ಇಂಜೆಕ್ಷನ್ ಕೊಡುವಾಗ ನಮ್ಮಲ್ಲಿ ಭಯಪಡುವವರು ಹೆಚ್ಚು ಮಂದಿ ಇದ್ದಾರೆ. ಈ ವಿಚಾರದಲ್ಲಿ ದೊಡ್ಡವರು ಸಣ್ಣವರು ಎಂಬುದು ಇಲ್ಲ. ಬಲಶಾಲಿ ವ್ಯಕ್ತಿ ಆದರೂ ಸೂಜಿ (Needle) ಎಂದಾಗ ಒಮ್ಮೆ ಆತಂಕ ಪಡುತ್ತಾರೆ. ಇದಲ್ಲದೆ ನಮ್ಮಲ್ಲಿ "ವೈದ್ಯೋ ನಾರಾಯಣ ಹರಿ" ಎಂಬ ಮಾತಿದೆ. ಒಬ್ಬ ವೈದ್ಯ (Doctor) ಒಂದು ರೋಗಿಯನ್ನು ತನ್ನ ಮನೆಯವರಂತೆ ನೋಡುತ್ತಾನೆ. ರೋಗಿ ಎಷ್ಟೇ ಕೂಗಾಡಿದರು ವೈದ್ಯರ ತಾಳ್ಮೆ ಕೆಲಸ ಮೆಚ್ಚುವಂತದು. ಅದರಲ್ಲೂ ಪುಟ್ಟ ಮಗುವಿಗೆ ಇಂಜೆಕ್ಷನ್ (Injection) ಕೊಡುವುದೆಂದರೆ ಡಾಕ್ಟರ್ ಹರಸಾಹಸ ಪಡುತ್ತಾರೆ. ಆದ್ರೆ ಇಲ್ಲೊಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ (Social media ) ಸಕತ್ ವೈರಲ್ ಆಗಿದ್ದು, ವಿವಿಧ ರೀತಿಯಲ್ಲಿ ಮಗುವನ್ನು ನಗಿಸಿ ಡಾಕ್ಟರ್ ಚುಚ್ಚು ಮದ್ದು ನೀಡುತ್ತಾರೆ. ಹಾಗಾದ್ರೆ ಈ ವಿಡಿಯೋ ಹೇಗಿದೆ ಎಂದು ನೋಡೋಣ...
ವಿಡಿಯೋದಲ್ಲಿ ಇರುವುದೇನು?
ವೈರಲ್ ಆಗಿರುವ ವೀಡಿಯೋದಲ್ಲಿ ಒಂದು ಹೆಣ್ಣು ಮಗುವಿಗೆ ಮೊದಲ ಚುಚ್ಚುಮದ್ದು ನೀಡಲು ಬೆಡ್ ಮೇಲೆ ಮಲಗಿಸಲಾಗಿದೆ. ಸ್ಟೆತೋಸ್ಕೋಪ್ (Stethoscope) ಹಿಡಿದು ಮಗುವನ್ನು ಪರೀಕ್ಷೆ ಮಾಡುತ್ತಾರೆ. ಇದೇ ಸಮಯದಲ್ಲಿ ವೈದ್ಯರು ಮಗುವಿನ ಗಮನ ಬೇರೆ ಕಡೆಗೆ ಸೆಳೆಯಲು ತಮಾಷೆಯ ಶಬ್ದಗಳು ಮತ್ತು ಸಂಕೇತಗಳನ್ನು ಮಾಡುವುದನ್ನು ನೋಡಬಹುದು. ಮಗು ಆರಾಮದಾಯಕವಾಗಿ ಇರುವಾಗ ಮಗುವಿಗೆ ಡಾಕ್ಟರ್ ಚುಚ್ಚು ಮದ್ದನ್ನು ಕಾಲಿಗೆ ಕೊಡುತ್ತಾರೆ. ಚುಚ್ಚುಮದ್ದು ಕೊಟ್ಟ ತಕ್ಷಣ ಮಗು ಅಳಲಾರಂಭಿಸುತ್ತದೆ. ಆಗ ಡಾಕ್ಟರ್ ಮೋಜಿನ ರೀತಿಯಲ್ಲಿ ಮಗುವನ್ನು ಸಮಾಧಾನ ಪಡಿಸುತ್ತಾರೆ. ಗೊಂಬೆಗಳನ್ನು ತೆಗೆದುಕೊಂಡು ಸಮಾಧಾನ ಪಡಿಸುತ್ತಾರೆ. ಮುಖದ ಹಾವ ಭಾವವನ್ನು ಬೇರೆ ರೀತಿಯಲ್ಲಿ ತೋರಿಸಿ ಸಮಾಧಾನ ಮಾಡುತ್ತಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗಿದೆ.
View this post on Instagram
ನೆಟ್ಟಿಗರಿಂದ ಈ ವಿಡಿಯೋಗೆ ಮೆಚ್ಚುಗೆ ವ್ಯಕ್ತ
ಈ ಮಗು ಮತ್ತು ಡಾಕ್ಟರ್ ನ ಮುದ್ದಾದ ವಿಡಿಯೋ ವೈರಲ್ ಆಗುತ್ತಿದಂತೆ ನೆಟ್ಟಿಗರು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಜನರು ವೈದ್ಯರ ಕೆಲಸಕ್ಕೆ ಶ್ಲಾಘನೀಯ ಕೌಶಲ್ಯದ ಬಗ್ಗೆ ಹಾಡಿಹೋಗಳಿದ್ದಾರೆ. "ವೈದ್ಯರಾಗಲು ಬಯಸುವ ನನ್ನ ಮಕ್ಕಳಿಗೆ ನಾನು ಇದ್ದನ್ನು ತೋರಿಸುತ್ತೇನೆ ಎಂದಿದ್ದಾರೆ. ತುಂಬಾ ಸ್ಫೂರ್ತಿ ಮತ್ತು ಆಕರ್ಷಿತರಾಗಿದ್ದಾರು ಮತ್ತು ಅವರು ನಿಮ್ಮಂತೆಯೇ ಇರಲು ಬಯಸುತ್ತಾರೆ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ. ಕೆಲವರು ಡಾಕ್ಟರ್ ಗೆ ಸೆಲ್ಯೂಟ್ ಹೊಡೆದು ಮೆಚ್ಚುಗೆಯ ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Anand Mahindra: ಹೇಗಿದೆ ನೋಡಿ ಮಲ್ಟಿರೈಡರ್ ಪ್ಯಾಸೆಂಜರ್ ವಾಹನ, ಗ್ರಾಮೀಣ ಆವಿಷ್ಕಾರಕ್ಕೆ ನೆಟ್ಟಿಗರು ಫಿದಾ
ವೈದ್ಯರೇ ಹಂಚಿಕೊಂಡ ವಿಡಿಯೋ
ಮಕ್ಕಳ ವೈದ್ಯರಾಗಿರುವ ಡಾ. ಸಯ್ಯದ್ ಮುಜಾಹಿದ್ ಹುಸೇನ್ ಅವರು ವೀಡಿಯೊವನ್ನು ತಮ್ಮ Instagram ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದು 22 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಡಾ. ಸೈಯದ್ ಮುಜಾಹಿದ್ ಹುಸೇನ್ ಅವರ Instagram ಪೇಜ್ ನ ಹೆಸರು dr_hifive ಆಗಿದ್ದು 201 k followers ಅನ್ನು ಹೊಂದಿದ್ದಾರೆ.
ಇದನ್ನೂ ಓದಿ: Viral News: 19 ಲಕ್ಷ ಬಿಲ್ ಪಾವತಿಸಲಾಗದೇ ಪರಾರಿಯಾದ ಅತಿಥಿಗಳಿಗೆ ಸಿಕ್ಕ ಶಿಕ್ಷೆ ಏನು ಗೊತ್ತಾ?
ನಿರೀಕ್ಷೆಯಂತೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದ್ದು, ವೈದ್ಯರ ಕಾರ್ಯಕ್ಕೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಅದರಲ್ಲಿ ಈ ಮುದ್ದಾದ ಮಗುವಿನ ಕ್ಯೂಟ್ ಎಕ್ಸ್ಪ್ರೆಶನ್ ಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ