ನಮ್ಮಗಳ ಮನೆಯಲ್ಲಿ ಸಾಕಿಕೊಂಡಂತಹ ನಾಯಿ, ಬೆಕ್ಕು ಅಥವಾ ಇನ್ನಿತರೇ ಸಾಕು ಪ್ರಾಣಿಗಳಿರಬಹುದು, ಇವುಗಳನ್ನು ಕೆಲವರಂತೂ ತಮ್ಮ ಮಕ್ಕಳಿಗಿಂತಲೂ ಹೆಚ್ಚಾಗಿ ಪ್ರೀತಿಸುತ್ತಾರೆ. ಆದರೆ ಇನ್ನೂ ಕೆಲವರು ಇರುತ್ತಾರೆ ಮನೆಯಲ್ಲಿ ತಮ್ಮ ಶೋಕಿಗಾಗಿ ಪ್ರಾಣಿಗಳನ್ನು ಸಾಕುತ್ತಾರೆ ಮತ್ತು ಬೇಡವಾದಾಗ ಅವುಗಳನ್ನು ಕಿಂಚಿತ್ತು ಕರುಣೆಯಿಲ್ಲದೆ ರಸ್ತೆಯ ಬದಿ ಬಿಟ್ಟು ಬಂದು ಅವುಗಳನ್ನು ಅನಾಥರನ್ನಾಗಿಸುವುದುಂಟು.
ಹೀಗೆ ಸಾಕು ಪ್ರಾಣಿಗಳನ್ನು ನಡು ರಸ್ತೆಯಲ್ಲಿ ಬಿಟ್ಟು ಹೋದರೆ ಅವುಗಳ ಮುಂದಿನ ಸ್ಥಿತಿ ಹೇಗೆ ಅನ್ನುವುದರ ಬಗ್ಗೆ ಇವರಿಗೆ ಯೋಚನೆಯೇ ಇರುವುದಿಲ್ಲ ಇತ್ತೀಚೆಗೆ ಇಂತಹದೇ ಒಂದು ಘಟನೆ ನಡೆದದ್ದು, ಯಾರೋ ಒಬ್ಬರು ತಾವು ಸಾಕಿಕೊಂಡ ನಾಯಿಯನ್ನು ಅಮೆರಿಕದ ಟೆಕ್ಸಾಸ್ ನ ರಸ್ತೆಯ ಬದಿಯಲ್ಲಿ ಬಿಟ್ಟು ತಕ್ಷಣವೇ ತಮ್ಮ ಕಾರಿನಲ್ಲಿ ಕುಳಿತುಕೊಂಡು ಅಲ್ಲಿಂದ ಹೊರಟು ಹೋಗಿದ್ದಾರೆ.
ಅವರು ಸಾಕಿದ ನಾಯಿ ಅವರನ್ನು ಕೊಂಚ ದೂರ ಹಿಂಬಾಲಿಸಿದರೂ ಸಹ ಅವರಿಗೆ ಕರುಣೆ ಬಾರದೆ ಅಲ್ಲಿಂದ ಹೋಗಿದ್ದಾರೆ. ಜಾಯ್ ಡೊಮಿಂಗ್ಯೂಜ್ ಎಂಬುವವರು ಈ ಪ್ರದೇಶವನ್ನು ಹಾದುಹೋಗುತ್ತಿದ್ದಾಗ ಮಾಲೀಕರೊಬ್ಬರು ನಾಯಿಯನ್ನು ರಸ್ತೆಯ ಬದಿಯಲ್ಲಿ ಬಿಟ್ಟು ಅದರ ಕುತ್ತಿಗೆಗೆ ಹಾಕಿದ ಬೆಲ್ಟ್ ಅನ್ನು ತೆಗೆದುಕೊಂಡು ತಮ್ಮ ಕಾರಿನಲ್ಲಿ ಕುಳಿತುಕೊಂಡು ಹಿಂದಕ್ಕೂ ಸಹ ನೋಡದೆ ಹೋಗಿರುವುದನ್ನ ಗಮನಿಸಿದ ಜಾಯ್ ಅವರು ಈ ವಿಡಿಯೋವನ್ನು ರೆಕಾರ್ಡ್ ಮಾಡಿದ್ದು, ಅದನ್ನು ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾರೆ.
ನಂತರ ವಿಡಿಯೋ ವನ್ನು ತುಂಬಾ ಜನರು ನೋಡಿದ್ದು, ಸಾಕಷ್ಟು ವೈರಲ್ ಆಗಿತ್ತು. ನಾಯಿಯನ್ನು ತನ್ನ ಮಾಲೀಕರು ನಡು ರಸ್ತೆಯಲ್ಲಿ ಬಿಟ್ಟು ಹೋಗಿದ್ದಾರೆ ಎಂಬ ಹೃದಯ ವಿದ್ರಾವಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆದ, ನಂತರ ನಾಯಿಯನ್ನು ಪ್ರಾಣಿ ಸಂರಕ್ಷಣಾ ಪಡೆಯವರು ಈ ನಾಯಿಯನ್ನು ಯಾರಾದರೂ ದತ್ತು ತೆಗೆದುಕೊಳ್ಳಲು ಮುಂದಾದರೆ ಬನ್ನಿ ಎಂದು ಹೇಳಿದಾಗ ರಸ್ತೆಯ ಬದಿಯಲ್ಲಿ ಬಿಟ್ಟು ಹೋದ ನಾಯಿಯನ್ನು 24 ಗಂಟೆಗಳ ಒಳಗೆ ಇನ್ನೊಬ್ಬರು ದತ್ತು ತೆಗೆದುಕೊಂಡಿದ್ದಾರೆ.
"ಮಾತು ಬಾರದ ಮೂಕ ಪ್ರಾಣಿಗಳ ವಿರುದ್ಧದ ಈ ಅಪರಾಧಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ ಮತ್ತು ಇಂತಹ ಕ್ರೂರ ಕೃತ್ಯಗಳಲ್ಲಿ ಭಾಗಿಯಾದವರನ್ನು ಹೊಣೆಗಾರರನ್ನಾಗಿ ಮಾಡಲು ನಾವು ಸಕ್ರಿಯವಾಗಿ ಪ್ರಯತ್ನಿಸುತ್ತೇವೆ" ಎಂದು ಪ್ರಾಣಿ ಸಂರಕ್ಷಣಾ ದಳದವರು ಈ ವೇಳೆ ಎಚ್ಚರಿಕೆ ನೀಡಿದ್ದಾರೆ.
ನಾಯಿಯನ್ನು ತಪಾಸಣೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ನಾಯಿಯು ತುಂಬಾ ಆರೋಗ್ಯಕರವಾಗಿದೆ ಎಂದು ಹೇಳಲಾಗಿದೆ. 24 ಗಂಟೆಗಳು ಕಳೆಯುದರೊಳಗೆ ಇನ್ನೊಂದು ಕುಟುಂಬವು ಬಂದು ಈ ನಾಯಿಯನ್ನು ತೆಗೆದು ಕೊಂಡು ಹೋದದ್ದು, ನಿಜಕ್ಕೂ ಈ ನಾಯಿಗೆ ಹೊಸ ಆಶ್ರಯ ಸಿಕ್ಕಂತಾಗಿದೆ.
ಇದನ್ನೂ ಓದಿ: Tokyo Olympics: ನೆದರ್ಲ್ಯಾಂಡ್ಸ್ ವಿರುದ್ದ ಭಾರತೀಯ ಮಹಿಳಾ ಹಾಕಿ ತಂಡಕ್ಕೆ ಸೋಲು
ನಾಯಿಯನ್ನು ತೆಗೆದುಕೊಂಡವರು ನಮ್ಮ ಕುಟುಂಬದ ಭಾಗವೊಂದು ಕಳೆದು ಹೋಗಿತ್ತು ಈಗ ಮತ್ತೆ ಸಿಕ್ಕಿರುವ ಭಾವನೆ ನಮಗೆ ಆಗುತ್ತಿದೆ ಎಂದು ತಿಳಿಸಿದರು. ಈ ವಿಡಿಯೋ ನೋಡಿ ನೆಟ್ಟಿಗರು ನಾಯಿಯನ್ನು ಬಿಟ್ಟು ಹೋದವರ ಬಗ್ಗೆ ತುಂಬಾ ಆಕ್ರೋಶ ವ್ಯಕ್ತ ಪಡಿಸಿ ಪ್ರಾಣಿಗಳ ಬಗ್ಗೆ ಇಂತಹ ಧೋರಣೆಯನ್ನು ತೋರಿಸುವ ಜನರನ್ನು ಸಹ ದೂರ ಹೋಗಿ ಅವರೊಬ್ಬರನ್ನೇ ಬಿಟ್ಟು ಬರಬೇಕು ಆಗ ಗೊತ್ತಾಗುತ್ತೆ ಆ ಮೂಕ ಪ್ರಾಣಿಯ ನೋವು ಎಂದು ಬರೆದಿದ್ದಾರೆ. ಪೊಲೀಸರು ಈ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ