• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Viral News: ಗಾಯಕ್ಕೆ ಹೊಲಿಗೆ ಹಾಕುವ ಬದಲು ಫೆವಿಕ್ವಿಕ್ ಹಾಕಿದ ಡಾಕ್ಟರ್​​! ಆಮೇಲೇನಾಯ್ತು ನೋಡಿ

Viral News: ಗಾಯಕ್ಕೆ ಹೊಲಿಗೆ ಹಾಕುವ ಬದಲು ಫೆವಿಕ್ವಿಕ್ ಹಾಕಿದ ಡಾಕ್ಟರ್​​! ಆಮೇಲೇನಾಯ್ತು ನೋಡಿ

ಫೆವಿಕ್ವಿಕ್​

ಫೆವಿಕ್ವಿಕ್​

ಗಾಯವನ್ನು ಗುಣಪಡಿಸಲು ಔಷಧಗಳು ಅಥವಾ ಮುಲಾಮುಗಳನ್ನು ಹಚ್ಚುತ್ತೇವೆ. ಅಥವಾ ಗಾಯ ಇನ್ನೂ ದೊಡ್ಡದು ಎಂದಾದರೆ ಹೊಲಿಗೆ ಹಾಕಬೇಕಾಗುತ್ತದೆ. ಆದರೆ ಇಲ್ಲೊಬ್ಬ ಹುಡುಗ ತನಗಾದ ಗಾಯಕ್ಕೆ ಗುಣಪಡಿಸಿಕೊಳ್ಳಲು ಆಸ್ಪತ್ರೆಗೆ ಹೋದರೆ ಅಲ್ಲಿ ವೈದ್ಯರು ಮಾಡಿದ್ದೇ ಬೇರೆ.

  • Share this:

ಸಾಮಾನ್ಯವಾಗಿ ನಮಗೆ ಗಾಯವಾದರೆ ವೈದ್ಯರನ್ನು ಭೇಟಿಯಾಗುತ್ತೇವೆ. ಗಾಯದಿಂದ ಹೆಚ್ಚು ರಕ್ತಸ್ರಾವವಾಗುತ್ತಿದ್ದರೆ ತುಂಬಾ ಆತಂಕವಾಗುತ್ತದೆ. ಆದರೆ ಇಲ್ಲಿ ಗಾಯವಾದ ಹುಡುಗನೊಬ್ಬನಿಗೆ ಆಸ್ಪತ್ರೆಯಲ್ಲಿ (Hospital) ನೀಡಿದ ಚಿಕಿತ್ಸೆ ನೋಡಿದರೆ ಏನು ಹೇಳೋದುಅಂತಲೇ ಅರ್ಥವಾಗಲ್ಲ. ತೀವ್ರತೆಗೆ ತಕ್ಕಂತೆ ಪ್ರಥಮ ಚಿಕಿತ್ಸೆ ನೀಡಿ ಬ್ಯಾಂಡೇಜ್ ಹಾಕುವುದನ್ನೂ ಸಹ ನಾವು ಮಾಡುತ್ತೇವೆ. ಗಾಯವನ್ನು ಗುಣಪಡಿಸಲು ಔಷಧಗಳು (Medicine) ಅಥವಾ ಮುಲಾಮುಗಳನ್ನು ಹಚ್ಚುತ್ತೇವೆ. ಅಥವಾ ಗಾಯ ಇನ್ನೂ ದೊಡ್ಡದು ಎಂದಾದರೆ ಹೊಲಿಗೆ ಹಾಕಬೇಕಾಗುತ್ತದೆ. ಆದರೆ ಇಲ್ಲೊಮ್ಮ ಹುಡುಗತನಗಾದ ಗಾಯಕ್ಕೆ ಗುಣಪಡಿಸಿಕೊಳ್ಳಲು ಆಸ್ಪತ್ರೆಗೆ ಹೋದರೆ ಅಲ್ಲಿ ವೈದ್ಯರು ಮಾಡಿದ್ದೇ ಬೇರೆ.


ಗಾಯವಾದ ಹುಡುಗನಿಗೆ ಹೊಲಿಗೆಯ ಬದಲಾಗಿ ಫೆವಿಕ್ವಿಕ್​ ಹಾಕಿರುವ ಘಟನೆ  ತೆಲಂಗಾಣದ ಜೋಗುಲಾಂಬ ಗದ್ವಾಲಾ ಜಿಲ್ಲೆಯ ಅಯಿಜಾದಲ್ಲಿ ಈ ಘಟನೆ ನಡೆದಿದೆ. ಬಾಲಕನಿಗೆ ಆ ಆಸ್ಪತ್ರೆ ನೀಡಿದ ಚಿಕಿತ್ಸೆ ಈಗ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಗಾಯದ ಮೇಲೆ ಹೊಲಿಗೆ ಹಾಕುವ ಬದಲು ಫೆವಿಕ್ವಿಕ್ ಹಾಕಿರುವುದಕ್ಕಾಗಿ ಎಲ್ಲರೂ ಕೋಪಗೊಂಡಿದ್ದಾರೆ.


ಪೊಲೀಸರು ಮತ್ತು ಸ್ಥಳೀಯರ ಪ್ರಕಾರ ಕರ್ನಾಟಕ ರಾಜ್ಯದ ರಾಯಚೂರು ಜಿಲ್ಲೆಯ ಲಿಂಗಸೂಗೂರಿನ ವಂಶಿಕೃಷ್ಣ ಮತ್ತು ಸುನೀತಾ ದಂಪತಿ ಮಗನನ್ನು ಒಂದು ಮದುವೆಗೆ ಕರೆದುಕೊಂಡು ಹೋಗಿದ್ದರು. ಗದ್ವಾಲ್ ಜಿಲ್ಲೆಯ ಸಂಬಂಧಿಕರ ಮನೆಯಲ್ಲಿ ಮದುವೆ ಇತ್ತು ಗುರುವಾರ ರಾತ್ರಿ ದಂಪತಿ ಪುತ್ರ ಪ್ರವೀಣ್ ಚೌಧರಿ ಆಟವಾಡುವಾಗ ಕೆಳಗೆ ಬಿದ್ದಿದ್ದಾನೆ. ಬಿದ್ದಿರುವುದರಿಂದ ಗಾಯವಾಗಿದೆ. ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.


ಇದನ್ನೂ ಓದಿ: Famous Lakes in India: ಪ್ರವಾಸಿ ಪ್ರಿಯರನ್ನು ಆಕರ್ಷಿಸುವ ಭಾರತದ 10 ಅತ್ಯಂತ ಸುಂದರವಾದ ಸರೋವರಗಳು ಇಲ್ಲಿವೆ ನೋಡಿ!


ಇದರಿಂದ ಬಾಲಕ ಪ್ರವೀಣ್  ಕಣ್ಣಿಗೆ ಗಂಭೀರ ಗಾಯವಾಗಿದೆ. ಗಾಯದಿಂದ ಆತಂಕಗೊಂಡ ಪೋಷಕರು ಪ್ರವೀಣ್ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರವೀಣ್ ಅವರ ಗಾಯವನ್ನು ಪರೀಕ್ಷಿಸಿದ ವೈದ್ಯರು ಗಾಯ ಗಂಭೀರವಾಗಿದ್ದು, ಹೊಲಿಗೆ ಹಾಕಬೇಕಾಗಿದೆ ಎಂದು ತಿಳಿಸಿದ್ದಾರೆ. ಆದರೆ, ಆಸ್ಪತ್ರೆಯ ಸಿಬ್ಬಂದಿ ಗಾಯಕ್ಕೆ ಹೊಲಿಗೆ ಹಾಕಲು ದಾರದ ಬದಲು ಸಾಮಾನ್ಯವಾಗಿ ಲಭ್ಯವಿರುವ ಫೆವಿಕ್ವಿಕ್ ಬಳಸಿದ್ದಾರೆ ಎಂಬುದು ಆಮೇಲೆ ತಿಳಿದು ಬಂದಿದೆ.
ಆದರೆ, ಚಿಕಿತ್ಸೆ ಬಳಿಕ ಪ್ರವೀಣ್‌ನನ್ನು ಗಮನಿಸಿದ ಬಾಲಕನ ತಂದೆ, ಹೊಲಿಗೆ ಬದಲು ಫೆವಿಕ್ವಿಕ್ ನೀಡಿರುವುದು ಗಮನಕ್ಕೆ ಬಂದಿದೆ. ಆ ನಂತರ ಬಾಲಕನ ತಂದೆ ಇದನ್ನು ಕಂಡು ಕೋಪಗೊಂಡಿದ್ದಾರೆ. ನನ್ನ ಮಗನಿಗೆ ಏನಾದರು ಆದರೆ ನೀವೆ ಜವಾಬ್ಧಾರಿ ನಾನು ಈಗಲೇ ಪೋಲೀಸರಿಗೆ ದೂರು ನೀಡುತ್ತೇನೆ ಎಂದು ಠಾಣೆಗೆ ತೆರಳಿದ್ದಾರೆ. ಅದರಿಂದಾಗಿ ಈ ವಿಷಯ ಬಯಲಿಗೆ ಬಂದಿದೆ.


ಆಸ್ಪತ್ರೆಯ ವೈದ್ಯರನ್ನು ವಶಕ್ಕೆ ಪಡೆದ ಪೊಲೀಸರು


ಗಾಯದಿಂದಾಗಿ ತನ್ನ ಮಗನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಆದರೆ ಆಸ್ಪತ್ರೆಯಲ್ಲಿ  ಆಸ್ಪತ್ರೆಯ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿ ಫೆವಿಕ್ವಿಕ್‌ನಿಂದ ಗಾಯವನ್ನು ತೇಪೆ ಹಾಕಲು ಪ್ರಯತ್ನಿಸಿದರು ಎಂದು ದೂರಿನಲ್ಲಿ ಬರೆದಿದ್ದಾರೆ. ತಂದೆ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.  ಈ ಘಟನೆಯನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ. ರೈನ್‌ಬೋ ಆಸ್ಪತ್ರೆಯನ್ನು ವಶಕ್ಕೆ ಪಡೆದು ವೈದ್ಯರು ಹಾಗೂ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಜನರೂ ಕೂಡಾ ಈ ಆಸ್ಪತ್ರೆಗೆ ಹೋಗಲು ಹೆದರುತ್ತಿದ್ದಾರೆ.

First published: