• Home
  • »
  • News
  • »
  • trend
  • »
  • Snake Viral Video: ಬಾಯಿಯಿಂದ ಹೊಟ್ಟೆಯೊಳಗೆ ಹೊಕ್ಕ 4 ಅಡಿ ಹಾವು! ನೋಡಿ ವೈದ್ಯರೇ ಗಾಬರಿ

Snake Viral Video: ಬಾಯಿಯಿಂದ ಹೊಟ್ಟೆಯೊಳಗೆ ಹೊಕ್ಕ 4 ಅಡಿ ಹಾವು! ನೋಡಿ ವೈದ್ಯರೇ ಗಾಬರಿ

ಇಷ್ಟುದ್ದ ಹಾವು ಮೂಗಿನೊಳಗಿತ್ತು!

ಇಷ್ಟುದ್ದ ಹಾವು ಮೂಗಿನೊಳಗಿತ್ತು!

ನವೆಂಬರ್ 12ರಂದು ಮೊದಲ ಬಾರಿಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದ ಈ ವಿಡಿಯೋ ಫುಲ್ ವೈರಲ್ ಆಗಿದೆ. 16 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಕಂಡಿದ್ದು, 36 ಸಾವಿರಕ್ಕೂ ಹೆಚ್ಚು ಲೈಕ್ಸ್​ಗಳನ್ನು ಪಡೆದಿದೆ.

  • News18 Kannada
  • Last Updated :
  • Karnataka, India
  • Share this:

ಬಾಯಿ ತೆಗೆದುಕೊಂಡು ನಿದ್ರೆ ಮಾಡುವವರಿಗೆ ಬಾಯಿಯಲ್ಲಿ ನೊಣ ಹೊಕ್ಕಿತು ಜೋಪಾನ ಎಂದು ಛೇಡಿಸುವುದುಂಟು. ಆದರೆ ಇಲ್ಲೊಬ್ಬರು ನಿದ್ರಿಸಿದಾಗ ಬಾಯಲ್ಲಿ ಹಾವೇ (Snake In Womans Stomach) ಹೊಕ್ಕಿಬಿಟ್ಟಿದೆ. ಮಹಿಳೆಯೋರ್ವರು ನಿದ್ರೆ ಮಾಡಿದಾಗ ಬಾಯಲ್ಲಿ ಹೊಕ್ಕಿದ 4 ಅಡಿಯ ಹಾವು ಸೀದಾ ಹೊಟ್ಟೆಯೊಳಗೆ ಹೊಕ್ಕಿಬಿಟ್ಟಿದೆ. ಸದ್ಯ ಈ ವಿಡಿಯೋ ಭಾರೀ ವೈರಲ್ (Viral Video) ಆಗುತ್ತಿದೆ. ಮಹಿಳೆಯ ಬಾಯಲ್ಲಿ ಹೊಕ್ಕಿದ ಹಾವನ್ನು ವೈದ್ಯರು ಸಹಾಯಕರ ಸಹಾಯದಿಂದ ಹೊರಗೆ ತೆಗೆಯುತ್ತಿರುವ ವಿಡಿಯೋ ವೈರಲ್ ಆಗಿದೆ.  11 ಸೆಕೆಂಡ್​ಗಳ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಅಲ್ಲದೇ ಮಹಿಳೆಗೆ ಅನಸ್ಥೇಶಿಯಾ ನೀಡಿ ಬಾಯಿಯ ಮೂಲಕ ಹೊಟ್ಟೆ ಸೇರಿದ್ದ 4 ಅಡಿ ಹಾವನ್ನು (Snake Video Viral)  ಹೊರಗೆ ತೆಗೆಯಲಾಗಿದೆ.


ನವೆಂಬರ್ 12ರಂದು ಮೊದಲ ಬಾರಿಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದ ಈ ವಿಡಿಯೋ ಫುಲ್ ವೈರಲ್ ಆಗಿದೆ. 16 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಕಂಡಿದ್ದು, 36 ಸಾವಿರಕ್ಕೂ ಹೆಚ್ಚು ಲೈಕ್ಸ್​ಗಳನ್ನು ಪಡೆದಿದೆ.


ನೆಟ್ಟಿಗರಿಂದ ಹಲವು ರೀತಿಯ ಪ್ರತಿಕ್ರಿಯೆ
ಬಳಕೆದಾರರೊಬ್ಬರು ಅದು ಹಾವು ಅಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ಅದು ಹಾವು ಎಂದು ಖಚಿತವಾಗಿಲ್ಲ, ನಾನು 7-8 ವರ್ಷ ವಯಸ್ಸಿನವನಾಗಿದ್ದಾಗ ನಾನು ಯಾವಾಗಲೂ ಅನಾರೋಗ್ಯದಿಂದ ಬಳಲುತ್ತಿದ್ದೆ. ಆದರೆ ಒಂದು ರಾತ್ರಿ ನನ್ನ ತಂದೆ ನನ್ನ ಬಾಯಿಯಿಂದ ಅಂತಹ ದೊಡ್ಡ ವಸ್ತುವನ್ನು ಎಳೆದು ಹೊರಕ್ಕೆ ತಂದರು” ಎಂದು ಕಾಮೆಂಟ್ ಮಾಡಿದ್ದಾರೆ.


ಇದೊಂದು ಹುಚ್ಚು ವಿಡಿಯೋ ಎಂದ ಇನ್ನೋರ್ವ ನೆಟ್ಟಿಗ
ಮತ್ತೊಬ್ಬ ಬಳಕೆದಾರರು ಹೀಗೆ ಬರೆದಿದ್ದಾರೆ, “ಇದು ಹುಚ್ಚುತನವಾಗಿದೆ, ಯಾರಾದರೂ ಎಷ್ಟು ಗಾಢವಾಗಿ ಮಲಗುತ್ತಾರೆ. ಹಾವು ನಿಮ್ಮ ಬಾಯಿಗೆ ಹೇಗೆ ಬಂದಿತು ಎಂದು ನಾನು ಆಶ್ಚರ್ಯ ಪಡುತ್ತೇನೆ. 4 ಅಡಿ ಹಾವು ನಿಮ್ಮ ಹೊಟ್ಟೆಯಲ್ಲಿ ಸಂಪೂರ್ಣವಾಗಿ ಇರುವವರೆಗೂ ನಿಮಗೆ ಎಚ್ಚರವಾಗಲು ಸಾಧ್ಯವಾಗಲಿಲ್ಲವೇ? ಇದೊಂದು ಹುಚ್ಚು ವಿಡಿಯೋ ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ.


ಇದನ್ನೂ ಓದಿ: Nithyanada: ನಿತ್ಯಾನಂದನ ದೇಶದಲ್ಲಿ ಉದ್ಯೋಗಾವಕಾಶ! ಕಾಸಿಲ್ಲದಿದ್ದರೂ ಕೈಲಾಸಕ್ಕೆ ಹೋಗಿ, ಕೈ ತುಂಬಾ ಸಂಬಳ ಪಡೆಯಿರಿ!


ಭಾರೀ ವೈರಲ್ ಆದ ವಿಡಿಯೋ
ವೈದ್ಯರು ಮಹಿಳೆಯ ಬಾಯಿಂದ ಹಾವನ್ನು ಹೊರತೆಗೆಯುತ್ತಿರುವ ವಿಡಿಯೋ ಟ್ವಿಟರ್‌ನಲ್ಲಿ ವೈರಲ್ ಆಗಿದೆ. 11 ಸೆಕೆಂಡ್‌ಗಳ ದೃಶ್ಯಾವಳಿಯಲ್ಲಿ ವೈದ್ಯರು ಮಹಿಳೆಗೆ ಅರಿವಳಿಕೆ ನೀಡಿದಾಗ ಆಕೆಯ ಬಾಯಿಂದ ಹೋಲ್ಡರ್ ಸಹಾಯದಿಂದ ಹಾವನ್ನು ಹೊರತೆಗೆದಿದ್ದಾರೆ. ವೈದ್ಯರು ಮಹಿಳೆಯ ಬಾಯಿಯಿಂದ 4 ಅಡಿ ಎತ್ತರದ ಹಾವನ್ನು ಎಳೆದರು ಎಂದು ಶೀರ್ಷಿಕೆ ನೀಡಿದ್ದಾರೆ.


ಇದನ್ನೂ ಓದಿ: Snake Viral Video: ಬಾಯಿಯಿಂದ ಹೊಟ್ಟೆಯೊಳಗೆ ಹೊಕ್ಕ 4 ಅಡಿ ಹಾವು! ನೋಡಿ ವೈದ್ಯರೇ ಗಾಬರಿ


ಇನ್ನೊಬ್ಬ ಬಳಕೆದಾರರು "ಸ್ಥಳೀಯವಾಗಿ ಇಂತಹ ಘಟನೆಗಳು ವಿರಳವಾಗಿ ಸಂಭವಿಸುತ್ತವೆ. ಹೀಗಾಗಿಯೇ ಹಿರಿಯ ನಾಗರಿಕರು ತಮ್ಮ ಬಾಯಿಗೆ ಹಾವುಗಳು ಪ್ರವೇಶಿಸುವ ಅಪಾಯದಿಂದಾಗಿ ಹೊರಗೆ ಮಲಗದಂತೆ ಯುವಕರಿಗೆ ಸಲಹೆ ನೀಡುತ್ತಾರೆ." ಎಂದು ಕಾಮೆಂಟ್ ಮಾಡಿದ್ದಾರೆ. ಒಟ್ಟಾರೆ ಈ ವಿಡಿಯೋ ಫುಲ್ ವೈರಲ್ ಆಗಿದೆ.

Published by:ಗುರುಗಣೇಶ ಡಬ್ಗುಳಿ
First published: