ಇಂದು ಹೆಚ್ಚಿನ ವೈದ್ಯರುಗಳು (Doctor) ವಿದೇಶದಲ್ಲಿ ಕಲಿತು ಭಾರತದಲ್ಲಿ ಆಸ್ಪತ್ರೆ ತೆರೆದು ಕೈ ತುಂಬಾ ಸಂಪಾದಿಸುತ್ತಿದ್ದಾರೆ. ವೈದ್ಯರಾಗಲು ನೀರಿನಂತೆ ಅಷ್ಟೇ ಹಣ ಖರ್ಚುಮಾಡಬೇಕಾಗುತ್ತದೆ ಹಾಗಾಗಿಯೇ ನಾವು ವೃತ್ತಿಗೆ ಬಂದ ನಂತರ ಖರ್ಚುಮಾಡಿದ ಹಣವನ್ನೇ (Money) ಸಂಪಾದಿಸುತ್ತಿದ್ದೇವೆ ಎಂದು ವಾದಿಸುತ್ತಾರೆ. ಆದರೆ ಹೈದ್ರಾಬಾದ್ ಮೂಲದ ವೈದ್ಯ ಸುಧೀರ್ ಕುಮಾರ್ ಅಪವಾದ ಎಂಬಂತಿದ್ದಾರೆ. 2004 ರಲ್ಲಿ ಡಾಕ್ಟರ್ ಆಫ್ ಮೆಡಿಸಿನ್ (DM) ನ್ಯೂರಾಲಜಿಯನ್ನು ಪೂರ್ಣಗೊಳಿಸಿದ ನಾಲ್ಕು ವರ್ಷಗಳ ನಂತರ, ತಿಂಗಳಿಗೆ ಅವರು ಗಳಿಸುತ್ತಿದ್ದುದು ಬರೇ 9,000 ರೂಪಾಯಿಗಳು ಎಂದರೆ ಸೋಜಿಗದ ಸಂಗತಿಯಾಗಿದೆ.
ವೈದ್ಯರಾದವರು ಮಿತವ್ಯಯದಲ್ಲಿ ಬದುಕಬೇಕು
ವೈದ್ಯ ವೃತ್ತಿ ಅಭ್ಯಸಿಸುವ ವೈದ್ಯರಿಗೆ ಸಮಾಜ ಸೇವೆ ಮಾಡುವುದು ಅಷ್ಟೊಂದು ಸುಲಭವಲ್ಲ ಎಂಬುದಾಗಿ ವೈದ್ಯರಾದ ಸುಧೀರ್ ಕುಮಾರ್ ಟ್ವಿಟರ್ ಬಳಕೆದಾರರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ತಿಳಿಸಿದ್ದಾರೆ. ವೆಲ್ಲೂರ್‌ನಲ್ಲಿರುವ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನಲ್ಲಿರುವ ತಮ್ಮ ಪ್ರೊಫೆಸರ್‌ಗಳ ಬಗ್ಗೆ ಕೆಲವೊಂದು ಮಾಹಿತಿ ಹಂಚಿಕೊಂಡ ವೈದ್ಯರು, ವೈದ್ಯರ ಜೀವನ ಯಾವಾಗಲೂ ಮಿತವ್ಯಯವಾಗಿರಬೇಕು ಹಾಗೂ ಕನಿಷ್ಟ ಖರ್ಚಿನಲ್ಲಿಯೇ ಜೀವನ ನಡೆಸಬೇಕು ಎಂದು ತಿಳಿಸಿದ್ದಾರೆ.
ನನ್ನ ಪ್ರಾಧ್ಯಾಪಕರೇ ನನ್ನ ಮಾರ್ಗದರ್ಶಕರು
20 ವರ್ಷಗಳ ಹಿಂದೆ ಯುವ ಅಭ್ಯಾಸಿಯಾಗಿದ್ದೆ. ವೈದ್ಯಕೀಯ ಶಿಕ್ಷಣ ಮುಗಿಸಿದ ನಂತರ ವೈದ್ಯ ವೃತ್ತಿಯಲ್ಲಿ ತಿಂಗಳಿಗೆ ರೂ 9,000 ನಾನು ಗಳಿಸುತ್ತಿದ್ದೆ. ಎಮ್‌ಬಿಬಿಎಸ್‌ಗೆ ಸೇರಿದ 16 ವರ್ಷಗಳ ನಂತರದ ಕಥೆ ಇದಾಗಿದೆ ಎಂದು ಸುಧೀರ್ ತಿಳಿಸಿದ್ದಾರೆ. CMC ವೆಲ್ಲೂರಿನಲ್ಲಿ, ನನ್ನ ಪ್ರಾಧ್ಯಾಪಕರು ಮಿತವ್ಯಯದಲ್ಲೇ ದಿನದೂಡುತ್ತಿದ್ದರು ಹಾಗೂ ಮಿತವ್ಯಯದಲ್ಲಿ ಬದುಕುವ ಪಾಠವನ್ನು ಅಲ್ಲಿಂದಲೇ ನಾನು ಕಲಿತಿರುವೆ ಎಂದು ಸುಧೀರ್ ಕುಮಾರ್ ತಿಳಿಸಿದ್ದಾರೆ.
ಟ್ವಿಟರ್ ಬಳಕೆದಾರರ ಕಾಮೆಂಟ್‌ಗಳೇನು?
ಟ್ವಿಟರ್ ಬಳಕೆದಾರರು ಸುಧೀರ್ ಕುಮಾರ್ ಹೇಳಿದ ಮಾತುಗಳನ್ನು ಒಪ್ಪಿಕೊಂಡಿದ್ದು 2000 ದ ಸಮಯದಲ್ಲಿದ್ದ ವೈದ್ಯರುಗಳ ಸಂಬಳವನ್ನೇ ಅವರು ಸ್ವೀಕರಿಸಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಐಟಿ ಕ್ಷೇತ್ರದಲ್ಲಿಯೂ ಆ ಸಮಯದಲ್ಲಿ ನಾವು ತಿಂಗಳಿಗೆ 5 ರಿಂದ 6 ಸಾವಿರ ಸಂಪಾದಿಸುತ್ತಿದ್ದೆವು. ನಾವು ಬಳಸುತ್ತಿದ್ದ ಫ್ಲಾಟ್ ಬೆಲೆ 6-8 ಲಕ್ಷವಾಗಿತ್ತು ಇದೀಗ 1.5 ಕೋಟಿಗಿಂತಲೂ ಹೆಚ್ಚು ಬೆಲೆ ಬಾಳುತ್ತಿದೆ ಎಂದು ಟ್ವಿಟರ್ ಬಳಕೆದಾರರು ಸುಧೀರ್ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ವೋಗ್ ಸಿಂಗಾಪುರ್ ಕವರ್ ಶೂಟ್‌ನಲ್ಲಿ ಮಿಂಚಿದ AI ಮಾಡೆಲ್‌ಗಳು- ಇನ್ಮುಂದೆ ರೂಪದರ್ಶಿಗಳ ಪಾಡೇನು?
ರೋಗಿಗಳ ಸೇವೆಯಿಂದ ಪ್ರತಿಫಲ ಬಯಸಬೇಕು ಆದಾಯದಿಂದ ಅಲ್ಲ
ಎಂಬಿಬಿಎಸ್ ಅಧ್ಯಯನ ಮುಗಿಸಿ 1994 ರಲ್ಲಿ ಸಂಪಾದಿಸಲು ಆರಂಭಿಸಿದೆ. ತಿಂಗಳ ಸಂಬಳ ರೂ 1500 ಆಗಿತ್ತು ಆದರೆ CMC ವೆಲ್ಲೂರ್‌ನಲ್ಲಿ ಬದುಕಲು ರೂ 1500 ಸಾಕಾಗಿತ್ತು. ನಮ್ಮ ಪ್ರಾಧ್ಯಾಪಕರು ಮಿತವ್ಯಯದಲ್ಲಿ ಹೇಗೆ ಬದುಕಬಹುದು ಎಂಬುದನ್ನು ಕಲಿಸಿದ್ದಾರೆ. ವೈದ್ಯರು ತಮ್ಮ ಕೆಲಸ ಹಾಗೂ ರೋಗಿಗಳ ಸೇವೆಯ ಮೂಲಕ ಮಾತ್ರ ಪ್ರತಿಫಲ ಬಯಸಬೇಕು ಆದರೆ ಸಂಬಳದಿಂದ ಅಲ್ಲ ಎಂದು ಸುಧೀರ್ ತಿಳಿಸಿದ್ದಾರೆ.
ಇದನ್ನೂ ಓದಿ: ಮೆಕ್ಸಿಕನ್ ಹುಡುಗಿಯ ಮನಗೆದ್ದ ತಮಿಳುನಾಡು ಯುವಕ, ಭಾರತೀಯ ಸಂಪ್ರದಾಯದಂತೆ ಹಸೆಮಣೆ ಏರಿದ ಜೋಡಿ
ನನ್ನ ಸಂಬಳ ನನಗೆ ಖುಷಿ ನೀಡಿತ್ತು
Agree with you.
I was also a young practitioner 20 yrs back. My salary 4 yrs after DM Neurology (2004) was Rs 9000/month. This was 16 yrs after joining MBBS. At CMC Vellore, by observing my professors, I realized that doctor's life should be frugal & learnt to live with bare… https://t.co/IPnJKoIixs
— Dr Sudhir Kumar MD DM (@hyderabaddoctor) April 4, 2023
ನಾನು ವೈದ್ಯಕೀಯ ಶಿಕ್ಷಣ ಪೂರೈಸಲು ಬಹಳ ಕಷ್ಟಪಟ್ಟಿದ್ದೆ. 12 ವರ್ಷಗಳ ಕಾಲ ಪಿಯುಸಿ ನಂತರ ಹನ್ನೆರಡು ವರ್ಷ ಎಮ್‌ಬಿಬಿಎಸ್, ಎಮ್‌ಡಿ ಹಾಗೂ ಡಿಎಮ್ ಶಿಕ್ಷಣ ಪೂರೈಸಿದೆ. ಹೀಗಾಗಿ ನನ್ನ ಆದಾಯ ಆಕೆಗೆ ನಿಜವಾಗಿಯೂ ಬೇಸರವನ್ನು ಮೂಡಿಸಿತ್ತು. ಇಲ್ಲಿ ನನ್ನ ತಾಯಿಯ ಪ್ರೀತಿ ಹಾಗೂ ನೋವನ್ನು ಅರ್ಥಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ