Garlic Bread: ಗಾರ್ಲಿಕ್‌ ಬ್ರೆಡ್‌ನಲ್ಲಿ ನಿಜವಾಗಿಯೂ ಬೆಳ್ಳುಳ್ಳಿ ಇದೆಯೇ..? ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ

‘‘ಗ್ರಾಹಕರು ಗಾರ್ಲಿಕ್‌ ಬ್ರೆಡ್ ಖರೀದಿಸುತ್ತಿದ್ದಾರೆ. ಆದರೆ ಅದರಲ್ಲಿ ಒಂದು ಹನಿ ಬೆಳ್ಳುಳ್ಳಿಯ ಫ್ಲೇವರ್‌ ಇದೆಯೇ, ಬೆಳ್ಳುಳ್ಳಿಯ ತುಂಡು ಇದೆಯೇ ಅಥವಾ ಏನೂ ಇಲ್ಲವೇ ಎಂಬ ಬಗ್ಗೆ ಯಾರಿಗೂ ತಿಳಿದಿಲ್ಲ'' ಎಂದು ಹೆಸರು ಹೇಳಲು ಇಚ್ಛಿಸದ ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು News18.comಗೆ ಮಾಹಿತಿ ನೀಡಿದರು.

ಗಾರ್ಲಿಕ್ ಬ್ರೆಡ್

ಗಾರ್ಲಿಕ್ ಬ್ರೆಡ್

  • Share this:
Garlic Bread: ವಿಶೇಷ ಬ್ರೆಡ್‌ಗಳು ನರೇಂದ್ರ ಮೋದಿ ಸರ್ಕಾರದ ಸ್ಕ್ಯಾನರ್‌ನಲ್ಲಿವೆ. ಅದರಲ್ಲಿ ಬೆಳ್ಳುಳ್ಳಿ ಅಥವಾ ಗಾರ್ಲಿಕ್‌, ಬಹು ಧಾನ್ಯ ಅಥವಾ ಮಲ್ಟಿ ಗ್ರೈನ್‌ ಹಾಗೂ ಸಂಪೂರ್ಣ ಗೋಧಿ ಅಥವಾ ವೋಲ್‌ ವೀಟ್‌ ಬ್ರೆಡ್‌ - ಹೀಗೆ ಯಾವುದೇ ಆಗಿರಲಿ ಬ್ರೆಡ್ ತಯಾರಕರ ಉದ್ಯಮ ನಿಯಂತ್ರಿಸಲು ಸರ್ಕಾರ ಪ್ಲ್ಯಾನ್‌ ಮಾಡುತ್ತಿದೆ ಎಂಬ ಬಗ್ಗೆ News18.com ತಿಳಿದುಕೊಂಡಿದೆ. ಪ್ರಸ್ತುತ, ಅಂತಹ ವಿಶೇಷ ಉತ್ಪನ್ನಗಳ ತಯಾರಿಕೆಯಲ್ಲಿ ಕಂಪನಿಗಳು ಅನುಸರಿಸಬಹುದಾದ ಯಾವುದೇ ಮಾನದಂಡಗಳಿಲ್ಲ. ಈ ಹಿನ್ನೆಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೆ ಉನ್ನತ ಆಹಾರ ನಿಯಂತ್ರಣ ಸಂಸ್ಥೆ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಕಳುಹಿಸಿದ ಕರಡು ನಿಯಂತ್ರಣದ ಪ್ರಕಾರ, ಐದು ವರ್ಗದ ಬ್ರೆಡ್‌ಗಳನ್ನು ನಿಯಂತ್ರಿಸಲಾಗುತ್ತದೆ ಎಂದು ತಿಳಿದುಬಂದಿದೆ.

News18.com ಈ ಕರಡು ವರದಿಯನ್ನು ಓದಿದ್ದು, ಇದನ್ನು ಸಚಿವಾಲಯದ ಅನುಮೋದನೆಗೆ ಕಳುಹಿಸಲಾಗಿದೆ. ಇದು ಸಂಪೂರ್ಣ ಗೋಧಿ ಬ್ರೆಡ್, ಕಂದು ಬ್ರೆಡ್, ಬಿಳಿ ಬ್ರೆಡ್, ಮಲ್ಟಿಗ್ರೇನ್ ಬ್ರೆಡ್ ಮತ್ತು ಬೆಳ್ಳುಳ್ಳಿ ಬ್ರೆಡ್, ಮೊಟ್ಟೆ ಬ್ರೆಡ್, ಓಟ್ ಮೀಲ್ ಬ್ರೆಡ್, ಹಾಲಿನ ಬ್ರೆಡ್ ಮತ್ತು ಚೀಸ್ ಬ್ರೆಡ್ ಸೇರಿದಂತೆ 14 ವಿಶೇಷ ಬ್ರೆಡ್‌ಗಳ ಮಾನದಂಡಗಳನ್ನು ನಿಯಂತ್ರಿಸಲು ಪ್ರಸ್ತಾಪಿಸುತ್ತದೆ ಎಂದು ತಿಳಿದುಬಂದಿದೆ.

"ಗ್ರಾಹಕರು ವಿಶೇಷ ಪದಾರ್ಥಗಳ ನಿಜವಾದ ವಿಷಯಗಳನ್ನು ತಿಳಿಯದೆ ವಿಶೇಷ ಬ್ರೆಡ್ ಖರೀದಿಸಲು ಹೆಚ್ಚಿನ ಪ್ರಮಾಣದ ಹಣ ಖರ್ಚು ಮಾಡುತ್ತಿರುವ ಬಗ್ಗೆ ನಮಗೆ ಮಾಹಿತಿ ತಿಳಿದುಬಂದ ನಂತರ ಈ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಅವರು ಗಾರ್ಲಿಕ್‌ ಬ್ರೆಡ್ ಖರೀದಿಸುತ್ತಿದ್ದಾರೆ. ಆದರೆ ಅದರಲ್ಲಿ ಒಂದು ಹನಿ ಬೆಳ್ಳುಳ್ಳಿಯ ಫ್ಲೇವರ್‌ ಇದೆಯೇ, ಬೆಳ್ಳುಳ್ಳಿಯ ತುಂಡು ಇದೆಯೇ ಅಥವಾ ಏನೂ ಇಲ್ಲವೇ ಎಂಬ ಬಗ್ಗೆ ಯಾರಿಗೂ ತಿಳಿದಿಲ್ಲ'' ಎಂದು ಹೆಸರು ಹೇಳಲು ಇಚ್ಛಿಸದ ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು News18.comಗೆ ಮಾಹಿತಿ ನೀಡಿದರು. ಹಾಗೂ, "ಕೆಲವು ಸಂದರ್ಭಗಳಲ್ಲಿ ಅಂತಹ ಉತ್ಪನ್ನಗಳ ಬೆಲೆ ಸಾಮಾನ್ಯ ಬ್ರೆಡ್‌ಗಿಂತ 2 -3 ಪಟ್ಟು ಹೆಚ್ಚಿಸಲಾಗುತ್ತದೆ'' ಎಂದೂ ಅವರು ಹೇಳಿದರು.

ಇದನ್ನೂ ಓದಿ:Happy Birthday, Amala: ಗಂಡ ಅಕ್ಕಿನೇನಿ ನಾಗಾರ್ಜುನ್ ಜೊತೆ ಜಾಲಿ ಮೂಡ್​ನಲ್ಲಿ ಬರ್ತ್​​ಡೇ ಕ್ವೀನ್​ ಅಮಲಾ

ಪ್ರಸ್ತಾವಿತ ನಿಯಂತ್ರಣವನ್ನು ಅನುಮೋದಿಸಿದರೆ, ಈ ರೀತಿಯ ಬ್ರೆಡ್‌ ತಯಾರಕರು "ವಿಶೇಷ ಪದಾರ್ಥ" ವನ್ನು ಕಡ್ಡಾಯವಾಗಿ ಸೇರಿಸಬೇಕಾಗುತ್ತದೆ - ಉದಾಹರಣೆಗೆ ಗಾರ್ಲಿಕ್‌ ಬ್ರೆಡ್‌ನಲ್ಲಿ ಹಿಟ್ಟಿನ ಕನಿಷ್ಠ ಶೇಕಡಾವಾರು ಮಿತಿಯಷ್ಟು ಬೆಳ್ಳುಳ್ಳಿ ಇರಬೇಕಾಗುತ್ತದೆ. ಓಟ್ ಮೀಲ್ ಬ್ರೆಡ್‌ನಲ್ಲಿ ಕನಿಷ್ಠ 15% ಓಟ್ ಮೀಲ್ ಇರಬೇಕು. ಗಾರ್ಲಿಕ್‌ ಬ್ರೆಡ್‌ನಲ್ಲಿ ಕನಿಷ್ಠ 2% ಬೆಳ್ಳುಳ್ಳಿ ಕಡ್ಡಾಯವಾಗಿರಬೇಕು ಅಥವಾ ಬ್ರೌನ್ ಬ್ರೆಡ್‌ನಲ್ಲಿ ಕನಿಷ್ಠ 50% ಧಾನ್ಯದ ಹಿಟ್ಟನ್ನು ಹೊಂದಿರಬೇಕು ಎಂಬಂಥಹ ನಿಯಮ ಜಾರಿಗೆ ತರಬಹುದು ಎಂದು ಹೇಳಲಾಗುತ್ತಿದೆ.

ಸ್ಕ್ಯಾನರ್ ಅಡಿಯಲ್ಲಿರುವ ಬ್ರೆಡ್‌ ವಿಧಗಳು

ಸಂಪೂರ್ಣ ಗೋಧಿ ಬ್ರೆಡ್ ಕರಡು ನಿಯಂತ್ರಣದಲ್ಲಿ ಉಲ್ಲೇಖಿಸಲಾದ ಮೊದಲ ವರ್ಗವಾಗಿದೆ, ಅಲ್ಲಿ ವಿಶೇಷ ಘಟಕಾಂಶವೆಂದರೆ ಸಂಪೂರ್ಣ ಗೋಧಿ ಹಿಟ್ಟು ಮತ್ತು ಇದು ಕನಿಷ್ಠ 75% ಇರಬೇಕು. ಇನ್ನು, ಮಲ್ಟಿಗ್ರೇನ್ ಬ್ರೆಡ್‌ನಲ್ಲಿ ಕನಿಷ್ಠ 20% ಧಾನ್ಯಗಳನ್ನು ಹೊಂದಿರಬೇಕು ಎಂಬ ನಿಯಮ ಜಾರಿಗೆ ಬರಬಹುದು.

ವಿಶೇಷ ಬ್ರೆಡ್ ವರ್ಗದ ಅಡಿಯಲ್ಲಿ, "ಲೇಬಲ್‌ನಲ್ಲಿ 'ಬ್ರೆಡ್' ಪದಕ್ಕೆ ಪೂರ್ವಪ್ರತ್ಯಯವನ್ನು ಸೇರಿಸಿದರೆ ವಿಶೇಷ ಪದಾರ್ಥವು ಇರಬೇಕು'' ಎಂದು ಕರಡು ಪ್ರಸ್ತಾಪಿಸುತ್ತದೆ.

ಈ ವರ್ಗದಲ್ಲಿ, ಉದಾಹರಣೆಗೆ, ಮಿಲ್ಕ್‌ ಅಥವಾ ಹಾಲಿನ ಬ್ರೆಡ್ ಕನಿಷ್ಠ 6% ಹಾಲಿನ ಘನ ಪದಾರ್ಥಗಳನ್ನು ಹೊಂದಿರಬೇಕು. ಹಾಗೂ, ಜೇನು ಬ್ರೆಡ್ ಕನಿಷ್ಠ 5% ಜೇನುತುಪ್ಪವನ್ನು ಹೊಂದಿರಬೇಕು. ಅದೇ ರೀತಿ, ಚೀಸ್ ಬ್ರೆಡ್‌ಗಳಲ್ಲಿ 10% ಚೀಸ್ ಮತ್ತು ಗೋಧಿ ಸೂಕ್ಷ್ಮಾಣು ಅಥವಾ ಓರೆಗಾನೊ ಇರುವ ಬ್ರೆಡ್‌ನಲ್ಲಿ ಕನಿಷ್ಠ 2% ಗೋಧಿ ಜರ್ಮ್ (ಗೋಧಿಯ ಕಾಳೊಳಗಿನ ಭ್ರೂಣಾಂಶ) ಅಥವಾ ಓರೆಗಾನೊ ಇರಬೇಕು.

ಇದನ್ನೂ ಓದಿ:Bengaluru Water Supply: ಬೆಂಗಳೂರಿನ ಈ ಏರಿಯಾಗಳಲ್ಲಿ ಇಂದು ಮತ್ತು ನಾಳೆ ಕಾವೇರಿ ನೀರು ಬರಲ್ಲ

ಇತರ ಬ್ರೆಡ್‌ಗಳಾದ ಫ್ರೂಟ್‌, ಟ್ರಿಟಿಕೇಲ್, ರೈ, ಒಣದ್ರಾಕ್ಷಿ ಮತ್ತು ಪ್ರೋಟೀನ್ ಪುಷ್ಟೀಕರಿಸಿದ ಬ್ರೆಡ್‌ಗಳು ಹಿಟ್ಟಿನ ಹೊರತಾಗಿ 20% ವಿಶೇಷ ಪದಾರ್ಥ ಹೊಂದಿರಬೇಕು ಎಂದೂ ಕರಡಿನಲ್ಲಿ ಪ್ರಸ್ತಾಪಿಸಲಾಗಿದೆ.

ಕಾನ್ಫೆಕ್ಷನರಿ ಕಂಪನಿಯವರು ಮಾರಾಟ ಮಾಡುವ ಈ ಉತ್ಪನ್ನಗಳಲ್ಲಿ ಹೆಚ್ಚಿನವು ಏಕರೂಪತೆಯನ್ನು ಅನುಸರಿಸುತ್ತವೆ. ಆದರೆ, ಸ್ಥಳೀಯ ಉತ್ಪನ್ನಗಳು ಯಾವುದೇ ಮಾನದಂಡಗಳನ್ನು ಅನುಸರಿಸುವುದಿಲ್ಲ. ವಲಯವನ್ನು ನಿಯಂತ್ರಿಸದೆ ಲೆಕ್ಕಪರಿಶೋಧನೆ ಮತ್ತು ಯಾದೃಚ್ಛಿಕ ತಪಾಸಣೆ ಪರಿಣಾಮಕಾರಿಯಾಗಿರುವುದಿಲ್ಲ" ಎಂದು ಮೇಲೆ ಉಲ್ಲೇಖಿಸಿದ ಅಧಿಕಾರಿ ಹೇಳಿದರು.

"ಸಚಿವಾಲಯವು ಅನುಮೋದಿಸಿದ ನಂತರ, ಕರಡು ಸಾರ್ವಜನಿಕ ಅಭಿಪ್ರಾಯಗಳಿಗಾಗಿ ಮುಕ್ತವಾಗಿರುತ್ತದೆ. ನಂತರ ಅಧಿಸೂಚನೆ ನೀಡಬಹುದು. ಅಂತಿಮ ಅಧಿಸೂಚನೆಯ ನಂತರ, ಕೈಗಾರಿಕೆಯನ್ನು ಹ್ಯಾಂಡ್‌ಹೋಲ್ಡಿಂಗ್ ನೀಡಲಾಗುತ್ತದೆ ಮತ್ತು ನಂತರ ರ‍್ಯಾಂಡಮ್‌ ಮಾದರಿಯಲ್ಲಿ ತಪಾಸಣೆ ಮಾಡಲಾಗುತ್ತದೆ'' ಎಂದೂ ಹಿರಿಯ ಅಧಿಕಾರಿ ಹೇಳಿದರು.
Published by:Latha CG
First published: