ಲಾಗೌಟ್​ ಬಳಿಕವೂ ನಿಮ್ಮ ಕೆಲಸವನ್ನು ಫೇಸ್​ಬುಕ್​ ಟ್ರ್ಯಾಕ್​ ಮಾಡುತ್ತದೆಯೇ?


Updated:April 11, 2018, 4:37 PM IST
ಲಾಗೌಟ್​ ಬಳಿಕವೂ ನಿಮ್ಮ ಕೆಲಸವನ್ನು ಫೇಸ್​ಬುಕ್​ ಟ್ರ್ಯಾಕ್​ ಮಾಡುತ್ತದೆಯೇ?

Updated: April 11, 2018, 4:37 PM IST
ನ್ಯೂಯಾರ್ಕ್​: ಫೇಸ್​ಬುಕ್​ನಿಂದ ಲಾಗೌಟ್​ ಆದ ಬಳಿಕವೂ ನಿಮ್ಮ ಬ್ರೌಸಿಂಗ್​ನ ಮೇಲೆ ಫೆಸ್​ಬುಕ್​ ಕಣ್ಣಿಟ್ಟಿದೆಯೇ ಎಂಬ ಪ್ರಶ್ನೆಗೆ ಉತ್ತರ ಸ್ವತಃ ಫೇಸ್​ಬುಕ್​ ಸಂಸ್ಥಾಪಕ ಮಾರ್ಕ್​ ಜುಕರ್​ಬರ್ಗ್​ಗೇ ಗೊತ್ತಿಲ್ಲವಂತೆ!

ಹೌದು! ಅಮೆರಿಕದ ಸಂಸತ್​ನ ಮೇಲ್ಮನೆಯಲ್ಲಿ ಕೇಂಬ್ರಿಡ್ಜ್​ ಅನಾಲಿಟಿಕಾ ಮಾಹಿತಿ ಸೋರಿಕೆ ಕುರಿತು ವಿಚಾರಣೆ ಎದುರಿಸುತ್ತಿರುವ ಮಾರ್ಕ್​ ಜುಕರ್​ಬರ್ಗ್​ಗೆ 44 ಸೆನೆಟರ್​ಗಳು ಮಾಹಿತಿ ಸೋರಿಕೆ ಕುರಿತು ಸತತ ಪ್ರಶ್ನೆಯನ್ನು ಹಾಕಿದ್ದಾರೆ. ಇದೇ ವೇಳೆ ಸೆನೆಟರ್​ ವಿಕ್ಕರ್​ ಅವರು ಫೇಸ್​ಬುಕ್​ ಅಕೌಂಟ್​ ಲಾಗ್​ಔಟ್​ ಆದ ಬಳಿಕವೂ ಬ್ರೌಸರ್​ನಲ್ಲಿ ನಡೆಯುವ ಚಟುವಟಿಕೆಯನ್ನು ಟ್ರ್ಯಾಕ್​ ಮಾಡಲಾಗುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.

ವಿಕ್ಕರ್ ಪ್ರಶ್ನೆಗೆ ಉತ್ತರಿಸಿದ ಫೇಸ್​ಬುಕ್​ ಸಂಸ್ಥಾಪಕ ತನಗೆ ಈ ಕುರಿತು ಯಾವುದೇ ಮಾಹಿತಿಯಿಲ್ಲ, ನನ್ನ ಇತರೇ ಸಿಬ್ಬಂದಿಗಳಿಗೆ ತಿಳಿದಿರಬಹುದು ಎಂದು ಹೇಳಿದ್ದಾರೆ. ಮಾರ್ಕ್​ ಜುಗರ್​ಬರ್ಗ್​ ಉತ್ತರಕ್ಕೆ ದಂಗಾದ ಸೆನೆಟರ್​, ಈ ವಿಚಾರ ನಿಮ್ಮ ಗಮನಕ್ಕೆ ಬರಲೇ ಇಲ್ಲವೇ ? ಎಂದು ಪ್ರಶ್ನಿಸಿದ್ದಾರೆ.

ಸೆನೆಟರ್​ ಪ್ರಶ್ನೆಗೆ ಪ್ರತ್ಯುತ್ತರ ನೀಡಿದ ಮಾರ್ಕ್, ಫೇಸ್​ಬುಕ್​ ಲಾಗ್​ಇನ್​ ಆದ ಸಂದರ್ಭದಲ್ಲಿ ಬಳಕೆಯಾಗಿರುವ ಕುಕೀಸ್​ಗಳನ್ನು ಫೇಸ್​ಬುಕ್​ ಸರ್ವರ್​ನಲ್ಲಿ ಸೇವ್​ ಮಾಡಿಕೊಳ್ಳಲಾಗುತ್ತದೆ. ಭದ್ರತೆ ಸೇರಿದಂತೆ ಹಲವಾರಿ ವಿಚಾರಕ್ಕೆ ಸಂಬಂಧಿಸಿ ನಾವು ಕುಕೀಸ್​ಗಳನ್ನು ಸ್ಟೋರ್​ ಮಾಡಿಕೊಳ್ಳುತ್ತೇವೆ. ಆದರೆ ಈ ಕುರಿತು ನನಗೆ ಹೆಚ್ಚಿನ ಮಾಹಿತಿಯಿಲ್ಲದಿದ್ದರೂ ನನ್ನ ಟೀಂನೊಂದಿಗೆ ಚರ್ಚೆ ನಡೆಸುತ್ತೇನೆ ಎಂದು ಹೇಳಿದ್ದಾರೆ.
First published:April 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ