Dog Beers: ನಾಯಿ-ಬೆಕ್ಕುಗಳಿಗೂ ಲಭ್ಯ ಆಲ್ಕೋಹಾಲ್ ಫ್ರೀ ಬಿಯರ್-ವೈನ್‍

ಇನ್ನು ಮುಂದೆ ಮದ್ಯ ಸೇವನೆಗೆ ಜೊತೆಗಾರರು ಬೇಕೆಂದು, ನಿಮ್ಮ ಮನುಷ್ಯ ಸ್ನೇಹಿತರಿಗಾಗಿ ಕಾಯಬೇಕೆಂದಿಲ್ಲ. ನಿಮ್ಮ ನಾಯಿಯೊಂದಿಗೋ ಬೆಕ್ಕಿನೊಂದಿಗೆ ಬಿಯರ್ ಅಥವಾ ವೈನ್ ಕುಡಿಯುತ್ತಾ ಚಿಯರ್ಸ್ ಎನ್ನಬಹುದು..!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬಹಳಷ್ಟು ಸಲ ನಮಗಾಗಿ ನಮ್ಮ ಸ್ನೇಹಿತರು ಮಾಡದ್ದನ್ನು, ನಮ್ಮ ಸಾಕು ಪ್ರಾಣಿಗಳು ಮಾಡಿರುತ್ತವೆ. ಹಾಗೆ ನೋಡಿದರೆ ಪ್ರಾಣಿಗಳು (Animals) ಮನುಷ್ಯರಿಗಿಂತಲೂ ಒಳ್ಳೆಯ ಸ್ನೇಹಿತರಾಗಬಲ್ಲವು ಎಂಬ ಮಾತನ್ನು ಅಲ್ಲಗಳೆಯುವಂತಿಲ್ಲ. ಅವುಗಳಲ್ಲಿ ಇರುವ ನಂಬಿಕಸ್ತ ಗುಣ ಮತ್ತು ಕಾರ್ಯಕ್ಷಮತೆ ನಮ್ಮನ್ನು ಸರಿಯಾದ ಸಮಯಕ್ಕೆ ಕಾಪಾಡುವುದುಂಟು. ಹಾಗಂತ, ಮದ್ಯಪಾನ ಮಾಡಲು ಯಾರಾದರೂ ಜೊತೆ ನೀಡುವವರು ಬೇಕಿದ್ದರೆ? ಈ ವಿಷಯದಲ್ಲಿ ನಿಮ್ಮ ನಾಯಿ ಅಥವಾ ಬೆಕ್ಕು ಸಹಾಯಕ್ಕೆ ಬರುವುದಿಲ್ಲ. ಏಕೆಂದರೆ ಮದ್ಯಪಾನ ನಿಮ್ಮ ನಾಲ್ಕು ಕಾಲಿನ ಸ್ನೇಹಿತರ ಪಾಲಿಗೆ ವಿಷ. ಆದರೆ, ಇನ್ನು ಮೇಲಿಂದ ಆ ವಿಷಯಕ್ಕೂ ನಿಮ್ಮ ಮನುಷ್ಯ ಸ್ನೇಹಿತರಿಗಾಗಿ ಕಾಯಬೇಕೆಂದಿಲ್ಲ. ನಿಮ್ಮ ನಾಯಿಯೊಂದಿಗೋ ಬೆಕ್ಕಿನೊಂದಿಗೆ ಬಿಯರ್ ಅಥವಾ ವೈನ್ ಕುಡಿಯುತ್ತಾ ಚಿಯರ್ಸ್ ಎನ್ನಬಹುದು. ಹೌದು, ಇದೀಗ ಬೆಕ್ಕುಗಳಿಗಾಗಿ ಮತ್ತು ನಾಯಿಗಳಿಗಾಗಿ ಬಿಯರ್ (Dog Beers) ಲಭ್ಯವಿದೆ.

ಹೀಗಾಗಿ, ಇನ್ನು ಮುಂದೆ ಮದ್ಯ ಸೇವನೆಗೆ ಜೊತೆಗಾರರು ಬೇಕೆಂದು, ನಿಮ್ಮ ಮನುಷ್ಯ ಸ್ನೇಹಿತರಿಗಾಗಿ ಕಾಯಬೇಕೆಂದಿಲ್ಲ. ನಿಮ್ಮ ನಾಯಿಯೊಂದಿಗೋ ಬೆಕ್ಕಿನೊಂದಿಗೆ ಬಿಯರ್ ಅಥವಾ ವೈನ್ ಕುಡಿಯುತ್ತಾ ಚಿಯರ್ಸ್ ಎನ್ನಬಹುದು..!

ಆದರೆ, ಈ ವೈನ್ ಅಥವಾ ಬಿಯರ್‌ಗಳನ್ನು ಕುಡಿದು ನಿಮ್ಮ ನಾಯಿ, ಬೆಕ್ಕುಗಳು ಮತ್ತಿನಲ್ಲಿ ತೂರಾಡುತ್ತವೆ ಎಂದುಕೊಳ್ಳಬೇಡಿ, ಏಕೆಂದರೆ ಸದ್ಯಕ್ಕೆ ಅವುಗಳಿಗೆಂದು ಮಾರುಕಟ್ಟೆಯಲ್ಲಿ ಲಭ್ಯ ಇರುವ ಬಿಯರ್, ವೈನ್‍ಗಳು ಆಲ್ಕೋಹಾಲ್ ರಹಿತವಾದದ್ದು. ಅಷ್ಟು ಮಾತ್ರವಲ್ಲ, ಅವುಗಳು ಕಾರ್ಬೋನೇಟೆಡ್ ಕೂಡ ಅಲ್ಲ, ದ್ರಾಕ್ಷಿ ರಹಿತವೂ ಹೌದು.

ಇದನ್ನೂ ಓದಿ: ಪಾಪರಾಜಿಗಳ ಕಣ್ಣು ತಪ್ಪಿಸಲು ಕಾರಿನ ಬೂಟ್​ ಸ್ವೇಸ್​ನಲ್ಲಿ ಬಚ್ಚಿಟ್ಟುಕೊಳ್ಳುವ Janhvi Kapoor

ಆ ಬಿಯರ್ ಮತ್ತು ವೈನ್‍ಗಳನ್ನು ತಯಾರಿಸಿರುವ ಬ್ರ್ಯಾಂಡ್‍ಗಳು ತಮ್ಮ ಈ ಉತ್ಪನ್ನಗಳು, ಸಾಕು ಪ್ರಾಣಿಗಳ ಆರೋಗ್ಯಕ್ಕೆ ಉಪಯುಕ್ತವಾಗುವಂತಹ ಪದಾರ್ಥಗಳಿಂದ ತಯಾರಿಸಲ್ಪಟ್ಟಿವೆ ಎಂದು ಹೇಳಿಕೊಂಡಿವೆ. ಉದಾಹರಣೆಗೆ, ಅಮೆಜಾನ್‍ನಂತಹ ಆನ್‍ಲೈನ್ ಶಾಪಿಂಗ್ ಸೈಟ್‍ನಲ್ಲಿ 500 ರೂ.ಗಿಂತಲೂ ಕಡಿಮೆ ದರದಲ್ಲಿ ನಾಯಿ ಬಿಯರ್ ಮತ್ತು ಸಾಕು ಪ್ರಾಣಿಗಳಿಗೆ ವೈನ್ ಲಭ್ಯ ಇದೆ.

ವಿಟಮಿನ್‍ಗಳು-ಮಿನರಲ್‍ಗಳಿರುವ ಬಿಯರ್

ನಾಯಿ ಬಿಯರ್‌ನಲ್ಲಿ ವಿಟಮಿನ್‍ಗಳು, ಮಿನರಲ್‍ಗಳು ಮತ್ತು ಆ್ಯಂಟಿಆಕ್ಸಿಡೆಂಟ್‍ಗಳಿವೆ. ನಾಯಿ ಹಾಗೂ ಬೆಕ್ಕುಗಳೆರಡೂ ಕುಡಿಯಬಲ್ಲ ವೈನ್‍ನಲ್ಲಿ ‘ಎಲ್ಡರ್ ಫ್ಲವರ್, ನೆಟ್ಲ್, ಜಿನ್‍ಸೆಂಗ್, ನಿಂಬೆ ಹೂ ಮತ್ತು ಕ್ಯಾರೆಟ್ ‘ ಬಳಸಲಾಗಿದೆ ಎಂದು ಬ್ರ್ಯಾಂಡ್‌ ಹೇಳಿಕೊಂಡಿದೆ. ನಾಲ್ಕು ತಿಂಗಳು ವಯಸ್ಸಿನ ಮೇಲ್ಪಟ್ಟ ಸಾಕು ಪ್ರಾಣಿಗಳು ಈ ವೈನನ್ನು ಕುಡಿಯಬಹುದು ಎಂದು ಬ್ರ್ಯಾಂಡ್ ತಿಳಿಸಿದೆ.

ಇದನ್ನೂ ಓದಿ: Salman Khan-Akshay Kumar ಸೇರಿದಂತೆ 30 ಸೆಲೆಬ್ರಿಟಿಗಳ ವಿರುದ್ಧ ಪ್ರಕರಣ ದಾಖಲು..!

ಸಾಕು ಪ್ರಾಣಿಗಳಿಗಾಗಿ ತಯಾರಿಸಲಾದ ವೈನ್ ಮತ್ತು ಬಿಯರ್‌ಗಳ ಬ್ರ್ಯಾಂಡ್‌ಗಳು, ತಾವು ಅದನ್ನು ಪಶು ವೈದ್ಯರ ಸಲಹೆ ಪಡೆದು ಅಥವಾ ಪಶುವೈದ್ಯರಿಂದ ಅಂಗೀಕಾರ ಪಡೆದ ನಂತರ ತಯಾರಿಸಿರುವುದಾಗಿ ಹೇಳಿಕೊಂಡಿವೆ. ಆದರೂ, ನಿಮ್ಮ ಸಾಕು ಪ್ರಾಣಿಗಳಿಗೆ ಅವುಗಳನ್ನು ಸೇವಿಸಲು ಕೊಡುವ ಮೊದಲು, ನಿಮ್ಮ ಸಾಕು ಪ್ರಾಣಿಯ ಪಶು ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯುವುದು ಉತ್ತಮ.

ಇದನ್ನೂ ಓದಿ: RIP Aruna Bhatia: ಅಕ್ಷಯ್​ ಕುಮಾರ್​ ತಾಯಿ ಅರುಣಾ ಭಾಟಿಯಾ ಇನ್ನಿಲ್ಲ

ಈ ಬಿಯರ್ ಮತ್ತು ವೈನ್‍ಗಳು ಸಾಮಾನ್ಯವಾಗಿ ನೈಸರ್ಗಿಕ ಅಥವಾ ಗಿಡಮೂಲಿಕೆಗಳ ಉತ್ಪನ್ನಗಳಿಂದ ತಯಾರಿಸಲ್ಪಟ್ಟಿರುತ್ತವೆ. ಪ್ರಾಣಿಗಳಿಗೆ ಅದರಿಂದ ಯಾವುದೇ ತೊಂದರೆ ಇಲ್ಲ, ಆದರೆ ನಿಮ್ಮ ಸಾಕು ಪ್ರಾಣಿ ಗ್ಯಾಸ್ಟ್ರೋಎಂಟರಾಲಾಜಿಕಲ್ ಸಮಸ್ಯೆಗಳು ಅಥವಾ ಮಧುಮೇಹದಿಂದ ಬಳಲುತ್ತಿದ್ದರೆ, ವೈದ್ಯರ ಸಲಹೆ ಪಡೆದು ಅವುಗಳಿಗೆ ಈ ವೈನ್ ಮತ್ತು ಬಿಯರ್ ಉತ್ಪನ್ನಗಳನ್ನು ನೀಡುವುದು ಸೂಕ್ತ.
Published by:Anitha E
First published: