• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Love Story: ಪ್ರೇಯಸಿ ಡೆಡ್‌ ಬಾಡಿ ಜೊತೆ 7 ವರ್ಷ ವಾಸ! ಬೆಚ್ಚಿ ಬೀಳಿಸುತ್ತದೆ ವೈದ್ಯನ ವಿಚಿತ್ರ ಲವ್‌ ಸ್ಟೋರಿ

Love Story: ಪ್ರೇಯಸಿ ಡೆಡ್‌ ಬಾಡಿ ಜೊತೆ 7 ವರ್ಷ ವಾಸ! ಬೆಚ್ಚಿ ಬೀಳಿಸುತ್ತದೆ ವೈದ್ಯನ ವಿಚಿತ್ರ ಲವ್‌ ಸ್ಟೋರಿ

ಕಾರ್ಲ್ ಟಾಂಜ್ಲರ್‌ ಮತ್ತು ಎಲೆನಾ

ಕಾರ್ಲ್ ಟಾಂಜ್ಲರ್‌ ಮತ್ತು ಎಲೆನಾ

ಅಮೆರಿಕಾದ ಫ್ಲೋರಿಡಾದ ಖ್ಯಾತ ವೈದ್ಯ ಅಂತಾನೇ ಜನಪ್ರಿಯವಾಗಿದ್ದ ಕಾರ್ಲ್ ಟಾಂಜ್ಲರ್ ಸತ್ತ ಯುವತಿಯ ಶವ ಹೊರತೆಗೆದು ಅದಕ್ಕೆ ಹೊಸ ರೂಪ ಕೊಟ್ಟು ಅವಳನ್ನೇ ಜೀವನದ ಸಂಗಾತಿ ಎಂದು ಅದರ ಜೊತೆಯೇ ಸುಮಾರು ಏಳು ವರ್ಷಗಳ ಕಾಲ ಜೀವನ ನಡೆಸಿದ್ದಾನೆ.

  • Share this:

    ಕಾಲ ಕಾಲಗಳಿಂದ ಪ್ರೀತಿಗಾಗಿ ಸತ್ತವರು, ಪ್ರೀತಿಗಾಗಿ ಬದುಕಿದವರು, ತ್ಯಾಗ ಮಾಡಿದವರು, ಪ್ರೀತಿಯ ನೆನಪಲ್ಲೇ ಜೀವನ ಕಳೆದವರ ಉದಾಹರಣೆಗಳು ಇವೆ. ಇತಿಹಾಸದಿಂದ ಹಿಡಿದು ಇಲ್ಲಿಯವರೆಗೂ ಈ ಪ್ರೀತಿಗೆ ಸಂಬಂಧಿಸಿದಂತೆ ಅದೆಷ್ಟೋ ವಿಚಿತ್ರ ಪ್ರಕರಣಗಳಿವೆ. ಆ ಕಾಲಕ್ಕೆ ರೋಮಿಯೋ-ಜ್ಯೂಲಿಯೆಟ್‌ (Romeo-Juliet), ಷಹ ಜಹಾನ್‌-‌ ಮಮ್ತಾಜ್‌‌ ನಡುವಿನ ಪ್ರೀತಿ ಕಥೆಗಳು ಪ್ರೀತಿಗೆ ಮತ್ತೊಂದು ಅರ್ಥವಾಗಿತ್ತು. ಹೀಗೆ ಇಂತಹ ಸುಂದರ ಪ್ರೇಮ ಕಥೆಗಳ (Love Story) ನಡುವೆ ಭಯಂಕರವಾದ ಹುಚ್ಚು ಪ್ರೀತಿಯ ಕಥೆಗಳೂ ಇವೆ.


    ಅಮೆರಿಕಾದಲ್ಲಿ ಭಯಂಕರ ಘಟನೆ


    ಇಂತಹ ವಿಚಿತ್ರ ಪ್ರಕರಣಗಳಲ್ಲಿ ಪ್ರತಿಯೊಬ್ಬರನ್ನು ಬೆಚ್ಚಿಬೀಳಿಸುವಂತಹ ಘಟನೆ ಎಂದರೆ ಅದು ಅಮೆರಿಕಾದ ಒಂದು ಘಟನೆ. ಈ ವಿಚಿತ್ರ ಪ್ರಕರಣದಲ್ಲಿ ಸತ್ತ ಓರ್ವ ಯುವತಿಯ ಶವದ ಜೊತೆ 7 ವರ್ಷಗಳ ಕಾಲ ವೈದ್ಯನೊಬ್ಬ ಸಂಸಾರ ನಡೆಸಿದ್ದಾನೆ.


    ಹೌದು, ಅಮೆರಿಕಾದ ಫ್ಲೋರಿಡಾದ ಖ್ಯಾತ ವೈದ್ಯ ಅಂತಾನೇ ಜನಪ್ರಿಯವಾಗಿದ್ದ ಕಾರ್ಲ್ ಟಾಂಜ್ಲರ್ ಸತ್ತ ಯುವತಿಯ ಶವ ಹೊರತೆಗೆದು ಅದಕ್ಕೆ ಹೊಸ ರೂಪ ಕೊಟ್ಟು ಅವಳನ್ನೇ ಜೀವನದ ಸಂಗಾತಿ ಎಂದು ಅದರ ಜೊತೆಯೇ ಸುಮಾರು ಏಳು ವರ್ಷಗಳ ಕಾಲ ಜೀವನ ನಡೆಸಿದ್ದಾನೆ.


    ಇದನ್ನೂ ಓದಿ: ಬೆಂಗಳೂರಿನ ಶ್ವಾನ ಮಾಲೀಕರೇ ಎಚ್ಚರ, ಸಿನಿಮೀಯ ರೀತಿಯಲ್ಲಿ ಬರ್ತಾರೆ ನಾಯಿಕಳ್ಳರು!


    ಅತ್ಯಂತ ಬುದ್ಧಿವಂತ ಡಾಕ್ಟರ್


    ಡಾ ಕಾರ್ಲ್ ಟಾಂಜ್ಲರ್ 1877 ರಲ್ಲಿ ಡ್ರೆಸ್ಡೆನ್‌ನಲ್ಲಿ ಜನಿಸಿದರು ಆದರೆ ಅಂತಿಮವಾಗಿ ವಿಶ್ವ ಸಮರ 1 ರ ನಂತರ ಯುಎಸ್ಎಗೆ ತೆರಳಿದರು. ಅವರು ಒಂಬತ್ತು ವಿಶ್ವವಿದ್ಯಾನಿಲಯ ಪದವಿಗಳನ್ನು ಹೊಂದಿದ್ದರು ಮತ್ತು ಈತನನ್ನು ಅತ್ಯಂತ ಬುದ್ಧಿವಂತ ವೈದ್ಯ ಎಂದು ಕರೆಯಲಾಗುತ್ತಿತ್ತು. ಕಾರ್ಲ್ ಟಾಂಜ್ಲರ್‌ ಅವರನ್ನು ಕೌಂಟ್ ಕಾರ್ಲ್ ವಾನ್ ಕೋಸೆಲ್ ಎಂದೂ ಸಹ ಕರೆಯುತ್ತಾರೆ. ‌


    ಕ್ಷಯ ರೋಗಿ ಮೇಲೆ ಪ್ರೀತಿಯಾಗಿತ್ತು ಟಾಂಜ್ಲರ್‌ಗೆ


    ಅವರು ಫ್ಲೋರಿಡಾದ ನೌಕಾ ಆಸ್ಪತ್ರೆಯಲ್ಲಿ ಹಾಸ್ಪಿಟಲ್ ಸೇವೆಯಲ್ಲಿ ಜರ್ಮನ್ ಮೂಲದ ರೇಡಿಯಾಗ್ರಫಿ ತಂತ್ರಜ್ಞರಾಗಿದ್ದರು. 1877 ರಿಂದ 1952 ರವರೆಗೆ ಆಸ್ಪತ್ರೆಯಲ್ಲಿ ಕೆಲಸ ಮಾಡಿದ್ದರು.


    ಕಾರ್ಲ್ ಟಾಂಜ್ಲರ್‌ ಮತ್ತು ಎಲೆನಾ


    ಹೀಗೆ ಈ ವೇಳೆ ಫ್ಲೋರಿಡಾದ ಕೀ ವೆಸ್ಟ್‌ನಲ್ಲಿರುವ ಆಸ್ಪತ್ರೆಯಲ್ಲಿ 21 ವರ್ಷದ ಎಲೆನಾ ಎಂಬ ಯುವತಿ ಕ್ಷಯ ರೋಗದಿಂದಾಗಿ ಆಸ್ಪತ್ರೆ ಸೇರಿದ್ದಳು. ಈ ವೇಳೆ ಇಬ್ಬರ ನಡುವೆ ಪರಿಚಯ ಬೆಳೆದು ಸ್ನೇಹವಾಗಿತ್ತು, ಟಾಂಜ್ಲರ್‌ ಎಲೆನಾಳನ್ನು ತುಂಬಾ ಹಚ್ಚಿಕೊಂಡಿದ್ದರು.


    ಆಕೆಯ ಬಗ್ಗೆ ಅವರು ಎಷ್ಟು ಗೀಳು ಹೊಂದಿದ್ದರೆಂದರೆ ಅವಳ ಸಂಪೂರ್ಣ ಆರೈಕೆಯನ್ನು ಇವರೇ ಮಾಡುತ್ತಿದ್ದರು. ಆದರೆ ಟಾಂಜ್ಲರ್‌ ಎಷ್ಟೇ ಪ್ರಯತ್ನಿಸಿದರೂ ಎಲೆನಾ ರೋಗದಿಂದ ಗುಣವಾಗದೆ ಸಾವನ್ನಪ್ಪಿದಳು. ಟಾಂಜ್ಲರ್‌ಗೆ ಆತ ಚಿಕ್ಕವನಿದ್ದಾಗ ಒಂದು ಘಟನೆ ನಡದಿತ್ತು, ಆತನಿಗೆ ಪ್ರೇತ ಒಂದು ಕಾಣಿಸಿಕೊಂಡು "ಭವಿಷ್ಯದ ವಧು" ವನ್ನು ತನಗೆ ತೋರಿಸಿದೆ ಎಂದು ಹೇಳಿಕೊಳ್ಳುತ್ತಿದ್ದನು. ಎಲೆನಾಳನ್ನು ಸಹ ಟಾಜ್ಲಂರ್‌ ಚಿಕ್ಕವನಿದ್ದಾಗ ತನ್ನನ್ನು ಭೇಟಿ ಮಾಡಿದ ಪ್ರೇತದ ಅವತಾರ ಎಂದು ಭಾವಿಸಿದ್ದನು.


    ಯುವತಿ ಶವಕ್ಕೆ ಹೊಸ ರೂಪ ನೀಡಿ ಅದರ ಜೊತೆ ಬದುಕಿದ್ದ ಟಾಂಜ್ಲರ್


    ಎಲೆನಾ ಸತ್ತ ಬಳಿಕ ಆಕೆಯನ್ನು ಸಂಸ್ಕಾರ ಮಾಡಲಾಗಿತ್ತು. ಆದರೆ ಆಕೆಯ ಪ್ರೀತಿಯಿಂದ ಹೊರಬರದ ಟಾಂಜ್ಲರ್‌ ಅವಳ ಜೊತೆಯೇ ಬದುಕ ಬೇಕು ಅಂತಾ ನಿರ್ಧರಿಸಿ ಭಯಂಕರ ಕೃತ್ಯಕ್ಕೆ ಮುಂದಾದ. ಡಾ. ಟಾಂಜ್ಲರ್ ಶವವನ್ನು ಪತ್ತೆ ಹಚ್ಚಿ, ಅದನ್ನು ಸಮಾಧಿಯಿಂದ ತೆಗೆದು ಸಂರಕ್ಷಿಸಿ ಅವಳ ಕಣ್ಣುಗಳನ್ನು ಗಾಜಿನಿಂದ ಮತ್ತು ಅವಳ ಮುಖವನ್ನು ಮುಖವಾಡದಿಂದ ಬದಲಾಯಿಸಿದರು. ಆಕೆಯನ್ನೇ ತನ್ನ ವಧು ಎಂದು ಭಾವಿಸಿ ಸುಮಾರು ಏಳು ವರ್ಷಗಳ ಕಾಲ ಅದನ್ನು ತಮ್ಮ ಮನೆಯಲ್ಲಿ ಇಟ್ಟುಕೊಂಡಿದ್ದರು.




    1940 ರಲ್ಲಿ ಈ ವಿಚಾರ ಅವರ ಸ್ನೇಹಿತರು ಹಾಗೂ ಬಂಧುಗಳ ಗಮನಕ್ಕೆ ಬಂದ ನಂತರ ಹೊರ ಪ್ರಪಂಚಕ್ಕೆ ಈ ವಿಚಾರ ತಿಳಿದಿತ್ತು. ನಂತರ ಎಲೆನಾಳ ಸಹೋದರಿ ನ್ಯಾಯಾಲಯದ ಮೆಟ್ಟಿಲೇರಿದರು. ಆದರೆ ಕಾನೂನು ಲೋಪದೋಷದಿಂದಾಗಿ ಡಾ ಟಾಂಜ್ಲರ್ ಅವರಿಗೆ ಯಾವುದೇ ಶಿಕ್ಷೆ ಆಗಲಿಲ್ಲ.

    Published by:Prajwal B
    First published: