ನಾಯಿಯ ಎದುರೇ ರಾಜಾರೋಷವಾಗಿ ಅಡ್ಡಾಡುತ್ತಿವೆ ಬೆಕ್ಕಿನ ಮರಿಗಳು.! ವಿಡಿಯೋ ನೋಡಿ

Viral Video: ಈ ವಿಡಿಯೋವನ್ನು ಆಗಸ್ಟ್ 22ರಂದು ಹಂಚಿ ಕೊಂಡಾಗಿನಿಂದಲೂ 33,000ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದು, 2000ಕ್ಕೂ ಹೆಚ್ಚು ಜನರು ಈ ಮುದ್ದಾದ ವೀಡಿಯೋಗೆ ಮನಸೋತು ಪ್ರತಿಕ್ರಿಯೆ ನೀಡಿದ್ದಾರೆ.

ನಾಯಿ ಮತ್ತು ಬೆಕ್ಕಿನ ಮರಿಗಳು

ನಾಯಿ ಮತ್ತು ಬೆಕ್ಕಿನ ಮರಿಗಳು

  • Share this:

ನಮ್ಮಲ್ಲಿ ಯಾರಾದರೂ ಚಿಕ್ಕ ಪುಟ್ಟ ವಿಷಯಗಳಿಗೆ ಕಿತ್ತಾಡುತ್ತಿದ್ದರೆ, ನೀವೇನು ಒಳ್ಳೆ ನಾಯಿ - ಬೆಕ್ಕಿನ ಥರ ಕಿತ್ತಾಡುತ್ತೀರಿ ಎನ್ನುವುದುಂಟು. ಹೀಗೆ ನಾಯಿ ಮತ್ತು ಬೆಕ್ಕು ಒಂದು ರೀತಿಯಲ್ಲಿ ಸಾಂಪ್ರದಾಯಿಕ ಎದುರಾಳಿಗಳು ಎಂದು ಹೇಳಬಹುದು. ನಾಯಿ ಬೆಕ್ಕು ಕಿತ್ತಾಡುವುದು, ನಾಯಿ ಬೆಕ್ಕನ್ನು ಅಟ್ಟಿಸಿಕೊಂಡು ಹೋಗುವುದು ನಾವೆಲ್ಲಾ ಸಾಮಾನ್ಯವಾಗಿ ನೋಡಿರುತ್ತೇವೆ. ಆದರೆ ಇಲ್ಲಿ ಒಂದು ವಿಚಿತ್ರವಾದ ವಿಡಿಯೋ ಇದೆ. ಒಂದು ಕೋಣೆಯಲ್ಲಿ ನಾಯಿಯ ಎದುರುಗಡೆ ಒಂಚೂರೂ ಭಯವಿಲ್ಲದೆ ಮೂರು ಬೆಕ್ಕಿನ ಮರಿಗಳು ರಾಜಾರೋಷವಾಗಿ ಅಡ್ಡಾಡುತ್ತಿವೆ ಮತ್ತು ಆಟ ಆಡುತ್ತಿವೆ.ನಾಯಿ ಮಾತ್ರ ಏನೋ ಚಿಂತೆಯಲ್ಲಿ ಕೂತಂತೆ ಒಂದು ಕಡೆ ಕೂತು ಈ ಬೆಕ್ಕಿನ ಮರಿಗಳ ಆಟವನ್ನು ಮೂಕ ಪ್ರೇಕ್ಷಕನಂತೆ ವೀಕ್ಷಿಸುತ್ತಿರುವುದನ್ನು ನಾವು ಕಾಣಬಹುದಾಗಿದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮವಾದ ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದು ವೈರಲ್ ಆಗಿದ್ದು, ಜನರನ್ನು ವಿಸ್ಮಿತರನ್ನಾಗಿಸಿದೆ ಎಂದರೆ ಸುಳ್ಳಲ್ಲ.


ಈ ವಿಡಿಯೋದಲ್ಲಿ ನಾಯಿಯೂ ಈ ಮೂರು ಬೆಕ್ಕಿನ ಮರಿಗಳನ್ನು ನೋಡಿಕೊಳ್ಳುತ್ತಿದೆ ಎಂದು ಅರ್ಥವಾಗುತ್ತದೆ. ಆ ಮೂರು ಮುದ್ದಾದ ಬೆಕ್ಕಿನ ಮರಿಗಳಲ್ಲಿ ಒಂದು ಮರಿ ಮಾತ್ರ ನಾಯಿಗೆ ತುಂಬಾ ಹತ್ತಿರ ಹೋಗಿ ಅದರ ಮುಖದ ಮುಂದೆಯೇ ಏನೂ ಹೆದರಿಕೆಯಿಲ್ಲದೆ ತನ್ನ ಬಾಲ ಅಲ್ಲಾಡಿಸುತ್ತಾ ಅಡ್ಡಾಡುತ್ತಿರುವುದನ್ನು ನಾವು ವಿಡಿಯೋದಲ್ಲಿ ಕಾಣಬಹುದಾಗಿದೆ. “ನನಗೆ ಮೂರು ಹುಡುಗಿಯರ ಹೆಸರುಗಳು ಬೇಕು, ನಾಯಿ ಕೇವಲ ಬೆಕ್ಕಿನ ಮರಿಗಳನ್ನು ನೋಡಿಕೊಳ್ಳುತ್ತಿದೆ ಅಷ್ಟೇ” ಎಂದು ವಿಡಿಯೋ ಶೀರ್ಷಿಕೆಯಲ್ಲಿ ಬರೆದಿದ್ದಾರೆ.


ಈ ವಿಡಿಯೋವನ್ನು ಆಗಸ್ಟ್ 22ರಂದು ಹಂಚಿ ಕೊಂಡಾಗಿನಿಂದಲೂ 33,000ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದು, 2000ಕ್ಕೂ ಹೆಚ್ಚು ಜನರು ಈ ಮುದ್ದಾದ ವೀಡಿಯೋಗೆ ಮನಸೋತು ಪ್ರತಿಕ್ರಿಯೆ ನೀಡಿದ್ದಾರೆ.


ನೆಟ್ಟಿಗರು ಇದನ್ನು ನೋಡಿ “ಬ್ಲಾಸಮ್, ಬಬಲ್ಸ್ ಮತ್ತು ಬಟ್ಟರ್‌ಕಪ್‌” ಹೀಗೆ ಮೂರು ಮುದ್ದಾದ ಬೆಕ್ಕಿನ ಮರಿಗಳಿಗೆ ಹೆಸರು ಸೂಚಿಸಿದರೆ, ಇನ್ನೊಬ್ಬರು ಈ ಬೆಕ್ಕಿನ ಮರಿಗಳಿಗೆ “ಸಾಲ್ಟ್, ಪೆಪ್ಪರ್ ಮತ್ತು ಶುಗರ್” ಎಂದು ಹೆಸರನ್ನು ಸೂಚಿಸಿದ್ದಾರೆ. “ಮುದ್ದಾದ ಬೆಕ್ಕಿನ ಮರಿಗಳ ಆಟ ತುಂಬಾನೇ ಚೆನ್ನಾಗಿದೆ” ಎಂದು ಇನ್ನೊಬ್ಬರು ಹೇಳಿದ್ದಾರೆ.


Youtube: ಯೂಟ್ಯೂಬ್​ ಮೂಲಕ ಎಷ್ಟು ಜನರು ಹಣ ಸಂಪಾದಿಸುತ್ತಿದ್ದಾರೆ ಗೊತ್ತಾ? ಲೆಕ್ಕಾಚಾರ ಇಲ್ಲಿದೆ

ನಾಯಿ ಮತ್ತು ಬೆಕ್ಕುಗಳ ಜೋಡಿಯು ಯಾವಾಗಲೂ ನೋಡಲು ಮನಮೋಹಕ ದೃಶ್ಯವಾಗಿರುತ್ತದೆ. ಜನರು ಇಂತಹ ವೀಡಿಯೋಗಳನ್ನು ನೋಡಿದಾಗ ತಮ್ಮ ಮಾತುಗಳನ್ನು ನಿಲ್ಲಿಸುವುದೇ ಇಲ್ಲ.

ಈ ಹಿಂದೆ, ನಾಯಿ ಮತ್ತು ಪುಟ್ಟ ಬೆಕ್ಕಿನ ಮರಿಗಳ ನಡುವೆ ಹೇಗೆ ಸಂಭಾಷಿಸುತ್ತವೆ ಎಂಬುದನ್ನು ಒಳಗೊಂಡ ವೈರಲ್ ವಿಡಿಯೋ ಜನರನ್ನು ರಂಜಿಸಿತ್ತು. 47 ಸೆಕೆಂಡುಗಳ ವಿಡಿಯೋದಲ್ಲಿ ಒಂದು ನಾಯಿಯು ನೆಲದ ಮೇಲೆ ಕುಳಿತು ಸಣ್ಣ ಬೆಕ್ಕಿನ ಸುತ್ತಲೂ ಸುತ್ತುತ್ತಿರುವುದನ್ನು ಮತ್ತು ಅಲ್ಲೇ ಹತ್ತಿರದಲ್ಲಿ ಕುಳಿತಂತಹ ಪುಟ್ಟ ಮಗು ಎಲ್ಲವನ್ನೂ ಗಮನಿಸುತ್ತಿರುವುದು ವಿಡಿಯೋದಲ್ಲಿ ಕಾಣಬಹುದಾಗಿತ್ತು. ಈ ವಿಡಿಯೋವನ್ನು ಹೆಚ್ಚು ಜನರು ಇಷ್ಟಪಟ್ಟಿದ್ದು, ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದರು.

First published: