Mango variety: 100ಕ್ಕೂ ಅಧಿಕ ಮಾವಿನ ಹಣ್ಣಿನ ತಳಿಗಳು ಒಂದೇ ಜಾಗದಲ್ಲಿ ಸಿಗುತ್ತೆಯಂತೆ; ಒಮ್ಮೆ ವಿಸಿಟ್ ಕೊಟ್ಟು ಬನ್ನಿ

ಈ ಮಾವಿನ ಹಣ್ಣು ಯಾರಿಗೆ ಇಷ್ಟ ಆಗಲ್ಲ ಹೇಳಿ. ಅದರಲ್ಲೂ ವಿಧ-ವಿಧವಾದ ಮಾವಿನಹಣ್ಣುಗಳನ್ನು ತಿನ್ನುವುದೇ ಒಂದು ಖುಷಿ ವಿಚಾರ. ನೂರಕ್ಕೂ ಹೆಚ್ಚು ವಿಧದ ಮಾವಿನ ಹಣ್ಣುಗಳು ಒಂದೇ ಸ್ಥಳದಲ್ಲಿ ಸಿಗುತ್ತವೆ ಎಂದರೆ ನೀವು ನಂಬ್ತೀರಾ? ಆದರೆ ನಂಬಲೇಬೇಕು. ಹೌದು ರೀ. ನೂರಕ್ಕೂ ಅಧಿಕ ಮಾವಿನ ಹಣ್ಣುಗಳ ತಳಿ ಒಂದೇ ಸ್ಥಳದಲ್ಲಿ ಸಿಗುತ್ತಿವೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ ನಾವು ನಿಮಗೆ ಈ ಲೇಖನದಲ್ಲಿ ಇಂದು ನೀಡಲಿದ್ದೇವೆ. ಮುಂದೆ ಓದಿ.

100ಕ್ಕೂ ಅಧಿಕ ಮಾವಿನ ಹಣ್ಣಿನ ತಳಿಗಳು

100ಕ್ಕೂ ಅಧಿಕ ಮಾವಿನ ಹಣ್ಣಿನ ತಳಿಗಳು

  • Share this:
ಬೇಸಿಗೆ ಕಾಲ (Summer) ಬಂತು ಅಂದರೆ ಸಾಕು, ಮಾವಿನ ಹಣ್ಣಿನ (Mango Fruit) ಸೀಸನ್‌ ಆರಂಭವಾಗಿ ಬಿಡುತ್ತೆ. ಈ ಮಾವಿನ ಹಣ್ಣು ಯಾರಿಗೆ ಇಷ್ಟ ಆಗಲ್ಲ ಹೇಳಿ. ಅದರಲ್ಲೂ ವಿಧ-ವಿಧವಾದ ಮಾವಿನಹಣ್ಣುಗಳನ್ನು ತಿನ್ನುವುದೇ ಒಂದು ಖುಷಿ ವಿಚಾರ. ನೂರಕ್ಕೂ ಹೆಚ್ಚು ವಿಧದ ಮಾವಿನ ಹಣ್ಣುಗಳು ಒಂದೇ ಸ್ಥಳದಲ್ಲಿ (One Place) ಸಿಗುತ್ತವೆ ಎಂದರೆ ನೀವು ನಂಬ್ತೀರಾ? ಆದರೆ ನಂಬಲೇಬೇಕು. ಹೌದು ರೀ. ನೂರಕ್ಕೂ ಅಧಿಕ ಮಾವಿನ ಹಣ್ಣುಗಳ ತಳಿ ಒಂದೇ ಸ್ಥಳದಲ್ಲಿ ಸಿಗುತ್ತಿವೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ ನಾವು ನಿಮಗೆ ಈ ಲೇಖನದಲ್ಲಿ ಇಂದು ನೀಡಲಿದ್ದೇವೆ. ಮುಂದೆ ಓದಿ.

ಒಂದೇ ಗ್ರಾಮದಲ್ಲಿ 100ಕ್ಕೂ ಅಧಿಕ ಮಾವಿನ ಹಣ್ಣಿನ ತಳಿಗಳು 
ಈ ಮಾವಿನ ಹಣ್ಣುಗಳ ಅನೇಕ ವಿಧದ ತಳಿಗಳು ಸಿಗುವುದು ನಮ್ಮ ದೇಶದ ಕೇರಳ ರಾಜ್ಯದ ಕನ್ನಪುರಂ ನಲ್ಲಿ ಎನ್ನುವುದು ವಿಶೇಷ. ದೇವರ ನಾಡು ಎಂದು ಖ್ಯಾತಿ ಇರುವ ಈ ಕೇರಳದಲ್ಲಿ ಜನರು ಒಂದು ರೀತಿಯಲ್ಲಿ ಪ್ರಕೃತಿ ಆರಾಧಕರು ಎಂದೇ ಹೇಳಬಹುದು. ಈ ಮಾವಿನಹಣ್ಣುಗಳ ತಳಿಗಳ ಬಗ್ಗೆ ಹೇಳುವುದಾದರೆ, ಇಲ್ಲಿ ಮಾವಿನ ಹಣ್ಣಿನ ಋತುವಿನಲ್ಲಿ 207 ಕ್ಕೂ ಅಧಿಕ ದೇಶೀಯ ತಳಿಗಳ ಮಾವಿನಹಣ್ಣುಗಳ ಬೆಳೆಯಾಗುತ್ತದೆ ಎಂಬುದು ನಿಜ. ಈ ಕುರುವಕ್ಕಾವು ಎಂಬುದು ಕನ್ನಪುರಂದ ಸಣ್ಣ ಪ್ರದೇಶವಾಗಿದ್ದು, ಇಲ್ಲಿ ಒಟ್ಟು 382 ಮರಗಳಿದ್ದು ಅದರಲ್ಲಿ 102 ಮಾವಿನಹಣ್ಣುಗಳ ಪ್ರಭೇದಗಳನ್ನು ಹೊಂದಿದೆ. ಇದು ಕೇವಲ 300 ಚದರ ಮೀಟರ್ ಸ್ಥಳದಲ್ಲಿ ವ್ಯಾಪಿಸಿದೆ. ಇಷ್ಟೆ ಪ್ರದೇಶದಲ್ಲಿ ಇಷ್ಟೊಂದು ವಿಧದ ಮಾವಿನ ತಳಿಗಳು ಬೆಳೆಯುತ್ತವೆ.



ಜುಲೈ 22, 2020 ರಂದು-ವಿಶ್ವ ಮಾವು ದಿನದಂದು ಕೇರಳ ರಾಜ್ಯ ಜೀವವೈವಿಧ್ಯ ಮಂಡಳಿಯು ಕುರುವಕ್ಕಾವು ಅನ್ನು ಸ್ಥಳೀಯ ಮಾವಿನ ಪರಂಪರೆಯ ಪ್ರದೇಶವೆಂದು ಘೋಷಿಸಿತು. 42 ವರ್ಷದ ಪೊಲೀಸ್ ಅಧಿಕಾರಿ ಶೈಜು ಮಚತಿ ನೇತೃತ್ವದಲ್ಲಿ ಸುಮಾರು 20 ಸ್ಥಳೀಯ ಕುಟುಂಬಗಳ ಪ್ರಯತ್ನದಿಂದ ಈ ಕೆಲಸ ಸಾಧ್ಯವಾಗಿದೆ.

ಇದನ್ನೂ ಓದಿ:  Haj 2023: ಹಜ್ ಯಾತ್ರೆಗೆ ಕಾಲ್ನಡಿಗೆಯಲ್ಲೇ ಹೊರಟ ಕೇರಳಿಗ! ಬರೋಬ್ಬರಿ 280 ದಿನ ನಡೆಯಬೇಕಂತೆ!

ಇಲ್ಲಿನ ಮಾವಿನಹಣ್ಣುಗಳು ಕೆಲವು ತೆಂಗಿನಕಾಯಿಯಷ್ಟು ದೊಡ್ಡದಾಗಿದ್ದರೆ ಇನ್ನು ಕೆಲವು ನೆಲ್ಲಿಕಾಯಿಯಷ್ಟು ಚಿಕ್ಕದಾಗಿರುತ್ತವೆ. ಕೆಲವು ಕಬ್ಬಿನಂತೆ ಸಿಹಿಯಾಗಿದ್ದರೆ ಮತ್ತು ಕೆಲವು ಹುಣಸೆಹಣ್ಣಿನಂತೆ ಹುಳಿಯನ್ನು ಹೊಂದಿರುತ್ತವೆ. ಕೆಲವು ಕೆಂಪು ಬಣ್ಣದ ಹಣ್ಣುಗಳಾಗಿದ್ದರೆ, ಇನ್ನು ಕೆಲವು ಹಸಿರು ಬಣ್ಣದ ಹಣ್ಣುಗಳಾಗಿರುತ್ತವೆ. ಇದು ಭಾರತದ ದಕ್ಷಿಣ ರಾಜ್ಯ ಕೇರಳದ ಕಣ್ಣೂರು ಜಿಲ್ಲೆಯಲ್ಲಿರುವ ಕನ್ನಪುರಂ ಎಂಬ ಪುಟ್ಟ ಹಳ್ಳಿಯಲ್ಲಿ ಕಂಡುಬರುವ ಮಾವಿನ ಜಾತಿಗಳ ಜೀವವೈವಿಧ್ಯದ ಒಂದು ನೋಟವಾಗಿದೆ. ಇಲ್ಲಿನ ಸ್ಥಳೀಯ ಮಾವಿನ ತಳಿಗಳ ಸಮೃದ್ಧಿಯು ನಿಜವಾಗಿಯೂ ಮನಸ್ಸಿಗೆ ಮುದ ನೀಡುತ್ತದೆ.



ಈ ಬಗ್ಗೆ ಕನ್ನಪುರಂನ ನಿವಾಸಿ, ಪೋಲಿಸ್‌ ಅಧಿಕಾರಿ ಶೈಜು ಮಚತಿ ಏನಂತಾರೆ ನೋಡಿ? 
ಕನ್ನಪುರಂನ ನಿವಾಸಿ ಆಗಿರುವ ಪೋಲಿಸ್‌ ಅಧಿಕಾರಿ ಶೈಜು ಮಚತಿ ಅವರು ತಮ್ಮ ಬಾಲ್ಯದಿಂದಲೂ ಮಾವಿನಹಣ್ಣುಗಳ ಮೇಲೆ ಪ್ರೀತಿಯನ್ನು ಬೆಳೆಸಿಕೊಂಡಿದ್ದರು. ಬೇಸಿಗೆ ರಜೆ ಬಂತೆದರೆ ಸಾಕು ಅನೇಕ ಮಾವಿನ ಮರಗಳನ್ನು ಹತ್ತುವುದು, ಹಣ್ಣುಗಳನ್ನು ಸಂಗ್ರಹಿಸಿ ಕುಟುಂಬ ಮತ್ತು ನೆರೆಹೊರೆಯವರಿಗೆ ಹಂಚುವುದು ಅವರ ಕಾಯಕವಾಗಿತ್ತು. ಇನ್ನು ಅವರ ಮಾತುಗಳಲ್ಲಿ ಮಾವಿನ ಹಣ್ಣುಗಳ ತಳಿಗಳ ಬಗ್ಗೆ ಕೇಳುವುದಾರೆ "ಮಾವಿನ ಋತುವಿನಲ್ಲಿ, ವಿವಿಧ ತಳಿಗಳ ಹಣ್ಣುಗಳನ್ನು ತಿನ್ನುವುದು, ಅವುಗಳನ್ನು ಸಂಗ್ರಹಿಸುವುದು ಮತ್ತು ವಿತರಿಸುವುದು ನನ್ನ ಹವ್ಯಾಸವಾಗಿತ್ತು" ಎಂದು ಅವರು ಹೇಳುತ್ತಾರೆ.



ಇದನ್ನೂ ಓದಿ: Traffic Challan: ಬೈಕ್​ನಲ್ಲಿ ಪೆಟ್ರೋಲ್ ಇಲ್ಲದಿದ್ರೂ ಪೊಲೀಸರು ದಂಡ ಹಾಕಬಹುದೇ?

ಈ ಪೋಲಿಸ್‌ ಅಧಿಕಾರಿ ಮಚತಿಗೆ ಕೃಷಿ ಬಗ್ಗೆ ಯಾವುದೇ ಔಪಚಾರಿಕ ಜ್ಞಾನವಿಲ್ಲ. ಆದರೆ ಸ್ನೇಹಿತರೊಬ್ಬರು 2016 ರಲ್ಲಿ 200 ವರ್ಷ ಹಳೆಯದಷ್ಟು ಮಾವಿನ ಮರವನ್ನು ಕಡಿಯಲಾಗುತ್ತಿದೆ ಎಂದು ಹೇಳಿದಾಗ, ಮಾವಿನ ತಳಿ ಸಂರಕ್ಷಣೆಗೆ ಅವರ ಮುನ್ನುಡಿ ಪ್ರಾರಂಭವಾಯಿತು. "ನಾನು ಕೃಷಿ ಇಲಾಖೆಯ ಸ್ನೇಹಿತನೊಂದಿಗೆ ಮರುದಿನವೇ ಅಲ್ಲಿಗೆ ಹೋದರೂ ಕೂಡ, ಕೇವಲ 50 ಮರದ ತಳಿಗಳನ್ನು ಮಾತ್ರ ಸಂರಕ್ಷಿಸಿ ಪಡೆಯಲು ಸಾಧ್ಯವಾಯಿತು" ಎಂದು ಮಚತಿ ಹೇಳುತ್ತಾರೆ. ಸ್ಥಳೀಯ ಸುದ್ದಿ ವಾಹಿನಿಗಳು ಮಚತಿ ಅವರ ಮಾವು ರಕ್ಷಣಾ ಕಾರ್ಯಾಚರಣೆಯನ್ನು ಎಲ್ಲೆಡೆ ಪ್ರಸಾರ ಮಾಡಿತು. ಇದರಿಂದ ಮಚತಿ ಅವರಿಗೆ ಇತರ ಪ್ರಾದೇಶಿಕ ಪ್ರಭೇದಗಳನ್ನು ಗುರುತಿಸಲು ಮತ್ತು ಸಂರಕ್ಷಿಸಲು ಮತ್ತಷ್ಟು ಪ್ರೇರಣೆ ಸಿಕ್ಕಂತೆ ಆಯಿತು.
Published by:Ashwini Prabhu
First published: