Love Story: ಆಸ್ಪತ್ರೆಗೆ ಬಂದ ರೋಗಿಯ ಮಗಳ ಮೇಲೆ ಡಾಕ್ಟರ್ಗೆ ಲವ್! ಏಳೇ ದಿನದಲ್ಲಿ ಮದುವೆಯಾದ ಜೋಡಿ
ಯುವತಿ ಪ್ರೀತಿಯಿಂದ ತನ್ನ ತಾಯಿಯ ಸೇವೆ ಮಾಡುತ್ತಿರುವುದನ್ನು ಅಲ್ಲಿನ ವೈದ್ಯ ಗಮನಿಸಿದ್ದಾರೆ. ಈ ವೇಳೆ ಅವರಿಗೆ ಆಕೆ ಮೇಲೆ ಲವ್ ಆಗಿದೆ. ಇದನ್ನು ಆಕೆಯ ಮುಂದೆ ಪ್ರಸ್ತಾಪಿಸಿ, ಪ್ರಪೋಸ್ ಮಾಡಿದ್ದಾರೆ.
ಬಿಹಾರ: ವೈದ್ಯರನ್ನು (Doctor) ದೇವರ (God) ಸಮಾನರು ಅಂತಾರೆ. ಜೀವ (Life) ಉಳಿಸುವ ಅವರು ಜೀವ ಸೃಷ್ಟಿಸೋ ದೇವರಿಗೆ ಸಮಾನ ಅಂತ ಗೌರವಿಸುತ್ತಾರೆ. ಇಲ್ಲೊಬ್ಬ ವೈದ್ಯ, ರೋಗಿಯೊಬ್ಬರಿಗೆ (Patient) ಮರು ಜೀವ ಕೊಟ್ಟಿದ್ದಾರೆ. ಜೊತೆಗೆ ಅವರ ಮಗಳಿಗೂ (Daughter) ಹೊಸ ಜೀವನ ಕೊಟ್ಟು, ಆಕೆಯೊಂದಿಗೆ ತನ್ನ ಮುಂದಿನ ಜೀವನ ಹಂಚಿಕೊಳ್ಳಲು ಮುಂದಾಗಿದ್ದಾರೆ. ಹೌದು, ಯಾವುದೇ ಒಂದು ರೋಗದಿಂದ (Sick) ಬಳಲುತ್ತಾ, ಆಸ್ಪತ್ರೆಗೆ (Hospital) ಮಹಿಳೆಯೊಬ್ಬರು (Lady) ಸೇರಿದ್ದರು. ಆಕೆಯ ಸುಂದರವಾದ ಮಗಳು, ಆಸ್ಪತ್ರೆಗೆ ತಾಯಿಯನ್ನು ಸೇರಿಸಿ, ಆಕೆಯನ್ನು ನೋಡಿಕೊಳ್ಳುತ್ತಿದ್ದಳು. ಆಕೆ ಮೇಲೆ ಅಲ್ಲಿದ್ದ ವೈದ್ಯರೊಬ್ಬರಿಗೆ ಲವ್ (Love) ಆಗಿದೆ. ಇಬ್ಬರೂ ಪರಸ್ಪರ ಒಪ್ಪಿ, ಕೇವಲ ಏಳೇ ದಿನದಲ್ಲಿ ಮದುವೆಯೂ (Marriage) ಆಗಿದ್ದಾರೆ. ಈ ವಿಶೇಷ ಲವ್ ಸ್ಟೋರಿ (Special Love Story) ಈಗ ಎಲ್ಲೆಡೆ ಭಾರೀ ವೈರಲ್ (Viral) ಆಗಿದೆ.
ಬಿಹಾರದ ಹಾಜಿಪುರದಲ್ಲಿ ವಿಶೇಷ ಲವ್ ಸ್ಟೋರಿ
ಬಿಹಾರ ರಾಜ್ಯದ ಹಾಜಿಪುರದ ಸದರ್ ಆಸ್ಪತ್ರೆಯಲ್ಲಿ ಕೆಲಸ ಮಾಡುವ ವೈದ್ಯರೊಬ್ಬರು, ತನ್ನ ತಾಯಿಯನ್ನು ನೋಡಿಕೊಳ್ಳಲು ಬಂದ ಯುವತಿಯನ್ನು ವರಿಸಿದ್ದಾರೆ. ಡಾ. ಮಣಿಂದರ್ ಕುಮಾರ್ ಸಿಂಗ್ ಎಂಬ ವೈದ್ಯ, ರೋಗಿಯೊಬ್ಬರ ಮಗಳಾದ ಪ್ರೀತಿ ಸಿಂಗ್ ಎಂಬುವರನ್ನು ಪ್ರೀತಿಸಿ, ಕೇವರ ಏಳು ದಿನಗಳಲ್ಲಿ ಮದುವೆಯಾಗಿದ್ದಾರೆ.
ತಾಯಿ ಜೊತೆ ಆಸ್ಪತ್ರೆಗೆ ಬಂದಿದ್ದ ಪ್ರೀತಿ ಸಿಂಗ್
ಪ್ರೀತಿ ಸಿಂಗ್ ಅವರಿಗೆ ತಂದೆ ಇರಲಿಲ್ಲ. ಹೀಗಾಗಿ ಅವರ ತಾಯಿಯೇ ತಂದೆ ಹಾಗೂ ತಾಯಿಯಾಗಿ ಅವರನ್ನು ಪ್ರೀತಿಯಿಂದ ಸಾಕಿದ್ದರು. ಹೀಗಿದ್ದಾಗ ಪ್ರೀತಿ ಸಿಂಗ್ ತಾಯಿಯ ಆರೋಗ್ಯದಲ್ಲಿ ವ್ಯತ್ಯಯವಾಗಿದೆ. ಇದರಿಂದ ಭಯಗೊಂಡ ಆಕೆ, ತಾಯಿಯನ್ನು ಹಾಜಿಪುರದ ಸದರ್ ಆಸ್ಪತ್ರೆಗೆ ಕೆರದುಕೊಂಡು ಬಂದಿದ್ದಾರೆ. ಬಳಿಕ ವೈದ್ಯರ ಶಿಫಾರಸ್ಸಿನಂತೆ ಅಲ್ಲೇ ತನ್ನ ತಾಯಿಯನ್ನು ಅಡ್ಮಿಟ್ ಮಾಡಿದ್ದಾರೆ.
ಯುವತಿ ಪ್ರೀತಿ ಸಿಂಗ್ ಪ್ರೀತಿಯಿಂದ ತನ್ನ ತಾಯಿಯ ಸೇವೆ ಮಾಡುತ್ತಿರುವುದನ್ನು ಅಲ್ಲಿನ ವೈದ್ಯ ಡಾ. ಮಣಿಂದರ್ ಕುಮಾರ್ ಸಿಂಗ್ ಎಂಬುವರು ಗಮನಿಸಿದ್ದಾರೆ. ಈ ವೇಳೆ ಅವರಿಗೆ ಆಕೆ ಮೇಲೆ ಲವ್ ಆಗಿದೆ. ಇದನ್ನು ಆಕೆಯ ಮುಂದೆ ಪ್ರಸ್ತಾಪಿಸಿ, ಪ್ರಪೋಸ್ ಮಾಡಿದ್ದಾರೆ. ಇದಕ್ಕೆ ಒಪ್ಪಿದ ಆಕೆ, ತನ್ನ ತಾಯಿಯ ಬಳಿ ಮಾತನಾಡುವಂತೆ ಕೇಳಿಕೊಂಡಿದ್ದಾರೆ.
ವರದಕ್ಷಿಣೆ ಇಲ್ಲದೇ ಮದುವೆಯಾಗುವುದಾಗಿ ಪ್ರಸ್ತಾಪ
ಯುವತಿಯ ತಾಯಿ ಮುಂದೆ ಬಂದ ಡಾ. ಮಣಿಂದರ್ ಕುಮಾರ್ ಸಿಂಗ್ ನಿಮ್ಮ ಮಗಳನ್ನು ಮದುವೆಯಾಗುತ್ತೇನೆ ಎಂಬ ಪ್ರಸ್ತಾಪ ಇಟ್ಟಿದ್ದಾರೆ. ಒಂದೂ ಪೈಸೆ ವರದಕ್ಷಿಣೆ ಕೊಡುವುದು ಬೇಡ, ಆಕೆಯನ್ನು ಜೀವನ ಪೂರ್ತಿ ಚೆನ್ನಾಗಿ ನೋಡಿಕೊಳ್ಳುತ್ತೇನೆ ಅಂತ ಭರವಸೆ ನೀಡಿದ್ದಾರೆ. ಇದಕ್ಕೆ ಯುವತಿ ಪ್ರೀತಿ ಸಿಂಗ್ ಅವರ ತಾಯಿ ಒಪ್ಪಿಗೆ ನೀಡಿದ್ದಾರೆ.
ಇನ್ನು ಯುವತಿ ತಾಯಿ ಒಪ್ಪಿಗೆ ನೀಡುತ್ತಿದ್ದಂತೆ ಡಾ. ಮಣಿಂದರ್ ಕುಮಾರ್ ಸಿಂಗ್ ಹಾಗೂ ಪ್ರೀತಿ ಸಿಂಗ್ ಸಂತೋಷಗೊಂಡಿದ್ದಾರೆ. ಇತ್ತ ಇವರ ವಿವಾಹಕ್ಕೆ ಮಣಿಂದರ್ ಕುಮಾರ್ ಸಿಂಗ್ ಮನೆಯವರೂ ಒಪ್ಪಿದ್ದಾರೆ. ಬಳಿಕ ಕೇವಲ ಏಳೇ ದಿನದಲ್ಲಿ ನಗರದ ಪಾತಾಳೇಶ್ವರ ದೇವಸ್ಥಾನದಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ವರದಕ್ಷಿಣೆ ರಹಿತ ಮದುವೆ ಆಗಿದ್ದಾರೆ.
Published by:Annappa Achari
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ