ವೈದ್ಯೋ ನಾರಾಯಣೋ ಹರಿಃ ಎಂಬ ಮಾತಿದೆ. ಇದಕ್ಕೆ ತಕ್ಕಂತೆ ಅದೆಷ್ಟೋ ವೈದ್ಯರು (Doctor) ಸಾಕ್ಷಿ ಆಗಿದ್ದಾರೆ. ಯಾಕಂದರೆ, ವೈದ್ರು SORRY ಅಂದ್ರೆ ಅಲ್ಲಿ ಒಂದು ಜೀವ ಹೋಯ್ತು ಅಂತ ಅರ್ಥ. ಒಂದು ಜೀವವನ್ನು ಉಳಿಸುವಲ್ಲಿ ತನ್ನ ಪ್ರಾಣವನ್ನೇ ಒತ್ತೆ ಇಡುತ್ತಾರೆ ಡಾಕ್ಟರ್ಸ್. ಹೌದು. ಈ ಹಿಂದೆ ಆಪರೇಷನ್ಗೆ ಲೇಟಾಯ್ತು, ಆದರೆ ಇನ್ನೂ ರಸ್ತೆ ಮಧ್ಯದಲ್ಲೇ ಟ್ರಾಫಿಕ್ನಲ್ಲಿ ಸಕ್ಕಿ ಹಾಕಿಕೊಂಡಿದ್ದೇನೆ ಎಂದು ತಿಳಿದಾಗ, ಅಲ್ಲೇ ಗಾಡಿಯಿಂದ ಇಳಿದು ಆಸ್ಪತ್ರೆಗೆ ಆಪರೇಷನ್ಗೆ ಅಂತ ಓಡಿ ಹೋದ ವೈದ್ಯರ ಸುದ್ಧಿ ಮತ್ತು ವಿಡಿಯೋ ಫುಲ್ ವೈರಲ್ (Viral) ಆಗಿತ್ತು. ಅದೇ ರೀತಿಯಾಗಿ ವಿಮಾನ ನಿಲ್ದಾಣದಲ್ಲಿ (Airport) ಓರ್ವ ವ್ಯಕ್ತಿ ಎದೆ ನೋವು ಎಂದು ಎದೆ ಹಿಡಿದುಕೊಂಡು ಕೂತಾಗ, ಅಲ್ಲೇ ಇದ್ದ ವೈದ್ಯರು ಯಾವ ರೀತಿಯಾಗಿ ಚಿಕಿತ್ಸೆ (Treatment) ನೀಡಿದರು ಎಂಬುದು ಕೂಡ ಸಖತ್ ವೈರಲ್ ಆಗಿತ್ತು.
ಇದೀಗ ಇಂಥದ್ದೇ ಒಂದು ವಿಷಯ ಫುಲ್ ವೈರಲ್ ಆಗ್ತಾ ಇದೆ. ಇತ್ತೀಚಿನ ಕಾಲದಲ್ಲಿ ಹೃದಯಘಾತದಿಂದಾಗಿ ಹಲವರು ಸಾವನ್ನಪ್ಪಿ ಘಟನೆಗಳು ನಡೆಯುತ್ತಲೇ ಇದೆ. ಅದೆಂತಹ ದೊಡ್ಡ ಸ್ಟಾರ್ಗಳು ಫಿಟ್ ಆಗಿರಬೇಕು ಅಂತ ಜಿಮ್ಗಳಿಗೆ ಹೋಗಿ, ಅಲ್ಲಿ ಕೂಡ ಹಾರ್ಟ್ ಅಟ್ಯಾಕ್ ಆಗಿರುವ ಘಟನೆಗಳು ಸಂಭವಿಸಿದೆ.
ಏನಿದು ವೈರಲ್ ಸುದ್ಧಿ?
ಬೆಂಗಳೂರಿನ ಐಕ್ಯಾ (IKEA) ಸ್ಟೋರ್ನಲ್ಲಿ ಶಾಪಿಂಗ್ ಮಾಡುತ್ತಿದ್ದಾಗ ಹೃದಯಾಘಾತಕ್ಕೊಳಗಾದ ಗ್ರಾಹಕನನ್ನು ರಕ್ಷಿಸಲು ವೈದ್ಯರು ಬಂದರು. ಘಟನೆಯ ವೀಡಿಯೊವನ್ನು ವೈದ್ಯರ ಮಗ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ ಮತ್ತು ಸಾಕಷ್ಟು ಲೈಕ್ಸ್ ಮತ್ತು ಶೇರ್ಗಳನ್ನು ಗಳಿಸಿದ್ದಾರೆ.
ಯಾವಾಗ?
ನಗರದ IKEA ಅಂಗಡಿಯೊಂದರಿಂದ ವರದಿಯಾಗಿದ್ದು, ಹೃದಯಾಘಾತಕ್ಕೆ ಒಳಗಾದ ಗ್ರಾಹಕರೊಬ್ಬರು ನೆಲದ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಾರೆ. ಅದೃಷ್ಟವಶಾತ್, ಮುಂದಿನ ಲೇನ್ನಲ್ಲಿ ಶಾಪಿಂಗ್ ಮಾಡುತ್ತಿದ್ದ ವೈದ್ಯರು ವ್ಯಕ್ತಿಯ ರಕ್ಷಣೆಗೆ ಬಂದರು ಮತ್ತು ಹೃದಯರಕ್ತನಾಳದ ಪುನರುಜ್ಜೀವನ / ಸಿಪಿಆರ್ನೊಂದಿಗೆ ಸಮಯಕ್ಕೆ ಅವನನ್ನು ಪುನರುಜ್ಜೀವನಗೊಳಿಸಿದರು.
My dad saved a life. We happen to be at IKEA Bangalore where someone had an attack and had no pulse. Dad worked on him for more than 10 mins and revived him. Lucky guy that a trained orthopedic surgeon was shopping in the next lane. Doctors are a blessing. Respect !!! pic.twitter.com/QXpXTMBOya
— Rohit Dak (@rohitdak) December 29, 2022
ಬೆಂಗಳೂರಿನಲ್ಲಿ ಈ ಘಟನೆ ನಡೆದಿದ್ದು ಅಲ್ಲಿ ಇದ್ದವರು ಕನ್ನಡದಲ್ಲಿ ಮಾತನಾಡುವುದನ್ನು ಕಾಣಬಹುದಾಗಿದೆ. ನೀರನ್ನು ಕೊಡಲು ಒಬ್ಬ ಮಹಿಳೆ ಸಿದ್ಧರಾಗಿದ್ದಾರೆ. ಇನ್ನೊಂದು ಮುಖ್ಯವಾದ ವಿಷಯ ಅಂದ್ರೆ, ಎದೆ ನೋವಾಗಬೇಕಾದ್ರೆ ನೀರನ್ನು ಯಾವುದೇ ಕಾರಣಕ್ಕೂ ಕುಡಿಯಬೇಡಿ ಮತ್ತು ಕುಡಿಸಬೇಡಿ.
ಇದನ್ನೂ ಓದಿ: ಕಾಳಗಕ್ಕೆ ರೆಡಿಯಾಗಿದ್ದ ಹುಂಜಗಳು ಲಾಕ್, ಟ್ರೀಟ್ಮೆಂಟ್ಗೆ ಅಂತ 5 ಸಾವಿರ ಖರ್ಚು ಮಾಡಿದ ಖಾಕಿ ಪಡೆ!
ವೀಡಿಯೋದಲ್ಲಿ ಕಾಣುವಂತೆ ಗ್ರಾಹಕರು ತಮ್ಮ ಸುತ್ತಲಿನ ಜನರೊಂದಿಗೆ ನೆಲದ ಮೇಲೆ ಮಲಗಿದ್ದಾರೆ. ವೈದ್ಯರು ಆತನಿಗೆ ಎದೆಯನ್ನು ಪಂಪ್ ಮಾಡುತ್ತಾ ಇದ್ದಾರೆ. ಹಾಗೇಯೇ ಉಸಿರಾಟ ಮತ್ತು ಸಾಮಾನ್ಯ ರಕ್ತ ಪರಿಚಲನೆ ಪುನಃಸ್ಥಾಪಿಸಲು ಪ್ರಯತ್ನಿಸುತ್ತಾರೆ. ಸ್ವಲ್ಪ ಸಮಯದ ನಂತರ, ನೆಲದ ಮೇಲಿದ್ದ ವ್ಯಕ್ತಿಗೆ ಪ್ರಜ್ಞೆ ಬಂದಂತೆ ಕೆಮ್ಮುವುದು ಕಂಡುಬರುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ