ಸಾಮಾನ್ಯವಾಗಿ ಯಾವುದೇ ಹಬ್ಬ, ಸಂಭ್ರಮದ ದಿನಗಳು ಬಂದಾಗ ಫ್ಯಾಮಿಲಿಯವರು, ಸ್ನೇಹಿತರು ಸೇರಿ ಪಾರ್ಟಿ ಮಾಡಿಕೊಂಡು ಮದ್ಯ ಸೇವನೆ ಮಾಡುತ್ತಾರೆ. ಇಂತಹ ಹಲವಾರು ಸಂದರ್ಭಗಳನ್ನು ನೋಡಿದ್ದೇವೆ. ಇನ್ನು ಕೆಲವರು ಕುಡಿದು ಗಲಾಟೆ ಮಾಡುವುದನ್ನೂ ನೋಡಿದ್ದೇವೆ. ಇಂತಹ ಘಟನೆಗಳ ವಿಡಿಯೋ, ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ (Social Media) ಹರಿದಾಟುತ್ತಲೇ ಇರುತ್ತದೆ. ಆದರೆ ಇಲ್ಲೊಂದು ಕುಡಿದ ಮತ್ತಿನಲ್ಲಿದ್ದ ಯುವಕನಿಗೆ ತನ್ನ ಸ್ನೇಹಿತರು ಮಾಡಿದ ಕೆಲಸ ಕೇಳಿದ್ರೆ ಒಮ್ಮೆಗೆ ಗಾಬರಿ ಗೊಳಿಸುತ್ತೆ. ಇಲ್ಲೊಬ್ಬ ಯುವಕನ ಹೊಟ್ಟೆಗೆ ಆತನಿಗೆ ಗೊತ್ತಿಲ್ಲದ ಹಾಗೆಯೇ ವೋಡ್ಕಾ ಬಾಟಲಿ (Vodka Bottle) ನುಗ್ಗಿದೆ. ಆದರೆ ಮೊದಲಿಗೆ ಹೊಟ್ಟೆನೋವು (Stomach Pain) ಎಂದು ಮನಗಂಡ ನಂತರ ಡಾಕ್ಟರ್ ಬಳಿಗೆ ಹೋದಾಗ ಈ ವಿಷಯ ತಿಳಿದಿದೆ.
ಹೌದು, ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಯುವಕ, ಟೆಸ್ಟ್ಗಾಗಿ ಡಾಕ್ಟರ್ ಬಳಿ ಹೋಗುತ್ತಾನೆ. ಡಾಕ್ಟರ್ ಸ್ಕ್ಯಾನಿಂಗ್ ಮಾಡಿ ರಿಪೋರ್ಟ್ ನೋಡಿದಾಗ ಹೊಟ್ಟೆಯೊಳಗಡೆ ಮದ್ಯದ ಬಾಟಲಿ ಇದೆ ಎಮದು ತಿಳಿದಿದೆ. ಇದನ್ನು ನೋಡಿದ ಡಾಕ್ಟರೇ ಬೆಚ್ಚಿಬಿದ್ದಿದ್ದಾರೆ.
26 ವರ್ಷದ ಯುವಕ
26 ವರ್ಷದ ನೂರ್ಸಾದ್ ಮನ್ಸೂರಿ ಎಂಬ ಯುವಕ ಹೊಟ್ಟೆ ನೋವು ಎಂದು ವೈದ್ಯರ ಬಳಿಗೆ ಬಂದಿದ್ದಾನೆ. ನಂತರ ವೈದ್ಯರು ಅವನನ್ನು ಸ್ಕ್ಯಾನಿಂಗ್ ಮಾಡಿ, ರಿಪೋರ್ಟ್ ಬಂದ ನಂತರ ವೈದ್ಯರೇ ಬೆಚ್ಚಿಬಿದ್ದಿದ್ದಾರೆ. ಏಕೆಂದರೆ ಈತನಿಗೆ ಹೊಟ್ಟೆ ನೋವಾಗಲು ಕಾರಣವೇ ಈತನ ಹೊಟ್ಟೆಯಲ್ಲಿದ್ದ ಮದ್ಯದ ಬಾಟಲಿ. ಈತ ನೇಪಾಳದ ರೌತಹತ್ ಜಿಲ್ಲೆಯ ಗುಜರಾ ಪುರಸಭೆಯ ನಿವಾಸಿಯಾಗಿದ್ದಾನೆ.
ಇದನ್ನೂ ಓದಿ: ಈ ಮರದ ತುಂಡಿಗೆ 8 ಲಕ್ಷ, ನಿಮ್ಮ ಮನೆಯಲ್ಲೇ ಬೆಳೆಸಿದ್ರೆ ಕೋಟ್ಯಾಧಿಪತಿಯಾಗಬಹುದು!
ಎರಡೂವರೆ ಗಂಟೆಗಳ ಕಾರ್ಯಾಚರಣೆ
ವರದಿಯನ್ನು ನೋಡಿದ ವೈದ್ಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ನಡೆಸಿ ಬಾಟಲಿಯನ್ನು ಹೊರತೆಗೆದಿದ್ದಾರೆ. ಈ ಕಾರ್ಯಾಚರಣೆಯು ಸತತ ಎರಡೂವರೆ ಗಂಟೆಗಳ ಕಾಲ ನಡೆದಿದೆ. ಇನ್ನು ಈ ಬಾಟಲಿಯಿಂದಾಗಿ ಅವರ ಹೊಟ್ಟೆಯಲ್ಲಿನ ಕರುಳುಗಳು ಛಿದ್ರಗೊಂಡಿವೆ ಮತ್ತು ಊದಿಕೊಳ್ಳುತ್ತಿವೆ ಎಂದು ವೈದ್ಯರು ಹೇಳಿದ್ದಾರೆ. ಆದರೆ ಸದ್ಯ ಆತನಿಗೆ ಯಾವುದೇ ಅಪಾಯವಿಲ್ಲ ಎಂದಿದ್ದಾರೆ ಎಂದು ವರದಿಯೊಂದು ಹೇಳಿದೆ.
ಸ್ನೇಹಿತರಿಂದ ಈ ಕೃತ್ಯ
ಇನ್ನು ಆತನ ಸ್ನೇಹಿತರು ಬಲವಂತವಾಗಿ ಮದ್ಯ ಕುಡಿಸಿದ್ದರು. ನಂತರ ಖಾಸಗಿ ಭಾಗದಿಂದ ಬಾಟಲಿಯನ್ನು ಅವರ ದೇಹಕ್ಕೆ ಸೇರಿಸಲಾಯಿತು ಎಂದು ಊಹಿಸಲಾಗಿದೆ. ಸ್ನೇಹಿತನೊಂದಿಗೆ ಈ ರೀತಿ ಬೇಡದ ಆಟ ಆಡಿದ ಆರೋಪಿ ಸ್ನೇಹಿತರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ನೂರ್ಸಾದ್ ಸ್ನೇಹಿತರು ಆತನಿಗೆ ಮದ್ಯ ನೀಡಿ ಹಿಂಬದಿಯಿಂದ ಬಾಟಲಿಯನ್ನು ಹೊಟ್ಟೆಗೆ ಹಾಕಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಸಮೀಮ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ನೂರ್ಸಾದ್ ಅವರ ಕೆಲವು ಸ್ನೇಹಿತರನ್ನೂ ವಿಚಾರಣೆ ನಡೆಸಲಾಗುತ್ತಿದೆ. ನೂರ್ಸಾದ್ ಅವರ ಕೆಲವು ಸ್ನೇಹಿತರು ತಲೆಮರೆಸಿಕೊಂಡಿದ್ದು, ಅವರಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ ಎಂದು ರೌತಹತ್‌ನ ಪೊಲೀಸ್ ವರಿಷ್ಠಾಧಿಕಾರಿ ಬೀರ್ ಬಹದ್ದೂರ್ ಬುಧಾ ಮಗರ್ ಹೇಳಿದ್ದಾರೆ.
ಹೊಟ್ಟೆಯಲ್ಲಿ ಸ್ಟೀಲ್ ಗ್ಲಾಸ್
ಈ ಹಿಂದೆ ಬಿಹಾರದಲ್ಲೂ ಇಂತಹದ್ದೇ ಘಟನೆ ನಡೆದಿತ್ತು. ಒಬ್ಬ ಯುವಕನ ಹೊಟ್ಟೆಯಲ್ಲಿ ಸ್ಟೀಲ್ ಗ್ಲಾಸ್ ಇತ್ತು. 22 ವರ್ಷದ ಮದ್ಯದ ವ್ಯಕ್ತಿ ತೀವ್ರ ಹೊಟ್ಟೆ ನೋವು ಮತ್ತು ಗುದನಾಳದ ರಕ್ತಸ್ರಾವದಿಂದ ಬಳಲುತ್ತಿದ್ದರು. ಅನಾರೋಗ್ಯದ ತೀವ್ರತೆಯನ್ನು ಪರಿಗಣಿಸಿ, ತಕ್ಷಣವೇ ಅವರನ್ನು ಪಾಟ್ನಾದ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿನ ವೈದ್ಯರು ಆತನನ್ನು ಪರೀಕ್ಷಿಸಿದಾಗ ಆತನ ಹೊಟ್ಟೆಯಲ್ಲಿ 14 cm (5.5 in) ಉದ್ದದ ಸ್ಟೀಲ್ ಗ್ಲಾಸ್ ಅಂಟಿಕೊಂಡಿರುವುದು ಕಂಡುಬಂತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ