ಅಕ್ರಮ ಸಂಬಂಧ ಹೊಂದಿದ್ದ ನಾಯಿಯನ್ನು ಮನೆಯಿಂದ ಹೊರಗಟ್ಟಿದ ಮಾಲೀಕ!

6 ತಿಂಗಳಿಗೊಮ್ಮೆ ಗಂಡು-ಹೆಣ್ಣು ಶ್ವಾನಗಳು ಸೇರುತ್ತವೆ. ಈ ವೇಳೆ ಸಹಜವಾಗಿಯೇ ಹೆಣ್ಣು ನಾಯಿಗಳು ಗಂಡು ಶ್ವಾನವನ್ನು ಬಯಸುತ್ತವೆ. ಇದನ್ನೇ ಅಪರಾಧ ಎಂದು ಭಾವಿಸಿದ್ದು ನಿಜಕ್ಕೂ ದುರಾದೃಷ್ಟ ಎಂದು ಪ್ರಾಣಿದಯಾ ಸಂಘದವರು ಹೇಳಿಕೊಂಡಿದ್ದಾರೆ.

Rajesh Duggumane | news18
Updated:July 24, 2019, 3:27 PM IST
ಅಕ್ರಮ ಸಂಬಂಧ ಹೊಂದಿದ್ದ ನಾಯಿಯನ್ನು ಮನೆಯಿಂದ ಹೊರಗಟ್ಟಿದ ಮಾಲೀಕ!
ಸಾಂದರ್ಭಿಕ ಚಿತ್ರ
  • News18
  • Last Updated: July 24, 2019, 3:27 PM IST
  • Share this:
ಹೆಂಡತಿ ಅಥವಾ ಗಂಡ ಅಕ್ರಮ ಸಂಬಂಧ ಹೊಂದಿದ್ದರೆ ಸಂಸಾರದಲ್ಲಿ ಜಗಳಗಳು ಏರ್ಪಡುತ್ತವೆ. ಇಬ್ಬರೂ ಬೇರ್ಪಡುವ ಪರಿಸ್ಥಿತಿಯೂ ಬಂದು ಬಿಡುಬಹುದು. ಆದರೆ, ಸಾಕಿದ ಪ್ರಾಣಿ ಅಕ್ರಮ ಸಂಬಂಧ ಹೊಂದಿದೆ ಎಂದು ಯಾರಾದರೂ ಹೊರಗಟ್ಟುವುದನ್ನು ನೋಡಿದ್ದೀರಾ? ಹೀಗೊಂದು ಘಟನೆ ಕೇರಳದಲ್ಲಿ ನಡೆದಿದೆ. ಈ ಬಗ್ಗೆ ಪ್ರಾಣಿ ದಯಾ ಸಂಘದವರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಿರುವನಂತಪುರದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಪೊಮೆರೇನಿಯನ್​ ​ ನಾಯಿ ಇತ್ತೀಚೆಗೆ ನಗರದ ಮಧ್ಯೆ ದೊರೆತಿತ್ತು. ನೋಡಲು ತುಂಬಾನೇ ಕ್ಯೂಟ್​ ಆಗಿದ್ದ ಈ ಶ್ವಾನ, ಮಳೆಯಲ್ಲಿ ನೆನಯುತ್ತಾ ನಿಂತಿತ್ತು. ಇದನ್ನು ನೋಡಿದ ಪ್ರಾಣಿದಯಾ ಸಂಘದ ಕಾರ್ಯದರ್ಶಿ ಲತಾ ನಾಯಿಯನ್ನು ರಕ್ಷಣೆ ಮಾಡಿದ್ದಾರೆ. ನಾಯಿಯ ಕುತ್ತಿಗೆಯ ಮೇಲೆ ಲೆಟರ್​ ಕೂಡ ಹಾಕಲಾಗಿತ್ತು.

ಈ ಪತ್ರದಲ್ಲಿ, “ಈ ಶ್ವಾನವು ಅಕ್ರಮ ಸಂಬಂಧ ಹೊಂದಿತ್ತು. ಹಾಗಾಗಿ, ನಾವು ಇದನ್ನು ಮನೆಯಿಂದ ಹೊರ ಹಾಕಿದ್ದೇವೆ. ಈ ಶ್ವಾನ ಬ್ರೆಡ್​ ತಿನ್ನುತ್ತದೆ. ಹಾಲು ಕುಡಿಯುತ್ತದೆ. ಇದಕ್ಕೆ ಮೂರು ವರ್ಷವಾಗಿದ್ದು, ಯಾವುದೇ ರೋಗವಿಲ್ಲ. ಇದು ಅತಿಯಾಗಿ ಬೊಗಳುತ್ತದೆ ಅದೊಂದೇ ಸಮಸ್ಯೆ,” ಎಂದು ಬರೆಯಲಾಗಿತ್ತು. ಇದನ್ನು ನೋಡಿದ ಲತಾ ನಿಜಕ್ಕೂ ಆಶ್ಚರ್ಯ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ವಾವ್​..! ಕಣ್ಣಿಗೆ ಬಟ್ಟೆ ಕಟ್ಟಿದ್ದರೂ ಹಗ್ಗದ ಮೇಲೆ ನಡೆಯುತ್ತೆ ಪೊಲೀಸ್​ ನಾಯಿ; ಅದರ ಚಾಣಾಕ್ಷತನಕ್ಕೆ ಶ್ವಾನಪ್ರಿಯರು ಫಿದಾ

6 ತಿಂಗಳಿಗೊಮ್ಮೆ ಗಂಡು-ಹೆಣ್ಣು ಶ್ವಾನಗಳು ಸೇರುತ್ತವೆ. ಈ ವೇಳೆ ಸಹಜವಾಗಿಯೇ ಹೆಣ್ಣು ನಾಯಿಗಳು ಗಂಡು ಶ್ವಾನವನ್ನು ಬಯಸುತ್ತವೆ. ಇದನ್ನೇ ಅಪರಾಧ ಎಂದು ಭಾವಿಸಿದ್ದು ನಿಜಕ್ಕೂ ದುರಾದೃಷ್ಟ ಎಂದು ಲತಾ ಹೇಳಿಕೊಂಡಿದ್ದಾರೆ.

(ವರದಿ: ಮೀರಾ ಮನು)

First published:July 24, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...