲಿ ಗಣೇಶನಿಗೆ ನಮಸ್ಕರಿಸಿದ ನಾಯಿ, ವಿಡಿಯೋ ವೈರಲ್

ಗಣಪತಿಗೆ ನಮಸ್ಕರಿಸಿದ ಶ್ವಾನ

ಗಣಪತಿಗೆ ನಮಸ್ಕರಿಸಿದ ಶ್ವಾನ

ಲ್ಯಾಬ್ರಡಾರ್ ತಳಿಯ ನಾಯಿ ತನ್ನ ಯಜಮಾನನೊಂದಿಗೆ ಗಣೇಶನ ದೇವಸ್ಥಾನಕ್ಕೆ ಬಂದಿದ್ದು ತನ್ನ ಯಜಮಾನನಂತೆ ಸಾಷ್ಟಾಂಗ ನಮಸ್ಕಾರ ಹಾಕುತ್ತಿರುವ ವಿಡಿಯೋ ಇದೀಗ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದೆ.

  • Trending Desk
  • Last Updated :
  • New Delhi, India
  • Share this:

    ನಮ್ಮ ಮನೆಯ ಸಾಕುಪ್ರಾಣಿಗಳು (Pet Animals) ನಮ್ಮನ್ನು ಎಷ್ಟೋ ವಿಷಯಗಳಲ್ಲಿ ಅನುಕರಣೆ ಮಾಡುತ್ತವೆ ಎಂಬುದಕ್ಕೆ ಹಲವಾರು ಉದಾಹರಣೆಗಳಿವೆ. ದನಕರುಗಳು, ಶ್ವಾನಗಳು (Dogs), ಬೆಕ್ಕುಗಳು, ಪಕ್ಷಿಗಳು ಹೀಗೆ ಮಾನವನೊಂದಿಗೆ ದೀರ್ಘಕಾಲ ಬಾಳಿದಂತೆ ಅವುಗಳೂ ಕೂಡ ಮಾನವರು ಮಾಡುವಂತೆಯೇ ಮಾಡುತ್ತವೆ. ಅದರಲ್ಲೂ ನಿಷ್ಠಾವಂತ ಪ್ರಾಣಿ ಎಂದೇ ಕರೆಯಿಸಿಕೊಳ್ಳುವ ಶ್ವಾನ (ನಾಯಿ) ಮಾನವರೊಂದಿಗೆ ಹೆಚ್ಚಿನ ಒಡನಾಟವನ್ನು ಹೊಂದಿದೆ.


    ಮನೆಯಲ್ಲಿರುವ ಕಿರಿಯರಿಗೆ ಹೇಗೆ ನೀವು ಉತ್ತಮ ಸಂಸ್ಕಾರಗಳನ್ನು ತಿಳಿಸಿಕೊಡುತ್ತೀರೋ ಹಾಗೆಯೇ ಕೆಲವರು ನಾಯಿಗಳಿಗೆ ತಮ್ಮ ಶಿಷ್ಟಾಚಾರಗಳನ್ನು ಸಂಪ್ರದಾಯಗಳನ್ನು ತಿಳಿಸಿಕೊಡುತ್ತಾರೆ. ಮನೆಯವರನ್ನು ಹೆಚ್ಚಾಗಿ ಹಚ್ಚಿಕೊಳ್ಳುವ ಶ್ವಾನಗಳು ಅವುಗಳಿಗೆ ಕಾಳಜಿತೋರಿಸುವ ಹಾಗೂ ಪ್ರೀತಿಮಾಡುವವರನ್ನು ಹೆಚ್ಚಾಗಿ ಅನುಸರಿಸುತ್ತವೆ. ಮನೆಯ ಯಜಮಾನ ಇಲ್ಲವೇ ಯಜಮಾನಿಯನ್ನು ತುಂಬಾ ಹಚ್ಚಿಕೊಳ್ಳುವ ಶ್ವಾನಗಳು ಅವರನ್ನೇ ಹೆಚ್ಚಾಗಿ ಹಿಂಬಾಲಿಸುತ್ತಿರುತ್ತವೆ ಮತ್ತು ಅವರನ್ನೇ ಅನುಕರಣೆ ಮಾಡುತ್ತವೆ.


    ಇದನ್ನೂ ಓದಿ: ಬಾಯಿಯಿಂದ ಹೊಟ್ಟೆಯೊಳಗೆ ಹೊಕ್ಕ 4 ಅಡಿ ಹಾವು! ನೋಡಿ ವೈದ್ಯರೇ ಗಾಬರಿ


    ಗಣೇಶನಿಗೆ ಶಿರಬಾಗಿ ವಂದಿಸುವ ಶ್ವಾನ


    ಇದೀಗ ಇಂತಹ ದೃಷ್ಟಾಂತಗಳಿಗೆ ಸಾಕ್ಷಿ ಎಂಬಂತೆ ಲ್ಯಾಬ್ರಡಾರ್ ತಳಿಯ ನಾಯಿ ತನ್ನ ಯಜಮಾನನೊಂದಿಗೆ ಗಣೇಶನ ದೇವಸ್ಥಾನಕ್ಕೆ ಬಂದಿದ್ದು ತನ್ನ ಯಜಮಾನನಂತೆ ಸಾಷ್ಟಾಂಗ ನಮಸ್ಕಾರ ಹಾಕುತ್ತಿರುವ ವಿಡಿಯೋ ಇದೀಗ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದೆ. ಆ ನಾಯಿ ಎಷ್ಟು ಶಿಸ್ತಿನಿಂದ ವರ್ತಿಸಿದೆ ಎಂದರೆ ದೇವಾಲಯದ ಹೊರಗೆಯೇ ನಿಂತು ತನ್ನ ಪ್ರಾರ್ಥನೆಯನ್ನು ಗಣಪನಿಗೆ ಸಲ್ಲಿಸುತ್ತಿದೆ. ಇನ್ನು ನಾಯಿಯೊಂದಿಗೆ ಬಂದಿದ್ದ ವ್ಯಕ್ತಿ ಕೂಡ ಸ್ವಲ್ಪ ಹೊತ್ತು ದೇವಾಲಯದ ಆವರಣದಲ್ಲಿಯೇ ನಿಂತು ಪ್ರಾರ್ಥನೆ ಸಲ್ಲಿಸಿದ್ದಾರೆ.


    ಗಣೇಶನ ಗುಡಿಯ ಮುಂದೆ ಶಿರಬಾಗುವ ಶ್ವಾನ


    ಈ ಘಟನೆ ನಡೆದ ಸ್ಥಳ ಕರಾರುವಕ್ಕಾಗಿ ಎಲ್ಲಿಯದು ಎಂಬುದು ತಿಳಿಯದೇ ಇದ್ದರೂ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದು, ನಾಯಿಯೊಂದಿಗಿರುವ ವ್ಯಕ್ತಿಯನ್ನು ವಿಶಾಲ್ ಎಂದು ಗುರುತಿಸಿದ್ದಾರೆ ಹಾಗೂ ದೇವಾಲಯವು ಪುಣೆಯಲ್ಲಿದೆ ಎಂದು ತಿಳಿಸಿದ್ದಾರೆ. ಈ ವ್ಯಕ್ತಿ ವಿಶಾಲ್ ಎಂದು ತಿಳಿಸಿರುವ ಬಳಕೆದಾರರು, ಪುಣೆಯ ದುಗ್ಡುಶೇಟ್ ಗಣಪತಿ ಮಂದಿರದಲ್ಲಿ ಶ್ವಾನ ಹಾಗೂ ವಿಶಾಲ್ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.









    View this post on Instagram






    A post shared by Pure thrift (@thrifts_grace)





    ಇನ್‌ಸ್ಟಾದಲ್ಲಿ ವೈರಲ್ ಆಗಿರುವ ವಿಡಿಯೋ


    ಥ್ರಿಪ್ಟ್ಸ್ ಗ್ರೇಸ್ ಹೆಸರಿನ ಬಳಕೆದಾರರು ಇನ್‌ಸ್ಟಾಗ್ರಾಮ್‌ನಲ್ಲಿ ಈ ಸುಂದರವಾದ ವಿಡಿಯೋವನ್ನು ಹಂಚಿಕೊಂಡಿದ್ದು ಶ್ವಾನದ ಭಕ್ತಿಗೆ ಮನಸೋತಿರುವುದಾಗಿ ತಿಳಿಸಿದ್ದಾರೆ. ವಿಡಿಯೋ ವೀಕ್ಷಿಸಿದ ಬಳಕೆದಾರರು ಕೂಡ ಶ್ವಾನದ ಭಕ್ತಿಪರವಶತೆಗೆ ಕಾಮೆಂಟ್ ಮಾಡಿದ್ದು ಬೇರೆ ಬೇರೆ ಕಾಮೆಂಟ್‌ಗಳನ್ನು ಕಳುಹಿಸಿದ್ದಾರೆ ಹಾಗೂ ಎಮೋಜಿಗಳನ್ನು ನೀಡಿ ಶ್ವಾನದ ಭಕ್ತಿಪರವಶತೆಯನ್ನು ಕೊಂಡಾಡಿದ್ದಾರೆ.


    ಇದನ್ನೂ ಓದಿ: Mohan Bhagwat: ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬರೂ 'ಹಿಂದೂ', ಯಾರೂ ಪೂಜಾ ವಿಧಾನ ಬದಲಾಯಿಸುವ ಅಗತ್ಯವಿಲ್ಲ: ಮೋಹನ್ ಭಾಗವತ್


    ಬಳಕೆದಾರರ ಕಾಮೆಂಟ್‌ಗಳೇನು?


    ನ್ಯಾಚುರಲ್ ಚಾರ್ಮರ್ ಹೆಸರಿನ ಬಳಕೆದಾರರು ಬಪ್ಪನ ಎದುರಿನಲ್ಲಿ ಎಲ್ಲಾ ಪ್ರಾಣಿ ಪಕ್ಷಿಗಳು ತಲೆಬಾಗುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಮಮತಾ ಹೆಸರಿನ ಬಳಕೆದಾರರು ಗಣಪತಿ ಬಪ್ಪಾ ಮೊರಯಾ ಎಂಬ ಗಣಪನ ಘೋಷಣೆಯನ್ನೇ ಕಾಮೆಂಟ್‌ನಲ್ಲಿ ಬರೆದುಕೊಂಡಿದ್ದು ಎಮೋಜಿಗಳನ್ನು ಕಳುಹಿಸಿದ್ದಾರೆ. ಶೆಫಾಲಿ ಕೂಡ ಗಣಪನಿಗೆ ತಮ್ಮ ಪ್ರಾರ್ಥನೆಗಳನ್ನು ಕಳುಹಿಸಿದ್ದು ಎಮೋಜಿಗಳನ್ನು ಕಾಮೆಂಟ್ ರೂಪದಲ್ಲಿ ಕಳುಹಿಸಿದ್ದಾರೆ. ಇನ್ನು ಕೆಲವರು ಹೃದಯದ ಎಮೋಜಿಗಳನ್ನು ಕಾಮೆಂಟ್ ವಿಭಾಗದಲ್ಲಿ ಕಳುಹಿಸಿದ್ದು, ಗಣಪತಿಯ ವೈಭವವನ್ನು ಹಾಡಿಹೊಗಳಿದ್ದಾರೆ.


    ಇಂತಹುದೇ ಹಲವಾರು ದೃಷ್ಟಾಂತಗಳು


    ವಿಶಾಲ್ ಅವರೊಂದಿಗೆ ಬಂದಿರುವ ನಾಯಿಯು ತನ್ನ ಕೈಗಳನ್ನು ಊರಿ ಶಿರಬಾಗಿ ಗಣಪನಿಗೆ ವಿಶಾಲ್ ಅವರೊಂದಿಗೆ ನಮಸ್ಕರಿಸುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಇದೇ ರೀತಿಯ ಹಲವಾರು ವಿಡಿಯೋಗಳು ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಿದ್ದು ಮಹಿಳೆಯೊಬ್ಬರು ತಮ್ಮ ನಾಯಿಗಳಿಗೆ ಕೈಮುಗಿದು ಪ್ರಾರ್ಥಿಸುವುದನ್ನು ತಿಳಿಸಿಕೊಡುವ ವಿಡಿಯೋ ಕೂಡ ಸಖತ್ತಾಗಿ ಇಂಟರ್ನೆಟ್‌ನಲ್ಲಿ ಸದ್ದುಮಾಡಿತ್ತು.


    ನೆಲದ ಮೇಲೆ ಅಕ್ಕಪಕ್ಕ ಶ್ವಾನಗಳು ಕುಳಿತಿದ್ದವು. ನಾಯಿಗಳ ಮುಂದೆ ಆಹಾರವನ್ನು ಇರಿಸಲಾಗಿತ್ತು. ಕೈಗಳನ್ನು ಮುಗಿದು ಆ ಮಹಿಳೆ ನಾಯಿಗಳತ್ತ ನೋಡುತ್ತಾಳೆ. ಅನುಸರಣೆ ಇರುವ ಮಕ್ಕಳಂತೆ ನಾಯಿಗಳು ಆಕೆಯನ್ನು ಅನುಕರಿಸಿದ್ದು ಆಕೆ ಪ್ರಾರ್ಥನೆ ಮುಗಿಸುವವರೆಗೆ ಕೈಮುಗಿದುಕೊಂಡೇ ಇದ್ದವು. ಹೀಗೆ ನಾಯಿ ಇಲ್ಲವೇ ಯಾವುದೇ ಪ್ರಾಣಿ ಇರಲಿ ಮನುಷ್ಯರನ್ನು ಅನುಕರಿಸುವ ಹಲವಾರುವ ವಿಡಿಯೋಗಳು ಉದಾಹರಣೆಗಳು ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಲೇ ಇರುತ್ತವೆ.

    Published by:Precilla Olivia Dias
    First published: