Viral Video: 4 ಲಕ್ಷ ಸಂಗ್ರಹಿಸಿ ಬೀದಿ ನಾಯಿಗೆ ಕೃತಕ ಕಾಲು ಜೋಡಿಸಿದ ಶ್ವಾನ ಪ್ರೇಮಿಗಳು!

Video Viral: ಇಲ್ಲೊಂದು ನೈಜ ಘಟನೆಯಿದೆ.  ಆದರೆ ಇದು ಸಾಕು ನಾಯಿಯಲ್ಲ, ಬೀದಿ ನಾಯಿ. ರಸ್ತೆಯ ಬದಿಯಲ್ಲಿ ಕಾಣಿಸುತ್ತಿದ್ದ ನಾಯಿಗೆ 4 ಲಕ್ಷ ಖರ್ಚು ಮಾಡಿ, ಅದಕ್ಕೆ 4 ಕೃತಕ ಕಾಲು ಜೋಡಿಸಿ. ಮತ್ತೆ ನಡೆಯುವಂತೆ ಮಾಡಿರುವ ಶ್ವಾನ ಪ್ರೇಮಿಗಳ ಕಥೆಯಿದು.

ಶ್ವಾನ

ಶ್ವಾನ

 • Share this:
  ಸಾಕು ಪ್ರಾಣಿಯನ್ನು (Pet Animals) ಅತಿಯಾತಿ ಪ್ರೀತಿಸುವವರು ಅನೇಕ ಮಂದಿ ಇದ್ದಾರೆ. ಅದಕ್ಕೇನಾದರು ಆದರೆ ಬೇಸರ ಮಾಡುವವರು, ಹುಷಾರಿಲ್ಲದಾಗ ಖರ್ಚು ಮಾಡುವ ಮೂಲಕ ಅದರ ಆರೋಗ್ಯ ನೋಡಿಕೊಳ್ಳುವ ಮಾಲೀಕರು ಇದ್ದಾರೆ. ಅಷ್ಟೇ ಏಕೆ, ಸಾಕು ಪ್ರಾಣಿಗಾಗಿ ತನ್ನೇಲ್ಲಾ ಆಸ್ತಿಯನ್ನು ಬರೆದುಕೊಟ್ಟವರು ಇದ್ದಾರೆ. ಹೆಚ್ಚೆಂದರೆ, ಸಾಕು ಪ್ರಾಣಿಯ ನಂಬಿಕೆ ಮನಸೋತು ಮನೆಯ ಶ್ವಾನವನ್ನೇ ವಿವಾಹವಾದವರು ಇದ್ದಾರೆ. ಹೀಗೆ ಇಷ್ಟದ ಸಾಕು ಪ್ರಾಣಿಗಳ ಬಗ್ಗೆ ಜಗತ್ತಿನಾದ್ಯಂತ ಕಣ್ಣು ಹಾಯಿಸಿದರೆ ಒಂದೊಂದು ಸ್ಟೋರಿ ಸಿಗುತ್ತದೆ. ಅದರಂತೆ ಇಲ್ಲೊಂದು ನೈಜ ಘಟನೆಯಿದೆ.  ಆದರೆ ಇದು ಸಾಕು ನಾಯಿಯಲ್ಲ (Pet Dog), ಬೀದಿ ನಾಯಿ (Street Dog). ರಸ್ತೆಯ ಬದಿಯಲ್ಲಿ ಕಾಣಿಸುತ್ತಿದ್ದ ನಾಯಿಗೆ 4 ಲಕ್ಷ ಖರ್ಚು ಮಾಡಿ, ಅದಕ್ಕೆ 4 ಕೃತಕ ಕಾಲು (prosthetic legs) ಜೋಡಿಸಿ. ಮತ್ತೆ ನಡೆಯುವಂತೆ ಮಾಡಿರುವ ಶ್ವಾನ ಪ್ರೇಮಿಗಳ ಕಥೆಯಿದು.

  ಅಂದಹಾಗೆಯೇ ಈ ಘಟನೆ ರಷ್ಯಾದಲ್ಲಿ (Russia) ನಡೆದಿದೆ. ಪ್ಲಾಸ್ಟುನೋವ್ಸ್ಕಯಾ ಗ್ರಾಮದಲ್ಲಿ 4 ಕಾಲನ್ನು ಕಳೆದುಕೊಂಡ ಬೀದಿ ನಾಯಿಯೊಂದು ಜೀವನ್ಮರಣದಲ್ಲಿ ಹೋರಾಡುತ್ತಿರುವುದು ಕಂಡುಬಂತು. ಒಂದು ಕಾಲದಲ್ಲಿ ಈ ನಾಯಿ ಅನೇಕ ಜನರಿಗೆ ಸಹಾಯ ಮಾಡಿತ್ತು. ಆದರೆ ಆ ಬಳಿಕ ಯಾರೋ ದುಷ್ಕರ್ಮಿಗಳು ನಾಯಿಯ ನಾಲ್ಕೂ ಕಾಲುಗಳನ್ನು ಕತ್ತರಿಸಿ ಹಾಕಿದ್ದರು. ಹೀಗಾಗಿ ಈ ನಾಯಿಯನ್ನು ನೋಡಿದ ಕೆಲ ಶ್ವಾನ ಪ್ರೇಮಿಗಳು ನಾಯಿಯನ್ನು ಬದುಕಿಸಲು ನಿರ್ಧರಿಸಿದರು.

  ಇದನ್ನು ಓದಿ: Village of Dolls: ಈ ಹಳ್ಳಿಯಲ್ಲಿ ಜನರಿಗಿಂತ ಗೊಂಬೆಗಳೇ ಹೆಚ್ಚು!

  ನಾಯಿಯ ಸ್ಥಿತಿ ಗಂಭೀರವಾಗಿತ್ತು

  4 ಕಾಲುಗಳನ್ನು ಕಳೆದುಕೊಂಡ ನಾಯಿಯ ಸ್ಥಿತಿ ಗಂಭೀರವಾಗಿತ್ತು. ಸಾವು-ಬದುಕು ಎಂದು ಮಲಗಿದ್ದಲಿಂದ ನರಳುತ್ತಿತ್ತು. ಇದನ್ನು ಕಂಡ ಶ್ವಾನ ಪ್ರೇಮಿಗಳು ನಾಯಿಗೆ ಸಹಾಯ ಮಾಡಲು ಮುಂದಾದರು. ನಾಯಿಯನ್ನು ಪಶುವೈದ್ಯರ ಬಳಿಗೆ ಕರೆದೊಯ್ದರು. ನಾಯಿಗೆ ಪ್ರಥಮ ಚಿಕಿತ್ಸೆ ನೀಡಲಾಗಿತು. ನಂತರ ಕೃತಕ ಕಾಲು ಅಳವಡಿಸುವ ಬಗ್ಗೆ ಚಿಂತಿಸಿಲಾಯಿತು. ಆದರೆ ಕೃತಕ ಕಾಲು ಜೋಡನೆಗೆ 4 ಲಕ್ಷ ವೆಚ್ಚವಾಗುತ್ತೆ ಎಂಬುದು ಗೊತ್ತಾಯಿತು.

  ಇದನ್ನು ಓದಿ: Virtual real estate plot sell: ಇಲ್ಲದೇ ಇರೋ ಫ್ಲಾಟ್ 1 ಬಿಲಿಯನ್ ಗೆ ಮಾರಾಟ, ಎಲ್ಲಾ Meta ಮಹಿಮೆ!  ಕೃತಕ ಕಾಲು ಜೋಡಿಸಿಯೇ ಬಿಟ್ಟರು!

  ನಾಯಿಗೆ ಆರೋಗ್ಯವಾಗಿ ಚೇತರಿಸಿಕೊಳ್ಳುತ್ತದೆ ಎಂದರೆ 4 ಲಕ್ಷ ಖರ್ಚಾದರು ಪರವಾಗಿಲ್ಲ, ಕೃತಕ ಕಾಲು ಅಳವಡಿಸಲು ಕಾರ್ಯಕರ್ತರು ನಿರ್ಧರಿಸಿದರು. ಎಲ್ಲರೂ ಸೇರಿ ಹಣ ಸಂಗ್ರಹಿಸಿ ನಾಯಿಗೆ ಆಪರೇಷನ್ ಮಾಡಿದರು. ನಾಯಿಗೆ ಕೃತಕ ಕಾಲು ಅಳವಡಿಸಲಾಗಿದೆ. ಈಗ ನಾಯಿಯು ಈ ಕೃತಕ ಕಾಲುಗಳ ಮೇಲೆ ನಿಲ್ಲಲು ಕಲಿತಿದ್ದು, ಅದರ ಜೀವನ ಕ್ರಮೇಣ ಸಹಜ ಸ್ಥಿತಿಗೆ ಮರಳಿದೆ.
  Published by:Harshith AS
  First published: